Thought for the day

One of the toughest things in life is to make things simple:

29 Aug 2020

Press Note

-:: ಪತ್ರಿಕಾ ಪ್ರಕಟಣೆ ::-

     ರಾಯಚೂರು ಜಿಲ್ಲೆಯ ಶಕ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಶಕ್ತಿನಗರ ಆರ್.ಟಿ.ಪಿ.ಎಸ್. ವಿದ್ಯುತ್ ಕೇಂದ್ರದ ಹಾರೂ ಬೂದಿಯನ್ನು ಲಾರಿ ಮತ್ತು ಟಿಪ್ಪರ್ ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತುಂಬಿಕೊಂಡು ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೇ ಸಾಗಾಣಿಕೆ ಮಾಡುತ್ತಿದ್ದುದಾಗಿ ಮತ್ತು ರಾಯಚೂರು-ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡತಡೆಯಾಗುವಂತೆ ವಾಹನಗಳನ್ನು ನಿಲ್ಲಿಸುತ್ತಿದ್ದುದಾಗಿ ಸಾರ್ವಜನಿಕರಿಂದ ದೂರುಗಳು ಬಂದಿದ್ದರಿಂದ ಇಂದು ದಿನಾಂಕ: 29.08.2020 ರಂದು ಬೆಳಿಗ್ಗೆ 11.00 ಗಂಟೆಗೆ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಸಭೆಯನ್ನು ಏರ್ಪಡಿಸಿದ್ದು ಸಭೆಯಲ್ಲಿ ಶ್ರೀ ಕೆ.ವೆಂಕಟಾಚಲಪತಿ .ಡಿ. ಆರ್.ಟಿ.ಪಿ.ಎಸ್. ಶಕ್ತಿನಗರ, ಶ್ರೀ ರಾಜಮುಡಿ ಚೀಫ್ ಎಗ್ಜಿಕ್ಯುಟಿವ್ ಆಫೀಸರ್ ಆರ್.ಟಿ.ಪಿ.ಎಸ್. ಶಕ್ತಿನಗರ, ಶ್ರೀಮತಿ ಪ್ರೇಮಲತಾ .. ಆರ್.ಟಿ.ಪಿ.ಎಸ್. ಶಕ್ತಿನಗರ ಹಾಗೂ ಶ್ರೀ ವೆಂಕಟೇಶ ತಾಲೂಕಾ ಪಂಚಾಯತಿ ಸದಸ್ಯರು ದೇವಸೂಗೂರು, ಶ್ರೀ ಸೂಗೂರೇಶ @ ತಮ್ಮುಡು ತಾಲೂಕಾ ಪಂಚಾಯತಿ ಸದಸ್ಯರು, ದೇವಸೂಗೂರು, ಮುಖಂಡರಾದ ಶ್ರೀ ನಂದಿ ಪ್ರಕಾಶ, ಶ್ರೀ ಸುರೇಶ ಮಡಿವಾಳ ತಾಲೂಕಾ ಅಧ್ಯಕ್ಷರು ಜಯ ಕರ್ನಾಟಕ ಸಂಘ, ಶ್ರೀ ರಾಜಾಸಾಬ್ ತಾಲೂಕಾ ಪ್ರಧಾನ ಕಾರ್ಯದರ್ಶಿಗಳು ಜಯ ಕರ್ನಾಟಕ ಸಂಘ, ಶ್ರೀ ಸುಭಾಷ ಮಾಜಿ ಗ್ರಾಮ ಪಂಚಾಯತಿ ಸದಸ್ಯರು, ಹಾರೂಬೂದಿ ಸಾಗಾಣಿಕೆ ಗುತ್ತಿಗೆದಾರರಾದ ಶ್ರೀ ರಾಮಪ್ಪ ಡೋಣಿ, ಶ್ರೀ ಶರಣಪ್ಪ, ಶ್ರೀ ಮುತ್ತುರಾಜ್ ಸಜ್ಜನ್, ಶ್ರೀ ದಿಲಿಪ್ ಕುಮಾರ ಶ್ರೀ ಸಿಮೆಂಟ್, ಶ್ರೀ ರಾಮಪ್ಪ ಜೇಗರಕಲ್ ಹಾಗೂ ಇತರರು ಹಾಜರಿದ್ದು, ಕೆಳಕಂಡ ಸಲಹೆ ಸೂಚನೆಗಳನ್ನು ನೀಡಲಾಯಿತು.

1) ಲಾರಿ ಮತ್ತು ಟಿಪ್ಪರ್ ಗಳಲ್ಲಿ ನಿಗಧಿಪಡಿಸಿದ ಪ್ರಮಾಣದಲ್ಲಿ ಮಾತ್ರ ಹಾರೂಬೂದಿಯನ್ನು ತುಂಬಿಕೊಂಡು ಸಾಗಾಣಿಕೆ ಮಾಡುವಂತೆ ಸೂಚಿಸಲಾಯಿತು.

2) ಲಾರಿ ಮತ್ತು ಟಿಪ್ಪರ್ ಗಳಲ್ಲಿ ಹಾರೂಬೂದಿಯನ್ನು ಸಾಗಿಸುವ ಕಾಲಕ್ಕೆ ಸದರಿ ವಾಹನಗಳ ಬಾಡಿಗಳಿಗೆ ತಾಡ್ ಪಾಲ್ ಗಳನ್ನು ಹಾಕಿಕೊಂಡು ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಲಾಯಿತು.

3) ಹಾರೂಬೂದಿ ಸ್ಟಾಕ್ ಯಾರ್ಡ್ ನಲ್ಲಿ ಬೂದಿ ಒಣಗಿ ಗಾಳಿಗೆ ಹಾರದಂತೆ ಸ್ಥಳದಲ್ಲಿ ನೀರಿನ ಸ್ಪ್ರಿಂಕ್ಲರ್ ಗಳನ್ನು ಅಳವಡಿಸುವಂತೆ ಸಂಬಂಧಪಟ್ಟ ಆರ್.ಟಿ.ಪಿ.ಎಸ್. ಅಧಿಕಾರಿಗಳಿಗೆ ಸೂಚಿಸಲಾಯಿತು.

4) ರಸ್ತೆಯ ಮೇಲೆ ಹಾರೂಬೂದಿ ಬಿದ್ದು ದೂಳು ಆಗುವ ಸಾಧ್ಯತೆ ಇದ್ದುದ್ದರಿಂದ ಪ್ರತಿದಿವಸ ಕಾಲ ಕಾಲಕ್ಕೆ ನೀರಿನ ಟ್ಯಾಂಕರ್ ಮೂಲಕ ನೀರನ್ನು ಸಿಂಪಡಿಸುವಂತೆ ಮತ್ತು ರಸ್ತೆಯನ್ನು ಸ್ವಚ್ಛಗೊಳಿಸುವಂತೆ ಆರ್.ಟಿ.ಪಿ.ಎಸ್. ಅಧಿಕಾರಿಗಳಿಗೆ ಸೂಚಿಸಲಾಯಿತು.

5) ಹಾರೂಬೂದಿ ಘಟಕದ ಒಳಗೆ ಬರುವ ಮತ್ತು ಹೊರ ಹೋಗುವ ಮೇನ್ ಗೇಟ್ ಗಳಲ್ಲಿ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸುವಂತೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಹಾರೂಬೂದಿಯನ್ನು ಸಾಗಿಸುವ ವಾಹನಗಳನ್ನು ಗೇಟ್ ಮುಖಾಂತರ ಹೊರಬಿಡದೆ ಅವುಗಳನ್ನು ವಾಪಸ್ ಸ್ಟಾಕ್ ಯಾರ್ಡ್ ಗೆ ಕಳಿಸಿಕೊಡಲು ಇನ್ನೂ ಹೆಚ್ಚಿನ ಸಿಬ್ಬಂದಿಯವರನ್ನು ನೇಮಕ ಮಾಡಲು ಆರ್.ಟಿ.ಪಿ.ಎಸ್. ಅಧಿಕಾರಿಗಳಿಗೆ ಸೂಚಿಸಲಾಯಿತು.

6) ಹಾರೂ ಬೂದಿ ತುಂಬಿಕೊಂಡು ಹೋಗಲು ಬರುವ ವಾಹನಗಳಿಂದ ಸಂಚಾರಕ್ಕೆ ತೊಂದರೆಯಾಗುತ್ತಿದ್ದರಿಂದ ಅವುಗಳ ಪಾರ್ಕಿಂಗ್ ಗಾಗಿ ಸ್ಥಳ ಗುರುತಿಸಲು ಆರ್.ಟಿ.ಪಿ.ಎಸ್. ಅಧಿಕಾರಿಗಳಿಗೆ ಸೂಚಿಸಲಾಯಿತು.

7) ಹಾರೂಬೂದಿ ಸಾಗಾಣಿಕೆ ಸುರಕ್ಷತಾ ನಿಯಮಗಳನ್ನು ಪಾಲಿಸದೇ ಇರುವ ಎಜೆನ್ಸಿಗಳ ಗುತ್ತಿಗೆ ಲೈಸೆನ್ಸ್ ಅನ್ನು ರದ್ಧುಪಡಿಸುವ ಕ್ರಮ ಜರುಗಿಸುವಂತೆ ಆರ್.ಟಿ.ಪಿ.ಎಸ್. ಅಧಿಕಾರಿಗಳಿಗೆ ಸೂಚಿಸಲಾಯಿತು.

8) ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಇರುವ, ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಚಾಲಕರು ಮತ್ತು ಮಾಲೀಕರ ವಿರುದ್ಧ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು.

ಸದರಿ ಸಭೆಯಲ್ಲಿ ಶ್ರೀ ಅಂಬಾರಾಯ ಎಮ್. ಕಮಾನಮನಿ ಸಿ.ಪಿ.. ಗ್ರಾಮೀಣ ವೃತ್ತ, ರಾಯಚೂರು ಹಾಗೂ ಶ್ರೀ ಹುಲಿಗೇಶ ಹೆಚ್. ಓಂಕಾರ್ ಪಿ.ಎಸ್.. ಶಕ್ತಿನಗರ ಠಾಣೆ ಹಾಗೂ ಗ್ರಾಮದ ಇತರೆ 50 ಜನ ಮುಖಂಡರು ಉಪಸ್ಥಿತರಿದ್ದರು.