Thought for the day

One of the toughest things in life is to make things simple:

20 Mar 2019

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

-:: ಪತ್ರಿಕಾ ಪ್ರಕಟಣೆ ::-

-:: ಕುಖ್ಯಾತ  ಅಂತರ್ ರಾಜ್ಯ ಕಳ್ಳನ ಬಂಧನ ::-


          ರಾಯಚೂರು ಜಿಲ್ಲೆಯ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ, ಯರಗೇರಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮನೆ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಬಗ್ಗೆ ಪ್ರಕರಣಗಳು ವರದಿಯಾಗಿದ್ದವು. ಈ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡುವ ಸಲುವಾಗಿ ಶ್ರೀ ಡಿ.ಕಿಶೋರ ಬಾಬು IPS ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರು, ಶ್ರೀ ಶ್ರೀಹರಿ ಬಾಬು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರ ನೇರ ಸುಪರ್ದಿಯಲ್ಲಿ ಶ್ರೀ ಅಂಬಾರಾಯ ಎಮ್. ಕಮಾನಮನಿ ಸಿ.ಪಿ.. ಗ್ರಾಮೀಣ ವೃತ್ತ ರಾಯಚೂರು, ಶ್ರೀ ದತ್ತಾತ್ರೇಯ ಎಮ್. ಕಾರ್ನಾಡ್ ಸಿ.ಪಿ.ಐ. ಯರಗೇರಾ ವೃತ್ತ ಮತ್ತು ಶ್ರೀ ನಿಂಗಪ್ಪ ಎನ್.ಆರ್. ಪಿಎಸ್ಐ ರಾಯಚೂರು ಗ್ರಾಮೀಣ ಠಾಣೆ, ಶ್ರೀ ಜಗದೀಶ ಕೆ.ಜಿ. ಪಿಎಸ್ಐ ಯರಗೇರಾ ಪೊಲೀಸ್ ಠಾಣೆ ಹಾಗೂ ನುರಿತ ಅಪರಾಧ ವಿಭಾಗದ ಸಿಬ್ಬಂದಿಯವರನ್ನೊಳಗೊಂಡಂತೆ ತಂಡವನ್ನು ರಚನೆ ಮಾಡಲಾಗಿತ್ತು.
            ರಚನೆ ಮಾಡಿದ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರು ತೆಲಂಗಾಣಾ ರಾಜ್ಯದ ನಾರಾಯಣಪೇಟೆ ಜಿಲ್ಲೆಯ ಲಕ್ಷ್ಮೀಕಾಂತ ನಾಯಕ ತಂದೆ ಶಿವರಾಮ ನಾಯಕ ರಾಠೋಡ್ ವ||26ವರ್ಷ, ಜಾ||ಲಮಾಣಿ, ಉ||ಕಾರ್ ಚಾಲಕ ಸಾ||ಪೆದರಿಪಾಡು ತಾಂಡಾ ಮಂಡಲ:ಮದ್ದೂರು ವನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದು, ಒಟ್ಟು 03 ಕಳ್ಳತನ ಪ್ರಕರಣಗಳು ಪತ್ತೆಯಾಗಿದ್ದು ದಸ್ತಗಿರಿಯಾದ ಆರೋಪಿತನಿಂದ ಒಟ್ಟು 95.5 ಗ್ರಾಮ್ ಬಂಗಾರದ ಆಭರಣಗಳು ಮತ್ತು 1030 ಗ್ರಾಮ್ ಬೆಳ್ಳಿ ಆಭರಣಗಳು ಹೀಗೆ ಎಲ್ಲಾ ಸೇರಿ ಒಟ್ಟು ರೂ.3,29,900/- ಬೆಲೆ ಬಾಳುವ ವಸ್ತುಗಳನ್ನು ಜಪ್ತಿಪಡಿಸಿಕೊಂಡಿದ್ದು, ಕಳುವು ಮಾಡಲು ಉಪಯೋಗಿಸುತ್ತಿದ್ದ ಹಾರೆ ಮತ್ತು ಇನ್ನಿತರೆ ವಸ್ತುಗಳನ್ನು ಸಹ ಜಪ್ತಿಪಡಿಸಿಕೊಳ್ಳಲಾಗಿರುತ್ತದೆ. ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿತರಾದ ಮಲ್ಲೇಶ ನಾಯಕ ಹಾಗೂ ಗೋಪಾಲ ನಾಯಕ ಇವರ ಬಗ್ಗೆ ನಿಖರವಾದ ಸುಳಿವು ದೊರೆತಿದ್ದು, ಅವರನ್ನೂ ಸಹ ಪತ್ತೆ ಮಾಡಿ ಬಂಧಿಸುವ ಕಾರ್ಯ ಮುಂದುವರೆದಿರುತ್ತದೆ.
            ಸಿ.ಪಿ.ಐ. ಗ್ರಾಮೀಣ ವೃತ್ತ ರಾಯಚೂರು, ಸಿ.ಪಿ.ಐ. ಯರಗೇರಾ ವೃತ್ತ ರವರ ತಂಡದ ಕಾರ್ಯ ಸಾಧನೆಯನ್ನು ಪೊಲೀಸ್ ಅಧೀಕ್ಷಕರು ರಾಯಚೂರು ಪ್ರಶಂಶಿಸಿರುತ್ತಾರೆ. ಬಂಧಿತ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಿದ್ದು, ಉಳಿದ ಆರೋಪಿತರನ್ನು ಆದಷ್ಟು ಬೇಗನೇ ಪತ್ತೆ ಮಾಡಿ ಬಂಧಿಸಿ ತನಿಖೆಗೆ ಒಳಪಡಿಸಲಾಗುವುದು.