Thought for the day

One of the toughest things in life is to make things simple:

1 Feb 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.

ದಿನಾಂಕ;- 31-01-2019 ರಂದು 1830 ಗಂಟೆಗೆ ರಿಮ್ಸ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿಗೆ  ಪರಿಶೀಲಿಸಿ ಫಿರ್ಯಾದಿದಾರ ಶ್ರೀನಿವಾಸ ತಂದೆ ತಿಕ್ಕಣ್ಣ, ವಯ 65 ವರ್ಷ, ಗೊಲ್ಲರು, ಹಾಲು ವ್ಯಾಪಾರ, ಸಾ|| ಮೊಹ್ಮದ್ ನಗರ ಅಶೋಕ ಡಿಪೋ ಹತ್ತಿರ ರಾಯಚೂರು ರವರ ಲಿಖಿತ ದೂರನ್ನು ಪಡೆದುಕೊಂಡು ವಾಪಸ್ಸು ಠಾಣೆಗೆ 1930 ಗಂಟೆಗೆ ಬಂದಿದ್ದು, ದೂರಿನ ಸಾರಾಂಶವೆನೇಂದರೆ, ದಿನಾಂಕ;-31-01-2019 ರಂದು 1630 ಗಂಟೆಗೆ ಫಿರ್ಯಾದಿದಾರರು TVS XL SUPUER MOPED NO. KA36EC3602 ನೇದ್ದರ ನಂದೀಶ್ವರ ಗುಡಿ ಹತ್ತಿರ ಹಾಲು ಹಾಕಿ ನಂತರ ಜ್ಯೋತಿ ಕಾಲೋನಿಯಲ್ಲಿರುವ ಮನೆಗೆ ಹಾಲು ಹಾಕಲು ರಾಯಚೂರುಮಂತ್ರಾಲಯ ರಸ್ತೆಯ  ಶ್ರೀ ಚೈತನ್ಯ ಶಾಲೆಯ ಕ್ರಾಸ್ ನಲ್ಲಿ ಹೋಗುವಾಗ ಆರೋಪಿತನು TRAX TOOFAN JEEP NO. KA33A0981 ನೇದ್ದನ್ನು ಆರ್.ಟಿ. ವೃತ್ತದ ಕಡೆಯಿಂದ ಸ್ಟೇಷನ್ ಸರ್ಕಲ್ ಕಡೆಗೆ ಹೋಗುವಾಗ, ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ಫಿರ್ಯಾದಿದಾರರು ನಡೆಸುತ್ತಿದ್ದ ಮೊಪೆಡಗೆ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿದಾರರು  ಕೆಳಗಡೆ ಬೀಳಲು ಆತನ ಎಡಗಾಲು ಮೊಣಕಾಲಿನ ಕೆಳಗಡೆ ಎಲುಬು ಮುರಿದು ಭಾರೀ ರಕ್ತಗಾಯವಾಗಿದ್ದು, ಎಡಮುಂಗೈ ಹತ್ತಿರ ರಕ್ತಗಾಯವಾಗಿದ್ದು ಇರುತ್ತದೆ. ಅಪಘಾತ ನಂತರ ಆರೋಪಿತನು ವಾಹನದೊಂದಿಗೆ ಹಾಗೆಯೇ ಹೋಗಿದ್ದು ಇರುತ್ತದೆ. ಕಾರಣ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಸಾರಾಂಶದ ಮೇಲಿಂದ ನಗರ ಸಂಚಾರ ಪೊಲೀಸ್ ಠಾಣಾ ಗುನ್ನೆ ನಂ. 09/2019 ಕಲಂ 279, 338 IPC & 187 IMV ACT ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುರುತ್ತದೆ.

ರಾಶಿ ಯಂತ್ರದಿಂದ ಅಪಘಾತ ಪ್ರಕಣದ ಮಾಹಿತಿ.
ದಿನಾಂಕ.01-02-2019ರಂದು ಚಲ್ಲರಾವ್ @ ಚಂದು ತಂದೆ ದಿ:: ಶ್ರೀನಿವಾಸ ವಯ-22ವರ್ಷ ಜಾತಿ-ಕಾಪು,
ಉ-ಕೂಲಿಕೆಲಸ, ಸಾ:ಭಾಗ್ಯನಗರ ಕ್ಯಾಂಪ್ [ಪಿರ್ಯಾದಿದಾರರ ಮಗ]
 ಮೃತನು ಆರೋಪಿ ನಂ.2 ಪೂರ್ಣ ವೆಂಕಟಸುಧಾಕರ ತಂದೆ ಎನ್.ರಾಮಪ್ರಸಾದ  ಜಾತಿ-ಕಮ್ಮಾ, ಟ್ರಾಕ್ಟರ ನಂ:KA-36/TC-7704 [ಇಂಜಿನ್] ಹಾಗೂ ಕಡ್ಲಿ ಹಾಕುವ ಮಶಿನ್
 ಮಾಲಕ ಸಾ:ಜಾಲಾಪೂರ ಕ್ಯಾಂಪ್
ನೇದ್ದವನ ಟ್ರಾಕ್ಟರ ಮತ್ತು ಕಡ್ಲಿ ಹಾಕುವ ಮಶಿನದಲ್ಲಿ ಕೂಲಿಕೆಲಸಕ್ಕೆ ಅಂತಾ ಹೋಗಿದ್ದಾಗ ಬೆಳಗಿನ 09-45 ಗಂಟೆಗೆ ಭಾಗ್ಯನಗರ ಕ್ಯಾಂಪ ಹತ್ತಿರವಿರುವ ಕೆ.ಶರಣಪ್ಪ ಇವರ ಹೊಲದಲ್ಲಿ ಟ್ರಾಕ್ಟರ ನಂ:KA-36/TC-7704 [ಇಂಜಿನ್] ಹಾಗೂ ಕಡ್ಲಿ ಹಾಕುವ ಮಶಿನ ನಲ್ಲಿ ಕೂಲಿ ಜನರೊಂದಿಗೆ ಕಡ್ಲಿ ಹಾಕುತ್ತಿದ್ದಾಗ ಮೃತನ ಕುತ್ತಿಗೆಯಲ್ಲಿರುವ ಟವೆಲ್ ಮಶಿನನ ಪಟ್ಟಿಯಲ್ಲಿ ಹೋಗಿ ಕುತ್ತಿಗೆ ಬಿಗಿಯಾಗಿ ನಂತರ ನೆಲಕ್ಕೆ ಬಿದ್ದಾಗಮೃತನ ಹಿಂದೆಲೆಗೆ ರಕ್ತಗಾಯ,ಎಡಕುತ್ತಿಗೆಗಾಯವಾಗಿದ್ದು ಚಿಕಿತ್ಸೆ ಕುರಿತು ಸಿರವಾರ ಸರಕಾರಿ ಆಸ್ಪತ್ರೆಗೆ ಮುಂಜಾನೆ 10-15ಗಂಟೆಗೆ ಮೃತಪಟ್ಟಿರುತ್ತಾನೆ ಸದರಿ ಘಟನೆ ಸಮಯದಲ್ಲಿ ಆರೋಪಿತರಿಬ್ಬರು ಸ್ಥಳದಲ್ಲಿಯೇ ಇದ್ದು ಯಾವುದೇ ಮುಂಜಾಗೃತೆ ವಹಿಸದೆ ಅಲಕ್ಷತನ ಮಾಡಿದ್ದರಿಂದ ಈ ಘಟನೆ ಜರುಗಿ ನನ್ನ ಮಗ ಸತ್ತಿದ್ದು ಸದರಿಯವರ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಸಾರಾಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 14/2019 ಕಲಂ:304[ಎ] ಐಪಿಸಿ ಅಡಿಯಲ್ಲಿ ಪ್ರಕಣ ದಾಖಲು ಮಾಡಿಕೊಂಡು ತನಿಕೆ ಕೈಗೊಂಡಿರುತ್ತಾರೆ.