Thought for the day

One of the toughest things in life is to make things simple:

11 Oct 2018

Press Note



ದಿನಾಂಕ 11.10.2018 ರಂದು ರಾಯಚೂರು ಬಿ.ಆರ್.ಬಿ. ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಬಿ.ಆರ್.ಬಿ ಕಾಲೇಜ್ ರಾಯಚೂರು ರವರ ಸಹಯೋಗದಲ್ಲಿ ಮಾನವ ಕಳ್ಳ ಸಾಗಣಿಕೆ ತಡೆ ಕುರಿತು ಅರಿವು/ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

     ಸದರಿ ಕಾರ್ಯಕ್ರಮವು ಶ್ರೀ ಡಿ.ಕಿಶೋರ್ ಬಾಬು. ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರ ಅಧ್ಯಕ್ಷತೆಯಲ್ಲಿ ಜರುಗಿದ್ದು, ಉದ್ಘಾಟನೆಯನ್ನು ಗೌರವಾನ್ವಿತ ಸನ್ಮಾನ್ಯ ಶ್ರೀ ಬೈಲೂರು ಶಂಕರ ರಾಮಾ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗು ಅಧ್ಯಕ್ಷರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಯಚೂರು ರವರು ನೇರವೇರಿಸಿರುತ್ತಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಎಂ.ಸಿ ನಾಡಗೌಡ,ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗು ಕಾರ್ಯದಶರ್ಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧೀಕಾರ, ರಾಯಚೂರು. ಶ್ರೀ ಶ್ರೀನಿವಾಸ್ ಸುವರ್ಣ, ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಧೀಶರು, ರಾಯಚೂರು.  ಶ್ರೀ ಎಮ್. ನಾಗರಾಜ್ ಹಿರಿಯ ವಕೀಲರು ಹಾಗು ಕಾರ್ಯದರ್ಶಿಗಳು ತಾರನಾಥ ಶಿಕ್ಷಣ ಸಂಸ್ಥೆ, ರಾಯಚೂರು. ಶ್ರೀ ರತಿಲಾಲ್ ಪಟೇಲ್ ಕಾರ್ಯದರ್ಶಿಗಳು, ಆಡಳಿತ ಮಂಡಳಿ, ಬಿ.ಆರ್.ಬಿ ಕಾಲೇಜ್, ರಾಯಚೂರು, ಶ್ರೀ ಟಿ.ನಾರಾಯಣಸ್ವಾಮಿ, ಎಸ್.ಸಿ.ಎ.ಬಿ ಕಾನೂನು, ಲಾ ಕಾಲೇಜ್ ರಾಯಚೂರು, ಶ್ರೀ ಜಿ.ಹರೀಶ ಪೊಲೀಸ್ ಉಪಾಧೀಕ್ಷಕರು, ರಾಯಚೂರುರವರು ಹಾಜರಿದ್ದರು.

     ಕಾರ್ಯಕ್ರಮದಲ್ಲಿ ಮಾನವ ಕಳ್ಳ ಸಾಗಣಿಕೆ ಅಪರಾಧ ತಡೆಗಟ್ಟುವ ಕುರಿತು ಪ್ರಸ್ತುತವಾಗಿ ಚಾಲ್ತಿಯಲ್ಲಿರುವ ಕಾನೂನಿನ ಕಲಂಗಳನ್ವಯ ಅಪರಾಧ ಮತ್ತು ಅಪರಾಧಕ್ಕೆ ಸಂಬಂಧಿಸಿದ ಶಿಕ್ಷೆಯ ಕುರಿತು ಮತ್ತು ಇಂತಹ ಚಟುವಟಿಕೆಗಳನ್ನು ಹತ್ತಿಕ್ಕಲು ಕಾನೂನಿನ ಅರಿವು/ನೆರವಿನ ಮೂಲಕ ಕೈಕೊಳ್ಳಬಹುದಾದ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು/ಜಾಗೃತಿ ಮೂಡಿಸಲಾಗಿರುತ್ತದೆ.

     ಈ ಕಾರ್ಯಕ್ರಮದಲ್ಲಿ ಸುಮಾರು 250-300ಜನ ಬಿ.ಎ/ಬಿ.ಕಾಂ/ಎಲ್ಎಲ್ಬಿ. ವಿದ್ಯಾರ್ಥಿಗಳು ಭಾಗವಹಿಸಿದ್ದು, ನಿರೂಪಣೆಯನ್ನು ಶ್ರೀ.ಎಂ.ಡಿ.ಫಸಿಯುದ್ದೀನ್, ಸಿಪಿಐ. ಪೂರ್ವ ವೃತ್ತ, ರಾಯಚೂರು ರವರು ನಡೆಸಿಕೊಟ್ಟಿದ್ದು, ಸದರಿ ಕಾರ್ಯಕ್ರಮವು ಬೆಳಿಗ್ಗೆ10:00ಗಂಟೆಗೆ ಪ್ರಾರಂಭವಾಗಿ 11:00ಗಂಟೆಗೆ ಮುಕ್ತಾಯಗೊಂಡಿರುತ್ತದೆ.