Thought for the day

One of the toughest things in life is to make things simple:

2 Sep 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w: 

ಇಸ್ಪೇಟ್ ದಾಳಿ ಪ್ರಕಣದ ಮಾಹಿತಿ.
ದಿನಾಂಕ : 01.09.2019 ರಂದು 5-00 ಪಿ.ಎಮ್  ಸಿಂಧನೂರು ನಗರದ ನಟರಾಜ್ ಕಾಲೋನಿಯ ಲಾಲ್ ಚಂದ್ ಶೇಠ್ ಮನೆಯ ಎದುರುಗಡೆ ಇರುವ ಹಳೆಯ ಟಾಕೀಸ್ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಶಂಕ್ರಪ್ಪ ತಂದೆ ಮುದ್ದಣ್ಣ, ಪಗಡದಿನ್ನಿ ಹಾಗೂ ಇತರೆ 9ಜನ ಆರೋಪಿತರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು ಆರೋಪಿತರು ಸಿಕ್ಕಿಬಿದ್ದಿದ್ದು, ಆರೋಪಿತರ ವಶದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 13350/- ಮತ್ತು 52 ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ, ಫಿರ್ಯಾದುದಾರರು ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಠಾಣಾ ಸಿಂಧನೂರು ನಗರ ಪೊಲೀಸ್ ಗುನ್ನೆ ನಂ: 96/2019, ಕಲಂ: 87 .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿಇರುತ್ತಾರೆ.

ರಸ್ತೆ ಅಪಘಾತ ಪ್ರಕಣದ ಮಾಹಿತಿ.
ದಿನಾಂಕ 01-09-2019 ರಂದು ಸಂಜೆ 6-30 ಗಂಟೆಗೆ ಫಿರ್ಯಾದಿ ಮಹಿಮೂದ್ ತಂದೆ ರಾಜಾಸಾಬ್ ವಯಾಃ 29 ವರ್ಷ ಜಾತಿಃ ಮುಸ್ಲಿಂ ಉಃ ಕಾರ್ಪೆಂಟರ್ ಕೆಲಸ ಸಾಃ  ಅಂದ್ರನ್ ಕಿಲ್ಲಾ ಮಾನವಿ ಇವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೆನೆಂದರೆ ಫಿರ್ಯಾದಿಯ ತಮ್ಮನಾದ ಆರೋಪಿ ಹುಸೇನಿ ಈತನು ಕಾರ್ಪೆಂಟರ್ ಕೆಲಸ ಮಾಡುತ್ತಿದ್ದು ದಿನಾಂಕ 24-07-2019 ರಂದು ಕಾತರಕಿ ಗ್ರಾಮದಲ್ಲಿ ಕಾರ್ಪೆಂಟರ್ ಕೆಲಸ ನಡೆಯುತ್ತಿದ್ದರಿಂದ ಅಂದು ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ಮನೆಯಿಂದ ತನ್ನ ಮೋಟರ್ ಸೈಕಲ್ ನಂ ಕೆಎ 36-ಈಎಸ್-6594 ನೆದ್ದನ್ನು ತೆಗೆದುಕೊಂಡು ತನ್ನ ಗೆಳಯನಾದ ಮಹಿಬೂಬ್ ತಂದೆ ಹುಸೇನ್ ಭಾಷ ಈತನನ್ನು ಕರೆದುಕೊಂಡು ಕಾತರಕಿ ಗ್ರಾಮಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ ಮಾನವಿಗೆ ಬರಬೇಕೆಂದು ತನ್ನ ಮೋಟರ್ ಸೈಕಲ್ ನಂ  ಕೆಎ 36-ಈಎಸ್-6594 ನೇದ್ದರ ಹಿಂದುಗಡೆ ತನ್ನ ಗೆಳೆಯ ಮಹಿಬೂಬ್ ನನ್ನು ಕೂಡಿಸಿಕೊಂಡು ಕಾತರಕಿ- ಮಾನವಿ ರಸ್ತೆಯ ಮೇಲೆ ಆರೋಪಿತನು ತನ್ನ ಮೋಟರ್ ಸೈಕಲನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ವೇಗವನ್ನು ನಿಯಂತ್ರಿಸಲಾಗದೇ ರಬ್ಬಣ್ ಕಲ್  ಗ್ರಾಮ ದಾಟಿದ ನಂತರ ಮಾನವಿಯ ದೋಬಿಘಾಟ ಹತ್ತಿರ ಸಂಜೆ 4-50 ಗಂಟೆಯ ಸುಮಾರಿಗೆ ಪಲ್ಟಿ ಮಾಡಿದ್ದು ಪರಿಣಾಮ ಆರೋಪಿ ಹುಸೇನಿ ಮತ್ತು ಮಹಿಬೂಬ್ ಇಬ್ಬರು ರಸ್ತೆಯ ಮೇಲೆ ಬಿದ್ದು ಆರೋಪಿತನ ತಲೆಗೆ ಭಾರಿ ರಕ್ತಗಾಯವಾಗಿದ್ದು ಇಲಾಜು ಕುರಿತು  ಹುಸೇನಿ ಈತನನ್ನು ಮಾನವಿ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿಂದ ವೈಧ್ಯರ ಸಲಹೆ ಮೇರೆಗೆ ಹುಸೇನನ್ನು ರಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ  ಚಿಕಿತ್ಸೆ ಕುರಿತು ಹೈದ್ರಾಬಾದಿನ ವೆಲ್ ನೆಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು  ಫಿರ್ಯಾದಿ ಮತ್ತು ಆತನ ಕುಟುಂಬದವರು ಹುಸೇನಿ ಈತನಿಗೆ ಚಿಕಿತ್ಸೆ ಮಾಡಿಸಿ ದಿನಾಂಕ 24-08-2019 ರಂದು ಆಸ್ಪತ್ರೆಯಿಂದ ಡಿಸಾರ್ಜ ಮಾಡಿಸಿಕೊಂಡು ಬಂದಿದ್ದು  ಫಿರ್ಯಾದಿ ಮತ್ತು ಆತನ ಕುಟುಂಬದವರು ಆರೋಪಿ ಹುಸೇನಿ ಈತನ ತಲೆಗೆ ಭಾರಿ ರಕ್ತಗಾಯವಾಗಿದ್ದರಿಂದ ಮನೆಯವರೆಲ್ಲ ಭಯಗೊಂಡು ಆತನು ಸಾಯುತ್ತಾನೆ ಅಂತಾ ತಿಳಿದು ಏನು ದೂರು ಕೊಡಲು ತಿಳಿಯದೇ ಆಗೆಯೇ ಹೈದ್ರಾಬಾದಿಗೆ ಹೋಗಿ ಈ ಬಗ್ಗೆ ತಿಳಿದುಕೊಂಡು ಇಂದು ತಡವಾಗಿ ಠಾಣೆಗೆ ಬಂದಿದ್ದು ಇರುತ್ತದೆ ಕಾರಣ  ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ಹೇಳಿಕೆಯ ದೂರಿನ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 174/2019 ಕಲಂ 279. 338 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.