Thought for the day

One of the toughest things in life is to make things simple:

18 Nov 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀÄmÁÌzÁ½ ¥ÀæPÀgÀtzÀ ªÀiÁ»w.
ದಿನಾಂಕ:-15-11-2018 ರಂದು ಸಾಯಂಕಾಲ 6-00 ಗಂಟೆಗೆ ಒಬ್ಬ ವ್ಯಕ್ತಿಯು ಹಂಚಿನಾಳ ಗ್ರಾಮದ ಮಾರೆಮ್ಮ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಸೀಬಿನ ಮಟಕಾ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಮಾಹಿತಿ  ಬಂದಿದ್ದರ ಮೇರೆಗೆ ಅಲ್ಲಿಗೆ ಪಂಚರು ಹಾಗೂ ಸಿಬ್ಬಂದಿಯವರಾದ ಬಾಲಪ್ಪ ಹೆಚ್ ಸಿ 347 ನರಸಿಹಂಲು ಪಿ ಸಿ 132 ರಾಘವೆಂದ್ರ ಪಿ ಸಿ 168   ಮತ್ತು ಕೆ.ಪ್ರಭು ಪಿಸಿ 385 ರವರೊಂದಿಗೆ ಹೋಗಿ ಮರೆಯಲ್ಲಿ ನಿಂತು ನೋಡಿದಾಗ, ಆರೋಪಿತನಾದ ಬಸನಗೌಡ ತಂದೆ ಸಿದ್ದನಗೌಡ ಪೊಲೀಸ್ ಪಾಟೇಲ್ ವಯ 40 ಜಾ ಲಿಂಗಾಯತ ಸಾ ಹಂಚಿನಾಳ ಈತನು ಜನರನ್ನು ಕೂಗಿ ನಸೀಬಿನ ಮಟಕಾ ಜೂಜಾಟಕ್ಕೆ ಹಣವನ್ನು ಕಟ್ಟಿರಿ.  ನಿಮ್ಮ ಜೂಜಾಟದ ನಂಬರ ಬಂದರೆ 1 ರೂ.ಗೆ 80 ರೂಪಾಯಿ ಕೊಡುತ್ತೇನೆ ಎಂದು ಜನರಿಂದ ಹಣ ಪಡೆದುಕೊಂಡು ನಸೀಬಿನ ಮಟಕಾ ಜೂಜಾಟದಲ್ಲಿ ನಿರತರಾಗಿ ಮಟಕಾ ಜೂಜಾಟದ ಅದೃಷ್ಟದ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾಗ, ರಾತ್ರಿ-7-00 ಗಂಟೆಗೆ ದಾಳಿ ಮಾಡಿ ಹಿಡಿದು ಆತನಿಂದ ನಸೀಬಿನ ಮಟಕಾ ಜೂಜಾಟದ ನಗದು ಹಣ ರೂ. 2020/-, ಒಂದು ಬಾಲ್ ಪೆನ್ ಹಾಗೂ ಒಂದು ಮಟಕಾ ಚೀಟಿಯನ್ನು ಮತ್ತು ಕಾರ್ಬನ್ ಕಂಪನಿಯ ಒಂದು ಕಪ್ಪು ಬಣ್ಣದ ಮೊಬೈಲ್ನ್ನು ವಶಕ್ಕೆ ಪಡೆದುಕೊಂಂಡಿದ್ದು,ಮಟಕಾ ಚೀಟಿಯನ್ನು ಪ್ರಭಯ್ಯ ಸಾ- ಯರಮಸಾಳ  ಈತನಿಗೆ  ತನ್ನ ಮೊಬೈಲ್ ನಿಂದ ಪ್ರಭಯ್ಯ ಸ್ವಾಮಿಗೆ ಫೋನ್ ಮಾಡಿ ಮಟಕಾ ಅಂಕಿ ಸಂಖ್ಯೆಗಳ ಮಾಹಿತಿಯನ್ನು ನೀಡುವುದಾಗಿ ಹೆಳಿದ್ದಾಗಿ ಫಿರ್ಯಾದಿದಾರರಾದ ಪಿ.ಎಸ್. ಗಬ್ಬೂರು ರವರು  ದಾಳಿ ಪಂಚನಾಮೆ , ಮುದ್ದೆ ಮಾಲಿನೊಂದಿಗೆ ಜ್ಞಾಪನ ಪತ್ರ ನೀಡಿದ್ದರ ಮೇಲಿಂದ ಮಾನ್ಯ  ನ್ಯಾಯಾಲಯದಿಂದ  ಪ್ರಕರಣ ದಾಖಲಿಸಲು ಪರವಾನಿಗೆಯನ್ನು  ಪಿಸಿ 634 ರವರು  ಇಂದು ದಿನಾಂಕ- 16/11/18 ರಂದು 7-00 ಗಂಟೆಗೆ ತಂದು ಹಾಜರು ಪಡಿಸಿದ್ದು ಗಬ್ಬೂರು ಪೊಲೀಸ್ ಠಾಣಾ ಗುನ್ನೆ ನಂ- 217/2018 ಕಲಂ- 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ 15.11.2018 ರಂದು 17.15 ಗಂಟೆಗೆ ನಿಲೋಗಲ್ ಕ್ರಾಸ್ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ            1. ದುರುಗಪ್ಪ ತಂದೆ ಅಮರಪ್ಪ ಭಜಂತ್ರಿ ವಯಾ: 36 ವರ್ಷ ಜಾ: ಕೊರವರ : ಒಕ್ಕಲುತನ ಸಾ: ಗೆಜ್ಜಲಗಟ್ಟಾ ಗ್ರಾಮ  ನೇದ್ದವನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ಆರೋಪಿ ನಂ               2. ಆಂಜನೇಯ್ಯ ತಂದೆ ಕಲ್ ನಿಂಗಪ್ಪ ಜಾ: ಉಪ್ಪಾರ ಸಾ: ಹಟ್ಟಿ ಪಟ್ಟಣ (ಪರಾರಿ)  ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿ ನಂ 1 ನೇದ್ದವನನ್ನು  ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 27/2018 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ದಿನಾಂಕ 16.11.2018 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂ. 270/2018 PÀ®A. 78(111) PÉ.¦. PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಮರಳು ಕಳ್ಳತನ ಪ್ರಕರಣದ ಮಾಹಿತಿ.
ದಿನಾಂಕ:16/11/2018 ರಂದು 18-40 ಗಂಟೆಯಿಂದ 19-40 ಗಂಟೆಯ ಅವಧಿಯಲ್ಲಿ ಕವಿತಾಳ  ರಾಯಚೂರು ಮುಖ್ಯ ರಸ್ತೆಯಲ್ಲಿನ  ಕವಿತಾಳದ ಹೊಸ ಬಸ್ಸ್ ನಿಲ್ದಾಣದ ಹತ್ತಿರ ಮುಖ್ಯ ರಸ್ತೆಯ ಮೇಲೆ  ಆರೋಪಿ ಮೌನೇಶ ತಂದೆ ದುರಗಪ್ಪ ಬುಳ್ಳಪೂರು 19 ವರ್ಷ ಜಾಹರಿಜನ : ಟ್ರ್ಯಾಕ್ಟರು ಡ್ರೈವರ್ ಕೆಲಸ ಸಾ: ಕವಿತಾಳ ಒಂದು ಟ್ರ್ಯಾಕ್ಟರನ್ನು ಟ್ರಾಲಿಯೊಂದಿಗೆ ನಡೆಸಿಕೊಂಡು ಬರುವದನ್ನು ಕಂಡು ಧಾಳಿ ಮಾಡಲು ಆರೋಪಿತನು ಹಿಡಿದು ನಿಲ್ಲಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಸದರಿ ಟ್ರ್ಯಾಕ್ಟರನ್ನು ಪರಿಶೀಲಿಸಿದಾಗ SONALIKA D1-42 RX ENGINE NO-3102FLU83F746037F19, CHASSIS NO- FZYSG75421053 ಮತ್ತು ಟ್ರಾಲಿ ಯಾವುದೇ ನೊಂದಾಣಿ ಸಂಖ್ಯೆ ಕಂಡು ಬಂದಿರುವದಿಲ್ಲ. ಟ್ರಾಲಿಯಲ್ಲಿಯ ಅಂದಾಜು 2.5 ಕ್ಯೂಬಿಕ್ ಮೀಟರ್ ಮರಳು .ಕಿ. 1750/- ರೂಪಾಯಿ ಬೆಲೆಬಾಳುವುದು. ಇತ್ತು ಸದರಿ ವಾಹನ ಚಾಲಕನು  ವಾಹನದ ಮಾಲೀಕರ ಆಧೇಶದಂತೆ ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೇ ಅಕ್ರಮವಾಗಿ ಸದರಿ ಮರಳನ್ನು ಮಾರಾಟ ಮಾಡಿ ಲಾಭಗಳಿಸುವ ಉದ್ದೇಶದಿಂದ ತಾನು ನಡೆಸುತ್ತಿದ್ದ ಟ್ರಾಕ್ಟರಿನ ಟ್ರಾಲಿಯಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿರುವದಾಗಿ ಕಂಡು ಬರುತ್ತಿದ್ದರಿಂದ ಪಂಚನಾಮೆಯ ಮುಖಾಂತರ ಟ್ರಾಕ್ಟರು ಮತ್ತು ಟ್ರಾಲಿಯನ್ನು ಮರಳು ಸಮೇತ ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಹಾಜರು ಪಡಿಸಿದ್ದರ ಮೇರೆಗೆ ಸದರಿ ಜಪ್ತಿ ಪಂಚನಾಮೆ ಮತ್ತು ವರದಿಯ ಆಧಾರದ ಮೇಲಿಂದ ಕವಿತಾಳ ಪೊಲೀಸ್ ಠಾಣಾ ಗುನ್ನೆ ನಂ:171/2018, ಕಲಂ: 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

ಚಾಲಕರ ವಿರುದ್ದ ಮುಂಜಾಗ್ರತವಾಗಿ ಕ್ರಮ ಜರುಗಿಸಿದ ಬಗ್ಗೆ.
ದಿನಾಂಕ:16-11-2018 ರಂದು 11-45 .ಎಂ ಸುಮಾರಿಗೆ ಸಿಂಧನೂರ ನಗರದ ಬಸ್ ನಿಲ್ದಾಣದ ಮುಂದಿನ ರಸ್ತೆಯಲ್ಲಿ ಆರೋಪಿತನು ತನ್ನ ಕಾರ ನಂ-ಕೆಎ-25-ಡಿ-2383 ನ್ನೇದ್ದನ್ನು ಬಸವ ವೃತ್ತದ ಕಡೆಯಿಂದ ಎಮ್.ಜಿ ವೃತ್ತದ ಕಡೆಗೆ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ  ನಡೆಸಿಕೊಂಡು ಬರುತ್ತಿರುವಾಗ ಮುಂದೆ ಅಪಘಾತ ಆಗಬಹುದು ಎಂಬುದನ್ನು ತಪ್ಪಿಸಲು ಸದರಿ ವಾಹನವನ್ನು ಬೆನ್ನತ್ತಿ ತಡೆದು ನಿಲ್ಲಿಸಿ ಚಾಲಕನ ಮೇಲೆ ಕಾನೂನು ಕ್ರಮ ಕೊಳ್ಳುವ ಕುರಿತು ಜಗದೀಶ ಪಿ.ಸಿ-227 ಸಿಂಧನೂರು ಸಂಚಾರ ಠಾಣೆ ರವರು ದೂರು ನೀಡಿದ್ದು. ಸದರಿ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಸಂಚಾರಿ ಪೊಲೀಸ್ ಠಾಣಾ ಗುನ್ನೆ ನಂ.57/2018, ಕಲಂ.279,336, ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.