Thought for the day

One of the toughest things in life is to make things simple:

6 Jan 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಕೋಳಿ ಪಂಜ್ಯಾಟದ ಜೂಜಾಟದ
ದಿನಾಂಕ 05-01-2020 ರಂದು ಸಂಜೆ 4.45 ಗಂಟೆ ಸುಮಾರು ಉಸ್ಕಿಹಾಳ ಸಿಮಾಂತರದಲ್ಲಿನ ಮಾರಲದಿನ್ನಿ ಡ್ಯಾಂ ಕಾಲುವೆ ಮೇಲಿನ ಬಯಲು ಜಾಗೆಯ ಸಾರ್ವಜನಿಕ ಸ್ಥಳದಲ್ಲಿ  ವೀರಭದ್ರಪ್ಪ ತಂದೆ ಹನುಮಂತ ಕರಿಗೌಡ್ರು, 48 ವರ್ಷ, ನಾಯಕ, ಒಕ್ಕಲತನ ಸಾ:ರಾಂಪೂರು(ಭೂಪೂರು) ಹಾಗೂ ಇತರೆ 8ಜನ ಆರೋಪಿತರು ದುಂಡಾಗಿ ಕುಳಿತುಕೊಂಡು ಎರಡು ಹುಂಜಗಳನ್ನು ಕಾದಾಟಕ್ಕೆ ಬಿಟ್ಟು ಅದರ ಮೇಲೆ ಹಣವನ್ನು ಹಚ್ಚಿ ನನ್ನ ಹುಂಜ ಗೆದ್ದರೆ ಹಣ ನನಗೆ, ನಿನ್ನ ಹುಂಜ ಗೆದ್ದರೆ ಹಣ ನಿನಗೆ ಅಂತಾ ಹೇಳುತ್ತಾ ಕೋಳಿ ಪಂಜ್ಯಾಟದ ಜೂಜಾಟದಲ್ಲಿ ತೊಡಗಿ, ಕೋಳಿ ಪಂಜ್ಯಾ ಆಡುತ್ತಿದ್ದಾಗ ಪಿರ್ಯಾದಿದಾರರು ಪಂಚರ ಸಮಕ್ಷಮ, ಸಿಬ್ಬಂದಿಯೊಂದಿಗೆ ದಾಳಿ ಮಾಡಿದಾಗ ಕೋಳಿ ಪಂಜ್ಯಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತರ ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದ ಜನರು ಒಟ್ಟು ಹಣ-7170/-ರೂ ಹಣ ಹಾಗೂ ಎರಡು ಹುಂಜಗಳು ಸಿಕ್ಕಿದ್ದವುಗಳನ್ನು ಜಪ್ತಿ ಮಾಡಿಕೊಂಡು ಸದ್ರಿ ಕೋಳಿ ಪಂಜ್ಯಾಟದ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ಬಂದು ಒಪ್ಪಿಸಿದ್ದು, ಹಾಗೂ ಹುಂಜ ಮಾರಾಟ ಮಾಡಿದ ಹಣ 1000 ಹಾಗೂ ಆರೋಪಿತರ ಝಡ್ತಯಲ್ಲಿ ಸಿಕ್ಕಿಂತಹ 7170 ರೂಗಳನ್ನು ಒಪ್ಪಿಸಿ ಕಾನೂನು ಕ್ರಮ ಜರುಗಿಸಿಲು ಸೂಚಿಸಿದ ಮೇರೆಗೆ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 03/2020 ಕಲಂ 87  ಕೆ,ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.

ಆತ್ಮಹತ್ಯೆಗೆ ಪ್ರಚೋದನೆ ಮತ್ತು Karnataka Money Lenders Act ಪ್ರಕರಣದ ಮಾಹಿತಿ.
ಫಿರ್ಯಾದಿ ದೀಪಾ ಗಂ: ಮಲ್ಲಿಕಾರ್ಜುನ ವಯ: 33ವರ್ಷ, ಜಾ: ಲಿಂಗಾಯತ್, ಉ: ಮನೆಗೆಲಸ, ಸಾ: ನವೋದಯ ಆಸ್ಪತ್ರೆಯ ಹತ್ತಿರ, ಯರಗೆರಾ ಲೇಔಟ್, ರಾಯಚೂರು ಇವರ ಗಂಡ ಮಲ್ಲಿಕಾರ್ಜುನ ರವರಿಗೆ ಬಡ್ಡಿ ರೂಪದಲ್ಲಿ ಒಂದು ಮನೆ ಕಟ್ಟುವ ಸಲುವಾಗಿ ಸಾಲಕೊಟ್ಟಿದ್ದು, ಅದನ್ನು ಬಡ್ಡಿಸಮೇತ ತೀರಿಸುವಂತೆ ಆಗಾಗ್ಗೆ ಅವಾಚ್ಯವಾಗಿ ಬೈಯುವುದು, ಹೊಡೆ ಬಡೆ ಮಾಡುವುದು ಮಾಡುತ್ತಾ ಫಿರ್ಯಾದಿದಾರರ ಮಾವನ ಕ್ಯಾಂಟೀನ್ ಹತ್ತಿರ ಆಗಾಗ್ಗೆ ಹೋಗಿ ಬಾಯಿಗೆ ಬಂದಂತೆ ಜನರ ಮುಂದೆ ಬಾಕಿ ಹಣಕ್ಕಾಗಿ ಬೈಯುವುದು, “ಹೊಟ್ಟೇಗೆ ಏನು ತಿನ್ನುತ್ತೀರಿ, ನಿಮಗೆ ಬುದ್ದೀ ಇಲ್ವಾ ನಮ್ಮ ಬಾಕಿ ಹಣವನ್ನು ಕೊಡೋಕೆ ಆಗೋದಿಲ್ವಾ” ಅಂತಾ ಅವಾಚ್ಯವಾಗಿ ಬೈಯುವುದು, ತನ್ನ ಗಂಡ ಮಲ್ಲಿಕಾರ್ಜುನ ರವರು ಎಲ್ಲಿ ಸಿಕ್ಕಲ್ಲಿ ಮಲ್ಲಿಕಾರ್ಜುನ @ ಮಲ್ಲಪ್ಪ, ಬೂದೆಪ್ಪ, ಮಲ್ಲೇಶಪ್ಪ ಪಲ್ಲೇದ್ ರವರು ದಾರಿಯಲ್ಲಿ ಎಲ್ಲಿಯಾದರೂ ಸಿಕ್ಕರೆ ಅವರಿಗೆ ಕೈಗಳಿಂದ ಹೊಡೆ ಬಡೆ ಮಾಡಿ ಬಟ್ಟೆ ಹರಿಯುವುದು ಮಾಡುತ್ತಿದ್ದರು, ಇದರಿಂದಾಗಿ ತನ್ನ ಗಂಡನು ತನ್ನ ಮುಂದೆ ಸಾಕಷ್ಟು ಸಾರಿ ಅತ್ತಿದ್ದು, ಅದಕ್ಕೆ ತಾನು “ಸರಿ ನಾವು ಇಂದಲ್ಲಾ ನಾವು ನಾಳೆ ದುಡಿದು ಅವರ ಹಣ ತೀರಿಸಿಬಿಡೋಣ” ಎಂದು ಬುದ್ದಿವಾದ ಹೇಳುತ್ತಿದ್ದರು, ನಿನ್ನೆ ದಿನಾಂಕ: 05.01.2020 ರಂದು ಬೆಳಿಗ್ಗೆ ಮನೆಯಲ್ಲಿರುವಾಗ ಆರೋಪಿ -3 ಮಲ್ಲೇಶಪ್ಪ ಪಲ್ಲೇದ್ ರವರು ಫೋನ್ ಮಾಡಿ ಹಣ ಕೊಡುವಂತೆ ಪೀಡಿಸುತ್ತಿದ್ದು, ಆಗ ಬೆಳಿಗ್ಗೆ 11.15 ಗಂಟೆಯ ಸುಮಾರಿಗೆ ಮನೆಯಿಂದಾ ನಗರದ ಗೋವರ್ಧನ್ ಬಾರ್ ಶಾಪಿಗೆ ಮೃತನನ್ನು ಕರೆದು ಎ-3 ಹಾಗೂ ಎ-8 ರವರು ಬೆಳಿಗ್ಗೆ 11.30 ಗಂಟೆಯ ಸುಮಾರಿಗೆ ಗೋವರ್ಧನ್ ಬಾರ್ ಹತ್ತಿರ ಮೃತ ತನ್ನ ಗಂಡನಿಗೆ ಮನಬಂದಂತೆ ಹೊಡೆ ಬಡೆ ಮಾಡಿ ಅವಾಚ್ಯವಾಗಿ ಬೈದಿದ್ದು ಈ ವಿಷಯವನ್ನು ತನ್ನ ಗಂಡ ತನಗೆ ಫೋನ್ ಮಾಡಿ ತಿಳಿಸಿದ್ದು, ಅದಕ್ಕೆ ತನ್ನ ಗಂಡನು “ತಾನು ತನ್ನ ಮನಸ್ಸು ಸರಿಯಿಲ್ಲವೆಂದು ತಾನು ಮರ್ಚೆಡ್ ಗೆ ಹೋಗಿ ಬರುವದಾಗಿ” ಮನನೊಂದುಕೊಂಡು ಫೋನ್ ಮಾಡಿದ್ದು, ಆಗ ತಾನು ಮನೆಗೆ ವಾಪಸ್ ಬರುವಂತೆ ತಿಳಿಸಿದ್ದು, ಅದಕ್ಕೆ ಆತನು ಫೋನ್ ಕಟ್ ಮಾಡಿ ಪುನಃ ತಾನು ಪೋನ್ ಮಾಡಿದರೆ ಮೃತನು ಫೋನ್ ಪಿಕ್ ಮಾಡಲಿಲ್ಲ.  ನಂತರ ನಿನ್ನೆ ದಿನಾಂಕ: 05.01.2020 ರಂದು ಸಂಜೆ 5.30 ಗಂಟೆಯ ಸುಮಾರಿಗೆ ತನ್ನ ದೂರದ ಸಂಬಂಧೀಕನಾದ ನಾಗರಾಜ್ ರವರು ತನಗೆ ಫೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ, “ಮಲ್ಲಿಕಾರ್ಜುನ ಮಾವ ಮರ್ಚೆಡ್ ಮನೆಯಲ್ಲಿ ನೇಣು ಹಾಕಿಕೊಂಡು ಸತ್ತು ಹೋಗಿದ್ದಾರೆ” ಅಂತಾ ತಿಳಿಸಿದ್ದು ಕೂಡಲೇ ತಾವೆಲ್ಲರೂ ಮರ್ಚೆಡ್ ನಲ್ಲಿಯ ಮನೆಗೆ ಬಂದು ನೋಡಲಾಗಿ ಮಣ್ಣಿನ ಮನೆಯ ಜಂತಿಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದು ತನ್ನ ಗಂಡನ ಮರಣಕ್ಕೆ ಆರೋಪಿತರು ನೀಡಿದ ಸಾಲದ ಭಾದೆಯ ಕಿರುಕುಳ ತಾಳದೇ ತನ್ನ ಗಂಡ ತನ್ನ ಜೀವನದಲ್ಲಿ ಜಿಗುಪ್ಸೆಗೊಂಡು, ಮರ್ಚೆಡ್ ನ ತಮ್ಮ ಮನೆಯೊಂದರಲ್ಲಿ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 03/2020  ಕಲಂ: 323, 504, 306 ಸಹಾ 149 IPC & 38 Karnataka Money Lenders Act 1961 & 4 Karnataka Prohibition of Charging Exorbitant Interest Act  2004  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ದಿನಾಂಕ:04.01.2020 ರಂದು ರಾತ್ರಿ 0700 ಗಂಟೆಯ ಸುಮಾರಿಗೆ ರಾಯಚೂರು ಉಂಡ್ರಾಳದೊಡ್ಡಿ ರಸ್ತೆಯಲ್ಲಿ ಆಯಾಜಪುರ್ ಗ್ರಾಮದ ಕೆರೆಯ ಕಟ್ಟೆಯ ಕೆಳಗೆ ರಾಘವೇಂದ್ರರಾವ್ ಕುಲ್ಕಾರ್ಣಿ ಇವರ  ಹೊಲದ ಹತ್ತಿರ, ಫಿರ್ಯಾದಿಯ ಅಣ್ಣನ ಮಗನಾದ ವೆಂಕಟೇಶ ಈತನು ತನ್ನ ಹಿರೋ ಹೊಂಡಾ  ಮೋಟರ್ ಸೈಕಲ್ ನಂ. ಕೆ.ಎ 36ಹೆಚ್ 5845 ನೇದ್ದರ ಮೇಲೆ ಹುಲ್ಲುತರಲು, ಆಯಾಜಪುರ್ ಕಡೆಯಿಂದ ಉಂಡ್ರಾಳದೊಡ್ಡಿ ರಸ್ತೆಯ ಎಡಬದಿಯಲ್ಲಿ ಹೊರಟಾಗ, ಹಿಂದುಗಡೆಯಿಂದ ಯಾವುದೊ ವಾಹನದ ಚಾಲಕನು ರಾಯಚೂರು ರಸ್ತೆಯ ಕಡೆಯಿಂದ ತನ್ನ ವಾಹನವನ್ನು ಜೋರಾಗಿ ನಿರ್ಲಕ್ಷತನಿಂದ ನಡೆಸಿಕೊಂಡು ಬಂದು, ವೆಂಟೇಶನ ಮೋಟರ್ ಸೈಕಲಗೆ ಹಿಂದುಗಡೆ ಟಕ್ಕರ್ ಕೊಟ್ಟಿದ್ದರಿಂದ , ವೆಂಕಟೇಶನು ಮೋಟರ್ ಸೈಕಲ್ ಸಮೇತ, ಕೆರೆಕಟ್ಟೆಯ ಕಲ್ಲಿಗೆ ಬಿದ್ದು, ತಲೆ ಹೊಡೆದು ಮೆದುಳು ಹೊರಗೆ ಬಂದು, ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು , ಟಕ್ಕರ ಕೊಟ್ಟ ವಾಹನ ಚಾಲಕನು ತನ್ನ ವಾಹನವನ್ನು ನಿಲ್ಲಿಸದೇ, ಹಾಗೇಯೆ ಮುಂದಕ್ಕೆ, ಹೋಗಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ದೂರಿನ ಮೇಲಿಂದ ಯರಗೇರಾ ಪೊಲೀಸ್ ಠಾಣೆ ಗುನ್ನೆ ನಂ.01/2020 ಕಲಂ:279.304(ಎ) ಐಪಿಸಿ ಮತ್ತು 187 ಐ.ಎಂ.ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.