Thought for the day

One of the toughest things in life is to make things simple:

1 Apr 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

          ದಿನಾಂಕ 08.03.2020 ರಿಂದ 20.03.2020ರ ವರೆಗೆ ದೆಹಲಿಯಲ್ಲಿ ಮುಸ್ಲಿಂ ಸಮಾಜ ಹಜರತ್ ನಿಜಾಮುದ್ದೀನ್ ದರ್ಗಾದ ಪಕ್ಕದಲ್ಲಿ ನಡೆದ ತಬಕ್ ಎ ಜಮಾತನ ಧಾರ್ಮಿಕ ಸಮಾವೇಶನದಲ್ಲಿ ಭಾಗವಹಿಸಲು ದೇಶದ ವಿವಿಧ ರಾಜ್ಯ ಹಾಗೂ ಜಿಲ್ಲೆಗಳಿಂದ ಜನರು ತೆರಳಿದ್ದು, ತೆರಳಿದ ಜನರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗಿ ಜಿಲ್ಲೆಯಿಂದ ವಿವಿಧ ಕಾರಣಗಳಿಗೋಸ್ಕರ 6 ಜನರು ದೆಹಲಿಗೆ ತೆರಳಿದ ಮಾಹಿತಿ ತಿಳಿದು ಬಂದಿದ್ದು, ಈ ಜನರು ಯಾರು ಸಮಾವೇಶದಲ್ಲಿ ಭಾಗ ವಹಿಸಿರುವುದಿಲ್ಲ ಎಂದು ತಿಳಿದು ಬಂದಿರುತ್ತದೆ. ಅದರು ಸಹ  ಇವರ  ವಿಳಾಸಗಳನ್ನು  ಪತ್ತೆ ಮಾಡಿ  ಅವರನ್ನು ವೈದ್ಯಕೀಯ ಪರಿಕ್ಷೆಕ್ಕೆ ಒಳವಡಿಸಿ, ಹೋಂ ಕ್ವಾರಂಟೈನ್ (HOME QURITINE) ನಲ್ಲಿರಿಸಿ ಅವರ ಮೇಲೆ ಸೂಕ್ತ ನಿಗಾವಹಿಸಲಾಗಿದೆ.

ಹಲ್ಲೆ ಪ್ರರಕಣದ ಮಾಹಿತಿ.
            ದಿನಾಂಕ:31.03.2020 ರಂದು ಸಂಜೆ 5-00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಬಂದು ಲಿಖಿತವಾಗಿ ಬರೆದ ದೂರು ನೀಡಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿಯ ತಂದೆ ದಿನಾಂಕ:29.03.2020 ರಂದು ತಮ್ಮ ಹೊಲದ ಬದುವಿಗೆ ಆರೋಪಿತರು ಬೆಂಕಿ ಹಚ್ಚಿ ರೇಷ್ಮೇ ಬೆಳೆ ಸುಟ್ಟ ವಿಷಯವಾಗಿ ನಮ್ಮ ಹೊಲದ ಕಡೆ ನೋಡಿ ಬೆಂಕಿ ಹಚ್ಚಬೇಕಿತ್ತು ಎಂದು ಹೇಳಿದ್ದು ಅದೇ ವಿಚಾರವಾಗಿ ಆರೋಪಿತರೆಲ್ಲರೂ ಕೂಡಿಕೊಂಡು ದಿನಾಂಕ:30.03.2020 ರಂದು ರಾತ್ರಿ 8.10 ಗಂಟೆ ಸುಮಾರಿಗೆ ಫಿರ್ಯಾದಿಯ ಮನೆಯ ಮುಂದೆ ಬಂದು ಅವಾಚ್ಯವಾಗಿ ಬೈದಾಡುತ್ತಿದ್ದಾಗ, ಹೊಲದಿಂದ ಮನೆಗೆ ಬರುತ್ತಿದ್ದ ಫಿರ್ಯಾದಿಯ ತಂದೆ ಹನುಮಪ್ಪನ ಬಲಗಣ್ಣಿಗೆ  ಆರೋಪಿ ನಂ:01 ನೇದ್ದವನು ಹೊಡೆದನು. ಇದನ್ನು ನೋಡಿದ ಫಿರ್ಯಾದಿಯ ಮನೆಯವರೆಲ್ಲರೂ ಮನೆಯಿಂದ ಹೊರಗಡೆ ಬಂದು ಯಾಕೇ ಹೊಡೆಯುತ್ತೀ ಅಂತಾ ಕೇಳಿದಾಗ ಆರೋಪಿ ನಂ:02 ನೇದ್ದವನು ಅವಾಚ್ಯವಾಗಿ ಬೈದಾಡಿ ಅಲ್ಲಿಯೇ ಬಿದ್ದಿದ್ದ ಹಿಡಿಗಾತ್ರದ ಕಲ್ಲನ್ನು ತೆಗೆದುಕೊಂಡು ಫಿರ್ಯಾದಿಯ ಬಲಗೈಗೆ ಹೊಡೆದು ರಕ್ತಗಾಯಮಾಡಿದ್ದು, ಫಿರ್ಯಾದಿಯ ತಾಯಿಗೆ ಆರೋಪಿ ನಂ:03 ನೇದ್ದವರು ಅವಾಚ್ಯವಾಗಿ ಬೈದಾಡುತ್ತಿದ್ದಾಗ ಫಿರ್ಯಾದಿಯ ಅತ್ತಿಗೆ ರುದ್ರಮ್ಮ ಇವರು ಜಗಳ ಬಿಡಿಸಲು ಬಂದಾಗ ಅವರಿಗೂ ಸಹಃ ಆರೋಪಿ ನಂ:03 ನೇದ್ದವರು ಕೈಗಳಿಂದ ಹೊಡೆಬಡೆ ಮಾಡಿ ಕಾಲಿನಿಂದ ಎದೆಗೆ ಒದ್ದಿದ್ದು, ಈ ಜಗಳದಲ್ಲಿ ಫೀರ್ಯಾದಿಯ ಮಾಂಗಲ್ಯ ಹರಿದು ಕಿತ್ತುಹೋಗಿದ್ದು ಎಷ್ಟು ಹುಡುಕಿದರೂ ಸಿಕ್ಕಿರುವುದಿಲ್ಲಾ ನಂತರ ಜಗಳ ನೋಡಿದ ಬಸನಗೌಡ ತಂದೆ ಸಿದ್ದನಗೌಡ ಇವರು ಬಂದು ಜಗಳ ಬಿಡಿಸಿದ್ದು ನಂತರ ಆರೋಪಿತರೆಲ್ಲರೂ ಸೇರಿಕೊಂಡು ಇವತ್ತು ಉಳಿದುಕೊಂಡಿರಲೇ ಸೂಳೇ ಮಕ್ಕಳೇ ಇನ್ನೊಂದು ಸಲ ನಮ್ಮ ಕೈಗೆ ಸಿಗರಿ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲವೆಂದು ಜೀವದ ಬೆದರಿಕೆ ಹಾಕಿದ್ದು, ನಂತರ ಜಗಳದಲ್ಲಿ ಗಾಯಗೊಂಡ ಫಿರ್ಯಾದಿ, ಫಿರ್ಯಾದಿಯ ಅತ್ತಿಗೆ ರುದ್ರಮ್ಮ ಕೂಡಿಕೊಂಡು ಚಿಕಿತ್ಸೆ ಕುರಿತು ಮುದಗಲ್ಲ ಸರ್ಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿ ತಡವಾಗಿ ಬಂದು ದೂರು ನೀಡುತ್ತಿದ್ದು ಕಾರಣ  ನಮಗೆ ಅವಾಚ್ಯವಾಗಿ ಬೈದು, ಹೊಡೆಬಡೆ ಮಾಡಿ ಜೀವದಬೆದರಿಕೆ ಹಾಕಿದವರ ಮೇಲೆ ಸೂಕ್ತ ಕಾನೂನುಕ್ರಮ ಜರುಗಿಸಲು ವಿನಂತಿ  ಅಂತಾ ಮುಂತಾಗಿ ನೀಡಿದ ಫಿರ್ಯಾದಿ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣಾ ಗುನ್ನೆ ನಂಬರ  43/2020 PÀ®A, 323, 324, 504, 506 gÉ.« 34 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು. ತನಿಖೆ ಕೈಗೊಂಡಿತ್ತಾರೆ.   

            ದಿನಾಂಕ:31.03.2020 ರಂದು ಸಂಜೆ 6-00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಬಂದು ಕಂಪ್ಯೂಟರದಲ್ಲಿ ಟೈಪ್ ಮಾಡಿಸಿದ ದೂರು ನೀಡಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿಯ ಹೆಂಡತಿ ದಿನಾಂಕ:29.03.2020 ರಂದು ತಮ್ಮ ಹೊಲದ ಬದುವಿಗೆ ಬೆಂಕಿ ಹಚ್ಚಿ ಕಸ ಸುಡುತ್ತಿದ್ದಾಗ  ಬೆಂಕಿಯ ಝಳಕ್ಕೆ ಆರೋಪಿತರ 4-5 ರೇಷ್ಮೇ ಬೆಳೆ ಸುಟ್ಟಂತಾಗಿದ್ದು,  ದಿನಾಂಕ:30.03.2020 ರಂದು ರಾತ್ರಿ 8.10 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ಫಿರ್ಯಾದಿ ಮಗ ಶಿವನಗೌಡ ಕೂಡಿಕೊಂಡು ಆತೋಪಿತರ ಮನೆಯ ಮುಂದೆ ಹಾಯ್ದು ಹೊಲಕ್ಕೆ ನೀರುಕಟ್ಟಲು ಹೋಗುತ್ತಿದ್ದಾಗ ಆರೋಪಿ ನಂ:01 ನೇದ್ದವನು ಅವಾಚ್ಯವಾಗಿ ಬೈದು ರೇಷ್ಮೇ ಬೆಳೆಗೆ ಬೆಂಕಿ ಹಚ್ಚಿ ಸುಟ್ಟೀರಲಾ ಲುಕ್ಸಾನ ಯಾರು ಕೊರಕೊಡತಾರಲೇ ಸೂಳೆ ಮಕ್ಕಳೆ, ನಿಮಗೆ ಚಪ್ಪಲಿ ತೊಗೊಂದು ಹೊಡೆಯಬೇಕು ಎಂದಾಗ ಫಿರ್ಯಾದಿ, ಫಿರ್ಯಾದಿಯ ಮಗ ಹೋಗಿ ಯಾಕೇ ಬೈದಾಡುತ್ತೀಯಾ ನಾವು ಬೇಕಂತಾ ಏನು ಸುಟ್ಟಿಲ್ಲಾ ಆಕಸ್ಮಿಕವಾಗಿ ಝಳಕ್ಕೆ ನಿಮ್ಮ ಗಿಡಗಳು ಸುಟ್ಟಾವು  ಅಂತಾ  ಅಂದಾಗ ಆರೋಪಿ ನಂ:02 ನೇದ್ದವನು ಫಿರ್ಯಾದಿಯ ಬಲಗೈಗೆ ತನ್ನ ಕೈಗಳಿಂದ ಜೋರಾಗಿ ಹೊಡೆದು, ಆರೋಪಿ ನಂ:03 ನೇದ್ದವನು ಫಿರ್ಯಾದಿಯ ಮಗನ  ಕಪಾಳಕ್ಕೆ ತನ್ನ ಕೈಗಳಿಂದ ಹೊಡೆಬಡೆ ಮಾಡಿದ್ದು, ಈ ಜಗಳದ ಸುದ್ದಿ ಕೇಳಿದ ಫಿರ್ಯಾದಿಯ ಹೆಂಡತಿ ಬಸಮ್ಮ ಈಕೆಯು ಯಾಕೆ ನನ್ನ ಗಂಡ, ಮಗನಿಗೆ  ಯಾಕೆ ಹೊಡೆಯುತ್ತೀರಿ ಅಂತಾ ಕೇಳಲು ಬಂದಾಗ ಆರೋಪಿ ನಂ:04, 05, 06 ನೇದ್ದವರು ಕೂಡಿಕೊಂಡು ಅವಾಚ್ಯವಾಗಿ ಬೈದಾಡುತ್ತಾ ಹೊಡೆಬಡೆ ಮಾಡಿ ಕಾಲಿನಿಂದ ಒದ್ದಿದ್ದು ನಂತರ ಜಗಳವನ್ನು ನೋಡಿದ ಬಸನಗೌಡ ತಂದೆ ಸಿದ್ದನಗೌಡ ಇವರು ಬಂದು ಜಗಳ ಬಿಡಿಸಿ ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ಆರೋಪಿತರೆಲ್ಲರೂ ಸೇರಿಕೊಂಡು ಇವತ್ತು ಉಳಿದುಕೊಂಡಿರಲೇ ಸೂಳೆ ಮಕ್ಕಳೇ ಇನ್ನೊಂದು ಸಲ ನಮ್ಮ ಕೈಗೆ ಸಿಗರಿ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲವೆಂದು ಜೀವದ ಬೆದರಿಕೆ ಹಾಕಿ ಹೋಗಿದ್ದು, ಈ ಜಗಳದ ಕುರಿತು ಊರಿನ ಹಿರಿಯರು ಬಗೆಹರಿಸೋಣ ಅಂತಾ ತಿಳಿಸಿದ್ದು ಜಗಳ ಬಗೆಹರಿಯದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಕಾರಣ  ನಮಗೆ ಅವಾಚ್ಯವಾಗಿ ಬೈದು, ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ.  ಅಂತಾ ಮುಂತಾಗಿ ನೀಡಿದ ಫಿರ್ಯಾದಿ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣಾ ಗುನ್ನೆ ನಂಬರ 44/2020 PÀ®A,143, 147, 323, 504, 506 gÉ.« 149 L¦¹  ಪ್ರಕರಣ ಪ್ರರಕಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.