Thought for the day

One of the toughest things in life is to make things simple:

25 Oct 2018

Reported CrimesªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಮಟಕಾದಾಳಿ ಪ್ರಕರಣದ ಮಾಹಿತಿ.
ದಿನಾಂಕ  23/10/2018 ರಂದು ಸಂಜೆ 5-00 ಗಂಟೆಗೆ zÁzÁªÀ° PÉ.ºÉZï. ¦.J¸ï.L °AUÀ¸ÀÄUÀÆgÀ ¥ÉưøÀ oÁuÉ ರವರಿಗೆ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ನೀಡಿದ ಮೇರೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಂಗಡ ಹೋಗಿ ಮೇಲ್ಕಂಡ ಸ್ಥಳದಲ್ಲಿ ಮೇಲೆ ನಮೂದಿಸಿದ ಆರೋಪಿತನು ಮಟಕಾ ಜೂಜಾಟದಲ್ಲಿ ತೊಡಗಿ, ಮಟಕಾ ಚೀಟಿ ಬರೆದು ಕೊಡುತ್ತಾ ದುಡ್ಡು ತೆಗೆದುಕೊಳ್ಳುತ್ತಿರುವದನ್ನು ನೋಡಿ ದಾಳಿಮಾಡಿ ಹಿಡಿದು ಆರೋಪಿತ ನಿಂದ ನಗದು ಹಣ 4270/- ರೂ.ಹಾಗೂ ಎರಡು ಮಟಕಾ ನಂಬರ ಬರೆದ ಪಟ್ಟಿ ಹಾಗೂ ಒಂದು ಬಾಲ್ ಪೆನ್ ವಶಪಡಿಸಿಕೊಂಡು ಇದ್ದು, ಪ್ರಕರಣವು ಅಸಂಜ್ಞೆಯ ಇದ್ದುದ್ದರಿಂದ ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದು ಇಂದು ದಿನಾಂಕ 23/10/2018 ರಂದು ಸಂಜೆ 7-30 ಗಂಟೆಗೆ ಸದರಿ ದಾಳಿ ಪಂಚನಾಮೆ ವರದಿ ಮೇಲಿಂದ ಆರೋಪಿತನ ವಿರುದ್ದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂ. 381/2018 ಕಲಂ 78 (3) ಕೆ.ಪಿ. ಆ್ಯಕ್ಟ ಅಡಿಯಲ್ಲಿ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮಹಿಳೆಗೆ ಕಿರುಕಳ ಪ್ರಕರಣದ ಮಾಹಿತಿ.
ದಿನಾಂಕ 23/10/2018 ರಂದು ಸಂಜೆ 4-30 ಗಂಟೆಗೆ ಫಿರ್ಯಾದಿದಾರಳು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿಯನ್ನು ಕೊಟ್ಟಿದ್ದರ ಸಾರಾಂಶವೆನೆಂದರೆ ಫಿರ್ಯಾದಿದಾರಳು 2010 ನೇ ಇಸವಿಯಲ್ಲಿ ನಮೂದಿತ ಆರೋಪಿತನೊಂದಿಗೆ ಪ್ರೀತಿಸಿ ಲಗ್ನವಾಗಿದ್ದು. ಮದುವೆ ಆಗಿ ಎರಡು ವರ್ಷ ಚೆನ್ನಾಗಿ ಸಂಸಾರ ಮಾಡಿದ್ದು ತದನಂತರದಲ್ಲಿ ಆರೋಪಿತನು ದಿನಾಲು ಕುಡಿದು ಬಂದು ಫಿರ್ಯಾದಿದಾರಳಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿದ್ದುಅಲ್ಲದೆ ಆಕೆಗೆ ಬೇರೆ ಜಾತಿ ಎಂದು ಹಿಯಾಳಿಸುತ್ತಿದ್ದು, ಅಲ್ಲದೆ ದಿನಾಲು ದುಡ್ಡು ಕೊಡು ಪೂತ್ರಿ ಸಂಭಳ ವನ್ನು ತೆಗೆದುಕೊಳ್ಳುತ್ತಿದ್ದು, ಫಿರ್ಯಾದಿದಾರಳು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ಅವರು ಆಕೆಗೆ ಹೊಡೆಯವುದನ್ನು ನೋಡಿ ಆತನಿಗೆ ಬುದ್ದಿವಾದ ಹೇಳಿದ್ದು ಅವರಿಗೂ ಸಹ ಅವಾಚ್ಯವಾಗಿ ಬೈಯುತ್ತಿದ್ದನು. ದಿನಾಂಕ 22/10/2018 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಫಿರ್ಯಾಧಿದಾರಳು ತನ್ನ ಬಾಡಿಗೆ ಮನೆಯನ್ನು ಖಾಲಿ ಮಾಡುತ್ತಿರುವಾಗ ಆರೋಪಿತನು ಅಲ್ಲಿಗೆ ಬಂದು ಕೈಯಿಂದ ಹೊಡೆದು, ಅವಾಚ್ಯವಾಗಿ ಬೈದು, ನಿನಗೆ ಲಿಂಗಸುಗುರಿನಲ್ಲಿ ಇರುವುದಕ್ಕೆ ಬಿಡುವುದಿಲ್ಲಾ ಸಾಯಿಸಿ ಬಿಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ  ಅಂತಾ  ವೈಗೈರೆ ಇದ್ದು ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂ. 380/2018 PÀ®A  504,323,498J,506 L¦¹ CrAiÀÄ°è ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.

ಮೋಸ ಪ್ರಕರಣದ ಮಾಹಿತಿ.
ದಿನಾಂಕ:22-10-2018 ರಂದು ಖಾಸಗಿ ಪಿರ್ಯಾದಿ ಸಂಖ್ಯೆ:153/2018 ನೇದ್ದನ್ನು  ಹಾಜರುಪಡಿಸಿದ್ದು, ಸದರಿ ಖಾಸಗಿ ಪಿರ್ಯಾದಿಯ ಸಾರಾಂಶವೇನೆಂದರೆ, ರಾಯಚೂರು ನಗರದಲ್ಲಿನ ಈದ್ಗಾ ಮೈದಾನವು ಚಿಕ್ಕದ್ದಾಗಿದ್ದರಿಂದ ಮತ್ತೊಂದು ಪ್ರದೇಶದಲ್ಲಿ 10 ಎಕರೆ ಜಾಗವನ್ನು ಖರೀದಿ ಮಾಡುವ ಸಲುವಾಗಿ ಮೇಲ್ಕಂಡ ಆರೋಪಿತರೊಂದಿಗೆ ಮುಸ್ಲಿಂ ಸಮುದಾಯದ ಇನ್ನಿತರರು ಸೇರಿ, ಮಾನ್ಯ ಬಿ.ಜಡ್.ಜಮೀರ್ ಅಹ್ಮದ್ ಖಾನ್, ವಕ್ಫ್ ಸಚಿವರು ರವರಿಗೆ ಕೋರಿಕೊಂಡಾಗ ಮಾನ್ಯ ಸಚಿವರು 15,00000/- ರೂಗಳನ್ನು ಆರೋಪಿ ನಂಬರ್ 1 ಅಲ್ ಹಜ್ ಡಾ.ಸೈಯದ್ ತಾಜುದ್ದೀನ್ ಅಹ್ಮದ್ ಖಾದ್ರಿ ತಂದೆ ಅಲ್ ಹಜ್ ಈತನಿಗೆ ನೀಡಿರುತ್ತಾರೆ. ಸದರಿ ಹಣದಿಂದ ಮತ್ತು ಮುಸ್ಲಿಂ ಬಾಂದವರಲ್ಲಿ ವಸೂಲಿ ಮಾಡಿದ ಚಂದಾ ಹಣದಿಂದ ಈದ್ಗಾ ಮೈದಾನಕ್ಕೆ ಬೇಕಾದ ಜಾಗವನ್ನು ಖರೀದಿ ಮಾಡದೇ ಇದ್ದುದ್ದರಿಂದ ಪಿರ್ಯಾಧಿ ಮಹ್ಮದ್ ಉಮರ್ ಫಾರೂಖ್ ತಂದೆ ಖಾಜಾ ಮೋಹಿನುದ್ದೀನ್, 52 ವರ್ಷ, ಮುಸ್ಲಿಂ, ಮತ್ತು ಇನ್ನಿತರರು ಆರೋಪಿತರನ್ನು ಕೇಳಿದ್ದು, ಆಗ ಆರೋಪಿತರು ಸಮಾನ ಉದ್ದೇಶವನ್ನಿಟ್ಟುಕೊಂಡು ತಮ್ಮ ಟ್ರಸ್ಟ್ ವತಿಯಿಂದ ಸರಿಯಾದ ವಿಳಾಸವಿಲ್ಲದ ವ್ಯಕ್ತಿಯಿಂದ ಭೂಮಿಯನ್ನು ಖರೀದಿ ಮಾಡಿದ ಹಾಗೆ ಸುಳ್ಳು ಖೊಟ್ಟಿ ದಾಖಲೆಗಳನ್ನು ಸೃಷ್ಠಿ ಮಾಡಿ, ಯಕ್ಲಾಸಪೂರು ಗ್ರಾಮದ ಸರ್ವೆ ನಂಬರ್ 214, ವಿಸ್ತೀರ್ಣ 10 ಎಕರೆ ಜಮೀನನ್ನು ಒಂದು ಕೋಟಿ ಹದಿನೈದು ಲಕ್ಷ ರೂಪಾಯಿಗಳಿಗೆ (1,15,00,000/-) ಖರೀದಿ ಮಾಡಿರುವುದಾಗಿ ಮತ್ತು ಅದಕ್ಕೆ ವಿಜಯಬ್ಯಾಂಕಿನ ಚೆಕ್ ನಂಬರ್ 052128, ದಿನಾಂಕ:15-06-2013 ನೇದ್ದರಲ್ಲಿ 5,00,000/- ರೂಗಳನ್ನು ಮತ್ತು ಚೆಕ್ ನಂಬರ್ 052129 ದಿನಾಂಕ:17-07-2013 ನೇದ್ದರಲ್ಲಿ 15,00,000/- ರೂ.ಗಳನ್ನು ನೀಡಿರುವ ಬಗ್ಗೆ ಖೊಟ್ಟಿ ಚೆಕ್ ಸೃಷ್ಠಿ ಮಾಡಿ, ಈದ್ಗಾ ಮೈದಾನಕ್ಕಾಗಿ ಮಾನ್ಯ ಸಚಿರು ಕೊಟ್ಟ ಹಣ ಮತ್ತು ಜನರು ಕೊಟ್ಟ ಹಣವನ್ನು ತಮ್ಮ ಸ್ವಂತಕ್ಕೆ ಬಳಸಿಕೊಂಡು ತಮ್ಮ ಸಮುದಾಯಕ್ಕೆ ಮೋಸ ಮಾಡಿದ್ದು, ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಂತಾಗಿ. ಪಿರ್ಯಾದಿ ಇದ್ದುದರ ಆಧಾರದ ಮೇಲಿಂದ ಸದರ ಬಜಾರ ಪೊಲೀಸ್ ಠಾಣೆ ಗುನ್ನೆ ನಂ :104/2018 ಕಲಂ:406, 417, 419, 420, 422, 427, ಸಹಿತ 149 .ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿಇರುತ್ತಾರೆ.
ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ: 23.10.2018 ರಂದು ರಾತ್ರಿ 8.00 ಗಂಟೆಯ ಸುಮಾರಿಗೆ ಫಿರ್ಯಾದಿ  ನಂದಪ್ಪ ತಂ: ಗೂಳಪ್ಪ ಗೊಜಗರ್ ವಯ: 56 ವರ್ಷ, ಜಾ: ಕುರುಬರ್ : ಒಕ್ಕಲುತನ, ಸಾ: ಕಕ್ಕೇರಿ ತಾ: ಸುರಪುರ ಜಿ: ಯಾದಗಿರಿ ಇವರ ಮೊಮ್ಮಗನಾದ ಮಲ್ಲಪ್ಪ ಯಲಗಟ್ಟಿ ಈತನು ತನ್ನ ಸಂಗಡಿಗ ತಾಯಪ್ಪ ತಂ: ನಂದಪ್ಪ ವಯ: 26 ವರ್ಷ ಈತನ ಹಿರೋಹೊಂಡಾ ಹೆಚ್.ಎಫ್. ಡಿಲಕ್ಸ ಮೊಟಾರ ಸೈಕಲ್ ನಂ: KA33J6753 ನೇದ್ದರ ಮೇಲೆ ಮರ್ಚೆಡ್ ನಿಂದಾ ರಾಯಚೂರಿಗೆ ಹೋಗುವಾಗ್ಗೆ ದಾರಿಯಲ್ಲಿ ಬೈಪಾಸ್ ರಸ್ತೆಯ ಹತ್ತಿರದ ಕೋಲ್ಡ್ ಸ್ಟೋರೇಜ್ ಹತ್ತಿರದ ರಸ್ತೆಯಲ್ಲಿ ರಾಯಚೂರು ಕಡೆಯಿಂದಾ ಮರ್ಚೆಡ್ ಕಡೆಗೆ ಆರೋಪಿತನು ಯಾವುದೋ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ವಾಹನವನ್ನು ಕಂಟ್ರೋಲ್ ಮಾಡದೇ ಮರ್ಚೆಡ್ ಕಡೆಯಿಂದ ಬರುತ್ತಿದ್ದ ಮೇಲ್ಕಂಡ ಮೊಟಾರ ಸೈಕಲಗೆ ಟಕ್ಕರ್ ಕೊಟ್ಟಿದ್ದು ಇದರಿಂದಾಗಿ ಮೊಟಾರ ಸೈಕಲ್ ಮೇಲೆ ಕುಳಿತ ಇಬ್ಬರೂ ಮೊಟಾರ ಸೈಕಲ್ ಸಮೇತ ರಸ್ತೆಯಲ್ಲಿ ಬೀಳಲಾಗಿ ಟಕ್ಕರ್ ಕೊಟ್ಟ ವಾಹನವನ್ನು ಅದರ ಚಾಲಕನು ವಾಹನವನ್ನು ಅಲ್ಲಿ ನಿಲ್ಲಿಸದೇ ಹಾಗೇ ಚಲಾಯಿಸಿಕೊಂಡು ಹೊರಟು ಹೋಗಿದ್ದು, ಹಾಗೂ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮೊಟಾರ ಸೈಕಲ್ ಸವಾರ ತಾಯಪ್ಪನಿಗೆ ಮುಖಕ್ಕೆ, ತಲೆಯಲ್ಲಿ, ಭಾರಿ ಒಳಪೆಟ್ಟಾಗಿ, ಬಲಗಾಲ ಪಾದದಲ್ಲಿ ಹಾಗೂ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು, ಮೊಟಾರ ಸೈಕಲ್ ಹಿಂದಿನ ಸೀಟಿನಲ್ಲಿ ಕುಳಿತ ತನ್ನ ಮೊಮ್ಮಗ ಮಲ್ಲಪ್ಪ ಯಲಗಟ್ಟಿ ಈತನಿಗೆ ತಲೆಯಿಂದಾ ಮೂಗಿನ ವರೆಗೆ ಕೊರೆದು ಮಾಂಸ ಖಂಡಗಳು ಹೊರ ಬಂದು ಭಾರಿ ಗಾಯದಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದು ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 230/2018 PÀ®A. 279, 338, 304() IPC & 187 IMV Act ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.