Thought for the day

One of the toughest things in life is to make things simple:

17 Mar 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
                                               
ಅಕ್ರಮ ಮರಳು ಸಾಗಿಸುತ್ತಿದ್ದ 11 ಟಿಪ್ಪರ್ ಗಳು ವಶ ದೂರು ದಾಖಲು.

ದಿನಾಂಕ : 16.03.2020 ರಂದು ಮದ್ಯ ರಾತ್ರಿಯಿಂದ ಬೆಳಗಿನ ಜಾವದವರೆಗೆ  ರಾಯಚೂರು ಜಿಲ್ಲೆಯಾದ್ಯಂತ ಕೃಷ್ಣ ನದಿಯಿಂದ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾರೆಂಬ ಖಚಿತ ಬಾತ್ಮೀ ಮೇರೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರ ನೇತೃತ್ವದಲ್ಲಿ ಸಿಬ್ಬಂದಿಯೊಂದಿಗೆ ದಾಳಿಮಾಡಿ ಈ ಕೆಳಗಿನವುಗಳನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ.

ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ . 02 ಟಿಪ್ಪರ್ ಗಳು
1) ಭಾರತ್ ಬೆಂಚ್ ಕಂಪನಿಯ ಟಿಪ್ಪರ್ ನಂಬರ KA-28, C-8809 ಅ.ಕಿ. 20,0000 ಮತ್ತು ಮರಳು ಅ.ಕಿ-11,500/- ರೂ.ಗಳು
2) KA-33 TA-4547 ಮಹಿಂದ್ರ ಕಂಪನಿಯ  ಟ್ರ್ಯಾಕ್ಟರ್  ಮತ್ತು ಟ್ರ್ಯಾಲಿ ಅ.ಕಿ. 7,00000/- ಮತ್ತು ಮರಳು ಅ.ಕಿ-750/- ರೂ.ಗಳು.

ಲಿಂಗಸ್ಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ . 03 ಟಿಪ್ಪರ್ ಗಳು.
1) ಭಾರತ್ ಬೆಂಚ್ ಕಂಪನಿಯ ಟಿಪ್ಪರ್ ಟಿಪ್ಪರ ನಂಬರ KA-51, AB-5987, ಅ.ಕಿ.20,0000/- ಮತ್ತು ಮರಳು ಅ.ಕಿ.10,000 /- ರೂ.ಗಳು.
2) ಭಾರತ್ ಬೆಂಚ್ ಕಂಪನಿಯ ಟಿಪ್ಪರ್ ಟಪ್ಪರ್ ನಂಬರ  KA-28 C-4604, ಅ.ಕಿ.20,0000/- ಮತ್ತು ಮರಳು ಅ.ಕಿ.10,000 /- ರೂ.ಗಳು.
3) ಭಾರತ್ ಬೆಂಚ್ ಕಂಪನಿಯ ಟಿಪ್ಪರ್ ನಂಬರ KA-28, C-5063  , ಅ.ಕಿ.20,0000/- ಮತ್ತು ಮರಳು ಅ.ಕಿ.10,000 /- ರೂ.ಗಳು.

 ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ .05 ಟಿಪ್ಪರ್ ಗಳು.
1)  ಭಾರತ್ ಬೆಂಚ್ ಕಂಪನಿಯ ಟಿಪ್ಪರ್ KA-36 C-356. ಅ.ಕಿ 20,0000/- ರೂಗಳು ಮತ್ತು ಮರಳು ಅ.ಕಿ.25,000/- ರೂ.ಗಳು.
2) ಭಾರತ್ ಬೆಂಚ್ ಕಂಪನಿಯ ಟಿಪ್ಪರ್ KA-36 B-7789. ಅ.ಕಿ 20,0000/- ರೂಗಳು ಮತ್ತು ಮರಳು ಅ.ಕಿ.25,000/- ರೂ.ಗಳು.
3 ಐಚರ್ ಕಂಪನಿಯ ಟಿಪ್ಪರ್ KA-36 B-5637. ಅ.ಕಿ 20,0000/- ರೂಗಳು ಮತ್ತು ಮರಳು ಅ.ಕಿ.25,000/- ರೂ.ಗಳು.
4) ಅಶೋಕ ಲೇಲ್ಯಾಂಡ್ ಕಂಪನಿಯ ಟಿಪ್ಪರ್ KA-36 B--467. ಅ.ಕಿ 20,0000/- ರೂಗಳು ಮತ್ತು ಮರಳು ಅ.ಕಿ.25,000/- ರೂ.ಗಳು.
5) ಅಶೋಕ ಲೇಲ್ಯಾಂಡ್ ಕಂಪನಿಯ ಟಿಪ್ಪರ್ KA-36 B--2948. ಅ.ಕಿ 20,0000/- ರೂಗಳು ಮತ್ತು ಮರಳು ಅ.ಕಿ.25,000/- ರೂ.ಗಳು.

ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ – 01 ಟಿಪ್ಪರ್.
1) ಟಿಪ್ಪರ್ KA-36 B--8856. ಅ.ಕಿ 20,0000/- ರೂಗಳು ಮತ್ತು ಮರಳು ಅ.ಕಿ.15,000/- ರೂ.ಗಳು.

            ಸದರಿ ಮೇಲಿನ ವಾಹನಗಳಲ್ಲಿ ಅಕ್ರಮವಾಗಿ ಸರರ್ಕಾರಕ್ಕೆ ಯಾವುದೇ ರಾಜಧನವನ್ನು ಕಟ್ಟದೆ ಅನಧಿಕೃತವಾಗಿ ಮರಳನ್ನು ಸಾಗಿಸುತ್ತಿರುವಾಗ ಮೇಲ್ಕಂಡ 11 ಟಿಪ್ಪರ್ ಗಳು ಮತ್ತು ಮರಳು ಸೇರಿ ಒಟ್ಟು 13062550/- ರೂ.ಗಳು ಬೆಲೆಬಾಳುವುದನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ನಂತರ ಸಂಬಂಧ ಪಟ್ಟ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಮಟಕಾ ಜೂಜಾಟ ಪ್ರರಕಣದ ಮಾಹಿತಿ.
ದಿನಾಂಕ 16.03.2020 ರಂದು 5-30 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ರಾಯಚೂರು ರಸ್ತೆಯಲ್ಲಿರುವ ಹೇರಿಟೇಜ್ ಹಾಲಿನ ಡೈರಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಅದೃಷ್ಟದ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿ ಶ್ರೀ ವಿಜಯಕೃಷ್ಣ  ಪಿ.ಎಸ್.ಐ ನಗರ ಪೊಲೀಸ್ ಠಾಣೆ, ಸಿಂಧನೂರು ರವರು ಮತ್ತು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ ರೂ 1200/-, ಮಟಕಾ ಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿತನು ಮಟಕಾ ಪಟ್ಟಿ ಮತ್ತು ಹಣವನ್ನು ತನ್ನ ಹತ್ತಿರ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ. ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ವರದಿ ಮುಖಾಂತರ ಸೂಚಿಸಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತ ವಿರುದ್ದ ಸಿಂಧನೂರು ನಗರ ಪೊಲೀಸ್ ಠಾಣಾ ಗುನ್ನೆ ನಂ: 33/2020, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.