Thought for the day

One of the toughest things in life is to make things simple:

11 Sep 2018

Press Note


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

-:: ಪತ್ರಿಕಾ ಪ್ರಕಟಣೆ ::-
-:: ಕುಖ್ಯಾತ  ಅಂತರ್ ರಾಜ್ಯ ವಾಹನಗಳ್ಳರ ಬಂಧನ ::-

     ರಾಯಚೂರು ಜಿಲ್ಲೆಯ ಶಕ್ತಿನಗರ ಪೊಲೀಸ್ ಠಾಣೆಯ ಪೊಲೀಸರು ನಾಲ್ವರು ಕುಖ್ಯಾತ ಅಂತರ್ ರಾಜ್ಯ ವಾಹನಗಳ್ಳತನ ಮಾಡುವ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
     ರಾಯಚೂರು ಜಿಲ್ಲೆಯ ಶಕ್ತಿನಗರ ಹಾಗೂ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣಾ ಹದ್ದಿಯಲ್ಲಿ ಇತ್ತೀಚಿಗೆ ಜರುಗಿದ ಟಿಪ್ಪರ್ ಮತ್ತು ಲಾರಿ ಕಳುವು ಪ್ರಕರಣಗಳ ಪತ್ತೆಗಾಗಿ ಡಿ.ಕಿಶೋರ ಬಾಬು IPS ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು, ಎಸ್.ಬಿ. ಪಾಟೀಲ್ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರು, ಜಿ.ಹರೀಶ ಪೊಲೀಸ್ ಉಪಾಧೀಕ್ಷರು ರಾಯಚೂರು ರವರ ಮಾರ್ಗದರ್ಶನದಲ್ಲಿ ಹನುಮರಡ್ಡೆಪ್ಪ ಸಿ.ಪಿ.. ಗ್ರಾಮೀಣ ವೃತ್ತ ರಾಯಚೂರು  ರವರ ನೇತೃತ್ವದಲ್ಲಿ ಸೋಮಶೇಖರ ಎಸ್. ಕೆಂಚರೆಡ್ಡಿ ಪಿಎಸ್ಐ ಶಕ್ತಿನಗರ ಠಾಣೆ, ಜಿಲಾನಿ ಪಾಷಾ ಎಎಸ್ಐ ಹಾಗೂ ಸಿಬ್ಬಂದಿಯವರಾದ ಹುಸೇನ್ ಸಾಬ್ ಮುಲ್ಲಾ ಸಿ.ಹೆಚ್.ಸಿ. 299, ನಾಗಪ್ಪ ಸಿ.ಹೆಚ್.ಸಿ.74, ವೀರೇಶ ಸಿಪಿಸಿ 636, ಡಾಕಪ್ಪ ಸಿಪಿಸಿ 391, ಅಯ್ಯಣ್ಣ ಸಿಪಿಸಿ 400, ಬಸವರಾಜ ಸಿಪಿಸಿ 405, ಚಂದಾ ಪ್ರಕಾಶ ಶೆಟ್ಟಿ ಸಿಪಿಸಿ 650 ಹಾಗೂ ಯಂಕಪ್ಪ .ಪಿ.ಸಿ.183  ಇವರನ್ನೊಳಗೊಂಡ ವಿಶೇಷ  ತಂಡವನ್ನು ರಚಿಸಿದ್ದರು.
     ಈ ತಂಡವು ಹಗಲಿರಳು ಶ್ರಮಿಸಿ 04 ಜನ ಕುಖ್ಯಾತ  ವಾಹನಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ಅವರಿಂದ
1] ಒಂದು ಟಿಪ್ಪರ್ .ಕಿ.ರೂ.18,00,000/-
2) ಒಂದು ಅಶೋಕ ಲೈಲ್ಯಾಂಡ್ ಕಂಪನಿಯ ಲಾರಿ .ಕಿ.ರೂ.6,00,000/- ಹೀಗೆ ಒಟ್ಟು ಎಲ್ಲಾ ಸೇರಿ ಒಟ್ಟು 24,00,000/- ಬೆಲೆ ಬಾಳುವ ವಾಹನಗಳನ್ನು, ಮತ್ತು ಆರೋಪಿತರು ಕೃತ್ಯಕ್ಕೆ ಬಳಸಿದ ಒಂದು ಕಾರ್ ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
:: ಬಂಧಿತ ವಾಹನ ಕಳ್ಳರು ::

1] ಗಂಗಾಧರ ತಂದೆ ಕೃಷ್ಣ ||39ವರ್ಷ, ಸಾ||ಡೋರ್ ನಂ:2-50 ತಿಮ್ಮಾಪುರಂ, ಮಂಡಲ:ಕಾಕಿನಾಡ, ಜಿ||ಈಸ್ಟ್ ಗೋದಾವರಿ
2] ಸತೀಶ ತಂದೆ ರಮೇಶ ||26ವರ್ಷ, ಸಾ||ಕೊಂಡುವರಂ, ಮಂಡಲ:ಪೀಠಾಪುರ, ಜಾ||ಜಿ||ಈಸ್ಟ್ ಗೋದಾವರಿ (ಟಿ.ಎಸ್.)
3] ಮಹ್ಮದ್ ಮುಸ್ತಾಫಾ ತಂದೆ ಹುಸೇನ್ ಸಾಬ್ ಸಾ||ಯರ್ರಗಡ್ಡ ಬೋರಬಂಡಾ, ಖಾಜಾ ಗರೀಬ್ ನವಾಜ್ ದರ್ಗಾದ ಹತ್ತಿರ ಹೈದ್ರಾಬಾದ್
4] ಖಾಲೀದ್ ಅಖ್ತರ್ ತಂದೆ ಮಹ್ಮದ್ ಇಬ್ರಾಹಿಂ ||52ವರ್ಷ, ಸಾ|| ಮಹಾವೀರ ನಗರ ಗುಡ್ಡಿ ಮಲ್ಕಾಪೂರ ಹೈದ್ರಾಬಾದ್

     ಇವರು ರಾಯಚೂರು ಜಿಲ್ಲೆಯ ಶಕ್ತಿನಗರ ಪೊಲೀಸ್ ಠಾಣೆ ಮತ್ತು ಮಾರ್ಕೆಟ್ ಯಾರ್ಡ್ ಠಾಣೆ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ ಲಾರಿ ಮತ್ತು ಟಿಪ್ಪರ್ ಗಳನ್ನು ಕಳ್ಳತನ ಮಾಡಿದ್ದು ಒಟ್ಟು 02 ಪ್ರಕರಣಗಳು ಪತ್ತೆಯಾಗಿದ್ದು ಇವರಿಂದ ಕಳುವು ಮಾಡಿದ ವಾಹಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡವನ್ನು ಎಸ್.ಪಿ. ಮತ್ತು ಹೆಚ್ಚುವರಿ ಎಸ್.ಪಿ. ರಾಯಚೂರು ರವರು  ಶ್ಲಾಘಿಸಿದ್ದಾರೆ.
ರಸ್ತೆ ಅಪಘಾತ ಪ್ರಕಣದ ಮಾಹಿತಿ.
ದಿನಾಂಕ 11-09-2018 ರಂದು ಬೆಳಿಗ್ಗೆ 10-00 ಗಂಟೆಗೆ ಫಿರ್ಯಾದಿ ಬಿ.ಶ್ರೀನಿವಾಸ ತಂದೆ ಬಿ.ಪೆದ್ದ ರಾಮೋಜಿರಾವ್ ವಯಾಃ 40 ವರ್ಷ ಜಾತಿಃ ದರ್ಜಿ (ರಂಗರಾಜು) ಉಃ ಬಟ್ಟೆ ವ್ಯಾಪಾರ ಸಾಃ ಶಾಂತಿನಗರ. ವಡ್ಡೆಪಲ್ಲಿ ಮಂಡಲಂ ಗದ್ವಲ್ ಜಿಲ್ಲಾ (ಟಿ.ಎಸ್) ರವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆಯ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೆನೆಂದರೆ ಫಿರ್ಯಾದಿಯ ಅಣ್ಣನಾದ ಆರೋಪಿ ಬಿ. ಲಕ್ಷ್ಮಣರಾವ್ ಈತನು ಗಂಗಾವತಿಯಲ್ಲಿರುವ ತನ್ನ ತಂಗಿಯನ್ನು ಮಾತನಾಡಿಸಿ ರಾಖಿ ಕಟ್ಟಿಸಿಕೊಂಡು ಬರಲು ಅಂತಾ ತನ್ನ ಹೆಂಡತಿಯಾದ ಬಿ.ಲಕ್ಷ್ಮಿಬಾಯಿ ಈಕೆಯನ್ನು ಕೂಡಿಸಿಕೊಂಡು ದಿನಾಂಕ 07-09-2018 ರಂದು ಪಿರ್ಯಾದಿಯ ಕಾರ್ ನಂ ಎಪಿ 04-ಕ್ಯೂ1846 ನೇದ್ದನ್ನು ತೆಗೆದುಕೊಂಡು ಹೋಗಿದ್ದು ಅಂದು ಅಲ್ಲೆ ಇದ್ದು ಮರು ದಿವಸ ದಿನಾಂಕ 08-09-2018 ರಂದು ಅಲ್ಲಿಂದ ತಮ್ಮೂರಿಗೆ ಬರಲು ಅಂತಾ ಸಿಂದನೂರು- ಮಾನವಿ ಮುಖ್ಯ ರಸ್ತೆಯ ಹಿಡಿದು ಆರೋಪಿತನು ಕಾರಿನಲ್ಲಿ ತನ್ನ ಹೆಂಡತಿ ಬಿ ಲಕ್ಷ್ಮಿಬಾಯಿ ಈಕೆಯನ್ನು ಕೂಡಿಸಿಕೊಂಡು  ಕಾರನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಕಾರಿನ ವೇಗವನ್ನು ನಿಯಂತ್ರಿಸಲಾಗದೇ ಮಾನವಿ ಪಟ್ಟಣದ ಭಾಷಮೀಯಾ ಡಿಗ್ರಿ ಕಾಲೇಜಿನ ಸಮೀಪ  ದಿನಾಂಕ 08-09-2018 ಮಧ್ಯಾಹ್ನ 3-30 ಗಂಟೆಯ ಸುಮಾರಿಗೆ ರಸ್ತೆ ಎಡಗಡೆ ಹಾಕಿದ್ದ ಭದ್ರತಾ ಕಲ್ಲುಗಳಿಗೆ ಟಕ್ಕರ್ ಮಾಡಿದ್ದು ಪರಿಣಾಮ ಕಾರು ಪಲ್ಟಿಯಾಗಿ ರಸ್ತೆ ಎಡಬಾಜು ಬಿದ್ದು ಕಾರಿನಲ್ಲಿ ಕುಳಿತಿದ್ದ ಬಿ.ಲಕ್ಷ್ಮಿಬಾಯಿ ಈಕೆಗೆ ತಲೆಗೆ ಭಾರಿ ರಕ್ತಗಾಯವಾಗಿದ್ದು  ಆರೋಪಿತನಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ  ಚಿಕಿತ್ಸೆ ಕುರಿತು ಆಕೆಯನ್ನು ಮಾನವಿ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ರಾಯಚೂರಿನ ರೀಮ್ಸ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಅಲ್ಲಿಂದ ಇನ್ನೂ ಹೆಚ್ಚಿನ ಚಿಕಿತ್ಸೆ ಕುರಿತು  ಕರ್ನೂಲ್ ಶ್ರೀ ಚಕ್ರ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ ಕಾರಣ ಬಿ.ಲಕ್ಷ್ಮಣರಾವ್ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆಯ ಫಿರ್ಯಾದಿಯ ಮೇಲಿಂದ  ಮಾನವಿ ಠಾಣಾ ಗುನ್ನೆ ನಂ 272/2018 ಕಲಂ 279. 338 .ಪಿ,.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.