Thought for the day

One of the toughest things in life is to make things simple:

8 Sept 2020

Reported Crimes

 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

J¸ï.¹/J¸ï.n ¥ÀæPÀgÀtzÀ ªÀiÁ»w:

            ದಿನಾಂಕ  07-09-2020 ರಂದು ರಾತ್ರಿ 7-30 ಗಂಟೆಗೆ ಫಿರ್ಯಾದಿ ಚಂದ್ರಶೇಖರ್ ತಂದೆ ಅಮರೇಶ ವಯಾಃ 32 ವರ್ಷ ಜಾತಿಃ ನಾಯಕ ಉಃ ಒಕ್ಕಲುತನ ಸಾಃ ಮದ್ಲಾಪುರ ಕ್ಯಾಂಪ್ ತಾಃ ಮಾನವಿ ರವರು ಠಾಣೆಗೆ ಹಾಜರಾಗಿ ತನ್ನ ಒಂದು ಲಿಖಿತ ದೂರನ್ನು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ಫಿರ್ಯಾದಿದಾರನು ದಿನಾಂಕ 05-09-2020 ರಂದು ಕೆಲಸದ ನಿಮಿತ್ಯ ತನ್ನ ಮೋಟರ್ ಸೈಕಲ್ ಮೇಲೆ  ಮಾನವಿ ಪಟ್ಟಣಕ್ಕೆ ಬಂದಿದ್ದು ಮಾನವಿಯಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ ತನ್ನ ಕ್ಯಾಂಪಿಗೆ ತನ್ನ ಮೋಟರ್ ಸೈಕಲ್ ಮೇಲೆ ಹೋಗುತ್ತಿದ್ದಾಗ ಮದ್ಲಾಪುರ ಸೀಮಾದ ಪಿಂಜಾರ ಹೊಲದ ಸಮೀಪ ಕಾಲುವೆ ಗಡ್ಡೆಯ ಮೇಲೆ  ಕೆಲವು ಜನರು ಜಗಳ ಮಾಡುತ್ತಿದ್ದು ಫಿರ್ಯಾದಿಯು ತನ್ನ ಮೋಟರ್ ಸೈಕಲ್ ನಿಲ್ಲಿಸಿ ಜಗಳ ಮಾಡುತ್ತಿದ್ದವರ ಹತ್ತಿರ ಹೋಗಿ ನೋಡಲಾಗಿ ಆರೋಪಿತರು ಮತ್ತು  ಇತರರು ಜಗಳ ಮಾಡುತ್ತಿದ್ದನ್ನು ಕಂಡು ಫಿರ್ಯಾದಿದಾರನು ಸದರಿ ಜಗಳ ಬಿಡಿಸಲು ಹೋದಾಗ ರಾತ್ರಿ 8-30 ಗಂಟೆಯ ಸುಮಾರಿಗೆ ಆರೋಪಿ ನಂ 1 ಬುಸ್ಸಯ್ಯ ಸ್ವಾಮಿ ತಂದೆ ಮಲ್ಲೇಶಪ್ಪ ಜಾತಿಃ ಜಂಗಮ ಸಾಃ ಮದ್ಲಾಪುರ ಮತ್ತು 2 ವಿರುಪಾಕ್ಷಿ ತಂದೆ ಯಂಕಪ್ಪ ಜಾತಿಃ ಕಬ್ಬೆರ ಸಾಃ ರಬ್ಬಣಕಲ್  ನೆದ್ದವರು ಫಿರ್ಯಾದಿದಾರನಿಗೆ ''' ಎಲೇ ಬ್ಯಾಡರ ಸೂಳೇ ಮಗನೇ ಈ ಜಗಳದಲ್ಲಿ ನಿನ್ನದೇನಲೇ ಅಂತಾ ಅವಾಚ್ಯವಾಗಿ ಬೈದು ಜಾತಿ ನಿಂದನೇ ಮಾಡಿ ಆರೋಪಿ ನಂ 1 ನೇದ್ದವನು ಫಿರ್ಯಾದಿದಾರನಿಗೆ ಕಾಲಿನಿಂದ ಒದ್ದು ಆರೋಪಿ ನಂ 2 ನೆದ್ದವನು ಕಟ್ಟಗೆಯಿಂದ ಹೊಡೆದು ಗಾಯಗೊಳಿದ್ದು ಅಲ್ಲದೇ ಇನ್ನೂಳಿದ ಆರೋಪಿತರು ಫಿರ್ಯಾದಿದಾರನಿಗೆ ಅವಾಚ್ಯವಾಗಿ ಬೈದು ಕೈಗಳಿಂದ ಹೊಡೆಬಡೆ ಮಾಡಿ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೇ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಈ ಬಗ್ಗೆ ನಾನು ಮನೆಯಲ್ಲಿ ಹಿರಿಯೊರೊಂದಿಗೆ ವಿಚಾರ ಮಾಡಿಕೊಂಡು ಇಂದು ತಡವಾಗಿ ಠಾಣೆಗೆ ಬಂದಿದ್ದು ಕಾರಣ ನನಗೆ ಜಾತಿ ನಿಂದನೇ ಮಾಡಿ ಅವಾಚ್ಯವಾಗಿ ಬೈದು ಕೈಗಳಿಂದ ಕಟ್ಟಿಗೆಯಿಂದ ಹೊಡೆಬಡೆ ಮಾಡಿ ಜೀವದ ಬೇದರಿಕೆ ಹಾಕಿದವರ ಮೇಲೆ ಸೂಕ್ತ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 145/2020 ಕಲಂ 143.147.148.504.323.324.506 ಸಹಿತ 149 ಐ.ಪಿ.ಸಿ ಮತ್ತು ಕಲಂ 3 (1) (r) (s) 3(2) (Va) ಎಸ್.ಸಿ/ಎಸ್.ಟಿ ತಿದ್ದುಪಡಿ ಕಾಯ್ದೆ-2015 ಪ್ರಕಾರ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.