Thought for the day

One of the toughest things in life is to make things simple:

11 Feb 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ದಿನಾಂಕ 11-02-2020 ರಂದು ಬೆಳಿಗ್ಗೆ 08.00 ಗಂಟೆ ಸುಮಾರಿಗೆ ಕೆಂಪು ಬಣ್ಣ ಮಹಿಂದ್ರಾ ಕಂಪನಿಯ ಟ್ರ್ಯಾಕ್ಟರ ನಂಬರ KA-36/TC-2223 & ಟ್ರಾಲಿ ನಂ. KA-36/TC-2224 ನೇದ್ದರ ²ªÀgÁd vÀAzÉ CªÀÄgÀ¥Àà CªÀÄgÀ¥Àà vÀ¼ÀªÁgÀ ªÀAiÀiÁ:25 ªÀµÀð eÁ: ªÁ°äÃQ G: mÁæöåPÀÖgÀ ZÁ®PÀ ¸Á: ªÁå¸À£ÀA¢ºÁ¼À  ಉಳಿಮೇಶ್ವರ ಗ್ರಾಮದ  ಹತ್ತಿರ ಇರುವ ಹಳ್ಳದಿಂದ ನೈಸರ್ಗಿಕ ಸ್ವತ್ತಾದ  ಮತ್ತು ಸರಕಾರದ ಸ್ವತ್ತಾದ ಮರಳನ್ನು ಯಾವುದೆ ಪರವಾನಗಿ ಇಲ್ಲದೆ ಕಳ್ಳತನದಿಂದ ಅಕ್ರಮವಾಗಿ ಮುದಗಲ್ ಪಟ್ಟಣದ ಕಿಲ್ಲಾದ ನಾನಾ ದರ್ಗಾ ಹತ್ತಿರ ಸಾಗಾಟ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಅಲ್ಲಿಗೆ ಫಿರ್ಯಾದಿದಾರರು, ಪಂಚರು & ಸಿಬ್ಬಂದಿಯವರಾದ ಪಿ.ಸಿ-283, 592  ರವರನ್ನು ಕರೆದುಕೊಂಡು ಕಾಲ್ನಡಿಗೆಯಲ್ಲಿ ಮುದಗಲ್ ಪಟ್ಟಣದ ಕಿಲ್ಲಾದ ನಾನಾ ದರ್ಗಾದ ಹತ್ತಿರ ಹೋದಾಗ ಒಂದು ಟ್ರ್ಯಾಕ್ಟರಿಯು ಮರಳನ್ನು ತುಂಬಿಕೊಂಡು ಹೋಗುತ್ತಿದ್ದು ಸದರಿ ಟ್ರ್ಯಾಕ್ಟರಿಯನ್ನು ನಿಲ್ಲಿಸಿ ಟ್ರ್ಯಾಕ್ಟರಿ ಚಾಲಕನಿಗೆ ವಿಚಾರಣೆ ಮಾಡಲಾಗಿ ಆರೋಪಿತನು ಮರಳನ್ನು ಉಳಿಮೇಶ್ವರ ಗ್ರಾಮದ ಹತ್ತಿರದಿಂದ ಮರಳನ್ನು ತುಂಬಿಕೊಂಡು ಬಂದಿರುವುದಾಗಿ ತಿಳಿಸಿದ್ದು ಹಾಗೂ. ಸದರಿ ಟ್ರ್ಯಾಕ್ಟರಿಯಲ್ಲಿ ಮರಳಿಗೆ ಸಂಬಂದಿಸಿದಂತೆ ಯಾವುದೆ ದಾಖಲಾತಿಗಳು ಇರದೇ ಇರುವುದು ಕಂಡು ಬಂದಿದ್ದು ಇರುತ್ತದೆ. ಸದರಿ ಟ್ರ್ಯಾಕ್ಟರಿಯ ಚಾಲಕನು ತಮ್ಮ ಟ್ರ್ಯಾಕ್ಟರ ಮಾಲೀಕನಾದ ಪರಶುರಾಮ ಸಾ: ಕನ್ನಾಳ ಇವರು ಹೇಳಿದಂತೆ ಉಳಿಮೇಶ್ವರ ಹತ್ತಿರ ಹಳ್ಳದಿಂದ ಸರಕಾರದ ಸ್ವತ್ತಾದ ಮರಳನ್ನು ಅಕ್ರಮವಾಗಿ ಯಾವುದೆ ಪರವಾನಿಗೆ ಇಲ್ಲದೆ ಮತ್ತು ಕಳ್ಳತನದಿಂದ ಸಾಗಾಟ ಮಾಡಿದ್ದರಿಂದ ಪಂಚರ ಸಮಕ್ಷಮ  ಮರಳು ತುಂಬಿದ ಟ್ರ್ಯಾಕ್ಟರನ್ನು ವಶಕ್ಕೆ ತಗೆದುಕೊಂಡು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ವರದಿ, ಪಂಚನಾಮೆ ಮತ್ತು ಟ್ರ್ಯಾಕ್ಟರನ್ನು ಹಾಗೂ ಆರೋಪಿ ಚಾಲಕ ಎ-1 ನೇದ್ದವನನ್ನು ಕೊಟ್ಟು  ಟ್ರ್ಯಾಕ್ಟರ ಚಾಲಕ ಮತ್ತು ಟ್ರ್ಯಾಕ್ಟರ ಮಾಲೀಕರ ಮೇಲೆ  ಮುಂದಿನ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪಂಚನಾಮೆ ಸಾರಂಶದ ಮುದಗಲ್ ಪೊಲೀಸ್ ಠಾಣೇ ಗುನ್ನೆ ನಂಬರ 21/2020 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಜಪ್ತಿ ಪ್ರಕರಣದ ಮಾಹಿತಿ.

ದಿನಾಂಕ 11.02.2020 ರಂದು ಬೆಳಿಗ್ಗೆ ನಾನು ಎಸ್.ಹೆಚ್.ಓ ಕರ್ತವ್ಯದಲ್ಲಿದ್ದಾಗ ಮಾನ್ಯ ಪಿ.ಎಸ್.ಐ (ಕಾ.ಸು) ರವರು ಬೆಳಿಗ್ಗೆ 09-30 ಗಂಟೆಗೆ ಸೇಂದಿ ದಾಳಿಯಿಂದ ವಾಪಸ್ ಠಾಣೆಗೆ ಒಬ್ಬ ಆರೋಪಿತನೊಂದಿಗೆ, ವಿವರವಾದ ಪಂಚನಾಮೆ ಹಾಗೂ ದೂರು ಸಲ್ಲಿಸಿದ್ದೇನೆಂದರೆ, ದಿನಾಂಕ:- 11.02.2020 ರಂದು ಬೆಳಿಗ್ಗೆ 07-30 ಗಂಟೆಗೆ ಬಲವಾದ ಮಾಹಿತಿ ಆಧಾರದ ಮೇಲಿಂದ ಪಂಚರೊಂದಿಗೆ ರೈಲ್ವೆ ಟ್ರ್ಯಾಕ್ ಹತ್ತಿರವಿರುವ ಮನೋಹರ ರೈಲ್ವೆ ಕ್ವಾರ್ಟಸ್ ರವರ ಮನೆಯ ರಸ್ತೆಯ ಮೇಲೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಬೆಳಿಗ್ಗೆ 08-00 ಗಂಟೆಗೆ ಕಲಬೆರಕೆ ಸೇಂದಿ ಮಾರಾಟ ಮಾಡುತ್ತಿದ್ದ ಮೇಲ್ಕಂಡ ಆರೋಪಿತನ ಮೇಲೆ ದಾಳಿ ಜರುಗಿಸಲಾಗಿ ನಂತರ ಆತನನ್ನು ಹಿಡಿದು ವಿಚಾರಿಸಲಾಗಿ ಆರೋಪಿತನು ತನ್ನ ಹೆಸರನ್ನು ಮೇಲಿನಂತೆ ಹೇಳಿದ್ದು ನಂತರ ಕೆಳಗಡೆ ನೋಡಲು ಕಲಬೆರಕೆ ಸೇಂದಿ ಅಂದಾಜು 20 ಲೀಟರ ನಷ್ಟು ಸೇಂದಿ ಇದ್ದು, ಇದರಲ್ಲಿ 01 ಲೀಟರ ಶ್ಯಾಂಪಲ ಸೇಂದಿಯನ್ನು ತೆಗೆದು ರಸಾಯನಿಕ ಪರೀಕ್ಷೆ ಕಳುಹಿಸಿ ಕೊಡುವ ಕುರಿತು ಪಂಚರ ಸಮಕ್ಷಮದಲ್ಲಿ ಜಪ್ತಿಪಡಿಸಿಕೊಂಡಿದ್ದು, ನಂತರ ಅಂಗ ಜಡ್ತಿ ಮಾಡಲಾಗಿ ಸೆಂದಿ ಮಾರಾಟ ಮಾಡಿದ ಒಟ್ಟು 150 ರೂ ಹಾಗೂ ಉಳಿದ 19 ಲೀಟರ ಸೇಂದಿಯು ಠಾಣೆಯಲ್ಲಿ ಇಟ್ಟರೆ ಕೊಳೆತು ನಾರುವ ಸಾಧ್ಯತೆ ಇದ್ದುದ್ದರಿಂದ ಸದರಿ ಸೇಂದಿಯನ್ನು ಘಟನಾ ಸ್ಥಳದಲ್ಲಿಯೇ ಪಂಚರ ಸಮಕ್ಷಮ ನಾಶಪಡಿಸಿದ್ದು ಇರುತ್ತದೆ.ಈ ದೂರಿನೊಂದಿಗೆ ಕಲಬೆರಕೆ ಸೆಂದಿಯ ಶ್ಯಾಂಪಲ್ ಬಾಟಲಿ ಮತ್ತು ವಿವರವಾದ ಪಂಚನಾಮೆ ಹಾಗೂ ಮೇಲ್ಕಂಡ ಆರೋಪಿತನನ್ನು ತಂದು ಹಾಜರು ಪಡಿಸಿ ಆತನ ವಿರುದ್ಧ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಲು ಈ ದೂರು ಸಲ್ಲಿಸಿದ್ದರ ಮೇಲಿಂದ ರಾಯಚೂರು ಪಶ್ಚಿಮ ಠಾಣಾ ಗುನ್ನೆ ನಂ. 18/2020 ಕಲಂ: 273, 284 ಐ.ಪಿ.ಸಿ & 32, 34 ಕೆ.ಇ. ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತಾರೆ.