Thought for the day

One of the toughest things in life is to make things simple:

18 Dec 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಮಟಕಾ ಜೂಜಾಟ ಪ್ರಕರಣ ಮಾಹಿತಿ.
ದಿನಾಂಕ 17-12-2019 ರಂದು ಸಾಯಾಂಕಾಲ 4-45  ಗಂಟೆಗೆ ಸಿ.ಪಿ.ಐ ಮಾನವಿ ವೃತ್ತ ರವರು ಮಟಕಾ ದಾಳಿಯಿಂದ ವಾಪಾಸ ಠಾಣೆಗೆ ಬಂದು ಇಬ್ಬರು ಆರೋಪಿತರನ್ನು ಜಪ್ತು ಮಾಡಿದ ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸಾಯಾಂಕಾಲ 5-00 ಗಂಟೆಗೆ ಸೂಚಿಸಿದ್ದು ಸದರಿ ಪಂಚನಾಮೆಯಲ್ಲಿ ಇಂದು ದಿನಾಂಕ 17-12-2019 ರಂದು ಮಾನವಿ ನಗರದ ನೇತಾಜಿ ಸರ್ಕಲ್ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿ.ಪಿ. ಮಾನವಿ ಮತ್ತು  ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಧಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ   1] ಎಸ್. ವೆಂಕಟರಮಣ ರಾವ್  ತಂದೆ ಎಸ್ ವಾಸುರಾವ್. ವಯಾಃ 59  ವರ್ಷ ಜಾತಿಃ ನೇಕಾರ ಉಃ ಸೈಕಲ್ ಮೇಕ್ಯಾನಿಕ್ ಸಾಃ ಕರಡಿ ಗುಡ್ಡ ರೋಡ್ ನೇತಾಜಿ ಶಾಲೆ ಹತ್ತಿರ ಮಾನವಿ 2] ಎಸ್. ಶ್ರೀಧರ್ ತಂದೆ ಎಸ್. ವೆಂಕಟರಮಣ ರಾವ್  ವಯಾಃ 30  ವರ್ಷ ಜಾತಿಃ ನೇಕಾರ ಉಃ ಸೈಕಲ್ ಮೇಕ್ಯಾನಿಕ್ ಸಾಃ ಕರಡಿ ಗುಡ್ಡ ರೋಡ್ ನೇತಾಜಿ ಶಾಲೆ ಹತ್ತಿರ ಮಾನವಿ ಇವರನ್ನು ಇಂದು ಮಧ್ಯಾಹ್ನ 3-30  ಗಂಟೆಗೆ ವಶಕ್ಕೆ ತೆಗದುಕೊಂಡು ಸದರಿಯವರ  ಅಂಗಜಡ್ತಿ ಮಾಡಿ 1] ಮಟಕಾ ಜೂಜಾಟದ ನಗದು ಹಣ 2050/- ರೂ  2] ಎರಡು ಬಾಲ್ ಪೆನ್ನುಗಳು. 3] ಎರಡು ಮಟ್ಕಾ ಚೀಟಿಗಳನ್ನು ಜಪ್ತಿ ಮಾಡಿಕೊಂಡು ನಂತರ ಸದರಿಯವರಿಗೆ ಮಟಕಾ ಜೂಜಾಟದ ಪಟ್ಟಿಯನ್ನು ಯಾರಿಗೆ ಕೊಡುತ್ತಿರಿ ಅಂತಾ ವಿಚಾರಿಸಿದಾಗ ಸದರಿಯವರು ತಾವು ಬರೆದ ಮಟ್ಕಾ ಪಟ್ಟಿಯನ್ನು 1] ಲಾಲು ಸಾಃ ಕೋನಾಪುರ ಪೇಟೆ ಮಾನವಿ  2] ಮೊಹ್ಮದ್ ಎಲೆ ಮಾರುವವನು ಸಾಃ ಮಾನವಿ ಇವರಿಗೆ ಕೊಡುವುದಾಗಿ ತಿಳಿಸಿದ್ದು ನಂತರ ಸದರಿ ಜೂಜಾಟದ ಸಾಮಾಗ್ರಿಗಳನ್ನು ಸಿ.ಪಿ. ಸಾಹೇಬರು ಜಪ್ತಿ ಮಾಡಿಕೊಂಡು ಇಂದು ಮಧ್ಯಾಹ್ನ 3-30 ಗಂಟೆಯಿಂದ ಮಧ್ಯಾಹ್ನ 4-30 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಇರುತ್ತದೆ ಅಂತಾ ಇದ್ದ ಮೇರೆಗೆ ಸದರಿ ಪಂಚನಾಮೆಯ ಸಾರಾಂಶದ ಆಧಾರದ ಮೇಲಿಂದ ಪ್ರಕರಣವು ಅಸಂಜ್ಞೆಯ ಅಪರಾಧ ಆಗುತಿದ್ದು, ಕಾರಣ  ಸದರಿ ಆರೋಪಿತರ  ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಳ್ಳಲು ಪರವಾನಿಗೆಯನ್ನು ನೀಡಲು ಮಾನ್ಯ ನ್ಯಾಯಾಲಯಕ್ಕೆ ಯಾದಿ ಮೂಲಕ ವಿನಂತಿಸಿಕೊಂಡು ಪರವಾನಿಗೆ ಪಡೆದುಕೊಂಡು ಮಾನವಿ ಠಾಣೆ ಗುನ್ನೆ ನಂ  206/2019 ಕಲಂ 78 (3 ) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನತನಿಖೆ ಕೈಗೊಂಡಿರುತ್ತಾರೆ.