Thought for the day

One of the toughest things in life is to make things simple:

20 Oct 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

¥ÀwæPÁ ¥ÀæPÀluÉ

                ದಿನಾಂಕ 18-10-2019 ರಂದು ಲೋಕೆಶ್ ತಂದೆ ಸಣ್ಣ ತಾಯಪ್ಪ  ವಯ:19 ಜಾತಿ:ಮಾದಿಗ : ಕೂಲಿ          ಸಾ: ಹರಿಜನ ವಾಡ (ಚರ್ಚ ಹಿಂದುಗಡೆ) ರಾಯಚೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ,  ದಿನಾಂಕ:  17-10-2019 ರಂದು ಸಂಜೆ 07:00 ಗಂಟೆಗೆ ನಗರೇಶ್ವರ ದೇವಸ್ಥಾನದ ಹತ್ತಿರ ಮೆಡಿಕಲ್ ಶಾಪಿನ ಹತ್ತಿರ ತಿಮ್ಮಾಪೂರು ಪೇಟೆಯ ಹುಡುಗರಾದ ಉಮೇಶ ತಂದೆ ತಾಯಪ್ಪ, ಲಡ್ಡ ತಂದೆ ತಾಯಪ್ಪ, ದೀಪಕ, ಶ್ರೀನಿವಾಸ (ಲಕ್ಕಿ), ಪವನ್ ಡಾನ್ಸರ್, ಪ್ರವೀಣ ಕಿಂಗ್, ಹರೀಶ ಯಾದವ, ಇವರುಗಳು ಗುಂಪು ಕಟ್ಟಿಕೊಂಡು ಕಟ್ಟಿಗೆ ತೆಗೆದುಕೊಂಡು ಬಂದು ತನಗೆಮಾದಿಗ ಸೂಳೆ ಮಕ್ಕಳೇ ನಿಮ್ಮದು ಜಾಸ್ತಿಯಾಗಿದೆಅಂತಾ ಅವಾಚ್ಯ ಶಬ್ದಗಳಿಂದ ಜಾತಿ ಎತ್ತಿ ಬೈದು ಜಾತಿ ನಿಂಧನೆ ಮಾಡಿ ಜೀವದ ಬೇದರಿಕೆ ಹಾಕಿ ಲೋಡ್ಡ ತಂದೆ ತಾಯಪ್ಪ ಈತನು ಕಟ್ಟಿಗೆಯಿಂದ ತನ್ನ ಎಡಗಡೆ ತಲೆಗೆ ಹೊಡೆದನು, ಹರೀಶ ಯಾದವ ಈತನು ಕಟ್ಟಿಗೆಯಿಂದ ತನ್ನ ಎಡಗಾಲಿಗೆ ಮತ್ತು ಕೈಯಿಂದ ಮೂತಿಗೆ ಹೊಡೆದನು, ಉಮೇಶ ಈತನು ಬೀಗದ ಕೈಯಿಂದ ತನ್ನ ಎಡಗಣ್ಣಿನ ಹುಬ್ಬಿನ ಹತ್ತಿರ ಚುಚ್ಚಿದನು ಆಗ ದೀಪಕ, ಪವನ ಡಾನ್ಸರ್, ಪ್ರವೀಣ ಕಿಂಗ್, ಶ್ರೀನಿವಾಸ ಇವರುಗಳು ಕೈಯಿಂದ ಹೊಡೆಬಡೆ ಮಾಡಿ ದುಃಖಪಾತಗೊಳಿಸಿ ಮಗನೇ ನಮಗೆ ನಿನ್ನನ್ನು ಹೊಡೆಯಲು ಮುರಳಿ ಯಾದವ ಕಳುಹಿಸಿದ್ದಾನೆ, ನಿಮ್ಮ ಏರಿಯಾದ ಯಾರೇ ಸಿಕ್ಕರೂ ಬಿಡುವದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ. ಅಂತಾ ಗಾಯಾಳು ನೀಡಿದ ದೂರಿನ ಸಾರಾಂಶದ ಮೇರೆಗೆ ನೇತಾಜಿನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.66/2019 ಕಲಂ 143, 147, 148, 323, 324, 504, 506, 109 ಸಹಿತ 149  ಐಪಿಸಿ ಮತ್ತು ಕಲಂ 3(1)(ಆರ್)(ಎಸ್), 3(2)(5) ಎಸ್.ಸಿ./ಎಸ್.ಟಿ.ಪಿಎ ಯಾಕ್ಟ್ 1989 ತಿದ್ದುಪಡೆ ಕಾಯ್ದೆ-2014 ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ನಂತರ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಇತರೆ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಘಟನೆ ನಡೆದ ಸ್ಥಳ ಮತ್ತು ಅದರ ಸುತ್ತ-ಮುತ್ತ ಪೊಲೀಸ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಡಿ..ಆರ್ ತುಕಡಿಯನ್ನು ಸೂಕ್ಷ್ಮ ಸ್ಥಳದಲ್ಲಿ 24x7 ರೀತಿಯಲ್ಲಿ ನಿಯೋಜಿಸಿ ಮುಂದೆ ಯಾವುದೇ ರೀತಿಯಾ ಗಲಾಟೆ ಆಗದಂತೆ ಕ್ರಮ ಕೈಗೊಳ್ಳಲಾಗಿರುತ್ತದೆ. ತದನಂತರ ಪೊಲೀಸ್ ಉಪಾಧೀಕ್ಷಕರು ರಾಯಚೂರು ರವರ ನೇತೃತ್ವದಲ್ಲಿ ಪ್ರಕರಣದ ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಲು ಸಿಪಿಐ ಪೂರ್ವ ವೃತ್ತ, ಪಿ.ಎಸ್. ನೇತಾಜಿ ನಗರ, ಅಪರಾಧ ವಿಭಾಗದ ಸಿಬ್ಬಂದಿಯವರಾದ ವೆಂಕಟೇಶ್, ಗೌಷ ಪಾಷ, ಶ್ರೀನಿವಾಸ, ರಾಜ, ಬಂದಯ್ಯ ಹಿರೇಮಠ ಮತ್ತು ಶಿವಣ್ಣ ರವರ ತಂಡವನ್ನು ರಚಿಸಿದ್ದು, ತಂಡವು  ಪ್ರಕರಣ ದಾಖಲಾದ 24 ತಾಸುಗಳಲ್ಲಿ 5 ಜನ ಆರೋಪಿಗಳನ್ನು ಪತ್ತೆ ಹಚ್ಚಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರು ಪಡಿಸಿರುತ್ತಾರೆ. ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ರಾಯಚೂರು ರವರು ಶ್ಲಾಘೀಸಿರುತ್ತಾರೆ. ಸದ್ಯ ಪಿಕೆಟಿಂಗ್, ಪೆಟ್ರೋಲಿಂಗ್ ಜಾರಿಯಲ್ಲಿದ್ದು, ಪರಿಸ್ಥಿತಿ ಶಾಂತವಿದ್ದು ಮುಂದಿನ ಬೆಳವಣಿಗೆಗಳ ಮೇಲೆ ನಿಗಾವಹಿಸಲಾಗಿದೆ.

ರಸ್ತೆ ಅಪಘಾತ ಪ್ರಕರಣ ಮಾಹಿತಿ.
ದಿನಾಂಕ: 19.10.2019 ರಂದು ರಾತ್ರಿ 9.15 ಗಂಟೆಯ ರಾಯಚೂರು ಶಕ್ತಿನಗರ ರಸ್ತೆಯ ಹೆಗ್ಗಸನಹಳ್ಳಿ ಗ್ರಾಮ ಚಿಕ್ಕಸ್ಗೂರು ಗ್ರಾಮದ YTPS ರೈಲ್ವೇ ಬ್ರಿಡ್ಜ ನ ಕೆಳಗೆ ರಸ್ತೆಯಲ್ಲಿ ಆರೋಪಿ ನಂ: 1ಈತನು ತನ್ನ ರಜಿಸ್ಟ್ರೇಷನ್ ನಂಬರ್ ನಮೂದಿಸದೇ ಇರುವ ಬಜಾಜ್  ಸಿಟಿ 100 ಮೊಟಾರ ಸೈಕಲನ್ನು ತೆಗೆದುಕೊಂಡು ಶಕ್ತಿನಗರ ಕಡೆಯಿಂದ ಚಿಕ್ಕಸ್ಗೂರು ಜನತಾ ಮನೆಗಳ ಕಡೆಗೆ ಹಾಗೂ ಅದೇ ವೇಳೆಗೆ ಆರೋಪಿ ನಂ:  2 ಈತನು ತನ್ನ ಹಿರೋ HF ಡಿಲಕ್ಸ ಮೊಟಾರ ಸೈಕಲ್ ನಂ: ಕೆಎ36ಇಟಿ4119 ನೇದ್ದನ್ನು ತೆಗೆದುಕೊಂಡು ಚಿಕ್ಕಸ್ಗೂರು ಜನತಾ ಮನೆಗಳ ಕಡೆಯಿಂದ ಚಿಕ್ಕಸ್ಗೂರು ಗ್ರಾಮದ ಕಡೆಗೆ ಇಬ್ಬರೂ ತಮ್ಮ ತಮ್ಮ ಮೊಟಾರ ಸೈಕಲಗಳನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಬ್ಬರಿಗೊಬ್ಬರು ಕಂಟ್ರೋಲ್ ಮಾಡದೇ ರಸ್ತೆಯಲ್ಲಿ ಮುಖಾ ಮುಖಿಯಾಗಿ ಟಕ್ಕರ್ ಕೊಟ್ಟಿದ್ದು ಇದರಿಂದಾಗಿ ಆರೋಪಿ ನಂ:1 ಈತನಿಗೆ ಹಣೆಗೆ ಭಾರಿ ರಕ್ತಗಾಯ ಎರಡು ಕಿವಿಯಲ್ಲಿ ರಕ್ತಸ್ರಾವ, ಎಡಗಣ್ಣ ಹುಬ್ಬಿನ ಮೇಲೆ ರಕ್ತಗಾಯ, ಎಡಬುಜಕ್ಕೆ ತರಚಿದ ಗಾಯ, ಎಡಗಾಲ ಪಾದದಲ್ಲಿ ತರಚಿದ ಗಾಯಗಳಾಗಿದ್ದು, ಆರೋಪಿ ನಂ: 2 ಎಡಗಣ್ಣ ಹುಬ್ಬಿಗೆ ಭಾರಿ ರಕ್ತಗಾಯ, ಎಡಗಾಲ ಮೊಣಕಾಲಿಗೆ ರಕ್ತಗಾಯ, ಎಡಗಾಲ ಮೊಣಕಾಲಿಗೆ ರಕ್ತಗಾಯ, ಎಡಗಾಲ ಮೊಣಕಾಲ ಕೆಳಗೆ ಭಾರಿ ರಕ್ತಗಾಯ, ಎಡಗಾಲ ಪಾದದಲ್ಲಿ ರಕ್ತಗಾಯವಾಗಿದ್ದು ಘಟನೆಯ ನಂತರ ಗಾಯಾಳುಗಳಿಬ್ಬರಿಗೂ ಫಿರ್ಯಾದಿದಾರರು  ರಿಮ್ಸ ಆಸ್ಪತ್ರೆಗೆ ತನ್ನ ಕಾರಿನಲ್ಲಿಯೇ ಕರೆತಂದು ಇಲಾಜಿಗೆ ಸೇರಿಕೆ ಮಾಡಿದ್ದು ಅಂತಾ ಮುಂತಾಗಿ ನೀಡಿದ ಲಿಖಿತ ಫಿರ್ಯಾದು ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 141/2019 PÀ®A. 279, 338, IPC  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.