Thought for the day

One of the toughest things in life is to make things simple:

15 Apr 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಬೆಟ್ಟಿಂಗ ಜೂಜಾಟ ಪ್ರಕರಣದ ಮಾಹಿತಿ.
ದಿನಾಂಕ 13.04.2019 ರಂದು ರಾತ್ರಿ 8.40 ಗಂಟೆಗೆ ಆರೋಪಿ ಬೋಜಪ್ಪ ತಂದೆ ಕರಿಯಪ್ಪ ವಯಾ: 42 ವರ್ಷ ಜಾ: ಮಡಿವಾಳ ಉ: ಕೂಲಿ ಸಾ: ಸರ್ವೆಂಟ್ ಕ್ವಾಟರ್ಸ ಹಟ್ಟಿ ಕ್ಯಾಂಪ್ ತನು  ಹಟ್ಟಿ ಕ್ಯಾಂಪಿನ ದಾರುವಾಲ ಸ್ಟೇಡಿಯಂ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೊಬೈಲ್ ಗಳ ಮೂಲಕ ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿ ಸಾರ್ವಜನಿಕರಿಗೆ ಮುಂಬೈ ಇಂಡಿಯನ್ಸ್ ಗೆದ್ದರೆ 1000/- ರೂಪಾಯಿಗೆ 1200/- ಹಾಗೂ ರಾಜಸ್ಥಾನ ರಾಯಲ್ಸ್ ಗೆದ್ದರೆ 1000/- ರೂ 1500/- ಕೊಡುವುದಾಗಿ ಕೂಗೂತ್ತಾ ಅವರನ್ನು ನಂಬಿಸಿ ಅವರಿಂದ ಹಣ ಪಡೆದುಕೊಂಡು ಹಾಳೆಯಲ್ಲಿ ಬರೆಯುತ್ತಾ ಕ್ರಿಕೇಟ್ ಬೆಟ್ಟಿಂಗ ಜೂಜಾಟದಲ್ಲಿ ತೊಡಗಿದ್ದಾಗ  ಸಿಪಿಐ ಲಿಂಗಸ್ಗೂರು ರವರು ಸಿಬ್ಬಂದಿ & ಪಂಚರೊಂದಿಗೆ ದಾಳಿಮಾಡಿ ಹಿಡಿದು ಆರೋಪಿತನಿಂದ 1) ಕ್ರಿಕೇಟ್ ಜೂಜಾಟದ ನಗದು ಹಣ 8100/- 2)ಒಂದು ಸ್ಯಾಮಸಂಗ್ ಮೊಬೈಲ್ ಅಕಿರೂ 3000 3)ಒಂದು ಸ್ಯಾಮಸಂಗ್ ಗ್ಯಾಲಕ್ಸಿ ಮೊಬೈಲ್ ಅಕಿರೂ 5000 4) ಒಂದು ಕ್ರಿಕೇಟ್ ಬೆಟ್ಟಿಂಗ್ ಬರೆದ ಚೀಟಿ ಅಕಿರೂ ಇಲ್ಲ  ಜಪ್ತಿಮಾಡಿಕೊಂಡಿದ್ದು, ಆರೋಪಿತನು ತಾನು ಬರೆದ ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 20/2019 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ದಿನಾಂಕ  14.04.2019 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 58/2019 ಕಲಂ. 78 (6) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುರ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ: 13/04/2019 ರಂದು ರಾತ್ರಿ 9-15 ಗಂಟೆ ಸುಮಾರಿಗೆ ಸಿಂಧನೂರ-ಗಂಗಾವತಿ ರಸ್ತೆಯ ವಿಜಯ ಬ್ಯಾಂಕ್ ಹತ್ತಿರದ ಮುಂದಿನ ರಸ್ತೆಯ ಪಕ್ಕದಲ್ಲಿ ನಿಂತಿದ್ದ ರೇಣುಕಮ್ಮಳಿಗೆ ಗಂಗಾವತಿ ರಸ್ತೆಯ ಕಡೆಯಿಂದ ಮಹಿಂದ್ರಾ ಬೋಲೆರೋ ಪಿಕ್ ಆಪ್ ಗೂಡ್ಸ್ ವಾಹನ ನಂ KA-34-B-6577 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷತನ ದಿಂದ ನಡೆಸಿಕೊಂಡು ಬಂದು ಟಕ್ಕರ ಕೊಟ್ಟು ವಾಹನದ ಗಾಲಿಯು ರೇಣುಕಮ್ಮಳ ತಲೆ ಮತ್ತು ಹೊಟ್ಟೆಯ ಮೇಲೆ ಹೋಗಿದ್ದರಿಂದ ತಲೆ ಮತ್ತು ಹೊಟ್ಟೆ ಇತರೇ ಕಡೆಗಳಲ್ಲಿ ನಜ್ಜುಗುಜ್ಜಾಗಿದ್ದು. ರಕ್ತ ಸ್ರಾವವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಆರೋಪಿತನು ತನ್ನ ವಾಹನವನ್ನು ನಿಲ್ಲಿಸದೇ ಹಾಗೆಯೇ ಹೋಗಿ ಮುಂದೆ ಶುಭಂ ಸೀರೆ ಅಂಗಡಿ ಹತ್ತಿರ ವಾಹನವನ್ನು ನಿಲ್ಲಿಸಿ ಓಡಿ ಹೋಗಿದ್ದು ಇರುತ್ತದೆ. ಅಂತಾ ಗಣಕಿಕೃತದಲ್ಲಿ ಅಳವಡಿಸಿದ ಫಿರ್ಯಾದಿಯನ್ನು ನೀಡಿದ್ದು, ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ಸಿಂಧನೂರು ಪೊಲೀಸ್ ಠಾಣಾ ಗುನ್ನೆ ನಂ 25/2019 ಕಲಂ 279.304() ಐಪಿಸಿ ರೆ/ವಿ 187 .ಎಮ್.ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.