Thought for the day

One of the toughest things in life is to make things simple:

26 Jun 2021

Press Note:

 ಪೊಲೀಸ್ ಪ್ರಕಟಣೆ

 

     ಇಂದು ವಿಶ್ವ ಮಾಧಕ ಪಧಾರ್ಥಗಳ ಸೇವನಾ ನಿಷೇಧ ದಿನ ಹಿನ್ನೆಲೆಯಲ್ಲಿ ಮಾನ್ಯ ಡಿಜಿ&ಐಜಿಪಿ, ಕರ್ನಾಟಕ ರಾಜ್ಯ, ಬೆಂಗಳುರು ರವರ ಸೂಚನೆಯಂತೆ ಜಿಲ್ಲೆಯಲ್ಲಿ ದಾಖಲಿಸಿರುವ 40 ಪ್ರಕರಣಗಳಲ್ಲಿ ಜಪ್ತಿ ಮಾಡಿದ್ದ ಸುಮಾರು 281 ಕೆ.ಜಿ 587 ಗ್ರಾಂ ಗಾಂಜಾ ರೂ 15,52,554/- ಮೌಲ್ಯದ ಮಾಧಕ ವಸ್ತುಗಳನ್ನು ವಿಲೇವಾರಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಪ್ರಧಾನ ಕಛೇರಿಯಿಂದ ರಚಿಸಲಾದ ಮಾಧಕ ವಸ್ತುಗಳ ವಿಲೇವಾರಿ ಸಮಿತಿ ಸದಸ್ಯರ ಸಮಕ್ಷಮದಲ್ಲಿ ಮತ್ತು ಅಧ್ಯಕ್ಷರು, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ರಾಯಚೂರು ಇವರ ಸಹಯೋಗದೊಂದಿಗೆ ಯಕ್ಲಾಸಪುರ ರಸ್ತೆಯಲ್ಲಿರುವ ರಾಯಚೂರು ಇಂಡಿಯನ್ ಮೆಡಿಕಲ್ ಅಸೋಷಿಯೇಷನ್ ಕಾಮನ್ ಟ್ರೀಟ್ ಮೆಂಟ್ ಫೆಸಿಲಿಟಿ (RIMACT) ಕಾಮನ್ ಬಯೋಮೆಡಿಕಲ್ ವೆಸ್ಟ್ ಟ್ರೀಟ್ ಫೆಸಿಲಿಟಿ ನಾಶಪಡಿಸುವ ಸ್ಥಳದಲ್ಲಿ ಬೆಳಿಗ್ಗೆ 10:00 ಪ್ರಾರಂಭಿಸಿ ಮಧ್ಯಾಹ್ನ 12:00 ಗಂಟೆವರೆಗೆ ಜರುಗಿಸಿ ಮುಕ್ತಾಯಗೊಳಿಸಲಾಗಿದೆ.

 

     ಹಿಂದೆ ಸನ್ 2016 ರಲ್ಲಿ ಪ್ರಕ್ರಿಯೆಯನ್ನು ಜರುಗಿಸಲಾಗಿತ್ತು. ಪುನಃ ಸಾಲಿನಲ್ಲಿ ಪ್ರಕ್ರಿಯೆಯನ್ನು ಜರುಗಿಸಲಾಗಿರುತ್ತದೆ. ಪ್ರಕ್ರಿಯೆಗೆ ಸಹಕಾರ ನೀಡಿರುವ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಮತ್ತು ರಾಯಚೂರು .ಎಂ. ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ರಾಯಚೂರು ಜಿಲ್ಲಾ ಪೊಲೀಸ್ ವತಿಯಿಂದ ಧನ್ಯವಾದಗಳನ್ನು ತಿಳಿಸಲಾಗಿದೆ.

 

ಪೊಲೀಸ್ ಅಧೀಕ್ಷಕರು,

ರಾಯಚೂರು ಜಿಲ್ಲೆ.