Thought for the day

One of the toughest things in life is to make things simple:

24 Aug 2018

Reported Crimes


                                                                                           
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀÄlPÁzÁ½ ¥ÀæPÀgÀtzÀ ªÀiÁ»w.
ದಿನಾಂಕ: 23/08/2018 ರಂದು 20-30 ಗಂಟೆಯಿಂದ 21-30  ಗಂಟೆಯ ಅವಧಿಯಲ್ಲಿ ಆರೋಪಿಯಾದ ನಿಂಗಪ್ಪ ತನು ತೋರಣದಿನ್ನಿ ಗ್ರಾಮದ ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ನಿಂತುಕೊಂಡು ಒಂದು ರೂ ಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಾ ಇದ್ದಾಗ ಪಂಚರ ಸಮಕ್ಷಮದಲ್ಲಿ ಪಿಎಸ್‌‌ & ಸಿಬ್ಬಂದಿಯವರು ದಾಳಿ ಮಾಡಿ ಸಿಕ್ಕಿ ಬಿದ್ದ ಆರೋಪಿತನ ವಶದಿಂದ 1]ನಗದು ಹಣ 2165/- 2]1 ಮಟಕಾ ನಂಬರ್‌‌ ಬರೆದ ಪಟ್ಟಿ 3]ಒಂದು ಬಾಲ್‌‌ಪೆನ್ನು ಇವುಗಳನ್ನು ಜಪ್ತಿ ಪಡಿಸಿಕೊಂಡು, ಸಿಕ್ಕಿ ಬಿದ್ದವನು ತಾನು ಬರೆದುಕೊಂಡು ಮಟಕಾ ಪಟ್ಟಿಯನ್ನು . ನಂ 02 ಸೂರ್ಯಪ್ಪ ಸಾ: ಹಟ್ಟಿ ರವರಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ. ಸಿಕ್ಕಿ ಬಿದ್ದ ಒಬ್ಬ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಒಂದು ವರದಿಯನ್ನು ನೀಡಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರು ಪಡಿಸಿದ್ದರ ಮೇಲಿಂದ ಮಾನ್ಯ ಜೆ.ಎಮ್.ಎಪ್.ಸಿ ನ್ಯಾಯಾಲಯ ಮಾನವಿ ರವರ ಪರವಾನಿಗೆಯನ್ನು ದಿನಾಂಕ- 24/08/2018 ರಂದು ಮದ್ಯಾಹ್ನ 14-00 ಗಂಟೆಗೆ ಪಡೆದುಕೊಂಡು ನಂತರ  ಕವಿತಾಳ ಪೊಲೀಸ್‌‌ ಠಾಣೆಯ ಗುನ್ನೆ ನಂ:137/2018, ಕಲಂ:78[3] ಕೆ.ಪಿ.ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುರುತ್ತಾರೆ.
ಮಹಿಳೆ ಕಾಣೆ ಪ್ರಕರಣದ ಮಾಹಿತಿ.
ದಿನಾಂಕ: 23/08/2018 ರಂದು 16-30 ಗಂಟೆಗೆ ಫಿರ್ಯಾದಿ ಧಶರತ್ ಸಿಂಗ್ ತಂದೆ ಸರ್ಧಾರ್ ಸಿಂಗ್ ವಯಸ್ಸು 40 ವರ್ಷ , ಜಾ:ರಜಪೂತ :ಮೆಡಿಕಲ್ ಶಾಪ ನಲ್ಲಿ ಕೆಲಸ ಸಾ: ಕಲ್ಮಠದ ಹತ್ತಿರ ಕವಿತಾಳ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಫಿರ್ಯಾಧಿಯನ್ನು ಸಲ್ಲಿಸಿದ್ದು ಸಾರಾಂಶವೇನಂದರೆ, ಪಿರ್ಯಾದಿಯ ಅಣ್ಣನ ಮಗಳಾದ ರಾಜೇಶ್ವರಿ ಈಕೆಯು ದಿನಾಂಕ: 08/08/2018 ರಂದು ಮದ್ಯಾಹ್ನ 3-30 ಗಂಟೆಯಿಂದ 8-00 ಗಂಟೆಯ ಅವಧಿಯಲ್ಲಿ ಮನೆಯಿಂದ ತಾನು ಮುದ್ದೆಬಿಹಾಳ ತಾಲೂಕಿನ ಚಡಚಣ ಪಟ್ಟಣದ KRISHNA GROUP OF COMPANIES SMART WAY LIFE CARE LLP ಎಂಬ ಆರ್ಯುವೇಧಿಕ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರಿಂದ ಪುನಃ ಅಲ್ಲಿಗೆ ಹೋಗಿ ಮುಟ್ಟಿದ ಮೇಲೆ ನಿಮಗೆ ಪೋನ್ ಮಾಡುತ್ತೇನೆ ಅಂತಾ ಹೇಳಿ ಹೋದವಳು 2-3 ದಿನವಾದರು ಮರಳಿ ಪೋನ್ ಮಾಡಲಿಲ್ಲಾ. ಆದ್ದರಿಂದ ಪಿರ್ಯಾಧಿದಾರರ ಮನೆಯವರು ಆಕೆಗೆ ಪೋನ್ ಮಾಡಿದ್ದು ಸದರಿ ಪೋನ್ ಸ್ವಿಚ್ ಆಪ್ ಬಂದಿದ್ದರಿಂದ ಆಕೆ ಕೆಲಸ ಮಾಡುತ್ತಿರುವ ಕಂಪನಿಗೆ ಪೋನ್ ಮಾಡಿ ಕೇಳಿದಾಗ ಅವರು ನಿಮ್ಮ ಮಗಳು ಈಗಾಗಲೆ ಕೆಲಸಕ್ಕೆ ರಾಜಿನಾಮೆ ಕೊಟ್ಟು ಸುಮಾರು 15 ದಿನಗಳಾಯಿತು ಪುನಃ ವಾಪಸ್ ಬಂದಿರುವುದಿಲ್ಲಾ ಅಂತಾ ತಿಳಿಸಿದ್ದರಿಂದ ಪಿರ್ಯಾಧಿದಾರರು  ಅಲ್ಲಲ್ಲಿ ತಮ್ಮ ಸಂಬಂದಿಕರಲ್ಲಿ ಹುಡುಕಾಡಿ ಮತ್ತು ಆಕೆ ಮಾಡುತ್ತಿರುವ ಕಂಪನಿಗೆ ಹೋಗಿ ವಿಚಾರಿಸಲಾಗಿ ಎಲ್ಲಿಯು ಸುಳಿವು ಸಿಕ್ಕಿರುವುದಿಲ್ಲಾ. ಕಾರಣ ಎಷ್ಠು ಹುಡುಕಾಡಿದರೂ ಸಿಗದಿದ್ದರಿಂದ ತಾವುಗಳು ನನ್ನ ಅಣ್ಣನ ಮಗಳು ರಾಜೇಶ್ವರಿ ಈಕೆಯನ್ನು ಪತ್ತೇ ಮಾಡಲು ಕಾನೂನು ಕ್ರಮ ಜರುಗಿಸಲು ಇಂದು ತಡವಾಗಿ ಬಂದು  ದೂರು ನೀಡಿದ್ದು ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್ಠಾಣೆಯ ಗುನ್ನೆ ನಂ: 136/2018 ಕಲಂ: ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

PÁuÉAiÀiÁzÀ ºÀÄqÀÄV
: ರಾಜೇಶ್ವರಿ ತಂದೆ ಆನಂದಸಿಂಗ್ ವಯಸ್ಸು 18 ವರ್ಷ 2 ತಿಂಗಳು ಜಾ: ರಜಪೂತ ಸಾ: ಕಲ್ಮಠ ಮಠದ ಹತ್ತಿರ ಕವಿತಾಳ ತಾಮಾನವಿ
: ಕಾಣೆಯಾದ ಮಹಿಳೆಯ ಚಹರೆ ಪಟ್ಟಿ. ಎತ್ತರ: 5.4 ಅಡಿ ಎತ್ತರ , ಕೆಂಪು ಮೈ ಬಣ್ಣ, ಸಾದಾರಣ ಮೈಕಟ್ಟು, 18 ವರ್ಷ 2 ತಿಂಗಳು ದುಂಡು ಮುಖ, ಕಪ್ಪು ಕೂದಲು ,
ಮೈಮೇಲಿನ ಬಟ್ಟೆಗಳು: ಹಸಿರು ಬಣ್ಣದ ಚುಡಿದಾರ ಟಾಪ್, ಬಿಳಿಯ ಬಣ್ಣದ ಪ್ಯಾಂಟ್ ಹಾಗೂ ಬಿಳೀಯ ಬಣ್ಣದ ವೇಲ್ ಧರಿಸಿರುತ್ತಾಳೆ. ರಾಜೇಶ್ವರಿ ಈಕೆಯು ಕನ್ನಡ ಹಾಗೂ ಹಿಂದಿ ಭಾಷೆ ಮಾತನಾಡುತ್ತಾಳೆ
 

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:23.08.2018 ರಂದು ರಾತ್ರಿ 10.00 ಗಂಟೆಗೆ ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ  ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ: 23.08.2018 ರಂದು ಪಿರ್ಯಾದಿ ಮತ್ತು ಆತನ ಗೆಳೆಯರಾದ ಮೃತ ಹುಸೇನಬಾಷ ಮತ್ತು ಹರ್ಷದ್ ಕೂಡಿಕೊಂಡು ಹುಸೇನಬಾಷ ಇತನ ಮೋಟಾರ ಸೈಕಲ್ ನಂ KA-36/EG-8916 ನೇದ್ದನ್ನು ತಗೆದುಕೊಂಡು ನಾರಾಯಣಪೂರು ಡ್ಯಾಮ ನೋಡಲಿಕ್ಕೆ ಹೋಗಿದ್ದು, ಡ್ಯಾಮ ನೋಡಿಕೊಂಡು ವಾಪಾಸ  ಮುದಗಲ್ಲಿಗೆ ಬರುವಾಗ ಕನ್ನಾಪೂರು ಹಟ್ಟಿ ಮುದಗಲ್ ರಸ್ತೆಯಲ್ಲಿ ಹುಸೇನಬಾಷ ಇತನು ಮೋಟಾರ ಸೈಕಲ್ ನಡೆಸುತ್ತಿದ್ದು ಮದ್ಯದಲ್ಲಿ ಪಿರ್ಯಾದಿ ಹಾಗೂ ಹಿಂದುಗಡೆ ಹರ್ಷದ ಇವರನ್ನು ಕೂಡ್ರಿಸಿಕೊಂಡು ಬರುತ್ತಿದ್ದಾಗ ಹುಸೇನಬಾಷ ಇತನು ಮೋಟಾರ ಸೈಕಲ್ಲನ್ನು ಅತೀವೇಗವಾಗಿ ನಡೆಸಿಕೊಂಡು ಹೋಗುತ್ತಿದ್ದಾಗ ಪಿರ್ಯಾದಿದಾರನು ಮೋಟಾರ ಸೈಕಲ್ಲನ್ನು ನಿದಾನವಾಗಿ ನಡೆಸಿಕೊಂಡು ಹೋಗು ಅಂತಾ ಹೇಳಿದರು ಸಹ ಹುಸೇನಬಾಷ ಇತನು  ಮೋಟಾರ ಸೈಕಲ್ಲನ್ನು ಮದ್ಯಾಹ್ನ 3.30 ಗಂಟೆಗೆ ಕನ್ನಾಪೂರು ಹಟ್ಟಿ ಮುದಗಲ್ ರಸ್ತೆಯ ಕಾಚಾಪೂರು ಕ್ರಾಸ ದಾಟಿದ ಮೇಲೆ ಬರುವ ತಿರುವಿನಲ್ಲಿ ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ನಿಯಂತ್ರಣ ಮಾಡದೇ ಮೋಟಾರ ಸೈಕಲ್ಲನ್ನು ರಸ್ತೆಯ ಬಾಜು ಹೋಗಿ ಬಿಳಿಸಿದ್ದರಿಂದ ಪಿರ್ಯಾದಿ ಎಡಗಾಲು ಬೆರಳುಗಳಿಗೆ, ಹೊಟ್ಟೆಗೆ ತೆರಚಿದಗಾಯ & ಬಲಗಾಲು ಚಪ್ಪೆಗೆ ಒಳಪೆಟ್ಟಾಗಿದ್ದು, ಹುಸೇನಬಾಷ ಇತನ ತಲೆಯು ರಸ್ತೆ ಪಕ್ಕದಲ್ಲಿಯ ಕಲ್ಲಿಗೆ ಬಲವಾಗಿ ಬಡಿದಿದ್ದರಿಂದ ತಲೆಗೆ ಬಾರಿ  ರಕ್ತಗಾಯವಾಗಿದ್ದು ಮತ್ತು ಹರ್ಷದ ಇತನ ಬಲಗಾಲು ಮುರಿದು ರಕ್ತಗಾಯವಾಗಿದ್ದು ಇರುತ್ತದೆ.  ನಂತರ ಕೃಷ್ಣಾ & ಮುನೀರ ಇವರು ಬಂದು ಮೂರು ಜನರಿಗೆ ಒಂದು ವಾಹನದಲ್ಲಿ ಹಾಕಿಕೊಂಡು ಮುದಗಲ್ಲ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ನಂತರ ಹುಸೇನಬಾಷ ಇತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಿಂಗಸಗೂರು ಹೋಗಿ ಅಲ್ಲಿಂದ ಬಾಗಲಕೋಟ ಅರ್ಶಿವಾದ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಹುಸೇನಬಾಷ ಇತನು ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಪಲಕಾರಿಯಾಗದೇ ಸಂಜೆ 6.55 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ.  ಘಟನೆಗೆ ಕಾರಣನಾದ ಹುಸೇನಬಾಷ ಇನತ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 206/2018 PÀ®A 279, 337, 338, 304 (J) L¦¹ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.