Thought for the day

One of the toughest things in life is to make things simple:

23 Aug 2019

Press Note



Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

PÀ¼ÀÄ«£À ¥ÀæPÀgÀtzÀ ªÀiÁ»w.
ದಿ:22.08.2019 ರಂದು 1000 ಗಂಟೆಗೆ ಫಿರ್ಯಾದಿದಾರಾದ ಜಿ.ಸೂರ್ಯಪ್ರಕಾಶ ಇವರು ಠಾಣೆಗೆ ಬಂದು ಗಣಕೀಕೃತ ಫಿರ್ಯಾದಿಯನ್ನು ನೀಡಿದ್ದು, ಸಾರಾಂಶವೇನೆಂದರೆ, ದಿನಾಂಕ: 08.07.2019 ರಂದು ಬೆಳಿಗ್ಗೆ 06.00  ಗಂಟೆಯಿಂದ ದಿನಾಂಕ 13.07.2019 ರ ಬೆಳಿಗ್ಗೆ 9.00 ಗಂಟೆಯ ಮದ್ಯದ ಅವಧಿಯಲ್ಲಿ ಫಿರ್ಯಾದಿದಾರ ಮನೆಯ ಮುಂದಿನ ಬಾಗಿಲ ಕೊಂಡಿಯನ್ನು ಮುರಿದು ಒಳಗಡೆ ಪ್ರವೇಶ ಮಾಡಿ ಮನೆಯಲ್ಲಿ ಅಲ್ಮಾರದಲ್ಲಿಟ್ಟಿ 1) 30 ಗ್ರಾಂ ತೂಕವುಳ್ಳ  ಬಂಗಾರದ ಡಿಜೈನ್ ಚೈನ್ ಅ.ಕಿ.ರೂ 90.000/- 2) 25 ಗ್ರಾಂ ತೂಕವುಳ್ಳ  ಬಂಗಾರದ ತಾಳಿಸರ ಅ.ಕಿ.ರೂ 75,000/- 3) 3 ಗ್ರಾಂ ತೂಕವುಳ್ಳ ಬಂಗಾರದ ಕಿವಿಯೋಲೆ ಅ.ಕಿ.ರೂ.9000/- ಹೀಗೆ ಒಟ್ಟು 1,74,000/- ರೂಗಳ ಬೆಲೆಬಾಳುವುದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಾರಣ ಕಳುವಾದ ನಮ್ಮ ಮಾಲನ್ನು ಹುಡುಕಿಕೊಟ್ಟು ಕಳ್ಳತನ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಅಂತಾ ಮುಂತಾಗಿರುವ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾರ್ಕೇಟ್ ಯಾಡ್ ಪೊಲೀಸ್ ಠಾಣಾ ಗುನ್ನೆ ನಂ.59/2019 ಕಲಂ: 454, 457,380 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಕೆ ಕೈಗೊಂಡಿರುತ್ತಾರೆ.

¸ÀA±ÀAiÀĸÀàzÀ ªÀåQÛAiÀÄ §AzsÀ£À ¥ÀæPÀgÀtzÀ ªÀiÁ»w.
ಫಿರ್ಯಾದಿದಾರರಾದ ರವಿರಾಜ ಹೆಚ್.ಸಿ. 320 ಗ್ರಾಮೀಣ ಪೊಲೀಸ್ ಠಾಣೆ, ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ರವರು ಮತ್ತು ಶ್ರೀ ನಾಗಪ್ಪ ಹೆಚ್.ಸಿ.74 ರವರನ್ನು ಕರೆದುಕೊಂಡು ಇಂದು ದಿನಾಂಕ: 23.08.2019 ರಂದು ಬೆಳಗಿನ ಜಾವ 4.00 ಗಂಟೆಗೆ ಯರಮರಸ್ ಹಾಗೂ ಯರಮರಸ್ ಕ್ಯಾಂಪ್ ಏರಿಯಾದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ್ಗೆ ಪ್ರತಿವಾದಿಯು ದಿನಾಂಕ: 23.08.2019 ರಂದು ಬೆಳಗಿನ ಜಾವ 5.00 ಗಂಟೆಯ ಸುಮಾರಿಗೆ ಯರಮರಸ್ ಗ್ರಾಮದಲ್ಲಿ ಮನೆಗಳ ಮುಂದೆ ಹಿಂದೆ ಸಂಶೆಯಾಸ್ಪದ ರೀತಿಯಲ್ಲಿ ಅವಿತು ತನ್ನ ಇರುವಿಕೆಯನ್ನು ಮರೆ ಮಾಚುತ್ತಿರುವುದನ್ನು ನೋಡಿ ಅವರಿಗೆ ಬೆನ್ನಟ್ಟಲು ಅವರು ಸಮವಸ್ತ್ರದಲ್ಲಿದ್ದ ಅವನು ಪೊಲೀಸರನ್ನು ನೋಡಿ ಓಡಿಹೊಗಲು ಪ್ರತ್ನಿಸಿದಾಗ ತಾವು ಅವನನ್ನು ಬೆನ್ನು ಹತ್ತಿ ಸ್ಥಳಲ್ಲಿಯೇ ಹಿಡಿದುಕೊಂಡು ವಿಚಾರಿಸಲು ಅವನು ತನ್ನ ಹೆಸರನ್ನು ತಪ್ಪು ತಪ್ಪಾಗಿ ಹೇಳುತ್ತಾ ಕೊನೆದಾಗಿ ತಮ್ಮ ಹೆಸರನ್ನು ಬಸವರಾಜ ತಂ: ಯಲ್ಲಪ್ಪ ವಯ: 34 ವರ್ಷ, ಜಾ: ಮಡಿವಾಳ, ಉ: ಡ್ರೈವರ್ ಸಾ: ಸುಣ್ಣದ ಕಲ್ ತಾ: ದೇವದುರ್ಗ, ಜಿ: ರಾಯಚೂರು ಅಂತಾ ತಿಳಿಸಿದ್ದು, ಸದರಿಯವನನ್ನು ಇಂತಹ ರಾತ್ರಿ ವೇಳೆಯಲ್ಲಿ ಹಾಗೇ ಬಿಟ್ಟಿದ್ದೇಯಾದರೆ ಸ್ವತ್ತಿಗೆ ಸಂಬಂದಪಟ್ಟ ಯಾವುದಾದರು ಅಪರಾಧ ಮಾಡುವ ಸಂಭವ ಕಂಡು ಬಂದಿದ್ದರಿಂದ ಮುಂಜಾಗ್ರತೆ ಕ್ರಮಕ್ಕಾಗಿ ಸದರಿಯವನನ್ನು ಹಿಡಿದುಕೊಂಡು ಠಾಣೆಗೆ ಕರೆತಂದು ಈ ಬಗ್ಗೆ ನೀಡಿದ ದೂರಿನ ಮೇಲಿಂದ ಈ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.