Thought for the day

One of the toughest things in life is to make things simple:

25 Dec 2017

Press Note                            ¥ÀwæPÁ ¥ÀæPÀluÉ

 
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಜಿಲ್ಲೆಯಲ್ಲಿ ವಿವಿಧ ಕಡೆ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಲಾರಿಗಳ ಮೇಲೆ ಪೊಲೀಸ್ ದಾಳಿ 9 ಮರಳು ತುಂಬಿದ ಲಾರಿಗಳು ವಶಕ್ಕೆ.
ದೇವದುರ್ಗ ಪಟ್ಟಣದಲ್ಲಿ ಅಕ್ರಮ ಮರಳು ಸಾಗುಸುತ್ತಿದ್ದ ನಾಲ್ಕು ಟಿಪ್ಪರ್ ಒಂದು ಲಾರಿ ಪೊಲೀಸ್ ವಶ.
1] ದಿನಾಂಕ 24.12.2017 ಮದ್ಯ ರಾತ್ರಿ ದೇವದುರ್ಗಾ ತಾಲೂಕಿನ ದೊಂಡಂಬಳಿ ಹತ್ತಿರ ಇರುವ ಕೃಷ್ಣ ನದಿಯ ದಡದಿಂದ ಅಕ್ರಮಾಗಿ ಮುರಳು ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದಿರುವುದರಿಂದ ಶ್ರೀ ಡಿ. ಕೀಶೋರ ಬಾಬು ಜಿಲ್ಲಾ ಪೊಲೀಸ್ ಅಧೀಕ್ಷಕರು, ರಾಯಚೂರು ರವರ ಹಾಗೂ ಶ್ರೀ ಎಸ್.ಬಿ. ಪಾಟೀಲ್ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರ ಮಾರ್ಗದರ್ಶನದಲ್ಲಿ ಡಿ.ಸಿ..ಬಿ ಘಟಕದ ಪಿ.. ಶ್ರೀ. ಮಹ್ಮದ್ ಫಸಿಯುದ್ದೀನ್ ಸಿಬಂದಿಗಳಾದ ಹೆಚ್.ಸಿ.ವೆಂಕಟಗಿರಿ, ಲಾಲ್ ಅಹ್ಮದ್ , ಶ್ರೀನಿವಾಸ, ರಮೇಶ, ಸಿ.ಪಿ.ಸಿ. ಬಸವಪ್ರಭು, ದೀಪಕ್, ರೇಣುಕಾರಾಜು, ರವರ ತಂಡವು ಮದ್ಯ ರಾತ್ರಿ ದೇವದುರ್ಗ ಪಟ್ಟಣಕ್ಕೆ ಹೋಗಿ ದೊಂಡಂಬಳಿ ಗ್ರಾಮದಿಂದ ಅಕ್ರಮಾಗಿ ಮರಳನ್ನು ಸಾಗಿಸುತ್ತಿದ್ದ, ನಾಲ್ಕು ಟಿಪ್ಪರ್ ಗಳಾದ ಕೆ..36/ಬಿ-4890, ಕೆ../36-4889, ಕೆ..63/ಟಿಪಿ-003229, ಕೆ..28/ಸಿ-6565 ನಂಬರಿನವುಗಳನ್ನು ಹಾಗೂ ಒಂದು ಅಶೋಕ ಲಿಲ್ಯಾಂಡ್ ನಂ.ಕೆ..32/-4269 ಮರಳು ತುಂಬಿದ ಲಾರಿಯನ್ನು ಪಟ್ಟಣದ ಜೆ.ಪಿ. ಸರ್ಕಲ್ ಹತ್ತಿರ ನಿಲ್ಲಿಸಿ ಪರಿಶೀಲಿಸಿ ಅದು ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ಅಂತಾ ಖಚಿತವಾದ ಪ್ರಯುಕ್ತ ಪಂಚರ ಸಮಕ್ಷಮ ಪಂಚನಾಮೆಯನ್ನು ಜರುಗಿಸಿ, ದೇವದುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.
ರಾಯಚೂರು ಗ್ರಾಮೀಣ ವೃತ್ತದಲ್ಲಿ ಅಕ್ರಮಾಗಿ ಮರಳು ಸಾಗುಸುತ್ತಿದ್ದ ಒಂದು ಟಿಪ್ಪರ್, ಒಂದು ಟ್ರ್ಯಾಕ್ಟರ್ / ಟ್ರ್ಯಾಲಿ ಪೊಲೀಸ್ ವಶ.
2] ದಿನಾಂಕ 24.12.2017 ರಂದು ಸಾಯಂಕಾಲ ರಾಯಚೂರು ಗ್ರಾಮೀಣ ವ್ಯಾಪ್ತಿಯ ಎಸ್.ಎಲ್.ಎನ್ ಕಾಲೇಜ್ ಹತ್ತಿರ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಾರೆ ಅಂತಾ ಮಾಹಿತಿ ಬಂದ ಮೇರೆಗೆ ಶ್ರೀ ಹನುಮರೆಡ್ಡೆಪ್ಪ, ಸಿ.ಪಿ.. ಗ್ರಾಮೀಣ ವೃತ್ತ ರಾಯಚೂರು, ರವರು ತಮ್ಮ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸ್ಥಳಕ್ಕೆ ಧಾವಿಸಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಕೆಎ/36-ಟಿಬಿ.-7506 ಟ್ರ್ಯಾಲಿ ನಂ ಕೆ./36 ಟಿಸಿ-0539 ನನ್ನು ವಶಕ್ಕೆ ಪಡೆದು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ.    

3] ದಿನಾಂಕ 25.12.2017 ರಂದು ಬೆಳಿಗ್ಗೆ ರಾಯಚೂರು ಗ್ರಾಮೀಣ ವೃತ್ತದ ಕಾಡ್ಲೂರು ಗ್ರಾಮದ ಹತ್ತಿರ ಅಕ್ರಮ ಮರಳು ಸಾಗಾಣಿಕೆಯಾಗುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಶ್ರೀ ಹನುಮರೆಡ್ಡೆಪ್ಪ, ಸಿ.ಪಿ.. ಗ್ರಾಮೀಣ ವೃತ್ತ ರಾಯಚೂರು, ರವರು ತಮ್ಮ ಸಿಬ್ಬಂದಿ ಹಾಗೂ ಪಂಚರೊಂದಿಗೆ ಕಾಡ್ಲೂರು-ಶಕ್ತಿನಗರ ರಸ್ತೆಯ ಕಾಡ್ಲೂರು ಸೀಮಾಂತರದಲ್ಲಿ ಮಾರೆಪ್ಪ ದೇವಸ್ಥಾನದ ಹತ್ತಿರ ಬೆಳಿಗಿನ ಜಾವ ಅಕ್ರಮವಾಗಿ ಮದರಕಲ್ ಗ್ರಾಮದ ಹತ್ತಿರ ವಿರುವ ಕೃಷ್ಣ ನದಿಯ ದಡದಿಂದ  ಮರಳನ್ನು  ಸಾಗಿಸುತ್ತಿದ್ದ ಟಿಪ್ಪರ್ ನಂ:       KA-51 C-7552 ನ್ನು ನಿಲ್ಲಿಸಿ ಪರಿಶೀಲಿಸಿದಾಗ ಅದು ಅಕ್ರಮ ಮರಳು  ಅಂತಾ ಖಚಿತವಾದ ಕಾರಣ ಪಂಚರ ಸಮಕ್ಷಮ ಪಂಚನಾಮೆಯನ್ನು ಜರುಗಿಸಿ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ.
ಅಕ್ರಮ ಮರಳು ಸಾಗಿಸುತ್ತಿದ್ದ 2 ಲಾರಿ ಮತ್ತು 1 ಟ್ರ್ಯಾಕ್ಟರ್/ಟ್ರ್ಯಾಲಿ ಪೊಲೀಸ್ ವಶ

4] ದಿನಾಂಕ 24.12.2017 ರಂದು ಮದ್ಯಾಹ್ನ ದೇವದುರ್ಗ ಪೊಲೀಸ್ ಠಾಣ ವ್ಯಾಪ್ತಿಯ ನೀಲುವಂಜಿ ಕ್ರಾಸ್ ಹತ್ತಿರ ಎರಡು ಲಾರಿ ಮತ್ತು ಒಂದು ಟ್ರ್ಯಾಕ್ಟರ್ ನಲ್ಲಿ ಅಕ್ರಮ ಮರಳು ಸಾಗಿಸುತ್ತಿದ್ದಾರೆ ಅಂತಾ ಬಂದ ಮಾಹಿತಿ ಮೇರೆಗೆ ದೇವದುರ್ಗಾ ವೃತ್ತದ ಸಿ.ಪಿ.. ವರಾದ ಶ್ರೀ. ಸಂಜೀವ ಕುಮಾರ ಮತ್ತು ಸಿಬಂದಿಯವರು ದಾಳಿಮಾಡಿದಾಗ ಕೆ..-32/ಬಿ-0251, ಕೆ..28/-4429 ನಂರಿನ ಲಾರಿಗಳು ಹಾಗೂ ಕೆ.36/ಟಿಸಿ-4037, ನಂಬರಿನ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ ಅಂತಾ ಖಚಿತವಾದ ಕಾರಣ ಮೂರು ವಾಹನಗಳನ್ನು ಮರಳು ಸಮೇತ ವಶಕ್ಕೆ ಪಡೆದು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ.
ಮೇಲಿನಂತೆ  ಅಕ್ರಮಾಗಿ ಸಾಗಿಸುತ್ತಿದ್ದ ಮರಳಿನ ಲಾರಿಗಳು/ಟಿಪ್ಪರ್ ಗಳು/ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಗಳನ್ನು ದಾಳಿ ಮಾಡಿ ವಶಕ್ಕೆ ಪಡೆದು ಸಂಬಂಧಿಸಿದ ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದರಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.