Thought for the day

One of the toughest things in life is to make things simple:

3 Apr 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಅಕ್ರಮ ಮದ್ಯ ಜಪ್ತಿ ಪ್ರಕರಣದ ಮಾಹಿತಿ.
            ದಿನಾಂಕ: 02-04-2020 ರಂದು ರಾತ್ರಿ 11-00 ಗಂಟೆಗೆ ಶ್ರೀ ಅನಿಲ್ ಕುಮಾರ್ ತಂದೆ ಕಾಶಿನಾಥರಾವ್ ಗೋಖಲೆ, ||48ವರ್ಷ. ||ಕೊರೋನಾ ವೈರಸ್ ಕೋವಿಡ್ -19  ಸ್ಪೇಷಲ್ ಎಕ್ಸಿಕ್ಯೂಟಿವ್  ಮ್ಯಾಜೆಸ್ಟ್ರೇಟ್ ದೇವಸೂಗೂರು ಹೋಬಳಿ ಹಾಗೂ ಶಕ್ತಿನಗರ ಚೆಕ್ ಪೋಸ್ಟ್  ರಾಯಚೂರು ಸಾ||ಕೆ..ಆರ್.ಡಿ.ಎಲ್. ಕಾಕತೀಯ ಕಾಲೋನಿ ರಾಯಚೂರು. ಇವರು ಗಣಕೀಕೃತ ಫೀರ್ಯಾಧಿ ಸಲ್ಲಿಸಿದ್ದೇನೆಂದರೆ, ದಿನಾಂಕ:14-03-2020 ರಂದು ಶಕ್ತಿನಗರದ ಆರ್.ಟಿ.ಪಿ.ಎಸ್. ಕಾಲೋನಿಯ ಮನೆ ನಂ ಟೈಪ್-ಬಿ-24  ಆರೋಪಿ ನಂ 01 ಎಸ್.ಆರ್. ಕಬಾಡೆ ಎಸ್.ಮತ್ತು ಆರೋಪಿ ನಂ 02  ಅನುಪಮಾ ಅಕೌಂಟ್ ಆಫೀಸರ್ ಆರ್.ಟಿ.ಪಿ.ಎಸ್. ಇವರ ಮನೆಗೆ  ಆರೋಫಿ ನಂ 3 ಪ್ರೀತಮ್ ಕಬಾಡೆ ಇವರ ಸ್ನೇಹಿತೆಳಾದ ಆರೋಪಿ ನಂ 4 ಡಾ||ಚಿನ್ಮಯಿ ಇವರು ಜರ್ಮನಿ ಯಿಂದ  ಕಾರ್ ನಂ ಕೆಎ 36 ಎನ್- 8686 ರಲ್ಲಿ ಶಕ್ತಿನಗರಕ್ಕೆ ಬಂದು ವಾಸವಾಗಿಸದರಿ ಆರೋಪಿ ನಂಡಾ||ಚಿನ್ಮಯಿ ಇವರಿಗೆ ದಿನಾಂಕ: 14-03-2020 ರಿಂದ  29-03-2020 ರವರೆಗೆ ಹೋಂ ಕ್ವಾರೆಂಟೈನ್ ಅವಧಿಯಲ್ಲಿ ಇದ್ದು, ಸದರಿ ಡಾ||ಚಿನ್ಮಯಿ ಇವರನ್ನು ಮನೆಯಲ್ಲಿ ಇಟ್ಟುಕೊಂಡಿದ್ದ  ಆರೋಪಿ ನಂ 01 ಮತ್ತು 02  ಮತ್ತು 03 ರವರು ಆರೋಪಿ ನಂ 04  ಡಾ||ಚಿನ್ಮಯಿ ಇವರು ಜರ್ಮನಿಯಿಂದ ಬಂದಿದ್ದರ ಬಗ್ಗೆ ರಾಯಚೂರು ಜಿಲ್ಲಾಡಳಿತಕ್ಕೆ ಮತ್ತು ತಾಲೂಕ ಆಡಳಿತಕ್ಕೆ ಮಾಹಿತಿ ನೀಡದೇ ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ಆರೋಪಿ ನಂ 01 ರಿಂದ 03 ರವರು  14 ದಿನ (ಹೋಂ ಕ್ವಾರೆಂಟೇನ್ ) ಅವದಿಯಲ್ಲಿ ಮನೆಯಲ್ಲಿ ವಾಸವಿರದೇ ವೈ,ಟಿ.ಪಿ.ಎಸ್. ಹಾಗೂ ಆರ್.ಟಿ.ಪಿ.ಎಸ್. ಉದ್ಯೋಗಕ್ಕೆ ಹಾಜರಾಗಿದ್ದು ಹಾಗೂ ಸದರಿಯವರು ಸಾರ್ವಜನಿಕ ಸ್ಥಳಗಳಾದ ಮಾರುಕಟ್ಟೆ, ಬಸ್ ಸ್ಟ್ಯಾಂಡ್, ಜನವಸತಿ ಪ್ರದೇಶಗಳಲ್ಲಿ ಯಾವುದೇ ಮುಂಜಾಗ್ರತೆ ವಹಿಸದೇ ತಿರುಗಾಡಿ ಸಾರ್ವಜನಿಕರಲ್ಲಿ ರೋಗ ಹರಡುವ ಭೀತಿಯನ್ನು ಉಂಟು ಮಾಡಿ ನಿರ್ಲಕ್ಷ ತೋರಿಸಿರುತ್ತಾರೆ ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಶಕ್ತಿನಗರ ಪೊಲೀಸ್ ಠಾಣೆ ಗುನ್ನೆ ನಂ 16/2020 ಕಲಂ 188, 269  ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

            ದಿನಾಂಕ 02.04.2020 ರಂದು ಸಾಯಂಕಾಲ 4.15 ಗಂಟೆಗೆ ಆರೋಪಿ ÀgÀ¹AºÀUËqÀ vÀAzÉ ©üêÀÄ£ÀUËqÀ, ªÀAiÀiÁ: 30ªÀµÀð, eÁw: F½UÉÃgÀ, ¸Á: vÉ®AUÁt gÁdåzÀ ¥ÁUÀÄAl UÁæªÀÄ ನು ಗಾಜರಾಳ ಗ್ರಾಮದ ಹಳ್ಳದ ಹತ್ತಿರ ಯಾವುದೇ ಕಾಗದ ಪತ್ರಗಳು ಇಲ್ಲದೇ ಸಾರ್ವಜನಿಕರಿಗೆ ಹೆಂಡ ಮಾರಾಟ ಮಾಡಿತ್ತಿರುವ ಖಚಿತವಾದ ಭಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಯಾಪಲದಿನ್ನಿ ರವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲು ಆರೋಪಿತನು ಸ್ಥಳದಿಂದ ಓಡಿ ಹೋಗಿದ್ದು, ಸ್ಥಳದಲ್ಲಿ ಆರೋಪಿತನು ಮಾರಾಟ ಮಾಡುತ್ತಿದ್ದ 30 ಲೀಟರ ಹೆಂಡವನ್ನು ಅಲ್ಲಿಯೇ ಬಿಟ್ಟು ಹೋಗಿದ್ದು ಸದರಿ ಹೆಂಡವು ಒಟ್ಟು ರೂ 600/- ಬೆಲೆಬಾಳುವ ಮುದ್ದೆಮಾಲನ್ನು ಜಪ್ತಿ ಮಾಡಿಕೊಂಡು ಯಾಪಲದಿನ್ನಿ ಪೊಲೀಸ್ ಠಾಣೆ ಗುನ್ನೆ ನಂಬರ 22/2020 ಕಲಂ: 273,284 L¦¹ & 32.34 PÉ.E PÁAiÉÄÝ  ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಇಸ್ಪೇಟ್ ದಾಳಿ ಪ್ರರಕಣದ ಮಾಹಿತಿ.
          ಪ್ರಸ್ತುತ ಹಂತದಲ್ಲಿ ಮಹಾಮಾರಿ ಕೊರೋನಾ ಎಂಬ ವೈರಸ್ ದೇಶಾಧ್ಯಂತ ಹರಡುತ್ತಿದ್ದರಿಂದ ಸರಕಾರವು ಮುನ್ನೆಚ್ಚಿರಕೆ ಕ್ರಮವಾಗಿ ನಿಷೇದಾಜ್ಞೇಯನ್ನು ಹೇರಿ ಯಾರು ಮನೆಯಿಂದ ಹೊರಬರಬಾರದು ಎಂದು ಆದೇಶ ಹೊರಡಿಸಿದ್ದು ಇತುತ್ತದೆ. ಇಸ್ಟಾದರು ಸಹ ಆರೋಪಿ 01) ಉಮೇಶ ತಂದೆ ವಿಜಯಕುಮಾರ ವಯ-20ವರ್ಷ,ಜಾತಿ-ವಿಶ್ವಕರ್ಮ ಸಾ:ಸಿರವಾರ [2] ರಿಯಾಜ್ ತಂದೆ ಖಾಸೀಂಸಾಬ ಜಾತಿ-ಮುಸ್ಲಿಂ, ವಯ-20ವರ್ಷ,-ಡ್ರೈವರ ಕೆಲಸ ಸಾ:ಸಿರವಾರ   [3] ಸುರೇಶ ತಂದೆ ಮಲ್ಲಪ್ಪ ವಯ-20ವರ್ಷ ಜಾತಿ-ಬಡಿಗೇರ,ಸಾ:ಸಿರವಾರ   [4] ಹನುಮೇಶ ತಂದೆ ಶಿವರಾಜ,ವಯ-20ವರ್ಷ ಜಾತಿ-ನಾಯಕ,-ಕೂಲಿಕೆಲಸ,ಸಾ:ಸಿರವಾರ [5] ಮಂಜೂರು ತಂದೆ ಮಹ್ಮದ್ ಜಾತಿ-ಮುಸ್ಲಿಂ,ವಯ-22ವರ್ಷ, -ಹೂವಿನ ವ್ಯಾಪಾರ ಸಾ:ಸಿರವಾರ 6] ಹುಸೇನ್ ತಂದೆ ಖಾಸೀಂಸಾಬ ಜಾತಿ-ಮುಸ್ಲಿಂ,ವಯ-22ವರ್ಷ,-ಹೂವಿನ ವ್ಯಾಪಾರ ಸಾ:ಸಿರವಾರ  [7] ಮಲ್ಲು ತಂದೆ ಈರಪ್ಪ ಜಾತಿ-ಕಬ್ಬೇರ,ವಯ-20ವರ್ಷ, -ಕೂಲಿಕೆಲಸ, ಸಾ:ಸಿರವಾರ ಇಂದಿರಾನಗರ ತರು ಸದರಿ ಆದೇಶವನ್ನು ಉಲ್ಲಂಘನೆ ಮಾಡಿದ್ದಲ್ಲದೆ ನಿರ್ಲಕ್ಷ ಕೃತ್ಯವೆಸಗಿ ದಿನಾಂಕ:-01-04-2020 ರಂದು ಮುಂಜಾನೆ 07-45 ಗಂಟೆ ಸುಮಾರು ಸಿರವಾರ ಪಟ್ಟಣದ ಇಂದಿರಾನಗರದ ದರ್ಗಾದ ಹತ್ತಿರ ಸಾರ್ವಜನೀಕ ಸ್ಥಳದಲ್ಲಿ ಗುಂಪಾಗಿ ಕುಳಿತುಕೊಂಡು ಪಣಕ್ಕೆ ಹಣ ಹಾಕುತ್ತ ನಸಿಬಿನ ಆಟವಾದ ಅಂದರ-ಬಹಾರ ಎಂಬ ಇಸ್ಪೇಟ ಜೂಜಾಟವನ್ನು ಇಸ್ಪೇಟ ಎಲೆಗಳ ಸಹಾಯ ಆಡುತ್ತಿದ್ದಾಗ ಪಿ.ಎಸ್. ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ದಾಳಿಕಾಲಕ್ಕೆ ಸಿಕ್ಕಿಬಿದ್ದ 7 ಜನರೊಂದಿಗೆ ಹಾಗು ಮುದ್ದೆಮಾಲು ದೊಂದಿಗೆ ವಾಪಸ್ ಮುಂಜಾನೆ  09-15 ಗಂಟೆಗೆ ಠಾಣೆಗೆ ಬಂದು ಸರಕಾರ ವತಿಯಿಂದ ದೂರನ್ನು ಕೊಟ್ಟದ್ದು ಅದನ್ನು ಸ್ವೀಖರಿಸಿ ಅದರ ಆಧಾರದ ಮೇಲಿಂದ ಸಿರವಾರ ಪೊಲೀಸ ಠಾಣಾ 37/2020 ಕಲಂ: 147,188, 269, R/W 149 IPC.& 87 .ಪೋ.ಕಾಯ್ದೆ   ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ. 

2 Apr 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಇಸ್ಪೇಟ್ ಜೂಜಾಟ ದಾಳಿ ಪ್ರಕರಣ ಮಾಹಿತಿ.
          ಪ್ರಸ್ತುತ ಹಂತದಲ್ಲಿ ಮಹಾಮಾರಿ ಕೊರೋನಾ ಎಂಬ ವೈರಸ್ ದೇಶಾಧ್ಯಂತ ಹರಡುತ್ತಿದ್ದರಿಂದ ಸರಕಾರವು ಮುನ್ನೆಚ್ಚಿರಕೆ ಕ್ರಮವಾಗಿ ನಿಷೇದಾಜ್ಞೇಯನ್ನು ಹೇರಿ ಯಾರು ಮನೆಯಿಂದ ಹೊರಬರಬಾರದು ಎಂದು ಆದೇಶ ಹೊರಡಿಸಿದ್ದು ಇತುತ್ತದೆ. ಇಸ್ಟಾದರು ಸಹ ಆರೋಪಿತರು ಸದರಿ ಆದೇಶವನ್ನು ಉಲ್ಲಂಘನೆ ಮಾಡಿದ್ದಲ್ಲದೆ ನಿರ್ಲಕ್ಷ ಕೃತ್ಯವೆಸಗಿ ದಿನಾಂಕ:-01-04-2020 ರಂದು ಮುಂಜಾನೆ 07-45 ಗಂಟೆ ಸುಮಾರು ಸಿರವಾರ ಪಟ್ಟಣದ ಇಂದಿರಾನಗರದ ದರ್ಗಾದ ಹತ್ತಿರ ಸಾರ್ವಜನೀಕ ಸ್ಥಳದಲ್ಲಿ ಆರೋಪಿತರಾದ ಉಮೇಶ ತಂದೆ ವಿಜಯಕುಮಾರ ವಯ-20ವರ್ಷ,ಜಾತಿ-ವಿಶ್ವಕರ್ಮ ಸಾ:ಸಿರವಾರ ಹಾಗೂ ಇತರೆ 7 ಜನರು, ಗುಂಪಾಗಿ ಕುಳಿತುಕೊಂಡು ಪಣಕ್ಕೆ ಹಣ ಹಾಕುತ್ತ ನಸಿಬಿನ ಆಟವಾದ ಅಂದರ-ಬಹಾರ ಎಂಬ ಇಸ್ಪೇಟ ಜೂಜಾಟವನ್ನು ಇಸ್ಪೇಟ ಎಲೆಗಳ ಸಹಾಯ ಆಡುತ್ತಿದ್ದಾಗ ಪಿ.ಎಸ್.ಐ ಸಿರವಾರ ಪೊಲೀಸ್ ಠಾಣೆ ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ದಾಳಿಕಾಲಕ್ಕೆ ಸಿಕ್ಕಿಬಿದ್ದ 7 ಜನರೊಂದಿಗೆ ಹಾಗು ರೂ. 2100/- 2] 52 ಇಸ್ಪೇಟ್ ಎಲೆಗಳು ಅಂ.ಕಿ.ಇಲ್ಲ ಮುದ್ದೆಮಾಲು ದೊಂದಿಗೆ ವಾಪಸ್ ಮುಂಜಾನೆ  09-15 ಗಂಟೆಗೆ ಠಾಣೆಗೆ ಬಂದು ಸರಕಾರ ವತಿಯಿಂದ ದೂರನ್ನು ಕೊಟ್ಟದ್ದು ಅದನ್ನು ಸ್ವೀಖರಿಸಿ ಅದರ ಆಧಾರದ ಮೇಲಿಂದ ಸಿರವಾರ ಪೊಲೀಸ ಠಾಣೆಯ ಗುನ್ನೆ ನಂಬರ 37/2020 ಕಲಂ: 147,188, 269, R/W 149 IPC.& 87 .ಪೋ.ಕಾಯ್ದೆ  ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

1 Apr 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

          ದಿನಾಂಕ 08.03.2020 ರಿಂದ 20.03.2020ರ ವರೆಗೆ ದೆಹಲಿಯಲ್ಲಿ ಮುಸ್ಲಿಂ ಸಮಾಜ ಹಜರತ್ ನಿಜಾಮುದ್ದೀನ್ ದರ್ಗಾದ ಪಕ್ಕದಲ್ಲಿ ನಡೆದ ತಬಕ್ ಎ ಜಮಾತನ ಧಾರ್ಮಿಕ ಸಮಾವೇಶನದಲ್ಲಿ ಭಾಗವಹಿಸಲು ದೇಶದ ವಿವಿಧ ರಾಜ್ಯ ಹಾಗೂ ಜಿಲ್ಲೆಗಳಿಂದ ಜನರು ತೆರಳಿದ್ದು, ತೆರಳಿದ ಜನರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗಿ ಜಿಲ್ಲೆಯಿಂದ ವಿವಿಧ ಕಾರಣಗಳಿಗೋಸ್ಕರ 6 ಜನರು ದೆಹಲಿಗೆ ತೆರಳಿದ ಮಾಹಿತಿ ತಿಳಿದು ಬಂದಿದ್ದು, ಈ ಜನರು ಯಾರು ಸಮಾವೇಶದಲ್ಲಿ ಭಾಗ ವಹಿಸಿರುವುದಿಲ್ಲ ಎಂದು ತಿಳಿದು ಬಂದಿರುತ್ತದೆ. ಅದರು ಸಹ  ಇವರ  ವಿಳಾಸಗಳನ್ನು  ಪತ್ತೆ ಮಾಡಿ  ಅವರನ್ನು ವೈದ್ಯಕೀಯ ಪರಿಕ್ಷೆಕ್ಕೆ ಒಳವಡಿಸಿ, ಹೋಂ ಕ್ವಾರಂಟೈನ್ (HOME QURITINE) ನಲ್ಲಿರಿಸಿ ಅವರ ಮೇಲೆ ಸೂಕ್ತ ನಿಗಾವಹಿಸಲಾಗಿದೆ.

ಹಲ್ಲೆ ಪ್ರರಕಣದ ಮಾಹಿತಿ.
            ದಿನಾಂಕ:31.03.2020 ರಂದು ಸಂಜೆ 5-00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಬಂದು ಲಿಖಿತವಾಗಿ ಬರೆದ ದೂರು ನೀಡಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿಯ ತಂದೆ ದಿನಾಂಕ:29.03.2020 ರಂದು ತಮ್ಮ ಹೊಲದ ಬದುವಿಗೆ ಆರೋಪಿತರು ಬೆಂಕಿ ಹಚ್ಚಿ ರೇಷ್ಮೇ ಬೆಳೆ ಸುಟ್ಟ ವಿಷಯವಾಗಿ ನಮ್ಮ ಹೊಲದ ಕಡೆ ನೋಡಿ ಬೆಂಕಿ ಹಚ್ಚಬೇಕಿತ್ತು ಎಂದು ಹೇಳಿದ್ದು ಅದೇ ವಿಚಾರವಾಗಿ ಆರೋಪಿತರೆಲ್ಲರೂ ಕೂಡಿಕೊಂಡು ದಿನಾಂಕ:30.03.2020 ರಂದು ರಾತ್ರಿ 8.10 ಗಂಟೆ ಸುಮಾರಿಗೆ ಫಿರ್ಯಾದಿಯ ಮನೆಯ ಮುಂದೆ ಬಂದು ಅವಾಚ್ಯವಾಗಿ ಬೈದಾಡುತ್ತಿದ್ದಾಗ, ಹೊಲದಿಂದ ಮನೆಗೆ ಬರುತ್ತಿದ್ದ ಫಿರ್ಯಾದಿಯ ತಂದೆ ಹನುಮಪ್ಪನ ಬಲಗಣ್ಣಿಗೆ  ಆರೋಪಿ ನಂ:01 ನೇದ್ದವನು ಹೊಡೆದನು. ಇದನ್ನು ನೋಡಿದ ಫಿರ್ಯಾದಿಯ ಮನೆಯವರೆಲ್ಲರೂ ಮನೆಯಿಂದ ಹೊರಗಡೆ ಬಂದು ಯಾಕೇ ಹೊಡೆಯುತ್ತೀ ಅಂತಾ ಕೇಳಿದಾಗ ಆರೋಪಿ ನಂ:02 ನೇದ್ದವನು ಅವಾಚ್ಯವಾಗಿ ಬೈದಾಡಿ ಅಲ್ಲಿಯೇ ಬಿದ್ದಿದ್ದ ಹಿಡಿಗಾತ್ರದ ಕಲ್ಲನ್ನು ತೆಗೆದುಕೊಂಡು ಫಿರ್ಯಾದಿಯ ಬಲಗೈಗೆ ಹೊಡೆದು ರಕ್ತಗಾಯಮಾಡಿದ್ದು, ಫಿರ್ಯಾದಿಯ ತಾಯಿಗೆ ಆರೋಪಿ ನಂ:03 ನೇದ್ದವರು ಅವಾಚ್ಯವಾಗಿ ಬೈದಾಡುತ್ತಿದ್ದಾಗ ಫಿರ್ಯಾದಿಯ ಅತ್ತಿಗೆ ರುದ್ರಮ್ಮ ಇವರು ಜಗಳ ಬಿಡಿಸಲು ಬಂದಾಗ ಅವರಿಗೂ ಸಹಃ ಆರೋಪಿ ನಂ:03 ನೇದ್ದವರು ಕೈಗಳಿಂದ ಹೊಡೆಬಡೆ ಮಾಡಿ ಕಾಲಿನಿಂದ ಎದೆಗೆ ಒದ್ದಿದ್ದು, ಈ ಜಗಳದಲ್ಲಿ ಫೀರ್ಯಾದಿಯ ಮಾಂಗಲ್ಯ ಹರಿದು ಕಿತ್ತುಹೋಗಿದ್ದು ಎಷ್ಟು ಹುಡುಕಿದರೂ ಸಿಕ್ಕಿರುವುದಿಲ್ಲಾ ನಂತರ ಜಗಳ ನೋಡಿದ ಬಸನಗೌಡ ತಂದೆ ಸಿದ್ದನಗೌಡ ಇವರು ಬಂದು ಜಗಳ ಬಿಡಿಸಿದ್ದು ನಂತರ ಆರೋಪಿತರೆಲ್ಲರೂ ಸೇರಿಕೊಂಡು ಇವತ್ತು ಉಳಿದುಕೊಂಡಿರಲೇ ಸೂಳೇ ಮಕ್ಕಳೇ ಇನ್ನೊಂದು ಸಲ ನಮ್ಮ ಕೈಗೆ ಸಿಗರಿ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲವೆಂದು ಜೀವದ ಬೆದರಿಕೆ ಹಾಕಿದ್ದು, ನಂತರ ಜಗಳದಲ್ಲಿ ಗಾಯಗೊಂಡ ಫಿರ್ಯಾದಿ, ಫಿರ್ಯಾದಿಯ ಅತ್ತಿಗೆ ರುದ್ರಮ್ಮ ಕೂಡಿಕೊಂಡು ಚಿಕಿತ್ಸೆ ಕುರಿತು ಮುದಗಲ್ಲ ಸರ್ಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿ ತಡವಾಗಿ ಬಂದು ದೂರು ನೀಡುತ್ತಿದ್ದು ಕಾರಣ  ನಮಗೆ ಅವಾಚ್ಯವಾಗಿ ಬೈದು, ಹೊಡೆಬಡೆ ಮಾಡಿ ಜೀವದಬೆದರಿಕೆ ಹಾಕಿದವರ ಮೇಲೆ ಸೂಕ್ತ ಕಾನೂನುಕ್ರಮ ಜರುಗಿಸಲು ವಿನಂತಿ  ಅಂತಾ ಮುಂತಾಗಿ ನೀಡಿದ ಫಿರ್ಯಾದಿ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣಾ ಗುನ್ನೆ ನಂಬರ  43/2020 PÀ®A, 323, 324, 504, 506 gÉ.« 34 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು. ತನಿಖೆ ಕೈಗೊಂಡಿತ್ತಾರೆ.   

            ದಿನಾಂಕ:31.03.2020 ರಂದು ಸಂಜೆ 6-00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಬಂದು ಕಂಪ್ಯೂಟರದಲ್ಲಿ ಟೈಪ್ ಮಾಡಿಸಿದ ದೂರು ನೀಡಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿಯ ಹೆಂಡತಿ ದಿನಾಂಕ:29.03.2020 ರಂದು ತಮ್ಮ ಹೊಲದ ಬದುವಿಗೆ ಬೆಂಕಿ ಹಚ್ಚಿ ಕಸ ಸುಡುತ್ತಿದ್ದಾಗ  ಬೆಂಕಿಯ ಝಳಕ್ಕೆ ಆರೋಪಿತರ 4-5 ರೇಷ್ಮೇ ಬೆಳೆ ಸುಟ್ಟಂತಾಗಿದ್ದು,  ದಿನಾಂಕ:30.03.2020 ರಂದು ರಾತ್ರಿ 8.10 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ಫಿರ್ಯಾದಿ ಮಗ ಶಿವನಗೌಡ ಕೂಡಿಕೊಂಡು ಆತೋಪಿತರ ಮನೆಯ ಮುಂದೆ ಹಾಯ್ದು ಹೊಲಕ್ಕೆ ನೀರುಕಟ್ಟಲು ಹೋಗುತ್ತಿದ್ದಾಗ ಆರೋಪಿ ನಂ:01 ನೇದ್ದವನು ಅವಾಚ್ಯವಾಗಿ ಬೈದು ರೇಷ್ಮೇ ಬೆಳೆಗೆ ಬೆಂಕಿ ಹಚ್ಚಿ ಸುಟ್ಟೀರಲಾ ಲುಕ್ಸಾನ ಯಾರು ಕೊರಕೊಡತಾರಲೇ ಸೂಳೆ ಮಕ್ಕಳೆ, ನಿಮಗೆ ಚಪ್ಪಲಿ ತೊಗೊಂದು ಹೊಡೆಯಬೇಕು ಎಂದಾಗ ಫಿರ್ಯಾದಿ, ಫಿರ್ಯಾದಿಯ ಮಗ ಹೋಗಿ ಯಾಕೇ ಬೈದಾಡುತ್ತೀಯಾ ನಾವು ಬೇಕಂತಾ ಏನು ಸುಟ್ಟಿಲ್ಲಾ ಆಕಸ್ಮಿಕವಾಗಿ ಝಳಕ್ಕೆ ನಿಮ್ಮ ಗಿಡಗಳು ಸುಟ್ಟಾವು  ಅಂತಾ  ಅಂದಾಗ ಆರೋಪಿ ನಂ:02 ನೇದ್ದವನು ಫಿರ್ಯಾದಿಯ ಬಲಗೈಗೆ ತನ್ನ ಕೈಗಳಿಂದ ಜೋರಾಗಿ ಹೊಡೆದು, ಆರೋಪಿ ನಂ:03 ನೇದ್ದವನು ಫಿರ್ಯಾದಿಯ ಮಗನ  ಕಪಾಳಕ್ಕೆ ತನ್ನ ಕೈಗಳಿಂದ ಹೊಡೆಬಡೆ ಮಾಡಿದ್ದು, ಈ ಜಗಳದ ಸುದ್ದಿ ಕೇಳಿದ ಫಿರ್ಯಾದಿಯ ಹೆಂಡತಿ ಬಸಮ್ಮ ಈಕೆಯು ಯಾಕೆ ನನ್ನ ಗಂಡ, ಮಗನಿಗೆ  ಯಾಕೆ ಹೊಡೆಯುತ್ತೀರಿ ಅಂತಾ ಕೇಳಲು ಬಂದಾಗ ಆರೋಪಿ ನಂ:04, 05, 06 ನೇದ್ದವರು ಕೂಡಿಕೊಂಡು ಅವಾಚ್ಯವಾಗಿ ಬೈದಾಡುತ್ತಾ ಹೊಡೆಬಡೆ ಮಾಡಿ ಕಾಲಿನಿಂದ ಒದ್ದಿದ್ದು ನಂತರ ಜಗಳವನ್ನು ನೋಡಿದ ಬಸನಗೌಡ ತಂದೆ ಸಿದ್ದನಗೌಡ ಇವರು ಬಂದು ಜಗಳ ಬಿಡಿಸಿ ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ಆರೋಪಿತರೆಲ್ಲರೂ ಸೇರಿಕೊಂಡು ಇವತ್ತು ಉಳಿದುಕೊಂಡಿರಲೇ ಸೂಳೆ ಮಕ್ಕಳೇ ಇನ್ನೊಂದು ಸಲ ನಮ್ಮ ಕೈಗೆ ಸಿಗರಿ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲವೆಂದು ಜೀವದ ಬೆದರಿಕೆ ಹಾಕಿ ಹೋಗಿದ್ದು, ಈ ಜಗಳದ ಕುರಿತು ಊರಿನ ಹಿರಿಯರು ಬಗೆಹರಿಸೋಣ ಅಂತಾ ತಿಳಿಸಿದ್ದು ಜಗಳ ಬಗೆಹರಿಯದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಕಾರಣ  ನಮಗೆ ಅವಾಚ್ಯವಾಗಿ ಬೈದು, ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ.  ಅಂತಾ ಮುಂತಾಗಿ ನೀಡಿದ ಫಿರ್ಯಾದಿ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣಾ ಗುನ್ನೆ ನಂಬರ 44/2020 PÀ®A,143, 147, 323, 504, 506 gÉ.« 149 L¦¹  ಪ್ರಕರಣ ಪ್ರರಕಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ. 

31 Mar 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

            ದಿನಾಂಕ.30-03-2020 ರಂದು ಮಧ್ಯಾಹ್ನ 1-30 ಗಂಟೆಗೆ ಶ್ರೀ ವಿರುಪಾಕ್ಷಪ್ಪ ಪಿ.ಎಸ್. ಜಾಲಹಳ್ಳಿ ಪೊಲೀಸ್ ಠಾಣೆ ರವರು ಹಾಜರಾಗಿ ಫಿರ್ಯಾದಿ ಮತ್ತು ಅಕ್ರಮ ಮದ್ಯ ಜಪ್ತಿ ಪಂಚನಾಮೆ ತಂದು ಹಾಜರುಪಡಿಸಿದ್ದ ಸಾರಾಂಶವೇನೆಂದರೆ, ದಿನಾಂಕ.30.03.2020 ರಂದು ಬೆಳಿಗ್ಗೆ 11-30  ಗಂಟೆ ಸುಮಾರಿಗೆ ಆರೋಪಿ Mahesh S/o. Rangayya Contractor, 34 Years, Caste: Ileger R/o. Jalahalli ಈತನು ಜಾಲಹಳ್ಳಿಯ ತನ್ನ ಪಾನ್ ಶಾಪ್ ಮುಂದೆ ಸಾರ್ವಜನಿಕ ಸ್ಥಳದ ಮೇಲೆ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪಂಚರ ಸಮಕ್ಷಮ ದಾಳಿ ಮಾಡಿದ್ದು, ಸಮಯದಲ್ಲಿ ಆರೋಪಿತನು ಓಡಿ ಹೋಗಿದ್ದು  ನಂತರ ಅಲ್ಲಿದ್ದ ಮದ್ಯದ ಬಾಟಲಿಗಳನ್ನು ಪರಿಶೀಲಿಸಿ ನೋಡಲಾಗಿ 1) 180 ML BAGPIPER DELIXE WHISKY ಒಟ್ಟು 25 ಮಧ್ಯದ ಪೌಚ್ ಗಳು ಪ್ರತಿಯೊಂದಕ್ಕೆ ಕಿಮ್ಮತ್ತು ರೂ. 90.21 ಪೈಸೆ. ಎಲ್ಲಾ ಒಟ್ಟು ರೂ.2,255.25/-.ರೂ 2). 650 ML KINGFISHER STRONG PREMIUM BEER ಒಟ್ಟು 10 ಮಧ್ಯದ ಬಾಟಲ್ ಗಳು ಪ್ರತಿಯೊಂದಕ್ಕೆ ಕಿಮ್ಮತ್ತು ರೂ.145 ರೂ. ಒಟ್ಟು 1450 ರೂ. ಕಿಮ್ಮತ್ತಿನವುಗಳನ್ನು ವಶಕ್ಕೆ ಪಡೆದುಕೊಂಡು ದಾಳಿ ಪಂಚನಾಮೆಯ ವರದಿ ಮತ್ತು ಇತ್ಯಾದಿಯಾಗಿ ನೀಡಿದ ಪಿರ್ಯಾದಿ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬೆರ 41/2020 PÀ®A.32,34 K.E.ACT ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.

ಹಲ್ಲೆ ಪ್ರಕರಣದ ಮಾಹಿತಿ
            ಫಿರ್ಯಾದಿದಾರನು ಯರಗುಂಟಾ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ವಾಟರ್ ಮ್ಯಾನ್ ಕೆಲಸ ಮಾಡುತ್ತಿದ್ದು, ಫಿರ್ಯಾದಿದಾರನು ದಿನಾಂಕ: 27.03.2020 ರಂದು ಬೆಳಿಗ್ಗೆ 06.00 ಗಂಟೆ ಗ್ರಾಮಸ್ಥರಿಗೆ ನೀರು ಬಿಟ್ಟು ಗೋಪಿ ಕೀರಾಣಿ ಅಂಗಡಿ ಹತ್ತಿರ ಹೋಗುತ್ತಿದ್ದಾಗ ಆರೋಪಿ ±ÀgÀt¥Àà vÀAzÉ UÀAUÀ¥Àà ಹಾಗೂ ಇತರೆ 3 ಜನರೆಲ್ಲಾರೂ ಬಂದು ಫಿರ್ಯಾದಿದಾರನನ್ನು ತಡೆದು ನಿಲ್ಲಿಸಿ " ಲೇ ಸೂಳೆ ಮಗನೇ ನಮ್ಮ ಓಣಿ ಕಡೆ ಏಕೆ ನೀರು ಬಿಡುತ್ತಿಲ್ಲ ನಿನ್ನದು ಬಹಳ ಆಗಿದೆ ಅಂತಾ ಅವಾಚ್ಯವಾಗಿ ಬೈದು, ಕೈಯಿಂದ, ಕಾಲಿನಿಂದ ಹಾಗೂ ಕಟ್ಟಿಗೆಯಿಂದ ಹೊಡೆದು ಒಳಪೆಟ್ಟುಗೊಳಿಸಿ, ಜೀವ ಬೆದರಿಕೆ ಹಾಕಿದ್ದು ಇರುತ್ತದೆ. ನೀಡದ ದೂರಿನ ಸಾರಂಶದ ಮೇಲಿಂದ ಯಾಪಲದಿನ್ನಿ ಪೊಲೀಸ್ ಠಾಣೆ ಗುನ್ನೆ ನಬಂರ 20/2020 PÀ®A: 341, 323, 324, 504, 506 ¸À»vÀ 34 L¦¹ ಅಡಿಯಲ್ಲಿ ಆರೋಪಿತ ವಿರುದ್ಧ ಪ್ರರಕಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ತಪ್ಪು ಸಂದೇಶ ರವಾನಿಸಿ ಪ್ರಕರಣದ ಮಾಹಿತಿ.

            ದಿನಾಂಕ:30-03-2020 ರಂದು ಸಾಯಂಕಾಲ 5-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ರವಿರಾಜ್ ಹೆಚ್.ಜಿ. ತಂದೆ ಹೆಚ್.ಕೆ. ಗೋಪಾಲ, :41, ಹಿರಿಯ ಸಹಾಯಕ ನಿದೇರ್ಶಕರು,  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ರಾಯಚೂರು ಇವರು ದೂರು ನೀಡಿದ್ದು ಸಾರಾಂಶವೇನೆಂದರೆ. ಯಾರೋ ಅಪಚರಿಚಿತರು ದೇವದುರ್ಗ ತಾಲೂಕಿಗೆ ಕೊರೊನಾ ವೈರಾಣು ರೋಗ ಬಂದೇ ಬಿಟ್ಟಿದೆ ಬೆಂಗಳೂರಿನಿಂದ ಬಂದ 16 ಜನರಲ್ಲಿ ನಾಲ್ಕು ಮಂದಿಗೆ ಪಾಸಿಟಿವ್ ಆಗಿದ್ದು, ಎಲ್ಲರನ್ನು ಸೀಲ್ ಹಾಕಿ ರಿಮ್ಸ್ ಆಸ್ಪತ್ರೆ ರಾಯಚೂರಿಗೆ ಕಳುಹಿಸಿ ಕೊಟ್ಟಿದೆ ಎಂಬ ಸಂದೇಶವುಳ್ಳ 5.37 ನಿಮಿಷದ ಧ್ವನಿ ಸುರುಳಿ ಹರಿದಾಡುತ್ತಿದ್ದು, ಇದು ದೇವದುರ್ಗ ತಾಲೂಕು ಮತ್ತು ರಾಯಚೂರು ಜಿಲ್ಲೆಯ ಜನರಿಗೆ ತಪ್ಪು ಸಂದೇಶ ರವಾನಿಸಿ ಜನರಲ್ಲಿ ಭಯ ಸೃಷ್ಟಿಸುವ ಯತ್ನ ವಾಟ್ಸ್ ಅಪ್ ಮುಖಾಂತರ ನಡೆದಿರುತ್ತದೆ. ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರ ಆದೇಶದಂತೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಕುರಿತು ನೀಡಿದ ದೂರಿನ ಸಾರಾಂಶದ ಮೇಲಿಂದ ಸಿ..ಎನ್. ಅಪರಾಧ ಪೊಲೀಸ್ ಠಾಣೆ ರಾಯಚೂರು ಗುನ್ನೆ ನಂ.08/2020 ಕಲಂ.505(1)(ಬಿ).188.507 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.