Thought for the day

One of the toughest things in life is to make things simple:

10 Dec 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ಅಬಕಾರಿ ಕಾಯ್ದೆ ಪ್ರಕರಣದ ಮಾಹಿತಿ.

            ದಿನಾಂಕ 09-12-2020 ರಂದು ರಾತ್ರಿ 8-00 ಗಂಟೆಗೆ ಪಿ.ಎಸ್.ಐ ಮಾನವಿ ಠಾಣೆ ರವರು ಅಕ್ರಮ ಮಧ್ಯದ ದಾಳಿಯಿಂದ ವಾಪಾಸ್ಸು ಠಾಣೆಗೆ ಬಂದು ಜಪ್ತಿ ಮಾಡಿದ ಮುದ್ದೆಮಾಲು ಮತ್ತು ಮೂಲ ಪಂಚನಾಮೆ ಹಾಗೂ ಒಬ್ಬ ಆರೋಪಿ ಕೊರವಯ್ಯ ತಂದೆ ದೇವೆಂದ್ರಪ್ಪ ವಯಾಃ 35 ವರ್ಷ ಜಾತಿಃ ನಾಯಕ ಉಃ ಒಕ್ಕಲುತನ ಸಾಃ ಕೊರವಿ ತಾಃ ಮಾನವಿ ಈತನನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ರಾತ್ರಿ 8-15 ಗಂಟೆಗೆ ಸೂಚಿಸಿದ್ದು ಸದರಿ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ, ಮಾನವಿ ಠಾಣಾ ವ್ಯಾಪ್ತಿಯ ಸೀಕಲ್ ಗ್ರಾಮದ ವಾಲ್ಮಿಕಿ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮಧ್ಯದ ಪೌಚಗಳನ್ನು ಮಾರಾಟ ಮಾಡುತ್ತಿದ್ದಾಗ ಮಾಹಿತಿ ಸಂಗ್ರಹಿಸಿ ಇಂದು ಸಾಯಾಂಕಾಲ 6-15 ಗಂಟೆಗೆ ದಾಳಿ ಮಾಡಿ ಅನಧಿಕೃತವಾಗಿ  ಮಧ್ಯ ಮಾರಾಟ ಮಾಡುತ್ತಿದ್ದ ಕೊರವಯ್ಯ ತಂದೆ ದೇವೆಂದ್ರಪ್ಪ ವಯಾಃ 35 ವರ್ಷ ಜಾತಿಃ ನಾಯಕ ಉಃ ಒಕ್ಕಲುತನ ಸಾಃ ಕೊರವಿ ತಾಃ ಮಾನವಿ ಈತನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ  52 ORIGINAL CHOICE WISKY, 90 ML ಪೌಚಗಳು { 4.680 ಲೀಟರ್} ಒಟ್ಟು  52  ಪೌಚಗಳ  ಬೆಲೆ  1826 /-ರೂ ಬೆಲೆಬಾಳುವ ಮಧ್ಯವನ್ನು ಪಂಚರ ಸಮಕ್ಷಮ ಜಪ್ತು ಮಾಡಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಮೇರೆಗೆ ಮಾನವಿ ಠಾಣೆ ಗುನ್ನೆ ನಂ  199/2020  ಕಲಂ 32,34, ಕೆ.ಈ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.

 

            ದಿನಾಂಕ 09/12/2020 ರಂದು  ಬೆಳಿಗ್ಗೆ 11-30 ಗಂಟೆಯ ಸುಮಾರಿಗೆ  ಆರೋಪಿ ಮಾರೆಪ್ಪ ತಂದೆ ಹನುಮಂತ, ಬೊಗ್ಗಲಯ್ಯ,35 ವರ್ಷ, ಜಾ:ಮಾದಿಗ,ಉ:ಕೂಲಿಕೆಲಸ, ಸಾ:ಮಿಟ್ಟಿಮಲ್ಕಾಪೂರ ಈತನು ತನ್ನ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಾನವ ಜೀವಕ್ಕೆ ಅಪಾಯಕಾರಿಯಾದ ಸಿ.ಹೆಚ್. ಪೌಡರನಿಂದ ತಯಾರಿಸಿದ ಕಲಬೆರಿಕೆ ಸೇಂದಿಯನ್ನು ಆಂಧ್ರದಿಂದ ತೆಗೆದುಕೊಂಡು ಬಂದು ತನ್ನ ಸ್ವಂತ ಲಾಭಕ್ಕಾಗಿ ಮಾರಾಟ ಮಾಡುತ್ತಿರುವಾಗ, ಪಿ.ಎಸ್.ಐ (ಕಾಸು) ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ, ಒಂದು ಪ್ಲಾಸ್ಟಿಕ್ ಕೊಡಲ್ಲಿದ್ದ15 ಲೀಟರ ಸೇಂದಿ, ಒಂದು ಪ್ಲಾಸ್ಟಿಕ ತಂಬಿಗೆಯನ್ನು ಜಪ್ತಿಪಡಿಸಿಕೊಂಡು ಕೇಸಿನ ಪುರಾವಗೆಗಾಗಿ ಪ್ಲಾಸ್ಟಿಕ ಕೊಡದಲ್ಲಿದ್ದ ಸೇಂದಿಯನ್ನು, ಒಂದು 180 ಎಂ.ಎಲ್  ಬಾಟಲಿಯಲ್ಲಿ ಸಂಗ್ರಹಿಸಿಕೊಂಡು ಉಳಿದ ಸೇಂದಿಯನ್ನು ಸ್ಥಳದಲ್ಲಿ ನಾಶಪಡಿಸಿ ಆರೋಪಿ ಹಾಗೂ ಮುದ್ದೆಮಾಲು ಮತ್ತು ಜ್ಷಾಪನ ಪತ್ರದೊಂದಿಗೆ   ಠಾಣೆಗೆ ಬಂದು ಹಾಜರಪಡಿಸಿದ್ದು, ಜ್ಞಾಪನ ಪತ್ರದ ಸಾರಾಂಶದ ಮೇಲಿಂದ  ಆರೋಪಿತನ ವಿರುದ್ದ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ 149/2020 ಕಲಂ 273.284.328 ಐ.ಪಿ.ಸಿ & 32.34 ಕೆ.ಇ ಕಾಯ್ದೆ  ಪ್ರಕಾರ ಪ್ರಕಣ ದಾಖಲಿಸಿಕೊಂಡು ತನಿಖೆ  ಕೈಗೊಂಡಿರುತ್ತಾರೆ.