Thought for the day

One of the toughest things in life is to make things simple:

10 Jan 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಬೆಟ್ಟಿಂಗ್ ಪ್ರಕರಣದ ಮಾಹಿತಿ.

ದಿನಾಂಕ:08/01/2019 ರಂದು 16-50 ಗಂಟೆಯಿಂದ 17-50 ಗಂಟೆಯ ಅವಧಿಯಲ್ಲಿ ಆರೋಪಿ ರಘು ಬಾಬು ತಂದೆ ವೆಂಕಟೇಶ 35 ವರ್ಷ ಜಾ: ಕಮ್ಮಾ : ನಂದಿನಿ ಮಿಲ್ಕ್ ಪಾರ್ಲರ್ ಸಾ: 16 ವಾರ್ಡ ಕವಿತಾಳ ಹಾಗೂ ಇತರೆ 5-ಜನರು  ಕವಿತಾಳ  ಪಟ್ಟಣದ ಬಸ್ಸ್ ನಿಲ್ದಾಣದ ಹತ್ತಿರ ನಂದಿನಿ ಮಿಲ್ಕ್ ಪಾರ್ಲರ್ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮೊಬೈಲ್ ಗಳ ಮೂಲಕ ಟಿ ವಿ ನೋಡುತ್ತಾ BIG BASH LEAGUE 2018-19 ಕ್ರಿಕೇಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿ ಸಾರ್ವಜನಿಕರಿಗೆ Brisbane Hear  ಗೆದ್ದರೆ 500/- ರೂಪಾಯಿಗೆ 700/- ಹಾಗೂ Sydney Thunder ಗೆಲ್ಲರೆ 600/-ರೂಪಾಯಿಗೆ  ರೂ 800/- ಕೊಡುವುದಾಗಿ ಕೂಗೂತ್ತಾ ಅವರನ್ನು ನಂಬಿಸಿ ಅವರಿಂದ ಹಣ ಪಡೆದುಕೊಂಡು ಮೋಬೈಲ್ ಕೇಳುತ್ತಾ ಕ್ರಿಕೇಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದಾಗ ಮಾನ್ಯ ಎಸ್.ಪಿ ಸಾಹೇಬರು ರಾಯಚೂರು, ಹೆಚ್ಚುವರಿ ಎಸ್.ಪಿ ರಾಯಚೂರು ರವರ ಮಾರ್ಗದರ್ಶನದಲ್ಲಿ, ಡಿ.ಎಸ್.ಪಿ ಸಿಂಧನೂರು ಹಾಗೂ ಸಿಪಿಐ ಮಾನವಿ ವೃತ್ತರವರ ಮುಂದಾಳತ್ವದಲ್ಲಿ ಪಿ.ಎಸ್. ರವರು ಮತ್ತು ಸಿಬ್ಬಂದಿ & ಪಂಚರೊಂದಿಗೆ ದಾಳಿ ಮಾಡಿ ಆರೋಪಿ ನಂ 1 ರಿಂದ 5 ನೇದ್ದವರಿಂದ 1) ಕ್ರಿಕೇಟ್ ಜೂಜಾಟದ ಒಟ್ಟು ನಗದು ಹಣ 11000/-,  2) ಸ್ಮಾಲ್ ಟಿ.ವಿ ಸೇಟ್ .ಕಿ .400 ರೂ/-  3] ಒಂದು MI Note 5 Pro ಮೋಬೈಲ್ .ಕಿ 1800  ಜಪ್ತಿಮಾಡಿಕೊಂಡು  .ನಂ 01 ರಿಂದ 05 ರವರನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಬಂದು ಒಂದು ವರದಿಯನ್ನು ನೀಡಿ ಮುಂದಿನ ಕಾನೂನು ಕ್ರಮಕ್ಕಾಗಿ ಸೂಚಿಸಿದ್ದರಿಂದ ಪಂಚನಾಮೆ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದು ಮಾನ್ಯ ಜೆಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರ ಪರವಾನಿಗೆಯನ್ನು ಪಡೆದುಕೊಂಡು ಕವಿತಾಳ ಪೊಲೀಸ್‌‌ ಠಾಣೆಯ ಗುನ್ನೆ ನಂ:04/2019 ಕಲಂ:  78 A [6] ಕೆ.ಪಿ.ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ದೊಂಬಿ ಪ್ರಕರಣದ ಮಾಹಿತಿ.
ದಿನಾಂಕ: 08-01-2019 ರಂದು ಫಿರ್ಯಾದಿದಾರರಾದ ಶ್ರೀ ತಮ್ಮಣ್ಣ ಸಾ: ಹಳೆ ಆಶ್ರಯ ಕಾಲೋನಿ ರಾಯಚೂರು ಇವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಸಲ್ಲಿಸಿದ್ದು, ಸಾರಾಂಶವೇನೆಂದರೆ, ದಿನಾಂಕ: 07-01-2019 ರಂದು ಸಂಜೆ 5.00 ಗಂಟೆಯಿಂದ ಶ್ರೀ ಪವನ ಎಂಟರ್ ಪ್ರ್ಯಸೆಸ್ ಇವರ ಅಂಗಡಿಯಲ್ಲಿ ವಾಚಮೆನ್ ಕರ್ತವ್ಯದಲ್ಲಿದ್ದಾಗ ರಾತ್ರಿ 11.30 ಗಂಟೆ ಸುಮಾರಿಗೆ ಯಾರೋ ಸುಮಾರು 20 ರಿಂದ 25 ವಯಸ್ಸಿನ ಅಪರಿಚಿತರು ಫಿರ್ಯಾದಿಯು ವಾಚಮೆನ್ ಕೆಲಸ ಮಾಡುತ್ತಿದ್ದ ಅಂಗಡಿಯ ಗೇಟ್ ತೆಗೆಯುತ್ತಿದ್ದಾಗ ಅವರಿಗೆ  ವಿಚಾರಿಸಲು ನಿನ್ಯಾರಲೆ ಸೂಳೆ ಮಗನೆ ನಮಗೆ ಕೇಳಲಿಕ್ಕೆ ಅಂತಾ ಅವಾಚ್ಚವಾಗಿ ಬೈದು ನಮ್ಮ ತಂಟೆಗೆ ಬಂದರೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಫಿರ್ಯಾದಿಯು ಕುಡಿಯಲು ಇಟ್ಟಿದ್ದ ನೀರನ್ನು ಮುಖಕ್ಕೆ ಚೆಲ್ಲಿ ಕಟ್ಟಗೆಯಿಂದ ಎಡಗಡೆ ಎದೆಯ ಕೆಳ ಭಾಗಕ್ಕೆ, ಎಡಗಾಲ ತೊಡೆಯ ಹತ್ತಿರ ಬಲವಾಗಿ ಹೊಡೆದು ಒಳಪೆಟ್ಟುಗೊಳಿಸಿದ್ದು ಇರುತ್ತದೆ. ಆರೋಪಿತರನ್ನು ನೋಡಿದಲ್ಲಿ ಗುರ್ತಿಸುತ್ತೇನೆ ಅಂತಾ ನೀಡಿದ ಫಿರ್ಯಾದಿ ಮೇರೆಗೆ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣೆ ಗುನ್ನೆ 02/2019 ಕಲಂ 143, 147, 148, 323, 324, 504, 506 ರೆ/ವಿ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
ವರದಕ್ಷಣ ಪ್ರರಕಣದ ಮಾಹಿತಿ.
ದಿನಾಂಕ  8/01/2019 ರಂದು 19.00  ಗಂಟೆಗೆ ಫಿರ್ಯಾದಿ ²æêÀÄw C£ÀAvÀ C°AiÀiÁ¸ï PÁªÀå UÀAqÀ ²æÃPÁAvï , 22 ªÀµÀð, ªÀÄ£É PÉ®¸À ¸Á: PÀÄrð ºÁ.ªÀ. UÉÆÃPÀð¯ï ರವರು ಠಾಣೆಗೆ ಹಾಜರಾಗಿ ತನ್ನ ಒಂದು ಗಣಕಯಂತ್ರದಲ್ಲಿ ತಯಾರಿಸಿದ ದೂರನ್ನು ಹಾಜರಪಡಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ,  ಫಿರ್ಯಾದಿದಾರಳಿಗೆ ದಿನಾಂಕ 11/04/16 ರಂದು ಶ್ರೀಕಾಂತ್ ನೊಂದಿಗೆ ಮದುವೆಯಾಗಿದ್ದು ಮದುವೆ ಕಾಲಕ್ಕೆ ಫಿರ್ಯಾದಿಯ ಮನೆಯವರು ತಮ್ಮ ಕೈಲಾದ ಮಟ್ಟಿಗೆ ವರದಕ್ಷಿಣೆ, ಬಂಗಾರ, ಗಾಡಿ ನಗದು ಹಣ ಕೊಟ್ಟಿದ್ದು ಇರುತ್ತದೆ..ಮದುವೆಯಾದ ನಂತರ ಸುಮಾರು 11-12 ತಿಂಗಳವರೆಗೆ  ಫಿರ್ಯಾದಿ ಗಂಡನು ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದು ಒಂದು ಹೆಣ್ನು ಮಗು ಇರುತ್ತದೆ. ನಂತರ ಫಿರ್ಯಾದಿ ಗಂಡ ಹಾಗೂ ಅತ್ತೆ, ಮಾವ ಮತ್ತು ನಾದಿನಿ ಹಾಗೂ ನಾದಿನಿಯ ಗಂಡ ಸೇರಿಕೊಂಡು ನಿನಗೆ ಹೆಣ್ಣು ಮಗು ಇದೆ ಮುಂದೆ ಖರ್ಚು ವೆಚ್ಚ ಯಾರು ಮಾಡಬೇಕು ಅಂತಾ ಅನ್ನುವದು ಮಾಡುತ್ತಾ  ಕೂಲಿ ಕೆಲಸಕ್ಕೆ ಕಳುಹಿಸ ಹತ್ತಿದ್ದು ಅಲ್ಲದೇ ಕೂಲಿ ಕೆಲಸದಿಂದ ಒತ್ತಾಗಿ ಮನೆಗೆ ಬಂದಾಗ ನೀನು ಯಾರೊಂದಿಗೆ ಹೋಗಿದ್ದು ಯಾರೊಂಧಿಗೆ ಮಲಗಿದ್ದು ಅಂತಾ ವಿನಾಕಾರಣ ಆರೋಪ ಮಾಡುತ್ತಾ ಕೈಗಳಿಂದ ಹೊಡೆ ಬಡೆ ಮಾಡುವದು ಮಾಡುತ್ತಾ  ಬಂದಿದ್ದು ಅಲ್ಲದೇ  ಪುನಃ ಈಗ ನೀನು ಇನ್ನೂ ಹೆಚ್ಚಿನ ವರದಕ್ಷಿಣೆ , ಬಂಗಾರ, ಒಡವೆ. ಟಿ.ವಿ. ಫ್ರಿಡ್ಜ  ತೆಗೆದುಕೊಂಡು ಬರುವಂತೆ ಒತ್ತಾಯ ಮಾಡುವದಲ್ಲದೇ  ಊಟಕ್ಕೆ ಸಹ ಹಾಕದೇ ಉಪವಾಸ ಹಾಕುತ್ತಾ ಬಂದಿದ್ದು ಇರುತ್ತದೆ. ಮತ್ತು ದಿನಾಂಕ 3/01/209 ರಂದು ರಾತ್ರಿ 9.30 ಗಂಟೆಯ ಸುಮಾರಿಗೆ ಮೇಲ್ಕಂಡ ಆರೋಪಿತರೆಲ್ಲರೂ ಕೂಡಿ ಅವಾಚ್ಯ ಶಬ್ದಗಳಿಂದ ಬೈಯ್ದು ಕೈಗಳಿಂಧ ಹೊಡೆ ಬಡೆ ಮಾಡಿ ಮಾನಸಿಕ ಹಾಗೂ ದೈಹಿಕ  ಕಿರುಕುಳ ನೀಡಿದ್ದು ಇರುತ್ತದೆ. ಕಾರಣ ಕಾನೂನು ಕ್ರಮ ಜರುಗಿಸಬೇಕು ಅಂತಾ . ಮುಂತಾಗಿ ಇದ್ದ ದೂರಿನ  ಮೇಲಿಂದ ಮಾನವಿ ಠಾಣೆ ಗುನ್ನೆ ನಂ 8/2019 ಕಲಂ  498 (),323,504,506 ಸಹಿತ 149  .ಪಿ.ಸಿ. ಹಾಗೂ 3 & 4 ಡಿ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ: 08.01.2019 ರಂದು ಸಂಜೆ 6.30 ಗಂಟೆಯ ಸುಮಾರಿಗೆ ಫಿರ್ಯಾದಿ ಫಿರೋಜ್ ಅಹ್ಮದ್ ತಂ: ಶೇಖ್ ಮಕಬೂಲ್ ವಯ: 32 ವರ್ಷ, ಜಾ: ಮುಸ್ಲಿಂ, : ಹೂವಿನ ವ್ಯಾಪಾರ, ಸಾ: ಮನೆ ನಂ: 40 ಹೊಸ ಆಶ್ರಯ ಕಾಲೋನಿ, ಚಂದ್ರಬಂಡಾ ರಸ್ತೆ, ರಾಯಚೂರು ಇವರ ತಂದೆ ಶೇಖ್ ಮಕಬೂಲ್ ರವರನ್ನು ತಮಗೆ ಪರಿಚಯದ ಸೈಯದ್ ರಿಯಾಜ್ ರವರ ಮೊಟಾರ ಸೈಕಲ್ ಮೇಲೆ ತಮ್ಮ ಮುಂದೆ ಶಕ್ತಿನಗರ ರಾಯಚೂರು ರಸ್ತೆಯಲ್ಲಿ ಹೋಗುವಾಗ್ಗೆ ದಾರಿಯಲ್ಲಿ ಯರಮರಸ್ ಬೈಪಾಸ್ ಕ್ರಾಸ್ ಹತ್ತಿರ, ಆರೋಪಿತನು ಕರ್ನಾಟಕ ಹೊಟೇಲ್ ಮುಂದಿನ ರಸ್ತೆಯಲ್ಲಿ ಬೈಪಾಸ್ ಕಡೆಯಿಂದ ತನ್ನ ಮಾರುತಿ ಶಿಪ್ಟ್ ಡಿಜೈರ್ ಕಾರ್ ಇದ್ದು ಅದರ ನಂ: KA38 M1970 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕಂಟ್ರೋಲ್ ಮಾಡದೇ ರಸ್ತೆಯಲ್ಲಿ ಬರುತ್ತಿದ್ದ ಸೈಯದ್ ರಿಯಾಜ್ ಮೊಟಾರ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದು ಇದರಿಂದಾಗಿ ಮೊಟಾರ ಸೈಕಲ್ ಸಮೇತ ಇಬ್ಬರೂ ರಸ್ತೆಯಲ್ಲಿ ಬಿಳಲಾಗಿ ಶೇಖ್ ಮಕಬೂಲ್ ರವರಿಗೆ ತಲೆಯಲ್ಲಿ ಒಳಪೆಟ್ಟು, ಮೂಗಿನ ಹತ್ತಿರ ರಕ್ತಗಾಯ, ಎಡಗೈ ಮೊಣಕೈಗೆ ತರಚಿದ ಗಾಯ, ಬಲಗೈ ತೋಳಿನಲ್ಲಿ ಒಳಪೆಟ್ಟು, ಬಲತೊಡೆಗೆ ಬಲಮೊಣಕಾಲಿಗೆ ಒಳಪೆಟ್ಟಾಗಿದ್ದು ಮೊಟಾರ ಸೈಕಲ್ ಚಲಾಯಿಸುತ್ತಿದ್ದ ಸೈಯದ್ ರಿಯಾಜ್ ಗೆ ತಲೆಯ ಹಿಂಭಾಗದಲ್ಲಿ ರಕ್ತಗಾಯ, ಬೆನ್ನಲ್ಲಿ ಮತ್ತು ಎಡಗಾಲ ಮೊಣಕಾಲಿಗೆ ತರಚಿದ ಗಾಯಗಳಾಗಿದ್ದು, ಗಾಯಗೊಂಡಿದ್ದ ಇಬ್ಬರಿಗೂ ರಿಮ್ಸ ಆಸ್ಪತ್ರೆಗೆ ಸೇರಿಕೆ ಮಾಡಿ ವಿಷಯವನ್ನು ತಮ್ಮ ಕುಟುಂಬದಲ್ಲಿ ಚರ್ಚಿಸಿ ಈಗ ತಡವಾಗಿ ಬಂದು ದೂರು ನೀಡಿದ್ದು ಇದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 05/2019 PÀ®A. 279, 337, 338 IPC ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.