Thought for the day

One of the toughest things in life is to make things simple:

2 Nov 2020

Reported Crimes

 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ಐ.ಟಿ. ಕಾಯ್ದೆ ಅಡಿಯಲ್ಲಿ ಮೋಸ ಮಾಡಿದ  ಪ್ರಕರಣದ ಮಾಹಿತಿ.

                ದಿನಾಂಕ:02-11-2020 ರಂದು ಬೆಳಿಗ್ಗೆ 10-30 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶವೇನೆಂದರೆ. ಫಿರ್ಯಾದಿದಾರರು ರಾಯಚೂರು ನಗರದ ಮಂತ್ರಾಲಯ ರಸ್ತೆಯಲ್ಲಿರುವ ಎಸ್.ಬಿ.ಐ. ಬ್ಯಾಂಕಿನಲ್ಲಿ ಉಳಿತಾಯ ಖಾತೆ ಸಂ.37212333107 ನೇದ್ದನ್ನು ಹೊಂದಿದ್ದು ದಿನಾಂಕ:01-11-2020 ರಂದು ಮಧ್ಯಾಹ್ನ 2-19 ಗಂಟೆ ಸುಮಾರಿಗೆ ಅರ್ಜಿದಾರರ ಮೊಬೈಲ್ ನಂ.9916147551 ನೇದ್ದಕ್ಕೆ ಫಿರ್ಯಾದಿದಾರರ ಸ್ನೇಹಿತರಾದ ಟಿ.ಎನ್.ಎ. ವಿಜಯ ರಾಜ್ ಇವರ ಮೊಬೈಲ್ ನಂ.8769990025 ನೇದ್ದರಿಂದ ವಾಟ್ಸ್ ಅಪ್ ಮೆಸೇಜ್ ಬಂದಿದ್ದು ಟಿ.ಎನ್.ಎ. ವಿಜಯ ರಾಜ್ ಇವರು ತಾವು ಯು.ಎಸ್.ಎ. ನಲ್ಲಿರುವದಾಗಿ ತಿಳಿಸಿ ಯೋಗಕ್ಷೇಮ ವಿಚಾರಿಸಿ ನಂತರ ತಮ್ಮ ಪತ್ನಿಯ ಸಹೋದರಿಗೆ ಹಾರ್ಟ್ ಸರ್ಜರಿ ಇದ್ದು ತಮ್ಮ ಖಾತೆಯಿಂದ ಹಣ ಪಾವತಿಸಲು ಆಗದೆ ಇದ್ದುದ್ದರಿಂದ ನೀವು ಹಣವನ್ನು ಕಳುಹಿಸಿದರೆ ಸೋಮವಾರ ಹಣ ವಾಪಸ ಹಿಂದಿರುಗಿಸುವದಾಗಿ ತಿಳಿಸಿ ಶ್ವೇತಾ ಎಂಬುವ ಹೆಸರಿನಲ್ಲಿರುವ ಬ್ಯಾಂಕ್ ಖಾತೆ ಸಂ.35486390382 (ಐ.ಎಫ್.ಎಸ್.ಸಿ. ನಂ.SBIN0060030) ನೇದ್ದಕ್ಕೆ ರೂ.50.000/- ಹಣ ಜಮಾ ಮಾಡಲು ಕೋರಿದ್ದು ಅದಕ್ಕೆ ಫಿರ್ಯಾದಿದಾರರು ತಮ್ಮ ಮೊಬೈಲ್ ನಿಂದ ಎಸ್.ಬಿ.ಐ. ಯೊನೊ ಕ್ವಿಕ್ ಪೇ ಇಂಟರನೆಟ್ ಬ್ಯಾಂಕಿಂಗ್ ಮೂಲಕ ರೂ.25.000/- ಗಳನ್ನು ಅವರು ಹೇಳಿದ ಖಾತೆಗೆ ವರ್ಗಾವಣೆ ಮಾಡಿದ್ದು ನಂತರ ಸದರಿಯವರು ಇನ್ನೂ ಹೆಚ್ಚಿನ ಹಣದ ಅವಶ್ಯಕತೆ ಇದೆ ಎಂದು ಮೆಸೇಜ್ ಕಳುಹಿಸಿದ್ದರಿಂದ ಫಿರ್ಯಾದಿದಾರರು ತಮ್ಮ ಮಗನಾದ ವರುಣ್ ಈತನಿಗೆ ತನ್ನ ಸ್ನೇಹಿತನು ಹೇಳಿದ ಖಾತೆಗೆ ಹಣವನ್ನು ಜಮಾ ಮಾಡುವಂತೆ ತಿಳಿಸಿದ್ದರಿಂದ ಫಿರ್ಯಾದಿದಾರರ ಮಗ ವರುಣ್ ಈತನು ತನ್ನ ಮೊಬೈಲ್ ನಂ.7349527791 ನೇದ್ದರಿಂದ ಗೂಗಲ್ ಪೇ ಮೂಲಕ ರೂ.50.000/- ಗಳನ್ನು ಹಾಗೂ ರೂ.25.000/- ಗಳನ್ನು ಮೊಬೈಲ್ ನಂ.8867308359 ನೇದ್ದಕ್ಕೆ ಫೋನ್ ಪೇ ಮೂಲಕ ಕಳುಹಿಸಿದ್ದು, ಹೀಗೆ ಒಟ್ಟು ರೂ.1.00.000/- ಗಳನ್ನು ವರ್ಗಾವಣೆ ಮಾಡಿದ್ದು ಇರುತ್ತದೆ. 

                 ಫಿರ್ಯಾದಿದಾರರ ಸ್ನೇಹಿತನಾದ ಟಿ.ಎನ್.ಎ. ವಿಜಯ ರಾಜ್ ಇವರ ಫೋಟೋ ಡಿ.ಪಿ. ಇಟ್ಟು ಅವರ ಹೆಸರಿನಲ್ಲಿ ಯಾರೋ ಅಪರಿಚಿತರು ಫಿರ್ಯಾದಿದಾರರಿಗೆ ವಾಟ್ಸ್ ಅಪ್ ಮೆಸೇಜ್ಗಳನ್ನು ಕಳುಹಿಸಿ ಹಣದ ಅವಶ್ಯಕತೆ ಇರುವದಾಗಿ ನಂಬಿಸಿ ರೂ.1.00.000/- ಗಳನ್ನು ಬ್ಯಾಂಕ್ ಖಾತೆ ಮೂಲಕ ಪಡೆದುಕೊಂಡು ಫಿರ್ಯಾದಿದಾರರಿಗೆ ಮೋಸ ಮಾಡಿದ್ದು ಸದರಿ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ನನ್ನ ಹಣ ವಾಪಸ್ ಕೊಡಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ  ಸಿ.ಇ.ಎನ್ ಅಪರಾಧ ಪೊಲೀಸ್ ಠಾಣಾ ಗುನ್ನೆ ನಂ.35/2020 ಕಲಂ.66(ಸಿ), 66(ಡಿ) ಐ.ಟಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.