Thought for the day

One of the toughest things in life is to make things simple:

2 Jun 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-


ವರದಕ್ಷಿಣ ಕಾಯ್ದೆ ಅಡಿಯಲ್ಲಿನ ಪ್ರಕಣಗಳು.
          ದಿ.01-06-2020 At 7-30 PM ಕ್ಕೆ ಪಿರ್ಯಾದಿ ಶ್ರೀಮತಿ ಭವಿತಾ ಮಾಲಿ ಗಂಡ ರಾಜಕುಮಾರ ಮಾಲಿ 26 ವರ್ಷ, ನಮಶೂದ್ರ,    ಉ;-ಮನೆಕೆಲಸ,ಸಾ;-ಆರ್.ಹೆಚ್. ಕ್ಯಾಂಪ್ ನಂ.2 ತಾ:-ಸಿಂಧನೂರು ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ಪಿರ್ಯಾದನ್ನು ಹಾಜರಪಡಿಸಿದ್ದು, ಸಾರಾಂಶವೇನೆಂದರೆ,ತನ್ನ ತವರು ಮನೆಯು ಆರ.ಹೆಚ್.ಕ್ಯಾಂಪ್ ನಂ.4 ಇದ್ದು, ತನ್ನನ್ನು 7-ವರ್ಷಗಳ ಹಿಂದೆ ಆರ್.ಹೆಚ್.ಕ್ಯಾಂಪ್ ನಂ.2 ರ ನಿವಾಸಿಯಾದ ಆ.ನಂ.1 ರಾಜಕುಮಾರ ಮಾಲಿ ತಂದೆ ಕನಾಯಮಾಲಿ 30 ವರ್ಷ. ಈತನಿಗೆ ಕೊಟ್ಟು ಮದುವೆ ಮಾಡಿದ್ದು, ತಮಗೆ 6-ವರ್ಷದ ಒಬ್ಬ ಗಂಡು ಮಗನಿರುತ್ತಾನೆ. ತನಗೆ ಮದುವೆಯಾದ ನಂತರ ತನ್ನ ಗಂಡನ ಮನೆಯಲ್ಲಿ ಗಂಡ, ಅತ್ತೆ,ಮಾವನವರು ಚೆನ್ನಾಗಿ ನೋಡಿಕೊಂಡಿದ್ದು, ನಂತರ ದಿನಗಳಲ್ಲಿ ತನ್ನ ಗಂಡನು ಕುಡಿಯುವ ಚಟ ಕಲಿತುಕೊಂಡು ತನ್ನ ಶೀಲದ ಮೇಲೆ ಸಂಶಯಪಡುತ್ತ ಸೂಳೆ, ಚಿನಾಲಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದಾಡುತ್ತ, ಮೂರು ಜನರು ದಿನಾಲೂ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತ ಬಂದಿರುತ್ತಾರೆ.ದಿ.28-05-2020 ರಂದು ಬೆಳಿಗ್ಗೆ 9-30 ಗಂಟೆ ಸುಮಾರಿಗೆ ತಾನು ಗಂಡನ ಮನೆಯಲ್ಲಿರುವಾಗ ತನ್ನ ಗಂಡ, ಅತ್ತೆ, ಮಾವನವರು ತನ್ನೊಂದಿಗೆ ಜಗಳ ಮಾಡಿ ತನ್ನ ಗಂಡನು ಬೆನ್ನಿಗೆ, ಮುಖಕ್ಕೆ ಕೈಗಳಿಂದ ಹೊಡೆದು.ಕಾದ ಕಬ್ಬಿಣದ ರಾಡಿನಿಂದ ಎರಡೂ ಮೊಣಕೈ ಕೆಳಭಾಗದಲ್ಲಿ ಮತ್ತು ಎರಡೂ ಕಾಲುಗಳ ಕೆಳಭಾಗದಲ್ಲಿ ಬರೆ ಎಳೆದಿದ್ದರಿಂದ ಸುಟ್ಟ ಕಂದಿದ ಗಾಯಗಳಾಗಿರುತ್ತವೆ. ತನ್ನ ಗಂಡನಿಗೆ ಅತ್ತೆ, ಮಾವ ಕೂಡಿ ಈ ಸೂಳೆಯನ್ನು ಏನು  ಕೇಳುವುದು ಒದ್ದು ಸಾಯಿಸಿ ಬಿಡು ಇಲ್ಲಾ ತವರು  ಮನೆಗೆ  ಓಡಿಸಿ  ಬಿಡು  ಎಂದು ಜೀವದ   ಬೆದರಿಕೆ   ಹಾಕಿ   ಹಾಕಿರುತ್ತಾರೆ. ನಂತರ ತಾನು ತವರು ಮನೆಗೆ ಹೋಗಿದ್ದು,ತವರು ಮನೆಯಲ್ಲಿ ಸಂಸಾರ ಇದೆ ಗಂಡನ ಮನೆಯವರನ್ನು ಕರೆಯಿಸಿಕೊಂಡು ಸರಿಪಡಿಸೋಣ ಅಂತಾ ತಿಳಿಸಿದ್ದರಿಂದ ಸರಿಯಾಗದ ಕಾರಣ ಈ ದಿನ ತಡವಾಗಿ ಬಂದು ದೂರು ಕೊಟ್ಟಿರುವೆನು ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಪೊಲೀಸ್ ಠಾಣೆ ಗುನ್ನೆ ನಂಬರ 74/2020 ಕಲಂ. 498(ಎ), 504, 323, 341, 324,506,109 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಮಟಕಾದಾಳಿ ಪ್ರಕಣದ ಮಾಹಿತಿ.
          ದಿನಾಂಕ 01.06.2020 ರಂದು 11-45 .ಎಮ್ ಸಮಯದಲ್ಲಿ ಸಿಂಧನೂರು ನಗರದ ಎ.ಪಿ.ಎಮ್.ಸಿ 01 ನೇ ಗೇಟ್ ಎದುರುಗಡೆ ಸಾರ್ವಜನಿಕ ಶೌಚಾಲಯದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಸಂತೋಷ ಕುಮಾರ ತಂದೆ ವಿಜಯಕುಮಾರ, ಶಾಸ್ತ್ರಿಮಠ, ವಯ: 27 ವರ್ಷ, ಜಾ: ಜಂಗಮ, : ಬಂಡಿ ಹೋಟೆಲ್, ಸಾ: ವಿದ್ಯಾನಗರ, ಗಂಗಾನಗರ ಸಿಂಧನೂರು ಈತನು ಅದೃಷ್ಟದ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ ರೂ 2700/-, ಮಟಕಾ ಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿತನು ಮಟಕಾ ಪಟ್ಟಿ ಮತ್ತು ಹಣವನ್ನು ತನ್ನ ಹತ್ತಿರ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ. ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಜ್ಞಾಪನ ಪತ್ರದ ಮುಖಾಂತರ ಸೂಚಿಸಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು, ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತನ ವಿರುದ್ದ ಸಿಂಧನೂರು ಪೊಲೀಸ್ ಠಾಣಾ ಗುನ್ನೆ ನಂ: 45/2020, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಇಸ್ಪೇಟ್ ದಾಳಿ ಪ್ರಕಣದ ಮಾಹಿತಿ.

          ದಿನಾಂಕ: 01.06.2020 ರಂದು 4-45 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಪಿಡಬ್ಲೂಡಿ ಕ್ಯಾಂಪಿನ ಶಶಿವರ್ಮ ಹೆಗಡೆ ಫಾರ್ಮರವರ ಹೊಲದ ಹಳ್ಳದ ಬದುವಿನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಸಮೀರ್ ತಂದೆ ಬುಡ್ಡಾಸಾಬ, ವಯ: 26 ವಷರ್ಷ, ಜಾ: ಮುಸ್ಲಿಂ, : ಟಾಟಾ ಎಸಿಇ ಚಾಲಕ , ಸಾ: ಮಹೆಬೂಬ್ ಕಾಲೋನಿ ಸಿಂಧನೂರು ಹಾಗೂ ಇತರೆ 3 ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು ಆರೋಪಿತರು ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದ ಆರೋಪಿತರ ವಶದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 1150/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ, ಫಿರ್ಯಾದುದಾರರು ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರನ್ನು ಒಪ್ಪಿಸಿ ಜ್ಞಾಪನ ಪತ್ರದೊಂದಿಗೆ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ಪೊಲೀಸ್ ಠಾಣಾ ಗುನ್ನೆ ನಂ: 46/2020, ಕಲಂ: 87 .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.