Thought for the day

One of the toughest things in life is to make things simple:

27 Nov 2020

Reported Crimes

 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ಕಳುವಿನ ಪ್ರಕರಣದ ಮಾಹಿತಿ:

      ಫಿರ್ಯಾದಿದಾರರು ಶ್ರೀ ಶರಣಬಸವ ತಂದೆ ಈಶಪ್ಪ ಹಳೇಗೌಡ್ರು, ವಯ:33, ಜಾ:ಲಿಂಗಾಯತ್, : ಕಿರಾಣಿ ಅಂಗಡಿ, ಸಾ:ಪಗಡದಿನ್ನಿ ಗ್ರಾಮ, ತಾ:ಸಿಂಧನೂರು ಪಗಡದಿನ್ನಿ ಗ್ರಾಮದಲ್ಲಿರುವ ತಮ್ಮ ಮನೆಗೆ ಬೀಗ ಹಾಕಿಕೊಂಡು ಮಗನ ಜವಳ ಕಾರ್ಯಕ್ಕೆ ತಮ್ಮ ಕುಟುಂಬದೊಂದಿಗೆ ಕಲಬುರಗಿಗೆ ಶರಣಬಸವೇಶ್ವರ ದೇವಸ್ಥಾನಕ್ಕೆ ಹೋಗಿದ್ದಾಗ ದಿನಾಂಕ:25-11-2020 ರಂದು ಮದ್ಯಾಹ್ನ 2-00 ಗಂಟೆಯ ನಂತರದಿಂದ ದಿನಾಂಕ:26-11-2020 ರಂದು ಸಾಯಂಕಾಲ 6-50 ಗಂಟೆಗಿಂತ ಮುಂಚಿತ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿದಾರರ ಸದರಿ ಮನೆಯ ಹಿಂದಿನಿಂದ ಅಡಿಗೆ ಮನೆಯ ಗೋಡೆಯ ಸಿಮೆಂಟಿನ ಕಿಟಕಿಯನ್ನು ಒಡೆದುಕೊಂಡು ಮನೆಯೊಳಗೆ ಹೋಗಿ ಮನೆಯಲ್ಲಿ ಬೆಡ್ ರೂಮ್ ನಲ್ಲಿದ್ದ ಗಾಡ್ರೇಜ್(ಬೀರುವಾ) ಬೀಗ ಹಾಕದೇ ಮುಚ್ಚಿದ್ದ ಡೋರ್ ತೆರೆದುಕೊಂಡು, ಗಾಡ್ರೇಜ್(ಬೀರುವಾ) ಲಾಕರ್ ನ್ನು ಗಾಡ್ರೇಜ್(ಬೀರುವಾ)ದಲ್ಲಿ ಡಬ್ಬಿಯಲ್ಲಿಟ್ಟಿದ್ದ ಕೀಲಿಯಿಂದ ತೆರೆದುಕೊಂಡು ಸದರಿ ಲಾಕರ್ ನಲ್ಲಿಟ್ಟಿದ್ದ 105 ಗ್ರಾಂ (10.5 ತೊಲೆ) ತೂಕವುಳ್ಳು ಬಂಗಾರದ ಆಭರಣಗಳು .ಕಿ.ರೂ.472500/-, 440 ಗ್ರಾಂ(44 ತೊಲೆ) ತೂಕವುಳ್ಳ ಬೆಳ್ಳಿಯ ಆಭರಣಗಳು .ಕಿ.ರೂ.22,000/- ಮತ್ತು 1,00,000/- ರೂ ನಗದು ಹಣವನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಎಂದು ಕೊಟ್ಟ ಲಿಖಿತ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ:198/2020, ಕಲಂ:454, 457, 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ವರದಕ್ಷಣೆ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣದ ಮಾಹಿತಿ:

            ಫಿರ್ಯಾದಿಗೆ ದಿನಾಂಕ 23.05.2013 ರಂದು ಆರೋಪಿ ನಂ 1 ನೇದ್ದವನೊಂದಿಗೆ ಮದುವೆಯಾಗಿದ್ದು, ಮದುವೆ ಕಾಲಕ್ಕೆ 2 ತೊಲೆ ಬಂಗಾರ ಹಾಗೂ ಎರಡು ಎಕರೆ ಜಮೀನು ವರದಕ್ಷಣೆಯಾಗಿ ಕೊಡುತ್ತೇವೆಂದು ಮಾತನಾಡಿ ಬಂಗಾರ ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನಂತರದ ದಿನಗಳಲ್ಲಿ ಆರೋಪಿ ನಂ 1 ನೇದ್ದವನು ಕುಡಿದು ಬಂದು ತನ್ನ ಆರೋಪಿ ನಂ 2 ರಿಂದ 4 ನೇದ್ದವರ ಕುಮ್ಮಕ್ಕಿನಿಂದ ಹಾಗೂ ಚಾಡಿ ಮಾತುಗಳನ್ನು ಕೇಳಿ ಲೇ ಸೂಲೇ ನಿನ್ನ ತವರು ಮನೆಯವರು ನನಗೆ ಎರಡು ಎಕರೆ ಜಮೀನು ವರದಕ್ಷಣೆಯಾಗಿ ಕೊಡುತ್ತಾರೆಂದು ಮಾತುಕತೆ ಮಾಡಿದ್ದಾರೆ ಇನ್ನೂವರೆಗೂ ನನಗೆ ಹೊಲ ಕೊಟ್ಟಿಲ್ಲ ಅಂತಾ ದಿನಾಲು ಹೊಡೆ ಬಡೆ ಮಾಡುತ್ತಾ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದು, ನಂತ ದಿನಾಂಕ 29.09.2020 ರಂದು ಬೆಳಿಗ್ಗೆ 9.45 ಗಂಟೆಗೆ ಆರೋಪಿ ನಂ 1 ನೇದ್ದವನು ಫಿರ್ಯಾದಿಯೊಂದಿಗೆ ಜಗಳ ತೆಗೆದು ಆಕೆಯನ್ನು ಮನೆಯಿಂದ ಹೊರಗಡೆ ಬಿಡದೇ ಕೊಲೆ ಮಾಡುವ ಉದ್ದೇಶದಿಂದ ಮನೆಯ ಸೀಲಿಂಗ್ ಫ್ಯಾನಿಗೆ ಸೀರಿ ಕಟ್ಟಿದ್ದು, ಆಗ ಫಿರ್ಯಾದಿಗೆ ಭಯವಾಗಿದ್ದರಿಂದ ಚಿರಾಡಿದಾಗ ಆಕೆಯ ಬಾಯಿಯನ್ನು ಆರೋಪಿ ನಂ 3, 4 ನೇದ್ದವರು  ಮುಚ್ಚಿ ಹಿಡಿದುಕೊಂಡಿದ್ದರಿಂದ ಆರೋಪಿ ನಂ 1 ನೇದ್ದವನು ಫಿರ್ಯಾದಿಯ ಕುತ್ತಿಗೆಗೆ ಸೀರೆ ಕಟ್ಟಿ ನೇಣು ಹಾಕಿದಾಗ ಫಿರ್ಯಾದಿಯ ಹತ್ತಿರ 1 ಲಕ್ಷ ಹಣ, 6 ತೊಲೆ ಬಂಗಾರದ ಸಾಮಾನುಗಳು ಇದ್ದವು. ಗಲಾಟೆ ನೋಡಿ ಮನೆಯ ಪಕ್ಕದವರು ಬಂದು ಸೀರೆಯನ್ನು ಕಟ್ ಮಾಡಿ ಕೂಡಲೇ ಆಕೆಯನ್ನು ಹ.ಚಿ.ಗ ಕಂಪನಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಅಲ್ಲಿಂದ ರಾಯಚೂರಿನ ಕಣ್ವ ಆಸತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಘಟನೆ ಬಗ್ಗೆ ಫಿರ್ಯಾದಿದಾರಳು ತಮ್ಮ ಮನೆಯವರೊಂದಿಗೆ ವಿಚಾರಿಸಿ ತಡವಾಗಿ ಠಾಣೆಗೆ ಬಂದು ಲಿಖಿತ ದೂರನ್ನು ಸಲ್ಲಿಸಿದ ಮೇರೆಗೆ ಹಟ್ಟಿ ಠಾಣೆಯಲ್ಲಿ 157/2020 PÀ®A 498(J), 323, 307, 504, 109 ¸À»vÀ 34 L¦¹ & PÀ®A 3 & 4 r.¦ PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.