Thought for the day

One of the toughest things in life is to make things simple:

15 Feb 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

zÉÆA© ¥ÀæPÀgÀtzÀ ªÀiÁ»w
ದಿನಾಂಕ-14/02/2020 ರಂದು ರಾತ್ರಿ 08-30 ಗಂಟೆ ಸುಮಾರಿಗೆ ಸಿಂಧನೂರು ಸರಕಾರಿ ಆಸ್ಪತ್ರೆಯಿಂದ ಫೋನ್ ಮೂಲಕ ಜಗಳದಲ್ಲಿ ಗಾಯಗೊಂಡ ದೇವಪ್ಪ ಈತನು ಚಿಕಿತ್ಸೆ ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ವಿಚಾರಣೆ  ಕುರಿತು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುವನ್ನು ವಿಚಾರಿಸಲು ಲಿಖಿತ ದೂರು ಹಾಜರುಪಡಿಸಿದ್ದು ಸಾರಾಂಶವೇನೆಂದರೆ, ಪಿರ್ಯಾಧಿದಾರನು ಆರೋಪಿ ರವಿಕುಮಾರ ಈತನ ಅಕ್ಕನ ಮಗನಿರುತ್ತಾನೆ. ಪಿರ್ಯಾಧಿದಾರರ ಮನೆ ಪಕ್ಕದಲ್ಲಿ ಆರೋಪಿತರ ಖಾಲಿ ಜಾಗವಿದ್ದು ಈ ಜಾಗದ ವಿಷಯದಲ್ಲಿ ಆರೋಪಿತರು ಆಗಾಗ ಪಿರ್ಯಾಧಿದಾರರೊಂದಿಗೆ ಜಗಳ ಮಾಡುತ್ತಾ ಬಂದಿರುತ್ತಾರೆ. ಅಲ್ಲದೆ ಜಾಲವಾಡಗಿ ಸೀಮಾದಲ್ಲಿರುವ ಪಿರ್ಯಾಧಿದಾರರ ಹೊಲದಲ್ಲಿ ಆರೋಪಿತರು ಈ ಹೊಲದಲ್ಲಿ ನಮಗೆ ಭಾಗ ಬರುತ್ತದೆ ಅಂತಾ ತಕರಾರು ಮಾಡುತ್ತಾ ಬಂದಿರುತ್ತಾರೆ. ಪಿರ್ಯಾಧಿದಾರರು ಆರೋಪಿತರಿಗೆ ಅಂಜಿಕೊಂಡು ತಾವು ಲೀಜಿಗೆ ಮಾಡಿದ ಹೊಲದಲ್ಲಿ ಗುಡಿಸಲು ಹಾಕಿಕೊಂಡು ವಾಸವಾಗಿದ್ದು ಆಗಾಗ ಆರೋಪಿತರು ಪಿರ್ಯಾಧಿದಾರರ ವಾಸವಾಗಿದ್ದ ಸ್ಥಳಕ್ಕೆ ಬಂದು ಒಂದಿಲ್ಲ ಒಂದುದಿನ ನಿಮ್ಮನ್ನು ಸಾಯಿಸಿ ಬಿಡುತ್ತೇವೆ ಅಂತಾ ಕೊಲೆ ಬೇದರಿಕೆ ಹಾಕುತ್ತಾ ಬಂದಿರುತ್ತಾರೆ. ಆದರೂ ಸಹ ಪಿರ್ಯಾಧಿದಾರರು ಸಹಿಸಿಕೊಂಡು ಸುಮ್ಮನೆ ಇದ್ದರು ದಿನಾಂಕ-14/02/2020 ರಂದು ಪಿರ್ಯಾಧಿದಾರನು ನಮ್ಮ ಹೊಲದಲ್ಲಿ ಜೋಳದ ರಾಶಿಯನ್ನು ಬೆಳ್ಳಿಗನೂರು ಗ್ರಾಮದಲ್ಲಿರುವ ತಮ್ಮ ಮನೆಗೆ ಹಾಕಲು ಕೂಲಿ ಜನರನ್ನು ಕರೆದುಕೊಂಡು ಬರಲು ಬೆಳ್ಳಿಗನೂರು ಶಾಲೆಯ ಹತ್ತಿರ ಬಂದಾಗ ಅಲ್ಲಿ ಆರೋಪಿ ರವಿಕುಮಾರ ಮತ್ತು ಮಹೇಂದ್ರ ಇವರನ್ನು ನೋಡಿ ಅಂಜಿಕೊಂಡು ಹೊಲಕ್ಕೆ ಹೋಗಲು ಬಳಗಾನೂರು ಕೊರವರ ಹೊಲದ ಹತ್ತಿ ಹೊಲದಿಂದ ಹೋಗುತ್ತಿರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಪಿರ್ಯಾಧಿದಾರನಿಗೆ ಹಿಂದಿನಿಂದ ಬಂದು ಎಲೇ ಸೂಳೇ ಮಗನೇ ಎಲ್ಲಿಗೆ ಓಡಿ ಹೋಗುತ್ತಿ ಇವತ್ತು ನಿನ್ನನ್ನು ಮುಗಿಸಿಬಿಡುತ್ತೇವೆ ಅಂತಾ ಜಗಳ ತೆಗೆದು ಆರೋಪಿತರು ಪಿರ್ಯಾಧಿದಾರನಿಗೆ ಹಣೆಗೆ ಕೊಡಲಿಯಿಂದ ಹೋಡೆದಿದ್ದರಿಂದ ಭಾರಿ ರಕ್ತಗಾಯವಾಗಿದ್ದು ಅಲ್ಲದೆ ರಾಡಿನಿಂದ,ಕ್ರಿಕೇಟ್ ಸ್ಟಂಪ್ ದಿಂದ ಕೈಗಳಿಗೆ ಹೋಡೆದಿದ್ದರಿಂದ ಒಳಪೆಟ್ಟಾಗಿ ಮುರಿದಂತಾಗಿದ್ದು ಅಲ್ಲದೆ ಎರಡು ಮೊಣಕಾಲಿಗೆ ಒಳಪೆಟ್ಟಾಗಿದ್ದು ಇರುತ್ತದೆ. ನಂತರ ಆರೋಪಿತರಲ್ಲರೂ ಕೈಯಿಂದ ಬೆನ್ನಿಗೆ ಹೋಡೆದು ಕಾಲಿನಿಂದ ಎದೆಗೆ ವದ್ದಿದ್ದರಿಂದ ಒಳಪೆಟ್ಟಾಗಿದ್ದು ಇರುತ್ತದೆ. ನಂತರ ಆರೋಪಿತರು ಸೂಳೇ ಮಕ್ಕಳೇ ಇವತ್ತು ಉಳಿದುಕೊಂಡಿದ್ದಿ ಇನ್ನೊಮ್ಮೆ ಊರಲ್ಲಿ ಇದ್ದುಕೊಂಡು ಹೇಗೆ ಬಾಳೆ ಮಾಡುತ್ತಿ ನೋಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ. ಮತ್ತು ಆರೋಪಿತರು ಮೋಟರ್ ಸೈಕಲ್ ಕೆ.ಎ-36 ಇ.ಟಿ-3687 ನೇದ್ದರ ಮೇಲೆ ಜಗಳಕ್ಕೆ ಬಂದಿದ್ದು ಇರುತ್ತದೆ. ನಂತರ 108 ವಾಹನದಲ್ಲಿ ಚಿಕಿತ್ಸೆ ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿದ್ದು ಇರುತ್ತದೆ. ಆರೋಪಿತರೆಲ್ಲರೂ ಪಿರ್ಯಾಧಿದಾರನನ್ನು ಕೊಲೆ ಮಾಡುವ ಉದ್ದೇಶದಿಂದ ಜಗಳ ತೆಗೆದು ಕೊಡಲಿ,ರಾಡು,ಕ್ರಿಕೇಟ್ ಸ್ಟಂಪ್,ಕಟ್ಟಿಗೆಯಿಂದ ಹೊಡೆದು ರಕ್ತಗಾಯ ಪಡಿಸಿದ್ದು ಇರುತ್ತದೆ. ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸ ಬೇಕು ಅಂತಾ ಇದ್ದ ಲಿಖಿತ ದೂರಿನ  ಸಾರಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ-15/2020. ಕಲಂ-143,147,148,323,326,307,504,506, ಸಹಿತ 149  ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ 14/02/2020 ರಂದು 19.45 ಗಂಟೆಗೆ ಮಾನವಿ ಸರಕಾರಿ ಆಸ್ಪತ್ರೆಯಿಂದ ಫೋನ್ ಮಾಡಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ನಾಲ್ಕು ಜನರು ಚಿಕಿತ್ಸೆ ಕುರಿತು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ನೋಡಿ ಅವರ ಪೈಕಿ ಮಂಜುಳಾ ಈಕೆಯನ್ನು ವಿಚಾರಣೆ ಮಾಡಿ ಹೇಳಿಕೆ ದೂರನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ಫಿರ್ಯಾದಿ ಮತ್ತು ಆಕೆಯ ಗಂಡ  ಮತ್ತು ಮಗಳು ಐಶ್ವರ್ಯ ಕೂಡಿಕೊಂಡು ತಮ್ಮ ಹೆಚ್.ಎಫ್.ಡಿಲಕ್ಷ ಮೋಟಾರ್ ಸೈಕಲ್ ನಂ ಕೆ.ಎ.36/ಈ.ಕೆ.2461 ರ ಮೇಲೆ ನೀರಮಾನವಿ ಜಾತ್ರೆಗೆ ಬಂದು ಜಾತ್ರೆ ಮುಗಿಸಿಕೊಂಡು ಸಾಯಂಕಾಲ ವಾಪಾಸ ತಮ್ಮ ಊರಿಗೆ ವಾಪಾಸ ಹೋಗುವಾಗ  ತನ್ನ ಗಂಡನು ನಿಧಾನವಾಗಿ ಮೋಟಾರ್ ಸೈಕಲ್ಲನ್ನು ನೆಡೆಯಿಸಿಕೊಂಡು ರಸ್ತೆ ಎಡಬದಿಗೆ ಹೊರಟಾಗ ಎದುರುಗಡೆಯಿಂದ ರಾಜೇಶ ತಂದೆ ಈರಣ್ಣ ನಾಯಕ  ಈತನು ತನ್ನ ಹಿಂದೆ ತನ್ನ ಹೆಂಡತಿಯನ್ನು ಕೂಡಿಸಿಕೊಂಡು ತನ್ನ ನಂಬರ್ ಇಲ್ಲದ ಬೂದು ಬಣ್ಣದ ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್  ನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ಎಡಗಡೆ ಹೋಗುವದನ್ನು ಬಿಟ್ಟು ಬಲಗಡೆ ಬಂದವನೇ ತಮ್ಮ ಮೋಟಾರ್ ಸೈಕಲ್ಲಿಗೆ ಢಿಕ್ಕಿ  ಕೊಟ್ಟಿದ್ದರಿಂದ ಎರಡು ಮೋಟಾರ್ ಸೈಕಲ್ ಗಳು ಕೆಳಗೆ  ಬಿದ್ದಿದ್ದರಿಂದ  ಫಿರ್ಯಾದಿ, ಆಕೆಯ ಗಂಡ ಮಲ್ಲಿಕಾರ್ಜುನ ಹಾಗೂ ಮಗಳು ಐಶ್ವರ್ಯಳಿಗೆ  ಸಾದಾ ಸ್ವರೂಪದ ರಕ್ತಗಾಯಗಳಾಗಿದ್ದು  ಮತ್ತು ಢಿಕ್ಕಿಕೊಟ್ಟ ಮೋಟಾರ್ ಸೈಕಲ್ ಸವಾರ ರಾಜೇಶನಿಗೆ ತೀವೃ ಸ್ವರೂಪದ ರಕ್ತಗಾಯಗಳಾಗಿದ್ದು ಇರುತ್ತದೆ. ಕಾರಣ ರಾಜೇಶನ ಮೇಲೆ ಕಾನೂನು  ಕ್ರಮ  ಜರುಗಿಸಲು  ವಿನಂತಿ. ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 33/2020 ಕಲಂ 279.337,338. .ಪಿ,ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ವಾಹನ ಕಳುವಿನ ಪ್ರಕಣದ ಮಾಹಿತಿ.
ದಿನಾಂಕ 14.02.2020 ರಂದು ಸಾಯಂಕಾಲ 7-00 ಗಂಟೆಗೆ ಫಿರ್ಯಾದಿ ಶ್ರೀ ಶಿವರಾಜ ತಂದೆ ಮಹಾದೇವಪ್ಪ, ವಯಾ: 48 ವರ್ಷ, ಲಿಂಗಾಯತ್, ಉಪ-ನೊಂದಣಿ ಕಾರ್ಯಾಲಯದಲ್ಲಿ ದಸ್ತಾಬರಹಗಾರರ ಕೆಲಸ, ಸಾ: ಮನೆ ನಂ 1-11-154/95 ಬೆಲ್ಲಂ ಕಾಲೋನಿ ರಾಯಚೂರು ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಲಿಖಿತ ದೂರು ಹಾಜರು ಪಡಿಸಿದ್ದರ ಸಾರಾಂಶವೆನೆಂದರೆ, ಫಿರ್ಯಾದಿದಾರರು ದಿನಾಂಕ 12.02.2020 ರಂದು ಬೆಳಿಗ್ಗೆ 10-30 ಗಂಟೆಗೆ ತಮ್ಮ ಗೆಳೆಯನಾದ ರವೀಂದ್ರ ಈತನಿಗೆ ನಗರದ ರೈಲ್ವೆ ನಿಲ್ದಾಣಕ್ಕೆ ತಮ್ಮ ಹಿರೋ ಹೆಚ್.ಎಫ್ ಡಿಲೆಕ್ಸ್ ಮೋಟಾರ್ ಸೈಕಲ್ KA-36/EQ-0726 ನೇದ್ದರ ಮೇಲೆ ಹೋಗಿ ರೈಲ್ವೆ ಪೊಲೀಸ್ ಠಾಣೆಯ ಕಂಪೌಂಡ್ ಹೊರಗಡೆ ನಿಲ್ಲಿಸಿ ರೈಲ್ವೆ ನಿಲ್ದಾಣದ ಒಳಗಡೆ ಹೋಗಿ ತನ್ನ ಗೆಳೆಯನಾಗಿ ಕೂಡಿಸಿ ವಾಪಸ್ ಬೆಳಿಗ್ಗೆ 11-00 ಗಂಟೆಗೆ ಬಂದು ನೋಡಲಾಗಿ ತಾನು ನಿಲ್ಲಿಸಿದ ಸ್ಥಳದಲ್ಲಿ ತನ್ನ ಮೋಟಾರ್ ಸೈಕಲ್ ಇರಲಿಲ್ಲಾ ತನ್ನ ಪರಿಚಯಸ್ಥರಾಗಲಿ ಅಥವಾ ಗೆಳೆಯರಾಗಲಿ ತೆಗೆದುಕೊಂಡು ಹೋಗಿರಬಹುದು ಅಂತಾ ಎಲ್ಲಾ ಕಡೆ ಹುಡಕಾಡಲಾಗಿ ಸಿಗದೇ ಇದ್ದುದ್ದರಿಂದ ದಿನಾಂಕ 12.02.2020 ರಂದು ಬೆಳಿಗ್ಗೆ 10-30 ಗಂಟೆಯಿಂದ ಬೆಳಿಗ್ಗೆ 11-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಹಿರೋ ಹೆಚ್.ಎಫ್ ಡಿಲೆಕ್ಸ್ ಮೋಟಾರ್ ಸೈಕಲ್ ನಂ KA-36/EQ-0726, ಚೆಸ್ಸಿ ನಂಬರ್: MBLHA11ATG9H52901, ಇಂಜಿನ್ ನಂಬರ್ : HA11EJG9H49630, 2016 ನೇ ಮಾಡೆಲ್ ಸಿಲ್ವರ್ ಬಣ್ಣದ ಮೋಟಾರ್ ಸೈಕಲ್ ಅದರ ಅ.ಕಿ ರೂ 28,000/- ಬೆಲೆಬಾಳುವದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಅಂತಾ ಮನೆಯಲ್ಲಿ ಹಿರಿಯರೊಂದಿಗೆ ವಿಚಾರಿಸಿ ತಡವಾಗಿ ಠಾಣೆಗೆ ಬಂದು ಸದರಿ ಕಳ್ಳತನ ಮಾಡಿಕೊಂಡು ಹೋದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ತನ್ನ ಮೋಟಾರ್ ಸೈಕಲನ್ನು ಪತ್ತೆ ಮಾಡಿಕೊಡಬೇಕಾಗಿ ಅಂತಾ ಮುಂತಾಗಿದ್ದ ದೂರಿನ ಮೇಲಿಂದ ರಾಯಚೂರು ಪಶ್ಚಿಮ ಠಾಣಾ ಗುನ್ನೆ ನಂ 23/2020, ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ದಿ.31-01-2020ರಂದು ಮುಂಜಾನೆ09-00ಗಂಟೆಗೆ ಪಿರ್ಯಾದಿ ಶಿವಪ್ಪ ತಂದೆ ಮಾನಶಯ್ಯ ಜಾತಿ-ನಾಯಕ,ವಯ-30ವರ್ಷ,ಉ-ಹಮಾಲಿ ಕೆಲಸ ಮತ್ತು ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ ನಂ: KA-05/EZ-4441ರ ಮಾಲೀಕ ,ಸಾ:ಮರಾಟ ರವರು ಸಿರವಾರದಲ್ಲಿ ದೇವದುರ್ಗ ಕ್ರಾಸ ಹತ್ತಿರ ನಾರಾಯಣರಡ್ಡಿ ಇವರ ಅಂಗಡಿ ಮುಂದೆ ತನ್ನ ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ ನಂ: KA-05/EZ-4441ನ್ನು ನಿಲ್ಲಿಸಿ ಹ್ಯಾಂಡ್ ಲಾಕ್ ಮಾಡಿಕೊಂಡು ಹಮಾಲಿ ಕೆಲಸ ಮಾಡಲು ಹೋಗಿ ಮದ್ಯಾಹ್ನ 1-00ಗಂಟೆಗೆ ಮರಳಿ ಬಂದು ನೋಡಲು ಬೆಳಿಗ್ಗೆ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿದ್ದ ತನ್ನ ಮೋಟಾರ ಸೈಕಲ್ ಇರದಿದ್ದ ರಿಂದ ಅಂದಿನಿಂದ ಇಂದಿನವರೆಗೆ ಎಲ್ಲಾ ಕಡೆಗೆ ತಿರುಗಾಡಿ ಹುಡುಕಾಡಿ ನೋಡಿದ್ದು ಮೋಟರ ಸೈಕಲ್ ಸಿಕ್ಕಿರುವದಿಲ್ಲ ಮೋಟಾರ ಸೈಕಲ್ ಗಿಳಿ ಬಣ್ಣದ್ದು ಅಂ.ಕಿ ರೂ. 30,000/- ಬೆಲೆ ಬಾಳುವದಿದೆ ಇದರ ಚೇಸ್ಸಿ ನಂ:06B16C30884 , ಇಂಜಿನ್ ನಂ:06B15M28240 ಇರುತ್ತದೆ ಯಾರೋ ಕಳ್ಳರು ದಿ.31-01-2020ರಂದು ಮುಂಜಾನೆ 09-00ಗಂಟೆಯಿಂದ ಮದ್ಯಾಹ್ನ1-00ಗಂಟೆ ಅವಧಿಯಲ್ಲಿ ಕಳುವು ಮಾಡಿಕೊಂಡು ಹೋಗಿರುತ್ತಾರೆ ಸಿಗದಿದ್ದರಿಂದ ಇಂದು  ಪಿರ್ಯಾದಿದಾರರು  ಠಾಣೆಗೆ ತಡವಾಗಿ ಬಂದು ನೀಡಿದ ದೂರಿನ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 14/2020 ಕಲಂ: 379 ಐಪಿಸಿ ಅಡಿಯಲ್ಲಿ ಪ್ರಕರಣದ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣದ ಮಾಹಿತಿ
ದಿನಾಂಕ: 14-02-2020 ರಂದು 5-00  ಪಿ.ಎಂ ಕ್ಕೆ ಪಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ಕನ್ನಡದಲ್ಲಿ ಬೆರಳಚ್ಚು ಮಾಡಿದ  ದೂರಿನ ಸಾರಾಂಶವೇನೆಂದರೆ, ಪಿರ್ಯಾದಿಯ  ಮಗನಾದ  ಕು.  ಅಮರೇಶ   ವಯ-17 ಈತನು 2019 ನೇ ಸಾಲಿನಲ್ಲಿ ಸಿಂಧನೂರಿನ ಶಂಕರ ಟ್ರಸ್ಟ ಕಾಲೇಜ್ದಲ್ಲಿ ಪಿ ಯು ಸಿ ಪ್ರಥಮ ವರ್ಷದಲ್ಲಿ  ವಿದ್ಯಾಬ್ಯಾಸ ಮಾಡುತ್ತಿದ್ದು  ದಿನಾಂಕ: 30-01-2019 ರಂದು ಬೆಳಗ್ಗೆ 11-00 ಗಂಟೆ ಸುಮಾರು ಇ ಜೆ ಬಸಾಪೂರ ಗ್ರಾಮದ ತನ್ನ  ಮನೆಯಿಂದ ಸಿಂಧನೂರಿನ  ಶಂಕರ ಟ್ರಸ್ಟ್ರ ಕಾಲೇಜಿಗೆ ಹೋಗಿ ಹಾಲ್ ಟಿಕೇಟ್ ತರುತ್ತೆನೆ ಅಂತಾ ಹೇಳಿ  ಹೋದವನು  ಇಲ್ಲಿಯವರೆಗೆ ವಾಪಸ್ ಮನೆಗೆ ಬಾರದೇ ಕಾಣೆಯಾಗಿರುತ್ತಾನೆ . ಸದರಿಯವನ್ನು ಯಾರೋ ಯಾವುದೋ ಕಾರಣಕ್ಕೆ ಅಪಹರಿಸಿಕೊಂಡು ಹೋಗಿದ್ದು, ಬಗ್ಗೆ ತಮ್ಮ ಸಂಬಂಧಿಕರಲ್ಲಿ ಹಾಗೂ ದೂರದ ಊರುಗಳಲ್ಲಿ ಸಹ ವಿಚಾರಿಸಿ ಹುಡುಕಾಡಲಾಗಿ ಇಲ್ಲಿಯವರೆಗೆ ಸಿಕ್ಕಿರುವುದಿಲ್ಲಾ , ಆದ್ದರಿಂದ ಇಂದು  ತಡವಾಗಿ ಠಾಣೆಗೆ ಬಂದು ನೀಡಿದ ಗಣಕೀಕೃತ  ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 26/2020 ಕಲಂ. 363 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೇನು.