Thought for the day

One of the toughest things in life is to make things simple:

18 Sept 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ಮಟ್ಕಾ ಜೂಜಾಟ ಪ್ರಕರಣದ ಮಾಹಿತಿ.

            ದಿನಾಂಕ:17-09-2020 ರಂದು 5-00 ಪಿ.ಎಮ್ ಸಮಯದಲ್ಲಿ ವೆಂಕಟೇಶ್ವರಕ್ಯಾಂಪಿನಲ್ಲಿ ಅಂಬಾದೇವಿ ಕಮಾನು ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಕುಳಿತು ಜನರನ್ನು 01 ರೂ. ಗೆ 80 ರೂ ಕೊಡುತ್ತೇನೆ ಮಟಕಾ ನಂಬರ್ ಬರೆಸಿರಿ ಅಂತಾ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ್ ಬರೆದುಕೊಂಡು ಚೀಟಿ ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿ ಶಿವರಾಜ ತಂದೆ ಈರಣ್ಣ ಬಾದರ್ಲಿ, ವಯ:45ವ, ಜಾ:ವಡ್ಡರು, ಉ:ಒಕ್ಕಲುತನ, ಸಾ:ಬಾದರ್ಲಿ, ಹಾ.ವ:ವೆಂಕಟೇಶ್ವರಕ್ಯಾಂಪ್,  ತಾ:ಸಿಂಧನೂರು ಈತನನ್ನು ಹಿಡಿದು ಅವನಿಂದ 1) ನಗದು ಹಣ ರೂ. 620/-, 2) ಒಂದು ಮಟಕಾ ಪಟ್ಟಿ 3) ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು, ಆರೋಪಿತನು ತಾನು ಬರೆದ ಮಟಕಾಪಟ್ಟಿಯನ್ನು ಯಾರಿಗೂ ಕೊಡದೇ ತನ್ನ ಹತ್ತಿರವೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ ಎಂದು ಇದ್ದ ಪಂಚನಾಮೆಯ ಸಂಗಡ ಜಪ್ತಿ ಮಾಡಿದ ಮುದ್ದೇಮಾಲು, ಆರೋಪಿತನನ್ನು ಠಾಣೆಗೆ ತಂದು ಒಪ್ಪಿಸಿ ದೂರು ನೀಡಿದ್ದು, ಸದರಿ ದೂರು ಮತ್ತು ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧ ವಾಗುತ್ತಿದ್ದರಿಂದ ಠಾಣಾ ಎನ್.ಸಿ ನಂ.29/2020 ಕಲಂ.78(3) ಕ.ಪೊ ರೀತ್ಯ ದಾಖಲಿಸಿ, ಸದರಿ ದೂರು & ದಾಳಿ ಪಂಚನಾಮೆಯ ಸಾರಾಂಶದ ಮೇಲಿಂದಾ ಗುನ್ನೆ ದಾಖಲಿಸಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಅನುಮತಿ ಕೊಡುವ ಕುರಿತು ಯಾದಿ ನಿವೇಧಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ ನಂತರ ಸದರಿ ಆರೋಪಿತರ ವಿರುದ್ದ ಸಿಂಧನೂರು ಪೊಲೀಸ್ ಠಾಣೆ ಗುನ್ನೆ ನಂ.128/2020, ಕಲಂ:78(3) ಕ.ಪೊ ಕಾಯ್ದೆ ರೀತ್ಯ  ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

          ದಿ.17-09-20 At 9-pm ಕ್ಕೆ ಪಿ.ಎಸ್.ಐ ರವರು ಮಟಕಾ ಜೂಜಾಟದ ದಾಳಿಯಿಂದ ಮರಳಿ ಠಾಣೆಗೆ ಬಂದು, ದಾಳಿ ಕಾಲಕ್ಕೆ ಜಪ್ತ ಮಾಡಿಕೊಂಡ ಮಟಕಾ ಜೂಜಾಟದ ಮುದ್ದೆಮಾಲು, ದಾಳಿ ಪಂಚನಾಮೆ, ಒಬ್ಬ ಆರೋಪಿತನನ್ನು ಹಾಜರಪಡಿಸಿ, ಮುಂದಿನ ಕಾನೂನು ಕ್ರಮ ಜರುಗಿಸುವಂತೆ ತಮ್ಮ ವಿವರವಾದ ವರದಿಯನ್ನು ದಾಳಿ ಪಂಚನಾಮೆ ಸಂಗಡ  ಒಪ್ಪಿಸಿದ್ದು ಇರುತ್ತದೆ. ಅದರ ಸಾರಾಂಶವೇನೆಂದರೆ, ಆರೋಪಿ ನಂ.1.ಈತನು ಇಂದು ದಿ.17-09-20 ರಂದು ಸಂಜೆ ಗೋರೆಬಾಳ ಗ್ರಾಮದಲ್ಲಿ, ಚೆನ್ನಬಸವೇಶ್ವರ ಪೆಟ್ರೋಲ್ ಬಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿ, ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು 1-ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ, ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ, ಮೋಬೈಲ್ ಟಾರ್ಚ ಬೆಳಕಿನಲ್ಲಿ  ರಾತ್ರಿ  7-35 ಗಂಟೆ ಸಮಯದಲ್ಲಿ ಪಂಚರ ಸಮಕ್ಷಮದಲ್ಲಿ ಆರೋಪಿ ಮುದಿಯಪ್ಪ ತಂದೆ  ಕ್ರಿಷ್ಣಪ್ಪ ವಯಾ 37 ವರ್ಷ, ಜಾ:-ಮಡಿವಾಳ ಜನಾಂಗ್, ಉ:-ಕೂಲಿಕೆಲಸ. ಸಾ:-ಮಲ್ಕಾಪೂರು ಗ್ರಾಮ ಹಾ.ವ.ಗೊರೆಬಾಳ ಈತನ  ಮೇಲೆ ದಾಳಿ ಮಾಡಿ 1).ಮಟಕಾ ಜೂಜಾಟದ ನಗದು ಹಣ 510/-ರೂಪಾಯಿ  ಒಂದು ಬಾಲ್ ಪೆನ್ನು ಮತ್ತು ಒಂದು ಮಟಕಾ ನಂಬರ ಬರೆದ ಪಟ್ಟಿ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತನಿಗೆ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತಿರುವಿ ಅಂತಾ ವಿಚಾರಿಸಿದಾಗ, ಆರೋಪಿ ನಂಬರ್ 2 ನರಸಪ್ಪ ಕುರುಬರು ಸಾ:-ಗೋರೆಬಾಳ ಗ್ರಾಮ ತಾ:-ಸಿಂಧನೂರು ಈತನಿಗೆ ಕೊಡುತ್ತಿರುವುದಾಗಿ ತಿಳಿಸಿದ್ದು ಇರುತ್ತದೆ ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯು ಅಸಂಜ್ಞೇಯ ಅಪರಾಧವಾಗಿದ್ದರಿಂದ ಠಾಣಾ NCR ನಂ.30/20 ರಲ್ಲಿ ನಮೂಧಿಸಿಕೊಂಡು ಆರೋಪಿತರ ವಿರುದ್ದ  ಕಲಂ.78(iii) ಕೆ.ಪಿ ಆ್ಯಕ್ಟ ಅಡಿಯಲ್ಲಿ ಗುನ್ನೆ ದಾಖಲಿಸಿಕೊಳ್ಳಲು ಮಾನ್ಯ ನ್ಯಾಯಾಧೀಶರಿಗೆ ಪತ್ರ ಬರೆದುಕೊಂಡು ಪರವಾನಿಗೆ ಪಡೆದ ನಂತರ ರಾತ್ರಿ  10-00 ಗಂಟೆಗೆ, ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶದ ಮೇಲಿಂದ  ಸಿಂಧನೂರು ಪೊಲೀಸ್ ಠಾಣೆ ಗುನ್ನೆ 129/2020 . ಕಲಂ. 78(iii) KP ACT-1963. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

ಮಹಿಳೆ ಮತ್ತು ಮಕ್ಕಳ ಕಾಣೆ ಪ್ರಕಣದ ಮಾಹಿತಿ.

          ಫಿರ್ಯಾದಿದಾರರ ಮಗಳು ಚಂದ್ರಕಲಾ ಈಕೆಯನ್ನು ಆಂಧ್ರಪ್ರದೇಶ ರಾಜ್ಯದ ಕೌತಾಳಂ ಮಂಡಲದ ಮ್ಯಾಳೂರಿಗೆ ಹುಲಿಗೆಯ್ಯನಿಗೆ ಕೊಟ್ಟ ಲಗ್ನ ಮಾಡಿದ್ದು, ಅವರಿಗೆ 4 ಜನ ಮಕ್ಕಳಿದ್ದು, ಎರಡು ವರ್ಷಗಳ ಹಿಂದೆ ಗಂಡ ಹೆಂಡತಿ ನಡುವೆ ಸಂಸಾರ ಸರಿಯಾಗದೇ ಚಂದ್ರಕಲಾಳು ಗಂಡನ ಮನೆಯಿಂದ ತವರುಮನೆ ಹರೇಟನೂರಿಗೆ ಬಂದು ಆಗಿನಿಂದ ಹರೇಟನೂರಿನಲ್ಲಿದ್ದು, ದಿನಾಂಕ:15-08-2020 ರಂದು ಬೆಳಿಗ್ಗೆ 07-30 ಗಂಟೆ ಸುಮಾರಿಗೆ ಸದರಿ ಚಂದ್ರಕಲಾ ಈಕೆಯು ತನ್ನ ಮಕ್ಕಳಾದ ರಾಧಾ ವಯ:11ವರ್ಷ ಹಾಗೂ ಉದಯ್ ವಯ:03 ವರ್ಷ ಇವರನ್ನು ಸಂಗಡ ಕರೆದುಕೊಂಡು ಉದಯ್ ಗೆ ಆರಾಮಿಲ್ಲ ಸಿಂಧನೂರಿಗೆ ಹೋಗಿ ತೋರಿಸಿಕೊಂಡು ಬರುತ್ತೇನೆ ಎಂದು ಹೇಳಿ ಹರೇಟನೂರಿನಲ್ಲಿ ಮನೆಯಿಂದ ಹೊರಗೆ ಹೋದವಳು ಮರಳಿ ಮನೆಗೆ ಬಂದಿರುವದಿಲ್ಲ. ಆಗಿನಿಂದ ಇಲ್ಲಿಯವರೆಗೆ ಹುಡುಕಾಡಿದರೂ ಸಿಕ್ಕಿರುವದಿಲ್ಲ. ಸದರಿ ಚಂದ್ರಕಲಾ ಈಕೆಯು ತನ್ನ ಇಬ್ಬರು ಮಕ್ಕಳಾದ ರಾಧಾ ಮತ್ತು ಉದಯ್ ಇವರೊಂದಿಗೆ ಕಾಣೆಯಾಗಿರುತ್ತಾಳೆ ಕಾರಣ ಸದರಿಯವರನ್ನು ಪತ್ತೆ ಮಾಡಿಕೊಡಲು ವಿನಂತಿ ಎಂದು ಕೊಟ್ಟ ಕಂಪ್ಯೂಟರ್ ಮುದ್ರಿತ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ಪೊಲೀಸ್ ಠಾಣಾ ಗುನ್ನೆ ನಂ:127/2020, ಕಲಂ.ಮಹಿಳೆ ಮತ್ತು ಮಕ್ಕಳ ಕಾಣೆ ರೀತ್ಯ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.