Thought for the day

One of the toughest things in life is to make things simple:

12 Jul 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಅಕ್ರಮ ಮರಳು ಜಪ್ತಿ ಪ್ರಕರಣದ ಮಾಹಿತಿ.
ದಿನಾಂಕ 12/07/18 ರಂದು ಬೆಳಿಗ್ಗೆ 09.00 ಗಂಟೆಗೆ ಶ್ರೀ ಮಂಜುನಾಥ  ಎಸ್. ಪಿ.ಎಸ್.ಐ ಮಾನವಿ ರವರು ಅಕ್ರಮ ಮರಳು ಸಾಗಾಣಿಕೆ ಟ್ರ್ಯಾಕ್ಟರ /ಟ್ರಾಲಿಗಳ ದಾಳಿಯಿಂದ ವಾಪಾಸ್ ಠಾಣೆಗೆ ಬಂದು ತಮ್ಮ ದೂರನ್ನು ತಯಾರಿಸಿ ಬೆಳಿಗ್ಗೆ 09.30 ಗಂಟೆಗೆ ಮರಳು ತುಂಬಿದ ಟ್ರ್ಯಾಕ್ಟರ /ಟ್ರಾಲಿಗಳನ್ನು, ದಾಳಿ ಪಂಚನಾಮೆ ಹಾಗೂ ತಮ್ಮ ದೂರನ್ನು ತಯಾರಿಸಿ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ಪಂಚನಾಮೆಯ ಸಾರಾಂಶವೇನೆಂದರೆ,   ಇಂದು ದಿನಾಂಕ 12/07/18 ರಂದು ಬೆಳಿಗ್ಗೆ  ಮಾನವಿ ಠಾಣಾ ವ್ಯಾಪ್ತಿಯ ಮುಷ್ಟೂರ ಗ್ರಾಮದ ಹಳ್ಳದಲ್ಲಿ  ಟ್ರಾಕ್ಟರಗಳಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಮಾರಾಟ ಮಾಡುವ ಕುರಿತು ಮಾನವಿ ಕಡೆಗೆ ತೆಗೆದುಕೊಂಡು ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್. ರವ ರು ಪಂಚರು ಹಾಗೂ ಸಿಬ್ಬಂದಿಯವರಿಗೆ ಕರೆದುಕೊಂಡು ಮಾನವಿಯ ಮುಷ್ಟೂರು ಕ್ರಾಸ್ ಹತ್ತಿರ ಹೋಗಿ ಅಲ್ಲಿ ಜೀಪನ್ನು ನಿಲ್ಲಿಸಿ ಕಾಯುತ್ತಾ ನಿಂತುಕೊಂಡಿರುವಾಗ್ಗೆ  ಬೆಳಿಗ್ಗೆ 07.30 ಗಂಟೆಗೆ  ಮುಷ್ಟೂರ್ ಗ್ರಾಮದ ಕಡೆಯಿಂದ  1] ಮಹಿಂದ್ರ ಕಂಪನಿಯ ಟ್ರ್ಯಾಕ್ಟರ್ ನಂ ಕೆ..34/ಟಿ-7001  ಹಾಗೂ ನಂಬರ್ ಇಲ್ಲದ ಟ್ರಾಲಿಯ ಮತ್ತು 2 ಸ್ವರಾಜ್ ಕಂಪನಿಯ ಟ್ರ್ಯಾಕ್ಟರ್ ನಂ ಕೆ..36/ಟಿ.ಬಿ-7403 ಹಾಗೂ ನಂಬರ್ ಇಲ್ಲದ  ಅವುಗಳ ಚಾಲಕರುಗಳು ಮರಳು ತುಂಬಿಕೊಂಡು ಬಂದಿದ್ದು ಕಂಡು ಪಿ.ಎಸ್. ರವರು ನಿಲ್ಲಿಸಲು ಸೂಚಿಸಿದಾಗ  ಸದರಿ ಟ್ರ್ಯಾಕ್ಟರ ಚಾಲಕರುಗಳು  ತಮ್ಮ ವಾಹನಗಳನ್ನು ನಿಲ್ಲಿಸಿ ಓಡಿ ಹೋಗಿದ್ದು ಇರುತ್ತದೆ. ಕಾರಣ ಸದರಿ ಎರಡು ಟ್ರ್ಯಾಕ್ಟರ /ಟ್ರಾಲಿಗಳ ಚಾಲಕರುಗಳೂ ಓಡಿ ಹೋಗಿದ್ದು ನೋಡಿದರೆ ತಮ್ಮ ತಮ್ಮ ಮಾಲಿಕರ ಸ್ವಂತ ಲಾಭಕ್ಕಾಗಿ ಅವರು ಹೇಳಿದ ಪ್ರಕಾರ ಕಳ್ಳತನದಿಂದ, ಸರಕಾರಕ್ಕೆ ಯಾವದೇ ರಾಜಧನವನ್ನು ಪಾವತಿಸದೇ, ಅಕ್ರಮವಾಗಿ ಮರಳನ್ನು ಮಾರಾಟ ಮಾಡುವ ಕುರಿತು ಸಾಗಾಣಿಕೆ ಮಾಡುತ್ತಿರುವದು ಕಂಡು ಬಂದ ಎರಡು ಟ್ರ್ಯಾಕ್ಟರ/ಟ್ರಾಲಿಗಳನ್ನು ಹಾಗೂ 4 ಘನ ಮೀಟರ್ ಮರಳನ್ನು ಕಜಪ್ತು ಮಾಡಿಕೊಂಡು ಬಂದಿಕರುವದಾಗಿ ಇದ್ದ ಮೇರೆಗೆ ನಾನು ಮಾನವಿ ಠಾಣೆ ಗುನ್ನೆ ನಂ 228/2018 ಕಲಂ 3,42,43,ಕೆ.ಎಮ್.ಎಮ್.ಸಿ. ರೂಲ್ಸ 1994 ಮತ್ತು 4, 4(1) ಎಮ್.ಎಮ್.ಡಿ.ಆರ್. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.
 ಪೊಲೀಸ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ 11/07/18 ರಂದು ಮಾನವಿ ನಗರದ ನೀಲಕಂಠೇಶ್ವರ ದೇವಸ್ಥಾನದ ಹತ್ತಿರ ಇರುವ ಸರಕಾರಿ ಬಾಲಕಿಯರ ಕಾಲೇಜಿನ  ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಶ್ರೀ ಮಂಜುನಾಥ ಪಿ.ಎಸ್. (ಕಾ.ಸು) ಮಾನವಿ  ರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಧಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ   1] ಚನ್ನಬಸವ ಸ್ವಾಮಿ ತಂದೆ ಪಾರಣ್ಣ ಸ್ವಾಮಿ @ ಪಾರಿಜಾತ ಸ್ವಾಮಿ ವಯಾ 35 ಜಾ:-ಜಂಗಮ :-ಕೂಲಿ ಕೆಲಸ ಸಾ:-ಜಾನೇಕಲ್ ಈತನಿಗೆ ವಶಕ್ಕೆ ತೆಗದುಕೊಂಡು ಸದರಿಯವನ  ಅಂಗಜಡ್ತಿ ಮಾಡಿ ಸದರಿಯವನಿಗೆ  1] ಮಟಕಾ ಜೂಜಾಟದ ನಗದು ಹಣ ರೂ  6100/-  2]  ಮಟಕಾ ನಂಬರ್ ಬರೆದ ಒಂದು ಚೀಟಿ   3] ಒಂದು ಬಾಲ್ ಪೆನ್ನು ದೊರೆತಿದ್ದು ಸದರಿ ಜೂಜಾಟದ ಸಾಮಾಗ್ರಿಗಳನ್ನು ಪಿ.ಎಸ್.ಐ ರವರು ಜಪ್ತಿ ಮಾಡಿಕೊಂಡು ಸಾಯಂಕಾಲ 6.30 ಗಂಟೆಯಿಂದ 7.30 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಅಂತಾ ಇರುತ್ತದೆ. ಕಾರಣ ಸದರಿ ಪಂಚನಾಮೆಯ ಸಾರಾಂಶದ ಆಧಾರದ ಮೇಲಿಂದ ಪ್ರಕರಣವು ಅಸಂಜ್ಞೆಯ ಅಪರಾಧ ಆಗುತಿದ್ದು, ಕಾರಣ ಸದರಿ ಕಲಂ 78(3) ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಮಾನವಿ ಪೊಲೀಸ್ ಠಾಣೆ ಗುನ್ನೆ ನಂ 227/18 ಕಲಂ 78 (3 ) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.
ದಿನಾಂಕ- 10/07/2018 ರಂದು 20-00 ಗಂಟೆಯಿಂದ 21-00 ಗಂಟೆಯ ಅವಧಿಯಲ್ಲಿ ಆರೋಪಿಯಾದ ರಮೇಶ ಇವರು ತಡಕಲ್ ಗ್ರಾಮದ ತನ್ನ ಹೋಟೆಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಒಂದು ರೂ ಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಾ ಇದ್ದಾಗ ಪಂಚರ ಸಮಕ್ಷಮದಲ್ಲಿ ಶ್ರೀ ಆಂಜನೇಯ ಡಿ.ಎಸ್,  ಪಿ ಎಸ್ ಕವಿತಾಳ  ರವರು & ಸಿಬ್ಬಂದಿಯವರು ದಾಳಿ ಮಾಡಿ ಸಿಕ್ಕಿ ಬಿದ್ದ ಆರೋಫಿ ರಮೇಶ ತಂದೆ ಸಿದ್ದಪ್ಪ ಗಿರಡ್ಡಿ 25 ವರ್ಷ ಜಾ: ಲಿಂಗಾಯತ :ಹೋಟೇಲ್ ಕೆಲಸ ಸಾ: ತಡಕಲ್ ತಾ:ಮಾನವಿ ಈತನ ವಶದಿಂದ 1] ನಗದು ಹಣ 980- 2] 01 ಮಟಕಾ ನಂಬರ್‌‌ ಬರೆದ ಪಟ್ಟಿ 3]ಒಂದು ಬಾಲ್‌‌ಪೆನ್ನು ಇವುಗಳನ್ನು ಜಪ್ತಿ ಪಡಿಸಿಕೊಂಡು, ಸಿಕ್ಕಿ ಬಿದ್ದವನು ತಾನು ಬರೆದುಕೊಂಡು ಮಟಕಾ ಪಟ್ಟಿಯನ್ನು .ನಂ 02 ಬ್ರಹ್ಮಾನಂದ ತಂದೆ ಬಸಣ್ಣ ಜಾ:ಲಿಂಗಾಯತ ಸಾ:ತಡಕಲ್ ತಾ:ಮಾನವಿ   ರವರಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ. ಸಿಕ್ಕಿ ಬಿದ್ದ ಒಬ್ಬ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಒಂದು ವರದಿಯನ್ನು ನೀಡಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರು ಪಡಿಸಿದ್ದರ ಮೇಲಿಂದ ಮಾನ್ಯ ಜೆಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರ ಪರವಾನಿಗೆಯನ್ನು ದಿನಾಂಕ- 11/07/2018 ರಂದು 14-10 ಗಂಟೆಗೆ ಪಡೆದುಕೊಂಡು ವಾಪಾಸು ಠಾಣೆಗೆ 16-20. ಗಂಟೆಗೆ ಬಂದಿದ್ದರಿಂದ ಕವಿತಾಳ ಪೊಲೀಸ್‌‌ ಠಾಣೆಯ ಗುನ್ನೆ ನಂ:120/2018, ಕಲಂ:78[3] ಕೆ.ಪಿ.ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದೊಂಬಿ ಪ್ರಕರಣದ ಮಾಹಿತಿ.
ದಿನಾಂಕ: 10.07.2018 ರಂದು ರಾತ್ರಿ 8.30 ಗಂಟೆಯ ಸುಮಾರಿಗೆ ಫಿರ್ಯಾದಿ ತಿರುಪತಿ ತಂ: ಕನಕಪ್ಪ ವಯ: 55ವರ್ಷ, ಜಾ: ಕಬ್ಬೇರ್, : ಒಕ್ಕಲುತನ, ಸಾ: ಹಾಳವೆಂಕಟಾಪೂರ ತಾ:ಜಿ: ರಾಯಚೂರು.  ಈತನ ಮಗ ದೇವರಾಜ ಈತನು ಕೂಲಿಕೆಲಸ ಮುಗಿಸಿಕೊಂಡು ತಮ್ಮ ಮನಗೆ ಹೋಗುತ್ತಿದ್ದಾಗ್ಗೆ ಫಿರ್ಯಾದಿಯ ಮನೆಯ ಹತ್ತಿರ ಆರೋಪಿತರು ಹಿರಿಯರ ಆಸ್ತಿ ಹಂಚಿಕೆ ವಿಷಯವಾಗಿ ಆರೋಪಿತರು 1] ಶಿವಪ್ಪ ತಂ; ದೊಡ್ಡ ಹನುಮಂತ ವಯ: 45 ವರ್ಷ, ಜಾ: ಕಬ್ಬೇರ್, : ಸೆಂಟ್ರಿಂಗ್ ಕೆಲಸ ಸಾ: ಹಾಳವೆಂಕಟಾಪೂರ. 2] ದೇವಪ್ಪ ತಂ: ದೊಡ್ಡ ಹನುಮಂತ ವಯ: 35 ವರ್ಷ, ಜಾ: ಕಬ್ಬೇರ್, : ಸೆಂಟ್ರಿಂಗ್ ಕೆಲಸ ಸಾ: ಹಾಳವೆಂಕಟಾಪೂರ ರವರು ಸಮಾನ ಉದ್ದೇಶದಿಂದ ಕೂಡಿ ದೇವರಾಜನಿಗೆ ಅಕ್ರಮವಾಗಿ ತಡೆದು ನಿಲ್ಲಿಸಿ ಜಗಳ ತೆಗೆದು ದೇವಪ್ಪನು ದೇವರಾಜನಿಗೆ ಲೇ ಸೂಳೆ ಮಗನೇ ನಮ್ಮಪ್ಪನೇ ಎಲ್ಲರಿಗೂ ದೊಡ್ಡವನು, ನಮ್ಮನ ಹೆಸರೇ ಆಸ್ತಿಯಲ್ಲಿ ಮೊದಲು ಬಂದೈತೆ, ನಾವೇ ಜಾಸ್ತಿ ತಗೋತೀವಿ ಅಂತಾ ಬೈದು ಜಗಳ ತೆಗೆದನು, ಅದಕ್ಕೆ ದೇವರಾಜನು ಎಲ್ಲಾ ಹಿರಿಯರು ಕುಳಿತು ಮಾತಾಡೋಣಪ್ಪ, ಹೆಂಗ ಪಾಲು ಬರುತ್ತೋ ಹಂಗ ಹಂಚಿಕೆ ಮಾಡಿಕೊಳ್ಳೋಣ  ಅಂತಾ ಹೇಳಿದ್ದಕ್ಕೆ ಆರೋಪಿ ಶಿವಪ್ಪನು ಸಿಟ್ಟಿಗೆ ಬಂದು ದೇವರಾಜನಿಗೆ ಕೆಳಗೆ ಕೆಡವಿ ಆತನ ಬಲಗಿವಿಯನ್ನು ಜೋರಾಗಿ ಕಡಿದು ಕತ್ತರಿಸಿದನು, ಆಗ ಅಲ್ಲಿಯೇ ಇದ್ದ ಫಿರ್ಯಾದಿ ಹಾಗೂ ಪ್ರತ್ಯಕ್ಷ್ಯದರ್ಶಿಗಳು ಬಂದು ಜಗಳ ಬಿಡಿಸಿಕೊಂಡಿದ್ದು, ಆದರೂ ಆರೋಪಿತರು ಲೇ ಇಂದಲ್ಲಾ ನಾಳೆ ನಿನ್ನನ್ನ ಖಲ್ಲಾಸ ಮಾಡಿ ನಿನ್ನ ಪಾಲಿಗೆ ಬರುವ ಹೊಲ ನಮ್ಮ ಹೆಸರಿಗೆ ಮಾಡಿಸ್ಕೋತೀವಿ ಅಂತಾ ಅವಾಚ್ಯವಾಗಿ ಬೈದು, ಜೀವದ ಬೆದರಿಕೆ ಹಾಕಿ ಹೊರಟು ಹೋದರು ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದು ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 165/2018PÀ®A. 341, 323, 326, 504, 506, ಸಹಾ 34 ಐಪಿಸಿ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ಪಿರ್ಯಾದಿ ಪ್ರಶಾಂತಬಾಬು ತಂದೆ ಪಿ.ಟಿ.ಶ್ರೀನಿವಾಸರಾವು ವಯಾ 25 ವರ್ಷ,;-ಖಾಸಗಿ ಕೆಲಸ,ಸಾ:-ಪಗಡದಿನ್ನಿ ಕ್ಯಾಂಪ್.ತಾ;-ಸಿಂಧನೂರು ಈತನ ತಂದೆ ಗಾಯಾಳು ಪಿ.ಟಿ.ಶ್ರೀನಿವಾಸರಾವು ಈತನು ತಮ್ಮ ಮೋಟಾರ್ ಸೈಕಲ್ ನಂ.ಕೆ..06-ಇಪಿ-7332 ನೇದ್ದರ ಮೇಲೆ ತನ್ನ ಖಾಸಗಿ ಕೆಲಸದ ನಿಮಿತ್ಯ ಪಗಡದಿನ್ನಿ ಕ್ಯಾಂಪಿನಿಂದ ಕುನ್ನಟಗಿ ಕಡೆಗೆ ರಸ್ತೆಯ ಎಡಬಾಜು ನಡೆಸಿಕೊಂಡು ಹೋಗುತ್ತಿರುವಾಗ ಎದುರುಗಡೆ ಮಸ್ಕಿ ರಸ್ತೆಯ ಕಡೆಯಿಂದ ಜೆ.ಸಿ.ಬಿ ವ್ಹೇಹಿಕಲ್ ನಂ.ಕೆ..15-ಎಂ-6374 ನೇದ್ದರ ಚಾಲಕನು ತನ್ನ ಜೆಸಿಬಿ ವಾಹವನ್ನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಒಮ್ಮೇಲೆ ರಸ್ತೆಯ ಬಲಗಡೆ ತಿರುಗಿಸಿ ಟಕ್ಕರಕೊಟ್ಟು ಅಪಘಾತಪಡಿಸಿ ತನ್ನ ವಾಹನವನ್ನು ನಿಲ್ಲಿಸದೆ ಹಾಗೇಯೇ ಹೋಗಿದ್ದು. ಅಪಘಾತದಲ್ಲಿ ತಮ್ಮ ತಂದೆ ಪಿ.ಟಿ.ಶ್ರೀನಿವಾಸರಾವು ಈತನ ಎಡಮೊಣಕಾಲಿನ ಕೆಳಗೆ ಭಾರೀ ರಕ್ತಗಾಯವಾಗಿ ಎಲುಬು ಮುರಿದಿದ್ದು. ವಿಷಯ ಗೊತ್ತಾಗಿ ತಮ್ಮ ತಂದೆಯನ್ನು ಸಿಂಧನೂರಿನ ಪದ್ಮಾ ನರ್ಸಿಂಗ್ ಹೊಂ ಕರೆದುಕೊಂಡು ಹೋಗಿದ್ದು.ಅಲ್ಲಿಂದ ರಾಯಚೂರಿನ ಬಾಲಂಕು ಆಸ್ಪತ್ರೆಗೆ ಸೇರಿಕೆ ಮಾಡಿದ್ದು.ಅಲ್ಲಿಯ ವೈದ್ಯರ ಸಲಹೆ ಮೇರೆಗೆ ಹೈದ್ರಾಬಾದಿನ ಅಪೋಲೋ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು,ತಮ್ಮ ತಂದೆಗೆ ಚಿಕಿತ್ಸೆ ಕೊಡಿಸುವುದು ಅತೀ ಮುಖ್ಯವಾಗಿದ್ದರಿಂದ ಆಸ್ಪತ್ರೆಗೆ ಸೇರಿಕೆ ಮಾಡಿ ಆತನ ಆರೈಕೆಯ ನಂತರ ಈಗ ತಡವಾಗಿ ತಮ್ಮಲ್ಲಿಗೆ ಬಂದು ದೂರು ಕೊಟ್ಟಿರುತ್ತೇನೆ. ಅಪಘಾತಪಡಿಸಿದ ಜೆ.ಸಿ.ಬಿ ವ್ಹೇಹಿಕಲ್ ಚಾಲಕನ ಮೇಲೆ ಕ್ರಮ ಜರುಗಿಸಲು ವಿನಂತಿ ಅಂತಾ  ಮುಂತಾಗಿ ಬರೆದುಕೊಟ್ಟ ಪಿರ್ಯಾದಿ ಮೇಲಿಂದ ಸಿಂಧನೂರು ಪೊಲೀಸ್ ಠಾಣೆ ಗುನ್ನೆ ನಂಬರ 170/2018. ಕಲಂ.279, 338  ಐಪಿಸಿ ಮತ್ತು 187 ಐಎಂವಿ ಕಾಯಿದೆ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.