Thought for the day

One of the toughest things in life is to make things simple:

20 May 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಎರಡು ವರ್ಷದ ಅಪರಿಚಿತ ಮಗುವೊಂದನ್ನು ರಕ್ಷಣೆ ಮತ್ತು ಪ್ರಕರಣ ದಾಖಲು.
            ದಿನಾಂಕ: 19.05.2020 ರಂದು 3.00 ಪಿ.ಎಂಕ್ಕೆ  ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ದೂರನ್ನು ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ ದಿನಾಂಕ 11/05/2020 ರಂದು ಮದ್ಯಾಹ್ನ 2-30 ಗಂಟೆ ಸುಮಾರಿಗೆ ಲಿಂಗಸುಗೂರ ಪಟ್ಟಣದ ಸಿಂಡಿಕೇಟ ಬ್ಯಾಂಕ ಎದರುಗಡೆ ಎರಡು ವರ್ಷದ ಅಪರಿಚಿತ ಮಗುವೊಂದನ್ನು ಯಾರೋ ಅಪರಿಚಿತರು ಬಿಟ್ಟು ಹೋಗಿದ್ದು ತಕ್ಷಣ ಅದನ್ನು ಪೊಲೀಸರು ಸಾರ್ವಜನಿಕರಿಂದ ಮಾಹಿತಿ ತಿಳಿದು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ದಿನಾಂಕ 12/05/2020 ರಂದು ಫಿರ್ಯಾದಿದಾರರ ಘಟಕಕ್ಕೆ ಮುಂದಿನ ರಕ್ಷಣೆಗಾಗಿ ಒಪ್ಪಿಸಿರುತ್ತಾರೆ ಅಂತಾ ಕೊಟ್ಟ ಪಿರ್ಯಾದಿಯ ಸಾರಾಂಶದ ಮೇಲಿಂದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂಬರ 122/2020 ಕಲಂ 317 ಐ.ಪಿ.ಸಿ. ಅಡಿಯಲ್ಲಿ ಪ್ರರಕರಣ ದಾಖಲು ಮಾಡಿ ತನಿಖೆ ಕೈಕೊಂಡಿರುತ್ತಾರೆ.

ಇಸ್ಪೇಟ್ ದಾಳಿ ಪ್ರರಕಣದ ಮಾಹಿತಿ.
            ದಿನಾಂಕ:- 18/05/2020 ರಂದು ಸಾಯಂಕಾಲ 18-00 ಗಂಟೆಗೆ ಪಿ.ಎಸ್.ಐ ಸಾಹೇಬರು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ ಮತ್ತು ವಶಕ್ಕೆ ಪಡೆದುಕೊಂಡ 06 ಜನ ಆರೋಪಿತರು ಹಾಗೂ ಮುದ್ದೆಮಾಲಿನೊಂದಿಗೆ ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ. ದಿ-18/05/2020 ರಂದು ಮಧ್ಯಾಹ್ನ 14-30 ಗಂಟೆ ಸುಮಾರಿಗೆ ಪಿ.ಎಸ್.ಐ ರವರು ಠಾಣೆಯಲ್ಲಿರುವಾಗ ರಾಘಲಪರ್ವಿ ಗ್ರಾಮದ ಆಂಜನೇಯ್ಯ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆದಿರುವ ಬಗ್ಗೆ ಪಿ.ಸಿ-550 ರವರು ಮಾಹಿತಿ ತಿಳಿಸಿದ್ದು. ದಾಳಿ ಮಾಡುವ ಕುರಿತು  ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಪಿ.ಸಿ-550, ಪಿ.ಸಿ-34, ಪಿ.ಸಿ-128, ಪಿ.ಸಿ-80, ಪಿ.ಸಿ-271, ಪಿ.ಸಿ-218, ಪಿ.ಸಿ-697, ಪಿ.ಸಿ-635 ರವರೊಂದಿಗೆ ಸರಕಾರಿ ಜೀಪ್ ನಂಬರ್ ಕೆಎ-36 ಜಿ-211 ರಲ್ಲಿ ಕುಳಿತುಕೊಂಡು ರಾಘಲಪರ್ವಿ ಗ್ರಾಮದ ಆಂಜನೇಯ್ಯ ಗುಡಿಯ ಹತ್ತಿರ ಸ್ವಲ್ಪದೂರದಲ್ಲಿ ಮರೆಯಾಗಿ ನಿಂತು ನೋಡಲಾಗಿ ಆಂಜನೇಯ್ಯ ಗುಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಂಡವರು ಅಂದರ್-ಬಹಾರ್ ಎನ್ನುವ ನಸೀಬದ ಇಸ್ಪೆಟ್ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ಪಂಚರ ಸಮಕ್ಷಮಲ್ಲಿ ದುಂಡಾಗಿ ದಾಳಿ ಮಾಡಲಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ 06 ಜನರು  ಸಿಕ್ಕಿಬಿದ್ದಿದ್ದು ಇರುತ್ತದೆ. ಕಣದಲ್ಲಿ 52 ಇಸ್ಪೇಟ್ ಎಲೆಗಳು ಮತ್ತು ನಗದು ಹಣ  1720/- ರೂಪಾಯಿ ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಠಾಣಾ ಎಸ್.ಹೆಚ್.. ಕರ್ತವ್ಯದಲ್ಲಿದ್ದ ನಾನು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ದಿನಾಂಕ:-19/05/2020 ರಂದು  ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಮೇಲಿಂದ  ಠಾಣಾ ಗುನ್ನೆ ನಂ- 45/2020 ಕಲಂ-87 ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.