Thought for the day

One of the toughest things in life is to make things simple:

29 May 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟಕದಾಳಿ ಪ್ರಕರಣದ ಮಾಹಿತಿ.
            ದಿನಾಂಕ- 27/05/2020 ರಂದು 21-55 ಗಂಟೆಯಿಂದ 22-30 ಗಂಟೆಯ ಅವಧಿಯಲ್ಲಿ ಆರೋಪಿಯಾದ ರಾಘು ಈತನು ಕವಿತಾಳದ ಆನ್ವರಿ ಕ್ರಾಸ್ ನ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಒಂದು ರೂ ಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಾ ಇದ್ದಾಗ ಪಂಚರ ಸಮಕ್ಷಮದಲ್ಲಿ ಪಿಎಸ್‌‌ಐ & ಸಿಬ್ಬಂದಿಯವರು ದಾಳಿ ಮಾಡಿ ಸಿಕ್ಕಿ ಬಿದ್ದ ಆರೋಫಿತನ ವಶದಿಂದ 1]ನಗದು ಹಣ 670/-,  2]01 ಮಟಕಾ ನಂಬರ್‌‌ ಬರೆದ ಪಟ್ಟಿ, 3]ಒಂದು ಬಾಲ್‌‌ಪೆನ್ನು ಇವುಗಳನ್ನು ಜಪ್ತಿ ಪಡಿಸಿಕೊಂಡು ಸಿಕ್ಕಿ ಬಿದ್ದವನು ತಾನು ಬರೆದುಕೊಂಡು ಮಟಕಾ ಪಟ್ಟಿಯನ್ನು ಬುಡ್ಡಸಾಬ @ ಲಾಳೇಸಾಬ ತಂದೆ ಮೌಲಸಾಬ  ಹಿರೇ ಬಾದರದಿನ್ನಿ ಸಾ:ಬಾಗಲವಾಡ ಈತನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಒಂದು ವರದಿಯನ್ನು 23-00 ಗಂಟೆಗೆ ಒಪ್ಪಿಸಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಇರುತ್ತದೆ. ಕಾರಣ ಆಪಾದಿತರು ಕಲಂ 78(3) ಕೆ.ಪಿ ಕಾಯಿದೆ ಅಡಿಯಲ್ಲಿ ಅಪರಾಧವೆಸಗಿದ್ದರಿಂದ ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಸದರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ಜೆ ಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರಿಂದ ಪ್ರಕರಣ ದಾಖಲಿಸಿಕೊಳ್ಳಲು ದಿನಾಂಕ:28/05/2020 ರಂದು ಬೆಳಿಗ್ಗೆ 11-10 ಗಂಟೆಗೆ ಪರವಾನಿಗೆಯನ್ನು ಪಡೆದುಕೊಂಡು 12-25 ಗಂಟೆಗೆ ಬಂದಿದ್ದರಿಂದ ಕವಿತಾಳ ಠಾಣೆ ಗುನ್ನೆ ನಂ -50/2020 ಕಲಂ- 78 ( 3 ) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.

ಕೊಲೆ ಪ್ರರಕಣ ಮಾಹಿತಿ
                ದಿನಾಂಕ: 28.05.2020 ರಂದು ಬೆಳಿಗ್ಗೆ 11.00 ಗಂಟೆಯಿಂದಾ ಸಂಜೆ 4.00 ಗಂಟೆಯ ಮಧ್ಯದವಧಿಯಲ್ಲಿ ಯಾರೋ ಅಪರಿಚಿತ ದುಷ್ಕರ್ಮಿಗಳು ಫಿರ್ಯಾದಿಯ ಗಂಡನಾದ ಶಂಷಾಲ್ ತಂ: ಭೀಮಪ್ಪ ವಯ: 40 ವರ್ಷ,  ರವರಿಗೆ ಯಾವುದೋ ದುರುದ್ದೇಶದಿಂದ ಯಾವುದೋ ಬಲವಾದ ಆಯುಧದಿಂದ ಶಂಷಾಲ್ ಈತನಿಗೆ ಬಲಗೈ ಹಾಗೂ ಎರಡೂ ಕಾಲುಗಳಿಗೆ ರಕ್ತಗಾಯ, ತಲೆಯ ಹಿಂಭಾಗಕ್ಕೆ ತೀವ್ರ ರಕ್ತಗಾಯವನ್ನುಂಟು ಮಾಡಿ, ಕೊಲೆ ಮಾಡಿ ಪರಾರಿಯಾಗಿದ್ದ ಅಪರಿಚಿತ ದುಷ್ಕರ್ಮಿಗಳ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನಿಂಗಮ್ಮ ಗಂ: ಶಂಷಾಲ್ ವಯ: 25ವರ್ಷ, ಜಾ: ಮಾದಿಗ, : ಕೂಲಿ, ಸಾ: ಹೊಸೂರ್ ತಾ:ಜಿ:ರಾಯಚೂರು ರವರು ಮುಂತಾಗಿ ನೀಡಿದ ಲಿಖಿತ ಫಿರ್ಯಾದುವಿನ ಸಾರಾಂಶದ ಮೇಲಿಂದ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ 79/2020 ಕಲಂ: 302 ಐಪಿಸಿ   ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.