Thought for the day

One of the toughest things in life is to make things simple:

5 Nov 2018

Reported Crimes


                                                              
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಪೊಲೀಸ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ, ಸಮಯ ಸ್ಥಳದಲ್ಲಿ ಆರೋಪಿ ಈರಣ್ಣ ತಂದೆ ನರಸಪ್ಪ ಕಂಬಾರ್ 28 ವರ್ಷ, ಜಾ;-ಚಲುವಾದಿ,;-ಕೂಲಿಕೆಲಸ ಹಾಗೂ ಇತರೆ 6 ಜನರು ಇಸ್ಪೇಟ್ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಪಿಐ ಸಾಹೇಬರು ಸಿಂಧನೂರುರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ ಮೇಲ್ಕಂಡ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದು ಸದರಿಯವರಿಂದ ಮತ್ತು ಕಣದಿಂದ ಇಸ್ಪೇಟ್ ಜೂಜಾಟದ ನಗದು ಹಣ 1,850/-ರೂಪಾಯಿ,52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿದ್ದು ಇರುತ್ತದೆ.ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ, ಜೂಜಾಟದ ಸಾಮಾಗ್ರಿಗಳು ಮತ್ತು ಸಿಕ್ಕಿಬಿದ್ದ ಆರೋಪಿತರೊಂದಿಗೆ ಮರಳಿ ಠಾಣೆಗೆ ಬಂದು ಹಾಜರಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ತಮ್ಮ ವಿವರವಾದ ಜ್ಞಾಪನ ಪತ್ರವನ್ನು ನೀಡಿದ್ದರ ಮೇಲಿಂದ ಮಾನ್ಯ ನ್ಯಾಯಾಧೀಶರಿಂದ ಆರೋಪಿತರ ಮೇಲೆ ಪ್ರಕರಣದ ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು ರಾತ್ರಿ 8-15 ಗಂಟೆಗೆ ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 247/2018. ಕಲಂ. 87  ಕೆ. ಪಿ. ಕಾಯಿದೆ ಅಡಿಯಲ್ಲಿ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ 03-11-2018 ರಂದು  ರಾತ್ರಿ 11-00 ಪಿ.ಎಂ ಕ್ಕೆ  ಬೋಗಾಪೂರ ಗ್ರಾಮದ ಬಸ್ ನಿಲ್ದಾಣ  ಮುಂದಿನ  ಸಾರ್ವಜನಿಕ ರಸ್ತೆಯಲ್ಲಿ  ಜನರು ದುಂಡಾಗಿ ಕುಳಿತುಕೊಂಡು ಕಣದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ ಬಗ್ಗೆ  ಗೋಪಾಲ ಪಿ ಸಿ 679 ರವರ  ಮಾಹಿತಿ ಮೇರೆಗೆ  ಹನುಮಂತ  .ಎಸ್.  ರವರು ಸಿಪಿಐ ಸಾಹೇಬರು ಸಿಂಧನೂರು ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ ಹೆಚ್.ಸಿ.124 ಹೆಚ್.ಸಿ233.346.ಪಿಸಿ-679.681.99.ರವರ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ 11-45 ಪಿ.ಎಂ ಕ್ಕೆ ದಾಳಿ ಮಾಡಿ ಅರೋಪಿ ¤gÀÄ¥Á¢ vÀA AiÀÄAPÀtÚ ªÀ, 40 eÁw £ÁAiÀÄPÀ G MPÀÌ®ÄvÀ£À ¸Á, ¨sÉÆÃUÁ¥ÀÆgÀ  ಹಾಗೂ ಇತರೆ 08 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಅವರ ವಶದಲ್ಲಿದ್ದ ಮತ್ತು ಕಣದಲ್ಲಿದ್ದ ಒಟ್ಟು ನಗದು ಹಣ ರೂ.4010 ಹಾಗೂ 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಆರೋಪಿತರೊಂದಿಗೆ ದಿನಾಂಕ 04-11-2018 ರಂದು ರಾತ್ರಿ 01-15 ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಸ್ವೀಕೃತ ಮಾಡಿಕೊಂಡು ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ.34/2018 ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಕೋರಿ ಮಾನ್ಯ  ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಜೆ.ಎಂ.ಎಫ್.ಸಿ ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ ಬರೆದುಕೊಂಡು  ಪರವಾನಿಗೆ ಬಂದ ನಂತರ ಇಂದು ದಿನಾಂಕ 04-11-2018 ರಂದು 7-15 ಪಿ.ಎಂ ಕ್ಕೆ ಸದರಿ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 262/2018 ಕಲಂ 87 ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಮರಳು ಕಳ್ಳತನಿ ಪ್ರಕರಣದ ಮಾಹಿತಿ.
ದಿನಾಂಕ: 04-11-2018 ರಂದು 2-00 ಪಿ.ಎಂ ಕ್ಕೆ ಠಾಣಾ .ಎಸ್. (ಹೆಚ್ ) ರವರು ಒಂದು ಅಕ್ರಮ ಮರಳು ಜಪ್ತಿ ಪಂಚನಾಮೆ ವರದಿ ಹಾಗೂ ಮುದ್ದೆಮಾಲನ್ನು ಮುಂದಿನ ಕ್ರಮಕ್ಕಾಗಿ ಠಾಣೆಗೆ ತಂದು ಹಾಜರುಪಡಿಸಿದ್ದುದರ ಸಾರಾಂಶವೇನೆಂದರೆ, ತಾವು ದಿನಾಂಕ: 04-11-2018 ರಂದು ತುರುವಿಹಾಳ ಪಟ್ಟಣದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ 12-45 ಪಿ.ಎಂ ಕ್ಕೆ ಹತ್ತಿಗುಡ್ಡ ರಸ್ತೆ ಕಡೆಯಿಂದ ತುರುವಿಹಾಳ ಪಟ್ಟಣ ಕಡೆಗೆ ಒಂದು Swaraj 735 X Tractor Eng No.39.1357/SYE06215  ನೇದ್ದರ ಚಾಲಕನು ಟ್ರಾಕ್ಟರ್ ಗೆ ಅಟ್ಯಾಚ್ ಇದ್ದ ನಂಬರಿಲ್ಲದ ಟ್ರಾಲಿ ನೇದ್ದರಲ್ಲಿ ರಾಜ್ಯ ಸರ್ಕಾರಕ್ಕೆ /ಪ್ರಾಧಿಕಾರಕ್ಕೆ ಯಾವುದೇ ರಾಜಧನ /ತೆರಿಗೆ/ರಾಯಲ್ಟಿ ತುಂಬದೇ ಹಾಗೂ ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯದೇ ಮತ್ತು ದಾಖಲಾತಿ ಹೊಂದದೇ ಹಳ್ಳದಲ್ಲಿ ಕಳ್ಳತನದಿಂದ ಮರಳು ತುಂಬುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ಬಗ್ಗೆ ಬೀಟ್ ಪಿ.ಸಿ 472 ರವರ ಭಾತ್ಮಿ ಮೇರೆಗೆ .ಎಸ್.    (ಹೆಚ್ ) ರವರು ಸಿಪಿಐ ಸಿಂಧನೂರು ಸಾಹೇಬರ ನಿರ್ದೇಶನದಂತೆ ಪಿಸಿ-472, 679 ರವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು ಟ್ರಾಕ್ಟರ್ ಚಾಲಕನು ಅಲ್ಲಿಂದ ಓಡಿ ಹೋಗಿದ್ದು, ನಂತರ ಟ್ರಾಕ್ಟರ್ ಹಾಗೂ ಕಳ್ಳತನದ ಮರಳನ್ನು ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮಕ್ಕಾಗಿ ಠಾಣೆಗೆ ಬಂದು ಹಾಜರುಪಡಿಸಿದ ಮೇರೆಗೆ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 261/2018  U/s  379 IPC ಪ್ರಕರಣ ದಾಖಲುಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಬಾಲಕ ಕಾಣೆಯಾದ ಪ್ರಕರಣದ ಮಾಹಿತಿ.
ಫಿರ್ಯಾದಿ ²æêÀÄw n.«ÃgÀ®Qëöäà UÀAqÀ zÀÄUÁð¥Àæ¸Ázï, ¸Á:¥ÀUÀqÀ¢¤ßPÁåA¥ï, vÁ: ¹AzsÀ£ÀÆgÀÄ ಈಕೆಯ ಮಗನಾದ ಟಿ.ಚೈತನ್ಯ ವಯ:16 ವರ್ಷ ಈತನು ಹೊಸಳ್ಳಿ ಇ.ಜೆ ಕ್ಯಾಂಪಿನ ಶ್ರೀಕ್ರಿಷ್ಣದೇವರಾಯ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಾ ಅದೇ ಶಾಲೆಯ ವಸತಿ ನಿಲಯದಲ್ಲಿದ್ದು, ದಿನಾಂಕ: 28-10-2018 ರಂದು ಮದ್ಯಾಹ್ನ 12-00 ಗಂಟೆಯಿಂದ 1-00 ಗಂಟೆಯ ಸಮಯದಲ್ಲಿ ಸದರಿ ಟಿ.ಚೈತನ್ಯ ಈತನು ಸದರಿ ಶಾಲೆಯ ವಸತಿನಿಲಯದಿಂದ ಕಾಣೆಯಾಗಿದ್ದು ಇಲ್ಲಿಯವರೆಗೆ ಹುಡುಕಾಡಿದರೂ ಪತ್ತೆಯಾಗಿರುವದಿಲ್ಲ ಕಾರಣ ಪತ್ತೆ ಮಾಡಿಕೊಡಲು ವಿನಂತಿ ಎಂದು ಕೊಟ್ಟ ಲಿಖಿತ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 246/2018, ಕಲಂ.363 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.         
ದಿನಾಂಕ 04/11/2018 ರಂದು ಸಂಜೆ 4-00 ಗಂಟೆಗೆ ಫಿರ್ಯಾದಿ ²ªÀ¥Àà vÀAzÉ ¹zÀÝ¥Àà ¨ÁåUÀªÁl ªÀAiÀiÁ: 28ªÀµÀð, eÁ: PÀÄgÀ§gÀ ¸Á: »gÉúÀtV ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಕೊಟ್ಟಿದ್ದು ಸಾರಾಂಸವೆನೆಂದರೆ ತನ್ನ ಚಿಕ್ಕಪ್ಪನ ಮಗನಾದ ಮಲ್ಲಯ್ಯ ತಂದೆ ಬೀರಪ್ಪ ವಯಾ: 30ವರ್ಷ ಈತನು ಲಿಂಗಸುಗೂರ ಪುರಸಭೆಯ ಚರಂಡಿ ಗುತ್ತೆದಾರ ಆರೋಪಿ ನಂ 1 PÉ §¸À¥Àà PÁAmÁæPÀÖgÀ ¸Á: ªÀÄ®èl ನೇದ್ದವನ ಹತ್ತಿರ ಮಶೀನ ಕೆಲಸ ಮಾಡುತ್ತಿದ್ದು ದಿನ ಬೆಳಿಗ್ಗೆ 8-00 ಗಂಟೆಗೆ ತನ್ನ ಗೆಳೆಯರೊಂದಿಗೆ  ಡ್ರೈನಜ ಕೆಲಸಕ್ಕೆ ಮಾಜಿ ಎಂ.ಎಲ್. ರವರ ಮನೆ ಕಡೆ ಕೆಲಸಕ್ಕೆ ಹೋಗಿದ್ದು, ಅಲ್ಲಿ ಕೆಲಸ ಮಾಡುವಾಗ ರಾಡುಗಳನ್ನು ಬೆಂಡು ಮಾಡಿದರೆ ಮೇಲೆ ಕರೆಂಟಿಗೆ ಟಚ್ ಆಗುತ್ತದೆ ಅಂತಾ ಆರೋಪಿ ನಂ 1,2 ನೇದ್ದವರಿಗೆ ತಿಳಿಸಿದಾಗ್ಯೂ ಸದರಿಯವರು ಎಲ್ಲಾವನ್ನು ತಾವು ನೋಡಿಕೊಳ್ಳುತ್ತೇವೆ ಲೈನು ಬಂದ್ ಮಾಡಿಸುತ್ತೇವೆ ನೀನು ಕೆಲಸ ಮಾಡು ಅಂತಾಹೇಳಿ ಲೈನ ಬಂದ್ ಮಾಡಿಸಿದೆ ಆತನಿಗೆ ಕೆಲಸಕ್ಕೆ ಹಚ್ಚಿದ್ದರಿಂದ ರಾಡ ಬೆಂಡ ಮಾಡುವಾಗ ವಿದ್ಯುತ್ ತಂತಿಗೆ ತಗುಲಿ ಶಾಕ ಹೊಡೆದು ಮದ್ಯಾಹ್ನ 12-00 ಗಂಟೆಗೆ ಮೃತಪಟ್ಟಿದ್ದು ಆರೋಪಿತರು ತಮ್ಮ ಕೆಲಸದಲ್ಲಿ ನಿರ್ಲಕ್ಷತನ ತೋರಿ ತರಾತುರಿಯಲ್ಲಿ ತನ್ನ ತಮ್ಮನಿಂದ ಕೆಲಸ ಮಾಡಿದ್ದರಿಂದ ಆತನಿಗೆ ವಿದ್ಯುತ ತಗಲು ಮೃತಪಟ್ಟಿದ್ದು ಇದೆ ಅಂತಾ ವೈಗೈರೆ ಇದ್ದುದ್ದರ ಸಾರಾಂಶದ ಮೇಲಿಂದ  ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂ. 396/2018 PÀ®A. 304(J) L.¦.¹   ಅಡಿಯಲ್ಲಿ ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದಿನಾಂಕ;-04-11-2018 ರಂದು 1845 ಗಂಟೆಗೆ ಫಿರ್ಯಾದಿದಾರರಾದ ಶ್ರೀ ದಳಪತಿ ಸಿಪಿಸಿ 246  ರಾಯಚೂರು ನಗರ ಸಂಚಾರ ಪೊಲೀಸ್ ಠಾಣೆ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ;-04-11-2018 1700 ಗಂಟೆ ಸುಮಾರಿಗೆ  ರಾಯಚೂರು ನಗರದ ಕಾಟಿ ದಾರವಾಜ ಹತ್ತಿರ ಅಪರಿಚಿತ ಬಿಳಿ ಕಾರ್ ಚಾಲಕನು ತನ್ನ ಕಾರನ್ನು ಸೂಪರ್ ಮಾರ್ಕೇಟ್ ಕಡೆಯಿಂದ ತೀನ್ ಖಂದಿಲ್ ಕಡೆಗೆ  ಹೋಗುವಾಗ ಕಾರನ್ನು  ಅತೀವೇಗವಾಗಿ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರವಾದ ರೀತಿಯಲ್ಲಿ  ಚಲಾಯಿಸಿ ನಡೆದುಕೊಂಡು ಹೊರಟಿದ ನರಸಿಂಹಲು ಈತನಿಗೆ ಟಕ್ಕರ್ ಕೊಟ್ಟಿದ್ದರಿಂದ ಆತನಿಗೆ  ತಲೆಯ ಮೇಲೆ ಭಾರೀ ರಕ್ತಗಾಯವಾಗಿ ರಕ್ತ ಸೋರಿ, ಎಡಗಣ್ಣಿ ಹುಬ್ಬಿನ ಹತ್ತಿರ ರಕ್ತಗಾಯ, ಬಲ ಹೊಕ್ಕಳದ ಹತ್ತಿರ ತರಚಿದ ಗಾಯ, ಎದೆಗೆ ತರಚಿದ ಗಾಯವಾಗಿದ್ದು ಆರೋಪಿತನು ತನ್ನ ಕಾರನು ನಿಲ್ಲಿಸದೆ ಹಾಗೇಯೇ ಕಾರ್ ಸಮೇತ ಹೋಗಿದ್ದು ಇರುತ್ತದೆ. ನಂತರ ಗಾಯಾಳುವನ್ನು 108 ವಾಹನಕ್ಕೆ ಕರೆಮಾಡಿ ಚಿಕಿತ್ಸೆ ಕುರಿತು ರಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದುಇರುತ್ತದೆ. ಕಾರಣ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಸಾರಾಂಶದ ಮೇಲಿಂದ ನಗರ ಸಂಚಾರ ಪೊಲೀಸ್ ಠಾಣಾ ಗುನ್ನೆ ನಂ. 85/2018 ಕಲಂ 279, 338 IPC & 187 IMV ACT ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಯು.ಡಿ.ಆರ್ ಪ್ರಕರಣದ ಮಾಹಿತಿ.
ದಿನಾಂಕ 04-11-2018 ರಂದು  ಸಾಯಾಂಕಾಲ 5-30 ಗಂಟೆಗೆ ಫಿರ್ಯಾದಿ ಆದೆಪ್ಪ ತಂದೆ ಶಿವನಪ್ಪ  ವಯಾಃ 42 ವರ್ಷ ಜಾತಿಃ ನಾಯಕ ಉಃ ಒಕ್ಕಲುತನ ಸಾಃ ಸಂತೆ ಬಜಾರ್ ಮಾನವಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿಯನ್ನು ತಂದು ಹಾಜರುಪಡಿಸಿದ್ದು ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ ಮೃತನು  ಫೀರ್ಯಾದಿ ಮಗನಿದ್ದು ಮೃತನಾದ ರಂಗನಾಥ ಈತನಿಗೆ ಕುಡಿಯುವ ಚಟವಿದ್ದು ಇಂದು ದಿನಾಂಕ 04-11-2018 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ತನ್ನ  ಗೆಳಯರಾದ 1] ಪ್ರಕಾಶದ ನಾಯಕ 2] ಮಾರೇಪ್ಪ ನಾಯಕ ಎಲ್ಲರೂ ಸೇರಿ ಮೋಟರ್ ಸೈಕಲ್ ಮೇಲೆ   ಚೀಕಲ ಪರ್ವಿ ಗ್ರಾಮದ ಹೊಳೆ ಹತ್ತಿರ ಹೋಗಿ ಆಂದ್ರಲ್ಲಿಂದ ಹೆಂಡವನ್ನು (ಸೆಂದಿ) ತೆಗೆದುಕೊಂಡು ಬಂದು ಕುಡಿದಿದ್ದು ಆದರೆ ಮೃತನು ಹೆಚ್ಚಿನ ಪ್ರಮಾಣದಲ್ಲಿ ಹೆಂಡವನ್ನು ಕುಡಿದಿದ್ದು  ವಾಪಸ್ ಮಾನವಿಗೆ ಚೀಕಲಪರ್ವಿ ಹೊಳೆಯಿಂದ ಬರುತ್ತಿರುವಾಗ ಇಂದು ಮಧ್ಯಾಹ್ನ 3-00 ಗಂಟೆಯ ಸುಮಾರಿಗೆ ರಂಗನಾಥ ಈತನು  ಹೊಳೆಯ  ದಂಡೆಯ  ಹತ್ತಿರ ಜೋಲಿ ಹೋಗಿ  ಬಿದ್ದಿದ್ದು ಕೂಡಲೇ ಆತನನ್ನು ಮಾನವಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವಾಗ ಆಸ್ಪತ್ರೆಯ ಸಮೀಪ ರಂಗನಾಥ ಈತನು ಮಧ್ಯಾಹ್ನ 3-45 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ ಬಗ್ಗೆ ಯಾರ ಮೇಲು ಯಾವುದೇ ಸಂಶಯ ಇರುವುದಿಲ್ಲ ದೂರು ವೈಗೆರೆ ಇರುವುದಿಲ್ಲ ಕಾರಣ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ ಮಾನವಿ ಠಾಣಾ  ಯು.ಡಿ.ಆರ್ ನಂ 32/2018 ಕಲಂ 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.