Thought for the day

One of the toughest things in life is to make things simple:

10 Apr 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ 09.04.2019 ರಂದು ಬೆಳಿಗ್ಗೆ 10.50 ಗಂಟೆಗೆ ಫಿರ್ಯಾದಿ ಅಣ್ಣಾ ಜಟ್ಟಿ ತಂದೆ ಹನುಮಾ ಜಟ್ಟಿ ವಯಾ: 65 ವರ್ಷ ಜಾ: ಜಟ್ಟಿ ಬ್ರಾಹ್ಮಣ ಉ: ಒಕ್ಕಲುತನ ಸಾ: ಕೇನಾಲ್ ಕ್ರಾಸ್ ಗುರಗುಂಟಾ ಇವರ ಹೊಲದಲ್ಲಿ ಆರೋಪಿತರು ತಮ್ಮ ಆಡುಗಳನ್ನು ಬಿಟ್ಟು ಮೇಯಿಸುತ್ತಿದ್ದಾಗ ಫಿರ್ಯಾದಿಯು ತಮ್ಮ ಹೊಲದ ಕೇನಾಲ್ ಹತ್ತಿರ ಬಂದು ಹೊಲದಲ್ಲಿ ಆಡು ಬಿಡಬ್ಯಾಡ ವರ್ಷ ವರ್ಷ ಹೊಲದಲ್ಲಿ ಆಡು ಬಿಟ್ಟು ಹೊಲ ಹಾಳು ಮಾಡುತ್ತೀ ಅಂತಾ ಹೇಳಿದ್ದಕ್ಕೆ ಆರೋಪಿ ನಂ 1 «ÃgÀ¨sÀzÀæ¥Àà vÀAzÉ ¥ÀgÀ¸À¥Àà eÁ: PÀ¨ÉâÃgï ನೇದ್ದವನು ಸೂಳೇ ಮಗನೇ ನೀನೇನು ಹರಕೋತ್ತೀ ನಾನು ಹೊಲದಲ್ಲಿ ಆಡು ಬಿಡವನೇ ಅಂತಾ ಅವಾಚ್ಯವಾಗಿ ಬೈದಾಡಿ ಒಮ್ಮೆಲೆ ಫಿರ್ಯಾದಿಯೊಂದಿಗೆ ಜಗಳಕ್ಕೆ ಬಂದು ಬಲಗಡೆ ಭುಜಕ್ಕೆ ಕಟ್ಟಿಗೆಯಿಂದ ಹೊಡೆದು ರಕ್ತಗಾಯಪಡಿಸಿದ್ದು, ಆಗ ಫಿರ್ಯಾದಿಯು ದೂರು ಕೊಡಲು ಗುರಗುಂಟಾ ಹೊರ ಠಾಣೆಗೆ ಬರುತ್ತಿದ್ದಾಗ ಠಾಣೆಯ ಹತ್ತಿರದ ರಸ್ತೆಯಲ್ಲಿ ಬೆಳಿಗ್ಗೆ 11.10 ಗಂಟೆಗೆ ಆರೋಪಿ ನಂ 1 ನೇದ್ದವನು ತಡೆದು ನಿಲ್ಲಿಸಿ ಸೂಳೇ ಮಗನೆ ಅಂತಾ ಬೈದಾಡಿ ಕಟ್ಟಿಗೆಯಿಂದ  ಎಡಗಡೆ ಸೊಂಟಕ್ಕೆ ಹೊಡೆದಿದ್ದು, ಜಗಳವನ್ನು ನೋಡಿ ಬಿಡಿಸಲು ಬಂದ ಫಿರ್ಯಾದಿಯ ಮಗ ನರಹರಿಗೆ ರಮೇಶ ತಂದೆ ವೀರಭದ್ರಪ್ಪನು ಕಲ್ಲಿನಿಂದ ಆತನ ಹೊಟ್ಟೆಗೆ ಹೊಡೆದು ಗಾಯಪಡಿಸಿದ್ದು, ಮತ್ತು ಆರೋಪಿತರು ಸೂಳೇ ಮಕ್ಕಳೆ ಇವತ್ತು ಉಳಿದುಕೊಂಡಿದ್ದಿರಿ ಇನ್ನೊಮ್ಮ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಉಳಿಸುವದಿಲ್ಲವೆಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.  ಅಂತಾ ಹೇಳಿಕೆ ಫಿರ್ಯಾದಿ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 55/2019 PÀ®A 341, 323, 324, 504, 506 ¸À»vÀ 34 L¦¹ ಅಡಿಯಲ್ಲಿ ಪ್ರಕಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ 09.04.2019 ರಂದು ಬೆಳಿಗ್ಗೆ 11.00 ಗಂಟೆ ಸುಮಾರಿಗೆ ಫಿರ್ಯಾದಿ ವೀರಭದ್ರಪ್ಪ ತಂದೆ ಪರಸಪ್ಪ ವಯಾ: 45 ವರ್ಷ ಜಾ: ಕಬ್ಬೇರ್ ಉ: ಒಕ್ಕಲುತನ ಸಾ: ಗುರಗುಂಟಾ ಈತನು ತಮ್ಮೂರಿನ ಅಣ್ಣಾ ಜಟ್ಟಿ ಇವರ ಹೊಲದ ಹತ್ತಿರ ಆಡುಗಳನ್ನು ಮೇಯಿಸುತ್ತಿದ್ದಾಗ ಆಡುಗಳು ಆರೋಪಿ ಅಣ್ಣ ಜಟ್ಟಿ ಇವರ ಹೊಲದಲ್ಲಿ ಹೋಗಿದ್ದು, ಆಗ ಆರೋಪಿ ನಂ 1  ನೇದ್ದವನು ಕೇನಾಲ್ ಹತ್ತಿರ ಇದ್ದ ಫಿರ್ಯಾದಿಗೆ ಸೂಳೇ ಮಗನೇ ನಿನಗೆಷ್ಟು ಸಲ ಹೇಳಿದ್ವೀ ನಮ್ಮ ಹೊಲದಲ್ಲಿ ಆಡುಗಳನ್ನು ಬಿಡಬ್ಯಾಡ, ಹೊಲ ಹಾಳಾಗುತ್ತಾ ಅಂತಾ ಹೇಳಿದರು ನೀನು ನಮ್ಮ ಹೊಲದಲ್ಲಿ ಆಡುಗಳನ್ನು ಮೇಯಿಸಲು ಬಿಟ್ಟಿದ್ದೀ ಅಂತಾ ಬೈದಾಡಿದನು. ಅದಕ್ಕೆ ಫಿರ್ಯಾದಿ ಬೇಕಂತಲೆ ನಿಮ್ಮ ಹೊಲದಲ್ಲಿ ಆಡುಗಳನ್ನು ಬಿಟ್ಟಿಲ್ಲ, ಅವೇ ಹೋಗ್ಯಾವ ಅಂತಾ ಅಂದಿದ್ದಕ್ಕೆ ಆರೋಪಿ ನಂ 1 CtÚdnÖ vÀAzÉ ºÀ£ÀĪÀiÁ dnÖ ನೇದ್ದವನು ಸೂಳೇ ಮಗನೇ ಬೇಕಂತಲೆ ನಮ್ಮ ಹೊಲದಲ್ಲಿ ಬಿಟ್ಟು ಈಗ ಇಲ್ಲ ಅಂತಿಯಾ ಅಂತಾ ಅಂದವನೇ ಇಟ್ಟಂಟಿ ಎಳ್ಳಿಯಿಂದ ಫಿರ್ಯಾದಿಯ  ತಲೆಗೆ ಹೊಡೆದು ರಕ್ತಗಾಯಪಡಿಸಿದ್ದು, ಆಗ ಫಿರ್ಯಾದು ದೂರು ಕೊಡಲು ಗುರಗುಂಟಾ ಹೊರ ಠಾಣೆಗೆ ಬರುತ್ತಿದ್ದಾಗ ಠಾಣೆಯ ಹತ್ತಿರದ ರಸ್ತೆಯಲ್ಲಿ ಬೆಳಿಗ್ಗೆ 11.15 ಗಂಟೆಗೆ ಆರೋಪಿತರು ಫಿರ್ಯಾದಿಗೆ ತಡೆದು ನಿಲ್ಲಿಸಿ ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು ಒಳಪೆಟ್ಟುಗೊಳಿಸಿ ಸೂಳೇ ಮಗನೇ ಇವತ್ತು ಉಳಿದುಕೊಂಡಿದ್ದಿರಿ ಇನ್ನೊಮ್ಮ ನಮ್ಮ ಹೊಲದಲ್ಲಿ ಆಡುಗಳನ್ನು ಮೇಯಿಸಿದರೆ ನಿಮ್ಮನ್ನು ಜೀವ ಸಹಿತ ಉಳಿಸುವದಿಲ್ಲವೆಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.   ಅಂತಾ ಹೇಳಿಕೆ ಫಿರ್ಯಾದಿ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 56/2019 PÀ®A 341, 323, 324, 504, 506 ¸À»vÀ 34 L¦¹   ಅಡಯಲ್ಲ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಮಟಕಾ ಜೂಜಾಟದ ಪ್ರಕರಣದ ಮಾಹಿತಿ.
ದಿನಾಂಕ 08.04.2019 ರಂದು ರಾತ್ರಿ 7.45 ಗಂಟೆಗೆ ಹಟ್ಟಿ ಪಟ್ಟಣದ ಸಂತೆ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಆಂಜನೇಯ್ಯ ತಂದೆ ಕಲ್ ನಿಂಗಪ್ಪ  ವಯಾ: 25 ವರ್ಷ ಜಾ: ಉಪ್ಪಾರ ಉ: ಅಕ್ಕಿ ವ್ಯಾಪಾರ ಸಾ: ಸಂತೆ ಬಜಾರ ಹತ್ತಿರ ಹಟ್ಟಿ ಪಟ್ಟಣ ಈತನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ಆರೋಪಿತನು ತಾನೇ ಇಟ್ಟು ಕೊಳ್ಳುವುದಾಗಿ ತಿಳಿಸಿದ್ದು, ನಂತರ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 19/2019 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ  09.04.2019 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 57/2019 PÀ®A. 78(111) PÉ.¦. PÁAiÉÄÝ  ಅಡಿಯಲ್ಲ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.