Thought for the day

One of the toughest things in life is to make things simple:

5 Dec 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.

      ದಿನಾಂಕ 03.12.2020 ರಂದು 17.10 ಗಂಟೆ ಸುಮಾರಿಗೆ ರೋಡಲಬಂಡಾ ಗ್ರಾಮದ ಸೀಮಾದ ಸಿದ್ದಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ¤AUÀgÁd vÀAzÉ ºÀ£ÀĪÀÄAvÀ ªÀAiÀiÁ: 31 ªÀµÀð eÁ: £ÁAiÀÄPÀ G: MPÀÌ®ÄvÀ£À ¸Á: ºÀ¼É ¥ÀAZÁAiÀÄw ºÀwÛgÀ ºÀnÖ ¥ÀlÖt ಹಾಗೂ ಇತರೆ 3 ಜನರು ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ನಸೀಬದ ಇಸ್ಪೀಟ್ ಜೂಜಾಟದಲ್ಲಿ ಆಡುತ್ತಿದ್ದಾಗ ಫಿರ್ಯಾಧಿದಾರರು ಪಂಚರೊಂದಿಗೆ ಮತ್ತು ಸಿಬ್ಬಂದಿಯವರ ಸಂಗಡ ಹೋಗಿ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರಿಂದ ಇಸ್ಪೀಟ್ ಜೂಜಾಟದ ನಗದು ಹಣ 2370/- ರೂ. ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು, ದಾಳಿ ಪಂಚನಾಮೆ, ಮುದ್ದೇಮಾಲು, ನಾಲ್ಕು ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಜ್ಞಾಪನ ಪತ್ರವನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 45/2020 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ದಿನಾಂಕ  04.12.2020 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಹಟ್ಟ ಪೊಲೀಸ್ ಠಾಣೆ ಗುನ್ನೆ ನಂಬರ 159/2020 ಕಲಂ 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಮಟಕಾದಾಳಿ ಪ್ರರಕಣದ ಮಾಹಿತಿ.

            ದಿನಾಂಕ  04/12/2020 ರಂದು ಮದ್ಯಾಹ್ನ 3-20 ಗಂಟೆಗೆ ಸಿ.ಪಿ.ಐ ಲಿಂಗಸುಗೂರು ರವರಿಗೆ ತಮಗೆ ಸಿಕ್ಕ ಮಾಹಿತಿ ಮೇರೆಗೆ ಆನೆಹೊಸೂರು ಗ್ರಾಮದ ದಾವಲ್ ಮಲ್ಲಿಕ್ ದರ್ಗಾದ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ನಿಂತ್ತುಕೊಂಡು ಸಾರ್ವಜನಿಕರಿಂದ 1 ರೂಪಾಯಿಗೆ 80 ರೂಪಾಯಿಗೆ ಕೊಡುತ್ತೇನೆ ಅಂತಾ ಹೇಳಿ ಸಾರ್ವಜನಿಕರಿಂದ ಮಟಕಾ ನಂಬರಿನ ಮೇಲೆ ಹಣವನ್ನು ಪಣಕ್ಕೆ ಕಟ್ಟಿಕೊಂಡು ಮಟಕಾ ಜೂಜಾಟ ನಡೆಸಿದ್ದಾನೆ ಅಂತಾ ಬಾತ್ಮಿಬಂದ ಮೇರೆಗೆ ಡಿ.ಎಸ್.ಪಿ ಲಿಂಗಸೂಗೂರು ರವರ ಮಾರ್ಗದರ್ಶನದಲ್ಲಿ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಂಗಡ ಸಾಯಂಕಾಲ 4-00 ಗಂಟೆಗೆ ಸ್ಥಳಕ್ಕೆ ಹೋಗಿ ಆರೋಪಿ £ÁUÀ°AUÀ¥Àà vÀAzÉ ¸ÀtÚ UÀzÉÝ¥Àà vÀ¼ÀªÁgÀ ªÀ:30 ªÀµÀð, eÁ:£ÁAiÀÄPÀ, G:MPÀÌ®ÄvÀ£À, ¸Á:D£ÉºÉƸÀÆgÀÄ ಈತನು ಮಟಕಾ ಜೂಜಾಟದಲ್ಲಿ ತೊಡಗಿ, ಮಟಕಾ ಚೀಟಿ ಬರೆದು ಕೊಡುತ್ತಾ ದುಡ್ಡು ತೆಗೆದುಕೊಳ್ಳುತ್ತಿರುವದನ್ನು ನೋಡಿ ದಾಳಿಮಾಡಿ ಹಿಡಿದು ಆರೋಪಿತನಿಂದ ನಗದು ಹಣ 1,110/- ರೂ.ಹಾಗೂ ಒಂದು ಮಟಕಾ ನಂಬರ ಬರೆದ ಚೀಟಿ, ಹಾಗೂ ಒಂದು ಬಾಲ್ ಪೆನ್ ವಶಪಡಿಸಿಕೊಂಡು ಇದ್ದು, ತಾವು ಬರೆದ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತಿರಾ ಅಂತಾ ಕೇಳಿದಾಗ ತಾವೇ ಇಟ್ಟಿಕೊಳ್ಳುವುದಾಗಿ ತಿಳಿಸಿದ್ದು ಇರುತ್ತದೆ. ಪ್ರಕರಣವು ಅಸಂಜ್ಞೆಯ ಇದ್ದುದ್ದರಿಂದ ಪ್ರಕರಣ ದಾಖಲು ಮಾಡಲು ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದು ಈ ದಿನ  ಸಂಜೆ 6-00 ಗಂಟೆಗೆ ಸದರಿ ದಾಳಿ ಪಂಚನಾಮೆ ವರದಿ ಮೇಲಿಂದ ಆರೋಪಿತರ ವಿರುದ್ದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂಬರ 283/2020 PÀ®A 78(3) PÉ.¦ DåPïÖ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

ಅಕಸ್ಮಿಕ ವಿದ್ಯುತ್ ಶಾರ್ಟ್ ಪ್ರಕರಣದ ಮಾಹಿತಿ.

       ದಿನಾಂಕ 04-12-2020 ರಂದು 1830  ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಗಣಕ ಯಂತ್ರದಲ್ಲಿ ತಯಾರಿಸಿದ ದೂರನ್ನು ಹಾಜರಪಡಿಸಿದ್ದರ ಸಾರಾಂಶವೆನೇಂದರೆ, ದಿನಾಂಕ;-22-09-2020 ರಂದು ಮಧ್ಯಾಹ್ನ 12-30 ಗಂಟೆಗೆ ಫಿರ್ಯಾದಿದಾರರ ಮಗ ಪಿ. ಪ್ರಜ್ವಲ್ ರಾಜ್ ಈತನು ರಾಯಚೂರು ನಗರದ ವೆಂಕಟೇಶ್ವರ ಕಾಲೋನಿಯ ಅನುಜ್ಞಾನ ಶಾಲೆಯ ಹಿಂದುಗಡೆ ಒಂದು ಹೊಸ ಕಟ್ಟಡದ ಮೇಲೆ ಹೋದಾಗ ಅಲ್ಲಿ ಬಾಜು ಇರುವ 11 ಕೆ.ವಿ ವಿದ್ಯುತ್ ಸ್ಪರ್ಷವಾಗಿ ಮೂರ್ಚೆ ಹೋಗಿ ಕಟ್ಟಡದ ಮೇಲೆ ಬಿದ್ದು ಎರಡೂ ಕೈಗಳಿಗೆ, ಎರಡೂ ಕಾಲುಗಳಿಗೆ, ಹೊಟ್ಟೆ ಮತ್ತು ಬೆನ್ನಿಗೆ ಭಾರೀ ಸುಟ್ಟ ಗಾಯಗಳಾಗಿದ್ದರಿಂದ ಚಿಕಿತ್ಸೆ ಕುರಿತು ರಾಯಚೂರು ರಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ಹೆಚ್ಚಿನ ಇಲಾಜು ಕುರಿತು ದಿನಾಂಕ: 23.09.2020 ರಂದು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಅಲ್ಲಿನ ವೈದ್ಯರು ಫಿರ್ಯಾದಿದಾರರ ಮಗನಿಗೆ ಚಿಕಿತ್ಸೆ ನೀಡಿ ಎಡಗೈ ಮೊಣಕೈವರೆಗೆ, ಬಲಗೈ ಮುಂಗೈವರೆಗೆ ಕಟ್ ಮಾಡಿದ್ದು ಅದೇ ರೀತಿಯಾಗಿ ಎಡಗಾಲು ಮೊಣಕಾಲು ಹತ್ತಿರದಿಂದ ಕೆಳಗಿನವರೆಗೆ ಕಟ್ ಮಾಡಿದ್ದು ಬಲಗಾಲಿನ ಬೆರಳುಗಳನ್ನು ಕಟ್ ಮಾಡಿದ್ದು ಇರುತ್ತದೆ. ವಿದ್ಯುತ್ ಸ್ಪರ್ಷದಿಂದಾಗಿ ಫಿರ್ಯಾದಿದಾರರ ಮಗನಿಗೆ ರೀತಿ ಭಾರೀ ಗಾಯಗಳಾಗಿದ್ದು ಇರುತ್ತದೆ. 2014 ಕೆಇಬಿ ಇಲಾಖೆಯ ಆದೇಶದಂತೆ ರಾಯಚೂರು ನಗರದ ಜನನಿಬಿಡಿ ಪ್ರದೇಶದಲ್ಲಿ ಕೇಬಲ್ ವೈರ್ ಅಳವಡಿಸಲು ಅವಕಾಶವಿದ್ದರೂ ಮತ್ತು ಸರ್ವೀಸ್ ವೈರಗಳನ್ನು ಭೂಮಿಯಲ್ಲಿ ಅಳವಡಿಸಿ ವಿದ್ಯುತ್ ಸರಬರಾಜು ಕುರಿತು ಸರಕಾರದ ನಿರ್ದೇಶನಗಳಿದ್ದಾಗ್ಯೂ ಜೆಸ್ಕಾಂ ಇಲಾಖೆಯ ಅಧಿಕಾರಿಗಳು ರಾಯಚೂರು ನಗರದ ವೆಂಕಟೇಶ್ವರ ಕಾಲೋನಿ ಕೂಡ ನಗರದ ಜನನಿಬಿಡ ಪ್ರದೇಶ ಹಾಗೂ ಗುಡ್ಡಕ್ಕೆ ಹತ್ತಿರವಿದ್ದು ಆದರೆ ಇಲ್ಲಿ ಕೇಬಲ್ ವೈರ್ ಅಳವಡಿಸದೇ ಒಬ್ಬ ವ್ಯಕ್ತಿಯ ಪ್ರಾಣಕ್ಕೆ ಅಪಾಯ ಉಂಟಾಗುತ್ತದೆ ಅಂತಾ ತಿಳಿದು ಸರ್ವೀಸ್ ವೈರ್  ಮನುಷ್ಯರಿಗೆ ತಾಗದಂತೆ ಯಾವುದೇ ಸುರಕ್ಷತೆ ಕ್ರಮ ತೆಗೆದುಕೊಳ್ಳದೇ ನಿರ್ಲಕ್ಷತನದಿಂದ ಹಾಗೆಯೇ ಬಿಟ್ಟಿದ್ದರಿಂದ ಘಟನೆಯು ಜರುಗಿದ್ದು ಇರುತ್ತದೆ. ಇದರಿಂದ ಫಿರ್ಯಾದಿ ಮಗನಿಗೆ ಘಟನೆಯಲ್ಲಿ ಶೇಕಡ 90% ಭಾರೀ ಗಾಯಗಳು ಸಂಭವಿಸಿ ಅಂಗವಿಕಲನಾಗಿರುತ್ತಾನೆ. ಮನೆಯಲ್ಲಿ ವಿಚಾರಿಸಿ ದಿವಸ ತಡವಾಗಿ ದೂರು ನೀಡಿದ್ದು ಕಾರಣ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಸಾರಾಂಶದ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ. 130/2020 ಕಲಂ. 286, 338 .ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ