Thought for the day

One of the toughest things in life is to make things simple:

15 Dec 2017

Reported Crimes


                                                                                                                                                         

                            ¥ÀwæPÁ ¥ÀæPÀluÉ  
 
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-    
::CPÀæªÀÄ ªÀÄgÀ¼ÀÄ ªÀÄvÀÄÛ mÁæPÀÖgïUÀ¼À ªÀ±À¥Àr¹PÉÆAqÀ §UÉÎ::
ದಿನಾಂಕ:-14.12.2017 ರಂದು ಬೆಳಗ್ಗೆ 9-10 ಗಂಟೆಗೆ ಮುನಿಸ್ವಾಮಿ .ಎಸ್. ಸಿಂಧನೂರು ಗ್ರಾ ಠಾಣೆರವರು ಮೇಲ್ಕಂಡ ಮರಳು ತುಂಬಿದ 2-ಟ್ರಾಕ್ಟರಗಳ ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು ಸಾರಾಂಶವೇನೆಂದರೆ, ದಿನ ಬೆಳಗ್ಗೆ ಮಾನ್ಯ ಪಿ.ಎಸ್. ಸಾಹೇಬರು ಸಿಂಧನೂರು ಗ್ರಾ ಠಾಣೆರವರು ಮಾನ್ವಿ ಬಂದೋಬಸ್ತ ಕರ್ತವ್ಯದಲ್ಲಿಂದ ತಿಳಿಸಿದ್ದೇನೆಂದರೆ,ಬೂದಿವಾಳ ಹಳ್ಳದಿಂದ ಎರಡು ಟ್ರಾಕ್ಟರ ಟ್ರಾಲಿಗಳಲ್ಲಿ ಚಾಲಕರು ಮರಳನ್ನು ತುಂಬಿಕೊಂಡು ಸಿಂಧನೂರು ಕಡೆಗೆ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದಿರುತ್ತದೆ ಹೋಗಿ ಜಪ್ತಿ ಮಾಡಿಕೊಂಡು ಬನ್ನಿರಿ ಅಂತಾ ತಿಳಿಸಿದ್ದರಿಂದ ನಾನು ಮತ್ತು ಸಿಬ್ಬಂದಿಯವರು ಪಂಚರೊಂದಿಗೆ ಬೂದಿವಾಳ ಕ್ರಾಸದಲ್ಲಿ ಹೋಗಿದ್ದಾಗ ಬೂದಿವಾಳ ಹಳ್ಳದಿಂದ ಚಾಲಕರು ಮರಳು ತುಂಬಿಕೊಂಡು ಬೆಳಗ್ಗೆ 7-30 ಗಂಟೆ ಸುಮಾರಿಗೆ ಬೂದಿವಾಳ ಕ್ರಾಸ ಹತ್ತಿರ ಬಸ್ ನಿಲ್ದಾಣದ ಸಮೀಪ ಬರುತ್ತಿದ್ದಾಗ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದ್ದು ದಾಳಿ ಕಾಲಕ್ಕೆ ಟ್ರಾಕ್ಟರ ಚಾಲಕರು ತಮ್ಮ ಟ್ರಾಕ್ಟರಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಅವುಗಳನ್ನು ಪರಿಶೀಲಿಸಲಾಗಿ 1).ಕೆಂಪು ಬಣ್ಣದ ಮಹಿಂದ್ರಾ ಕಂಪನಿಯ ಟ್ರಾಕ್ಟರ್ ನಂ.ಕೆ..36-ಟಿಸಿ-9130 ಇಂಜೀನ್ ನಂ.NHB2KAE0042 ಅಂ.ಕಿ.2-ಲಕ್ಷ 2).ನಂಬರ್ ಪ್ಲೇಟ್ ಇಲ್ಲದ ಟ್ರಾಲಿ ಅಂ.ಕಿ.1-ಲಕ್ಷ, 3).ಟ್ರಾಲಿಯ ಮರಳು ಅಂ.ಕಿ.1500/- 4).ಕೆಂಪು ಬಣ್ಣದ ಮಹಿಂದ್ರಾ ಕಂಪನಿಯ ಟ್ರಾಕ್ಟರ್ ನಂ.ಕೆ..35-ಟಿಎ-0533 ಇಂಜಿನ್ ನಂ.NCL02340 ಅಂ.ಕಿ.2-ಲಕ್ಷ  5).ಟ್ರಾಲಿಯ ಚೆಸ್ಸಿ ನಂ.RAE-154 ಅಂ.ಕಿ.1-ಲಕ್ಷ 6).ಟ್ರಾಲಿಯಲ್ಲಿದ್ದ ಮರಳು ಅಂ.ಕಿ. 1500/-ರೂ. ಚಾಲಕರು ತಮ್ಮ ಮಾಲಿಕರು ತಿಳಿಸಿದಂತೆ ಬೂದಿವಾಳ ಹಳ್ಳದಿಂದ ಅನಧೀಕೃತವಾಗಿ ಸರಕಾರಕ್ಕೆ ರಾಜಧನ ಸಂದಾಯ ಮಾಡದೆ ಕಳ್ಳತನದಿಂದ ಮರಳು ತುಂಬಿಕೊಂಡು ಬಂದಿರುತ್ತಾರೆ  ಟ್ರಾಕ್ಟರಗಳನ್ನು ಮತ್ತು ಮರಳನ್ನು ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದುಕೊಂಡು ಜಪ್ತಿ ಪಂಚನಾಮೆ ಮಾಡಿಕೊಂಡು ಬಂದಿದ್ದು ಇರುತ್ತದೆ. ಮುಂದಿನ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಇದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 282/2017.ಕಲಂ. 42, 44, ಕೆ.ಎಂ.ಎಂ.ಸಿ.ಅರ್.ರೂಲ್-1994, ಕಲಂ.4(1),4(1-) ಎಂ.ಎಂ.ಆರ್.ಡಿ, ಮತ್ತು ಕಲಂ,379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ರಸ್ತೆ ಅಪಘಾತ ಪ್ರಕರಣಗಳ ಬಗ್ಗೆ :-
ದಿನಾಂಕ.13.12.2017 ರಂದು ರಾತ್ರಿ 7-30 ಗಂಟೆಗೆ ಪಿರ್ಯಾದಿ ಮತ್ತು ಶಿವರಾಜ ಹಾಗು ಹನುಮಗೌಡ ಮೂವರು ದೇವತಗಲ್ ಗ್ರಾಮದಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ತಮ್ಮೂರಾದ ಗಣಜಲಿಗೆ ಹೊರಟಿದ್ದಾಗ ದೇವತಗಲ್-ಗಣಜಲಿ ಮುಖ್ಯ ರಸ್ತೆಯ ಮೇಲೆ ಶಿವನಗೌಡನ ಕರೆಯ ಹತ್ತಿರ ಹಿಂದಿನಿಂದ ಮೋಟಾರ್ ಸೈಕಲ್ ಚೆಸ್ಸಿ ನಂ. MBLHA10BFFHJ54258 ನೇದ್ದರ ಚಾಲಕನಾದ ಆರೋಪಿ ಶಿವಕುಮಾರನು ತನ್ನ ಮೋಟಾರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಪಿರ್ಯಾದಿ, ಶಿವರಾಜ ಮತ್ತು ಹನುಮಗೌಡನಿಗೆ ಗುದ್ದಿದ್ದರಿಂದ ಪಿರ್ಯಾದಿಗೆ ಎಡ ಮೊಣಕಾಲು ಹತ್ತಿರ ಸಾದಾ ರಕ್ತಗಾಯ, ಶಿವರಾಜನಿಗೆ ಬಲ ಮೊಣ ಕೈ ಹತ್ತಿರ ರಕ್ತಗಾಯ ಮತ್ತು ಹನುಮಗೌಡನಿಗೆ ಬಲ ಹೆಬ್ಬೆರಳಿಗೆ ರಕ್ತಗಾಯ ಮತ್ತು ಹಣೆಗೆ ಒಳಪೆಟ್ಟಾಗಿದ್ದು, ಆರೋಪಿ ಶಿವಕುಮಾರನಿಗೆ ಬಲಮುಂಗೈಗೆ ತರಚಿದ ಗಾಯ ಮತ್ತು ತಲೆಗೆ ಒಳಪೆಟ್ಟಾಗಿದ್ದು ಇರುತ್ತದೆ. ಅಂತಾ ಇದ್ದ ಅಂತಾ ಗಣಕೀಕೃತ  ಪಿರ್ಯಾದಿ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂ. 239/2017 ಕಲಂ 279, 337, 338 .ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.