Thought for the day

One of the toughest things in life is to make things simple:

22 Sept 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

NDPS ACT ಪ್ರಕರಣದ ಮಾಹಿತಿ.

            ದಿನಾಂಕ 21-09-2020 ರಂದು 10-10 .ಎಂ.ಕ್ಕೆ  ಗದ್ರಟಗಿ ಗ್ರಾಮದ ಗಂಗಣ್ಣ ತಂದೆ ಸೋಮಣ್ಣ ಹೊಕ್ರಾಣಿ ಈತನು ಮನೆಯ ಹಿಂದಿನ  ಹಿತ್ತಲಿನಲ್ಲಿ  ಗಾಂಜಾ ಗಿಡಗಳು ಬೆಳೆಸಿದ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ (ಹೆಚ್ ), ಹೆಚ್.ಸಿ-124, ಪಿಸಿ-679, ಪಿಸಿ-324 ಮತ್ತು ಪಂಚರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ 11-30 ಎ.ಎಂ ಕ್ಕೆ ದಾಳಿ ಮಾಡಿ, ಪತ್ರಾಂಕಿತ ಅಧಿಕಾರಿಗಳಾದ ಡಿ.ಎಸ್.ಪಿ ಸಿಂಧನೂರು ರವರನ್ನು ಬರಮಾಡಿಕೊಂಡು ಡಿ.ಎಸ್.ಪಿ ರವರ ಸಮ್ಮುಖದಲ್ಲಿ ಆರೋಪಿತನ ಅಂಗಜಡ್ತಿ ಮಾಡಿ ನಂತರ ಆತನು ಮನೆಯ ಹಿಂದೆ ಹಿತ್ತಲಿನಲ್ಲಿ ಬೆಳೆಸಿದ್ದ ಅಂದಾಜು 4 ರಿಂದ 5 ಅಡಿ ಎತ್ತರದ 4 ಹಸಿ ಗಾಂಜಾ ಗಿಡಗಳು ಸುಮಾರು 2 ಕೆ.ಜಿ. 600 ಗ್ರಾಂ ಅ.ಕಿ.ರೂ. 2,200/- ನೇದ್ದನ್ನು ಜಪ್ತಿಪಡಿಸಿಕೊಂಡು ನಂತರ ಪಿ.ಎಸ್.ಐ ರವರು ವಶಕ್ಕೆ ಪಡೆದ ಆರೋಪಿ ಮತ್ತು ದಾಳಿ ಪಂಚನಾಮೆ ಹಾಗೂ ಮುದ್ದೆಮಾಲಿನೊಂದಿಗೆ 2-00 ಪಿ.ಎಂ ಕ್ಕೆ ಠಾಣೆಗೆ ಬಂದು ಮುಂದಿನ ಕಾನೂನು ಕ್ರಮ ಜರುಗಿಸಲು ನೀಡಿದ ವರದಿಯ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣಾ ಗುನ್ನೆ ನಂ. 135/2020 ಕಲಂ. 20(ಬಿ) ಎನ್.ಡಿ.ಪಿ.ಎಸ್. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಮಟಕಾದಾಳಿ ಪ್ರರಕಣದ ಮಾಹಿತಿ.

            ದಿನಾಂಕ:21-09-2020 ರಂದು 4-00 ಪಿ.ಎಮ್ ಸಮಯದಲ್ಲಿ ಕೆ.ಹಂಚಿನಾಳ ಕ್ಯಾಂಪಿನಲ್ಲಿ ಬಸಾಪುರ ಕ್ರಾಸ್ ಹತ್ತಿರ ಇರುವ ಬಸ್ ನಿಲ್ದಾಣದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿ 01 ಗಣಪತಿ ತಂದೆ ರಾಮಾರಾವ್ ಅಡಪ, ವಯ:32ವ, ಜಾ:ಕಾಪುಲು, ಉ:ಬಡಿಗೆತನ, ಸಾ:ಕೆ.ಹಂಚಿನಾಳಕ್ಯಾಂಪ್, ತಾ:ಸಿಂಧನೂರು  ನೇದ್ದವನು ಕುಳಿತು ಜನರನ್ನು 01 ರೂ. ಗೆ 80 ರೂ ಕೊಡುತ್ತೇನೆ ಮಟಕಾ ನಂಬರ್ ಬರೆಸಿರಿ ಅಂತಾ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ್ ಬರೆದುಕೊಂಡು ಚೀಟಿ ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿ 01 ನೆದ್ದವನನ್ನು ಹಿಡಿದು ಅವನಿಂದ 1) ನಗದು ಹಣ ರೂ. 560/-, 2) ಒಂದು ಮಟಕಾ ಪಟ್ಟಿ 3) ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು, ಆರೋಪಿ 01 ನೇದ್ದವನು ತಾನು ಬರೆದ ಮಟಕಾಪಟ್ಟಿಯನ್ನು ಆರೋಪಿ 02 ತಬರೇಜ್ ತಂದೆ ಖಾಜಾಮೈನುದ್ದಿನ್, ವಯ:35ವ, ಜಾ:ಮುಸ್ಲಿಂ, ಸಾ:ಪಿಡಬ್ಲುಡಿಕ್ಯಾಂಪ್, ತಾ:ಸಿಂಧನೂರು  ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಎಂದು ಇದ್ದ ಪಂಚನಾಮೆಯ ಸಂಗಡ ಜಪ್ತಿ ಮಾಡಿದ ಮುದ್ದೇಮಾಲು, ಆರೋಪಿ 01 ನೇದ್ದವನನ್ನು ಠಾಣೆಗೆ ತಂದು ಒಪ್ಪಿಸಿ ದೂರು ನೀಡಿದ್ದು, ಸದರಿ ದೂರು ಮತ್ತು ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧ ವಾಗುತ್ತಿದ್ದರಿಂದ ಠಾಣಾ ಎನ್.ಸಿ ನಂ.33/2020 ಕಲಂ.78(3) ಕ.ಪೊ ರೀತ್ಯ ದಾಖಲಿಸಿ, ಸದರಿ ಅಸಂಜ್ಞೇಯ ಪ್ರಕರಣವನ್ನು ಗುನ್ನೆ ದಾಖಲಿಸಿ ತನಿಖೆ ಕೈಗೊಳ್ಳಲು ಅನುಮತಿ ಕೊಡಲು ಕೋರಿ ಮಾನ್ಯ ನ್ಯಾಯಾಲಯಕ್ಕೆ ಯಾದಿ ನಿವೇಧಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ ನಂತರ ಸದರಿ ಆರೋಪಿತರ ವಿರುದ್ದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.132/2020, ಕಲಂ:78(3) ಕ.ಪೊ ಕಾಯ್ದೆ ರೀತ್ಯ  ಪ್ರಕರಣ  ದಾಖಲಿಸಿಕೊಂಡು ತನಿಖೈಗೊಂಡಿರುತ್ತಾರೆ.

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.

            ದಿ.20-09-2020ರಂದು ಸಂಜೆ 6-00 ಗಂಟೆಗೆ ಶ್ರೀನಿವಾಸ ಕ್ಯಾಂಪದಲ್ಲಿ ಲವರಾಜನ ಹೊಟೇಲ್ ಹಿಂದು ಗಡೆ  ಸ್ವಲ್ಪ ದೂರದಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಸರ್ವೇಶ ತಂದೆ ಸುಬ್ಬರಾವ್ ಜಾತಿ-ಚೌದ್ರಿ,ವಯ-38ವರ್ಷ,ಉ-ಒಕ್ಕಲುತನ ಸಾ:ಶ್ರೀನಿವಾಸಕ್ಯಾಂಪ  ಹಾಗೂ ಇತರೆ 4 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ-ಬಹಾರ ಎಂಬ ಇಸ್ಪೇಟ ಜೂಜಾಟದಲ್ಲಿ ತೊಡಗಿದಾಗ ಖಚಿತಪಡಿಸಿಕೊಂಡ ಪಿ.ಎಸ್.ಐ.ರವರು ಪಂಚರ ಸಮಕ್ಷಮ ದಲ್ಲಿ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿದಾಗ ಜೂಜಾಟದಲ್ಲಿ ತೊಡಗಿದ 5 ಜನರು ಸಿಕ್ಕುಬಿದ್ದಿದ್ದು ಸಿಕ್ಕುಬಿದ್ದವರ ತಾಬಾ ದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ಹಣ ರೂ.4,370/- ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಸಿಕ್ಕಿಬಿದ್ದ ಆರೋಪಿತ ರೊಂದಿಗೆ ಠಾಣೆಗೆ ಬಂದು ಆರೋಪಿತರನ್ನು ಮತ್ತು ಮುದ್ದೆಮಾಲನ್ನು ಒಪ್ಪಿಸಿದ್ದು ಪಿ.ಎಸ್.ಐ.ರವರು ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಬಂದು ದೂರಿನ ಆಧಾರದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ  121/2020 ಕಲಂ: 87 .ಪೋ.ಕಾಯ್ದೆ ಅಡಿಯಲ್ಲಿ ಪ್ರರಕಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ವರದಕ್ಷಿಣ ಸಾವು ಪ್ರಕರಣದ ಮಾಹಿತಿ.

     ದಿನಾಂಕ 21.09.2020 ರಂದು ಬೆಳಿಗ್ಗೆ 10-00 ಗಂಟೆಗೆ ಫಿರ್ಯಾದಿದಾರಳು ಠಾಣೆಗೆ ಹಾಜರಾಗಿ ತಮ್ಮ ಲಿಖಿತ ದೂರು ಹಾಜರು ಪಡಿಸಿದ್ದೇನೆಂದರೆ, ತನ್ನ ತಂಗಿಯಾದ ಮೃತ ಲಕ್ಷ್ಮೀ ಈಕೆಯನ್ನು ಈಗ್ಗೆ 18 ವರ್ಷಗಳ ಹಿಂದೆ ಆರೋಪಿತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಮದುವೆಯಾದಗಿನಿಂದಲೂ ಇಬ್ಬರೂ ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದು ನಂತರದ ದಿನಗಳಲ್ಲಿ ಈಗ್ಗೆ 05 ವರ್ಷಗಳಿಂದ ಆರೋಪಿತನು ಮಧ್ಯ ಕುಡಿಯುವ ಚಟಕ್ಕೆ ಬಿದ್ದು ತನ್ನ ಹೆಂಡತಿ ಮೃತ ಲಕ್ಷ್ಮೀಯೊಂದಿಗೆ ಸಂಸಾರದ ವಿಷಯದಲ್ಲಿ ಜಗಳ ಮಾಡಿ ಹೊಡೆಬಡೆ ಮಾಡುವುದಲ್ಲದೇ ಆಕೆಗೆ ಮಾನಸಿಕ ಹಾಗೂ ದೈಹಿಕ ತೊಂದರೆ ನೀಡುತ್ತಿದ್ದು ಆಗ ಫಿರ್ಯಾದಿದಾರಳು ಆರೋಪಿತನಿಗೆ ಈ ರೀತಿ ಕುಡಿದು ಹೆಂಡತಿಯೊಂದಿಗೆ ಜಗಳ ಮಾಡುವುದು ಸರಿಯಲ್ಲಾ ಅಂತಾ ತಿಳಿಸಿದ್ದಕ್ಕೆ ಆರೋಪಿತನು ಫಿರ್ಯಾದಿದಾರಳ ಮುಂದೆ ತನ್ನ ಹೆಂಡತಿ ಲಕ್ಷ್ಮೀಯ ಮೇಲೆ ಸಿಟ್ಟಿಗೆ ಬಂದು ಇವಳನ್ನು ಕೊಲೆ ಮಾಡುತ್ತೇನೆ ಇವಳು ನನಗೆ ಬುದ್ಧಿವಾದ ಹೇಳಲು ಬರುತ್ತಾಳೆ ಅಂತಾ ಕೈಯಿಂದ ಹೊಡೆಬಡೆ ಮಾಡಿ ದಬ್ಬಾಡಿದ್ದು ಇರುತ್ತದೆ ಆಗ ಫಿರ್ಯಾದಿದಾರಳು ಗಂಡ-ಹೆಂಡತಿಯ ಜಗಳ ಇಂದೆಲ್ಲಾ ನಾಳೆ ಸರಿಯಾಗಿ ಹೋಗುತ್ತದೆ ಅಂತಾ ತಿಳಿದು ತಮ್ಮ ಊರುಗೆ ಹೋಗಿದ್ದು ನಂತರ ದಿನಾಂಕ 20.09.2020 ರಂದು ಸಂಜೆ 6-00 ಗಂಟೆಯ ಸುಮಾರಿಗೆ ಆರೋಪಿತನು ವೀಪರಿತ ಮಧ್ಯ ಕುಡಿದು ಮನೆಗೆ ಬಂದಾಗ ಮೃತಳು ಮನೆಯಲ್ಲಿ ಅಡುಗೆ ಮಾಡಲು ಏನು ಸಾಮಾನುಗಳು ಇರುವುದಿಲ್ಲಾ ದಿನಸಿ/ರೇಷನ್ ಸಾಮಾನುಗಳನ್ನು ತರುತ್ತೇನೆ ಈ ರೀತಿ ಕುಡಿದು ಬಂದರೆ ಹೇಗೆ ಅಂತಾ ಕೇಳಿದ್ದಕ್ಕೆ ಇದೇ ವಿಷಯದಲ್ಲಿ ಆರೋಪಿತನು ಮೃತ ತನ್ನ ಹೆಂಡತಿ ಲಕ್ಷ್ಮೀಯೊಂದಿಗೆ ಜಗಳ ತೆಗೆದು ಕೈಯಿಂದ ಹೊಡೆಬಡೆ ಮಾಡಿದ್ದಲ್ಲದೇ ಕಾಲಿನಿಂದ ಬಲವಾಗಿ ಆಕೆಯ ಹೊಟ್ಟೆಗೆ ಒದ್ದು ಕೆಡವಿ ಮನೆಯಿಂದ ಹೊರಗೆ ಹೋಗಿದ್ದು ನಂತರ ಮನೆಯ ಅಕ್ಕ-ಪಕ್ಕದವರು ಮತ್ತು ಫಿರ್ಯಾದಿದಾರಳ ದೊಡ್ಡಮ್ಮನ ಮಗ ರಾಘವೇಂದ್ರ ಗ್ರಾಮ ಸೇವಕ ರವರೆಲ್ಲಾರೂ ನೋಡಿ ಅಸ್ಕಿಹಾಳ ಗ್ರಾಮದ ಡಾ:ಗೋಪಾಲ ರೆಡ್ಡಿ ರವರನ್ನು ಮನೆಗೆ ಕರೆಯಿಸಿ ಪರೀಕ್ಷಿಸಿ ನೋಡಲಾಗಿ ಮೃತಪಟ್ಟ ಬಗ್ಗೆ ತಿಳಿಸಿರುತ್ತಾರೆ ಅಂತಾ ವಿಷಯ ತಿಳಿದು ಫಿರ್ಯಾದಿದಾರಳು ಸದರಿ ವಿಷಯವನ್ನು ತನ್ನ ಸಂಬಂಧಿಕರಿಗೆ ತಿಳಿಸಿ ಇಂದು ದಿನಾಂಕ 21.09.2020 ರಂದು ಬೆಳಿಗ್ಗೆ 06-30 ಗಂಟೆಗೆ ತನ್ನ ಮಗನೊಂದಿಗೆ ಬಂದು ವಿಚಾರಿಸಲಾಗಿ ಆರೋಪಿತನು ವೀಪರಿತ ಕುಡಿಯುವ ಚಟಕ್ಕೆ ಬಿದ್ದು ದಿನಾಂಕ 20.09.2020 ರಂದು ಸಂಜೆ 6-00 ಗಂಟೆಗೆ ಆಕೆಯೊಂದಿಗೆ ಜಗಳ ತೆಗೆದು ಹೊಡೆಬಡೆ ಮಾಡಿದ್ದಲ್ಲದೇ ಕೊಲೆ ಮಾಡುವ ಉದ್ದೇಶ ಹೊಂದಿ ಬಲವಾಗಿ ಹೊಟ್ಟೆಗೆ ಒದ್ದು ಮೃತ ಲಕ್ಷ್ಮೀಯಾ ಬಲಗಣ್ಣಿನ ಹಣೆಯ ಮೇಲೆ ಬಾವು ಬಂದ ಒಳಪೆಟ್ಟು ಮತ್ತು ಹೊಟ್ಟೆಯಲ್ಲಿ ಭಾರಿ ಒಳಪೆಟ್ಟಾಗಿ ಬಾವು ಬಂದಿರುತ್ತದೆ. ಆರೋಪಿತನು ಈ ಮೇಲ್ಕಂಡಂತೆ ಮೃತ ಲಕ್ಷ್ಮೀಗೆ ಹೊಡೆದು ಕೊಲೆ ಮಾಡಿರುತ್ತಾನೆ ಅಂತಾ ಮತ್ತು ತನಗೆ ಕನ್ನಡ ಭಾಷೆಗೆ ಸರಿಯಾಗಿ ಮಾತನಾಡಲು ಬಾರದೇ ಇದ್ದುದ್ದರಿಂದ ತನ್ನ ಸಂಬಂಧಿಕ ರಾಘವೇಂದ್ರನಿಗೆ ತೆಲುಗು ಭಾಷೆಯಲ್ಲಿ ಹೇಳಿ ಆತನು ಕನ್ನಡ ಭಾಷೆಗೆ ಅನುವಾದ ಮಾಡಿ ಕನ್ನಡದಲ್ಲಿ ಬರೆದು ತಾನು ಸಹಿ ಮಾಡಿದ ದೂರನ್ನು ವಿಚಾರಿಸಿ ತಡವಾಗಿ ಸಲ್ಲಿಸಿರುತ್ತಾನೆ ಸದರಿ ಕೃಷ್ಣನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಲಿಖಿತ ದೂರಿನ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ 108/2020, ಕಲಂ 498{ಎ},302 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.