Thought for the day

One of the toughest things in life is to make things simple:

2 Feb 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

gÀ¸ÉÛ C¥ÀWÁvÀ ¥ÀæPÀtzÀ ªÀiÁ»w.

ದಿ.02.02.19 ರಂದು 00-15 ಎಎಂ ಗಂಟೆಗೆ ಸರಕಾರಿ ಆಸ್ಪತ್ರೆ ಸಿಂಧನೂರಿನಿಂದ ಡೇತ್ ಎಂ.ಎಲ್.ಸಿ ಬಂದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಗಾಯಾಳು ವೀರೇಶ ಹುಲ್ಲೂರು ಸಾ;-ಬಿಲ್ಗಾರಓಣಿ.ಕಾರಟಗಿ ಈತನನ್ನು ವಿಚಾರಿಸಿ ಹೇಳಿಕೆ ಪಿರ್ಯಾದಿ ಮಾಡಿಕೊಂಡಿದ್ದು, ಸಾರಾಂಶವೇನೆಂದರೆ, ತಾನು ತನ್ನ ಸ್ನೇಹಿತ ಅಂಬಣ್ಣ ಕೂಡಿಕೊಂಡು ಈ ದಿನ ರಾತ್ರಿ 9-30 ಗಂಟೆಗೆ ಕಾರಟಗಿಯಿಂದ ಸಿರುಗುಪ್ಪದಲ್ಲಿರುವ ಸ್ನೇಹಿತ ರಾಮು ಈತನನ್ನು ಬೇಟಿಯಾಗಿ ಬರಲು ಅಂಬಣ್ಣನೊಂದಿಗೆ ಅಂಬಣ್ಣನ ಹಿರೋ ಸ್ಪ್ಲೇಂಡರ್ ಪ್ಲಸ್ ಮೋಟಾರ್ ಸೈಕಲ್ ನಂ.ಕೆ.ಎ.37-ಇಎಫ್-7887.ನೇದ್ದರಲ್ಲಿ ಕುಳಿತುಕೊಂಡು ಶ್ರೀಪುರಂ ಜಂಕ್ಷನ ಮುಖಾಂತರ ಸಿರುಗುಪ್ಪಕ್ಕೆ ಹೊರಟಿದ್ದೆವು. ಮೋಟಾರ್ ಸೈಕಲನ್ನು ಅಂಬಣ್ಣನು ನಡೆಸುತ್ತಿದ್ದನು.ಮೋಟಾರ್ ಸೈಕಲನ್ನು ಜೋರಾಗಿ ನಿರ್ಲಕ್ಷತನದಿಂದ ಹಾಗೂ ಅಜಾಗರೂಕತೆಯಿಂದ ನಡೆಸಿಕೊಂಡು ಹೋಗುತ್ತಿರುವಾಗ ತಾನು ನಿಧಾನವಾಗಿ ನಡೆಸು ಅಂತಾ ಹೇಳುತ್ತಿದ್ದೆನು. ಅಂಬಣ್ಣನು ಲೇಟಾಗುತ್ತದೆಂದು ಜೋರಾಗಿ ನಡೆಸಿಕೊಂಡು ಹೋಗಿ ರಾತ್ರಿ 10-30 ಗಂಟೆ ಸುಮಾರಿಗೆ ಸಿಂಧನೂರು-ಸಿರುಗುಪ್ಪ ಮುಖ್ಯ ರಸ್ತೆಯಲ್ಲಿ ದಡೆಸ್ಗೂರು ಗ್ರಾಮದ ಕೆಇಬಿ ಸ್ಟೇಷನ್ ಇನ್ನೂ ಸ್ವಲ್ಪ ಮುಂದೆ ಇರುವಾಗ ರಸ್ತೆಯ ತಿರುವಿನಲ್ಲಿ ಫೂಲಿನ ಹತ್ತಿರ ಎದುರುಗಡೆಯಿಂದ ಬರುತ್ತಿದ್ದ ಮೋಟಾರ್ ಸೈಕಲಗೆ ಟಕ್ಕರಕೊಟ್ಟಿದ್ದರಿಂದ ಮೋಟಾರ್ ಸೈಕಲಗಳ ಮೇಲಿದ್ದವರು ಕೆಳಗಡೆ ಬಿದ್ದೆವು. ತಾನು ಎಚ್ಚರದಿಂದ ಇದ್ದು ಎದ್ದು ನೋಡಲಾಗಿ ರಸ್ತೆಯ ಮೇಲೆ ಬಿದ್ದಿದ್ದ ಅಂಬಣ್ಣನಿಗೆ ಬಲಕಣ್ಣಿಗೆ ಭಾರೀ ರಕ್ತಗಾಯವಾಗಿ.ಕಣ್ಣು ಒಳಗಡೆ ಹೋಗಿ,ಬಲಕಿವಿಯಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಎದುರುಗಡೆಯಿಂದ ಬಂದ ಕಪ್ಪು ಬಣ್ಣದ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ ನಂ.ಕೆ.ಎ.36-ಇಪಿ-7158 ಮೇಲಿದ್ದ ಇಬ್ಬರಿಗೂ ಭಾರೀ ಗಾಯಗಳಾಗಿದ್ದು.ಅಂಬ್ಯೂಲೆನ್ಸದಲ್ಲಿ ಸಿಂಧನೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದಾಗ ಆಸ್ಪತ್ರೆಯಲ್ಲಿ ಕಪ್ಪು ಬಣ್ಣದ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ ನಂ.ಕೆ.ಎ.36-ಇಪಿ-7158 ಸವಾರ ಜಾಕೀರನಿಗೆ ವೈದ್ಯರು ಪರೀಕ್ಷಿಸುವ ಕಾಲಕ್ಕೆ ರಾತ್ರಿ ಆಸ್ಪತ್ರೆಯಲ್ಲಿ ರಾತ್ರಿ 11-50 ಗಂಟೆಗೆ ಮೃತಪಟ್ಟನು ಈತನಿಗೆ ತಲೆಗೆ ಬಾರೀ ರಕ್ತಗಾಯವಾಗಿತ್ತು. ತನಗೆ ಮತ್ತು ಯುನೂಸ್ ಬೇಗ ಇಬ್ಬರಿಗೆ ಸಾದಾ ಮತ್ತು ಭಾರೀ ಸ್ವರೂಪದ ಗಾಯಗಳು ಆಗಿರುತ್ತದೆ.ಯುನೂಸ್ ಬೇಗನನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿಗೆ ಕಳುಹಿಸಿಕೊಟ್ಟಿರುತ್ತಾರೆ. ಈ ಘಟನೆಗೆ ಕಾರಣನಾದ ಅಂಬಣ್ಣನ ಮೇಲೆ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಪೊಲೀಸ್ ಠಾಣೆ ಗುನ್ನೆ ನಂಬರ 18/2019. ಕಲಂ. 279, 337, 338, 304(ಎ)  ಐಪಿಸಿ ಅಡಿಯಲ್ಲಿ   ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಮಂಡಿರುತ್ತಾರೆ.