Thought for the day

One of the toughest things in life is to make things simple:

25 Mar 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಅವಶ್ಯವಸ್ತುಗಳ ಕಾಯ್ದೆ ಪ್ರಕರಣದ ಮಾಹಿತಿ.
 ಮೂಲ ದಾಳಿ ಪಂಚನಾಮೆ, ಮುದ್ದೆಮಾಲು, ಆರೋಪಿತನನ್ನು ಮುಂದಿನ ಕ್ರಮ ಕುರಿತು ಹಾಜರು ಪಡಿಸಿ ಫಿರ್ಯಾದಿಯನ್ನು ಸಲ್ಲಿಸಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ: 24.03.2019 ರಂದು 03.30 ಗಂಟೆಗೆ ಆಹಾರ ನಿರೀಕ್ಷಕರು, ಪೊಲೀಸ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಹಾಗೂ ಪಂಚರು ಕೂಡಿಕೊಂಡು ಗಂಜನಲ್ಲಿರುವ ಹೊಸ ಪಟೇಲ ಗಂಜ ಹತ್ತಿರ ಬಂದು ಪರಿಶೀಲಿಸುತ್ತಿರುವಾಗ ಜಲಾಲನಗರ ಕಡೆಯಿಂದ ಒಂದು ಬಿಳಿ ಬಣ್ಣದ ಬುಲೆರೋ ಪಿಕಪ್ ವಾಹನ ಬಂದಿದ್ದು ಸದರಿ ವಾಹನವನ್ನು ನಿಲ್ಲಿಸಿ ವಾಹನವನ್ನು ಪರಿಶೀಲಿಸಲಾಗಿ ಇದು ಬಿಳಿ ಬಣ್ಣದ ಮಹೇಂದ್ರ ಕಂಪನಿಯ ಬುಲೆರೋ ಪಿಕ ಅಪ್ ವಾಹನವಾಗಿದ್ದು ಇದರ ನೊಂದಣಿ ಸಂಖ್ಯೆ ಟಿ.ಎಸ್ 06/ಯು.ಬಿ 0153 ಇದ್ದು ಅ.ಕಿ 3,50,000/- ರೂ ಇದ್ದು  ಚಾಲಕನನ್ನು ವಿಚಾರಿಸಲಾಗಿ ತನ್ನ ಹೆಸರು ಉಮೇಶ ತಂದೆ ನರಸಿಂಹಲು, ವಯಸ್ಸು: 30 ವರ್ಷ, ಜಾತಿ: ಚಲುವಾದಿ, : ಚಾಲಕ, ಸಾ: ಮನೆ ನಂ 9/19/85 ಸರ್ತಿಗೇರಾ ಗದ್ವಾಲ್ ರೋಡ ರಾಯಚೂರು ಅಂತಾ ತಿಳಿಸಿದನು. ನಂತರ ಸದರಿ ವಾಹನದಲ್ಲಿ ಪರಿಶೀಲಿಸಿ ನೋಡಲಾಗಿ 42 ಬಿಳಿ ಚೀಲಗಳಲ್ಲಿ ಇದ್ದ ಅಕ್ಕಿಯನ್ನು ಎಲೆಕ್ಟ್ರೀಕಲ್ ತಕ್ಕಡಿಯನ್ನು ತರಿಸಿ ತುಕಮಾಡಿಸಿ ನೋಡಲಾಗಿ  ಒಟ್ಟು 1950 ಕೆಜಿ  ಅಕ್ಕಿ ಇದ್ದು, 1 ಕೆಜಿ ಅಕ್ಕಿಗೆ 27 ರೂಗಳಂತೆ ಒಟ್ಟು ರೂ. 52650/- ರೂ ಬೆಲೆಬಾಳುವ ಅಕ್ಕಿ ಇರುವದು ಕಂಡು ಬಂದಿರುತ್ತದೆ. ಸದರಿ ಅಕ್ಕಿಯನ್ನು ಪರಿಶೀಲಿಸಿ ನೋಡಲಾಗಿ ಸರಕಾರದಿಂದ ಸಾರ್ವಜನಿಕ ವಿತರಣೆಗೆ ಬಿಡುಗಡೆ ಮಾಡಿದ ಪಡಿತರ ಅಕ್ಕಿ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಸದರಿ ಅಕ್ಕಿಯ ಬಗ್ಗೆ ವಿಚಾರಿಸಲಾಗಿ ವಾಹನದ ಚಾಲಕನು ಈ ಅಕ್ಕಿಯನ್ನು ಜಲಾಲನಗರದಲ್ಲಿ ಅವರಿವರಿಂದ ಕಡಿಮೆ ಧರದಲ್ಲಿ ಖರೀದಿ ಮಾಡಿ ಬೇರೆ ಕಡೆಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದಾಗ ದಾಳಿ ಮಾಡಿ ದಾಳಿ ಪಂಚನಾಮೆಯನ್ನು ಪೊರೈಸಿ ಮೂಲ ಪಂಚನಾಮೆ ಪ್ರತಿಯೊಂದಿಗೆ ಒಬ್ಬ ಆರೋಪಿ ಉಮೇಶ ತಂದೆ ನರಸಿಂಹಲು, ವಯಸ್ಸು: 30 ವರ್ಷ, ಜಾತಿ: ಚಲುವಾದಿ, : ಚಾಲಕ, ಸಾ: ಮನೆ ನಂ 9/19/85 ಸರ್ತಿಗೇರಾ ಗದ್ವಾಲ್ ರೋಡ ರಾಯಚೂರು ಇವರನ್ನು ತಾಭಾಕ್ಕೆ ತೆಗೆದುಕೊಂಡು ಸಂಜೆ 6-30 ಗಂಟೆಗೆ ವಾಪಸ್ ಠಾಣೆಗೆ ಬಂದು ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು ಹಾಜರುಪಡಿಸಿದ ಮೇರೆಗೆ ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾಕೇಟ್ ಯಾರ್ಡ್ ಪೊಲೀಸ್ ಠಾಣಾ ಗುನ್ನೆ ನಂ.17/2019 ಕಲಂ.ESSENTIAL COMMODITIES ACT, 1955 U/s-3,7  & 18 [2] pds controling order 1992 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.