Thought for the day

One of the toughest things in life is to make things simple:

9 Jan 2019

Reported Crimes



ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ರಸ್ತೆ ಅಪಘಾತ ಪ್ರಕರಣ ಮಾಹಿತಿ.
ದಿನಾಂಕ  07-01-2019 ರಂದು ಬೆಳಗಿನ ಜಾವ 2-50 ಗಂಟೆಗೆ ರಾಯಚೂರು ರೀಮ್ಸ ಬೋದಕ ಆಸ್ಪತ್ರೆಯಿಂದ ಮಲ್ಲಿಕಾರ್ಜುನ ತಂದೆ ಚನ್ನಪ್ಪ  ಸಾಃ ಬ್ಯಾಗವಾಟ ಈತನು ಮೃತಪಟ್ಟ ಬಗ್ಗೆ ಎಮ್,ಎಲ್ ಸಿ, ಮಾಹಿತಿ ಬಂದ ಮೇರೆಗೆ  ವೀರನಗೌಡ. .ಎಸ್. ರವರನ್ನು ವಿಚಾರಣೆ ಕುರಿತು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು  ಆಸ್ಪತ್ರೆಯ ಶವಗಾರ ಕೋಣೆಯಲ್ಲಿದ್ದ ಮೃತ ಮಲ್ಲಿಕಾರ್ಜುನ ಈತನ ಶವವನ್ನು ನೋಡಿ ಹಾಜರಿದ್ದ ಮೃತನ ಮೊಮ್ಮಗನಾ ಬಸವರಾಜ ತಂದೆ ಚನ್ನಪ್ಪ ಸಾಃ ಬ್ಯಾಗವಾಟ ಈತನ ಹೇಳಿಕೆಯ ದೂರನ್ನು ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಹೆಚ್.ಸಿ 213 ರವರ ಸಂಗಡ ಕಳುಹಿಸಿಕೊಟ್ಟಿದ್ದನ್ನು ಇಂದು ಬೆಳಿಗ್ಗೆ 10-15 ಗಂಟೆಗೆ ಸೀಕೃತಿ ಮಾಡಿಕೊಂಡಿದ್ದು ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ ಫಿರ್ಯಾದಿದಾರನು ತಮ್ಮ ಹಿರೋ ಹೆಚ್,ಎಫ್.ಡಿಲೇಕ್ಸ ಮೋ.ಸೈ ನಂ ಕೆ. 36 ಇಎನ್-6842 ನೇದ್ದರಲ್ಲಿ ನಿನ್ನೆ ದಿನಾಂಕ 06-01-2019 ರಂದು ಬೆಳಿಗ್ಗೆ ತನ್ನ ತಾತನಾದ ಮೃತ ಮಲ್ಲಿಕಾರ್ಜುನ ಈತನನ್ನು ಮೋಟರ್ ಸೈಕಲ್ ಹಿಂದೆ ಕೂಡಿಸಿಕೊಂಡು ಕರೆಗುಡ್ಡ ಗ್ರಾಮದ ಅಂಭಾದೇವಿ ಮಠಕ್ಕೆ ಬೇಟಿ ನೀಡಿ ವಾಪಸ್ ಕರೆಗುಡ್ಡ ಗ್ರಾಮದಿಂದ ತಮ್ಮ ಊರಾದ ಬ್ಯಾಗವಾಟ್ ಗ್ರಾಮಕ್ಕೆ  ತಾವು ತಂದ ಮೋಟರ್ ಸೈಕಲ್ ಮೇಲೆ ಕರೆಗುಡ್ಡ- ಕರೆಗುಡ್ಡ ರಸ್ತೆಯ ಮೇಲೆ ತಮ್ಮ ರಸ್ತೆಯ ಎಡಬಾಜು ನಿನ್ನೆ ದಿನಾಂಕ 06-01-2019 ರಂದು ಬೆಳಿಗ್ಗೆ 9-30 ಗಂಟೆಯ ಸುಮಾರಿಗೆ ಹೋರಟಿವಾಗ ಕರೆಗುಡ್ಡ ಕ್ರಾಸ್ ಹತ್ತಿರ ಅದೇ ವೇಳೆಗೆ ತಮ್ಮೂರಿನ ಆರೋಪಿ ಯಲ್ಲಪ್ಪ ಈತನು ತನ್ನ ಮೋಟರ್ ಸೈಕಲ್ ನಂ KA36 ED-5573 ನೇದ್ದರಲ್ಲಿ ಹಿಂದುಗಡೆ ಗಾಯಾಳು ಲಕ್ಷ್ಮಮ್ಮ ಈಕೆಯನ್ನು ಕೂಡಿಸಿಕೊಂಡು ತನ್ನ ಮೋಟರ್ ಸೈಕಲನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ತನ್ನ ರಸ್ತೆಯ ಎಡಬಾಜು  ಹೋಗದೇ ಬಲಬಾಜು ಬಂದು ಫಿರ್ಯಾದಿಯ ಮೋಟರ್ ಸೈಕಲಿಗೆ ಟಕ್ಕರ್ ಮಾಡಿದ್ದು   ಟಕ್ಕರ್ ಮಾಡಿದ ಪರಿಣಾಮ ಮೋಟರ್ ಸೈಕಲ್ ಹಿಂದೆ ಕುಳಿತಿದ್ದ  ಮಲ್ಲಿಕಾರ್ಜುನ ಈತನಿಗೆ ತಲೆಗೆ ಭಾರಿ ರಕ್ತಗಾಯವಾಗಿದ್ದು ಅಲ್ಲದೇ ಇತರೆ ಕಡೆ ಗಾಯಗಳಾಗಿದ್ದು  ಆರೋಪಿತನ ಮೋಟರ್ ಸೈಕಲ್ ಹಿಂದೆ ಕುಳಿತು ಲಕ್ಷ್ಮಮ್ಮ ಈಕೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದು  ಗಾಯಗೊಂಡ ಮಲ್ಲಿಕಾರ್ಜುನ ಈತನನ್ನು ಇಲಾಜು ಕುರಿತು ಮಾನವಿ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ರಾಯಚೂರಿನ ರಿಮ್ಸ ಬೋದಕ ಆಸ್ಪತ್ರೆಗೆ ಸೇರಿಕೆ ಮಾಡಿದ್ದು  ಚಿಕಿತ್ಸೆ ಫಲಕಾರಿಯಾಗದೇ ಮಲ್ಲಿಕಾರ್ಜುನ ಈತನು ಇಂದು ಬೆಳಗಿನ ಜಾವ 2-03 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ.ಕಾರಣ ಮೋ.ಸೈಕಲ್ ನಂ KA3 ED-5573 ನೇದ್ದರ ಚಾಲಕ  ಯಲ್ಲಪ್ಪ ತಂದೆ ರಾಮಣ್ಣ ಈತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ  ಹೇಳಿಕೆಯ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 05/2019 ಕಲಂ  279. 337. 304 (A) IPC  ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ 07-01-2019 ರಂದು ಸಾಯಾಂಕಾಲ 4-15 ಗಂಟೆಗೆ  ರಮೇಶ ತಂದೆ ತಿಪ್ಪಣ್ಣ ಸಾಃ ಗವಿಗಟ್ ತಾಃ ಮಾನವಿ ಈತನು ಠಾಣೆಗೆ ಹಾಜರಾಗಿ ಮೌನೇಶ ತಂದೆ ತಿಪ್ಪಣ್ಣ ಸಾಃ ಗವಿಗಟ್ಟ ಈತನು ನೀಡಿದ ಒಂದು ಗಣಕೀಕೃತ ದೂರನ್ನು ತಂದು ಹಾಜಪಡಿಸಿದ್ದು ಸದರಿ ದೂರಿನ ಸಾರಾಂಶವೆನೆಂದರೆ ಆರೋಪಿ ಮೌನೇಶ ಈತನು ಕುಡಿಯುವ ಚಟದವನಿದ್ದು ಫಿರ್ಯಾದಿ ತಮ್ಮನಾದ ರಮೇಶ ಈತನಿಗೆ ದಿನಾಲು ಕುಡಿಯಲು ಹಣ ಕೇಳುತಿದ್ದು  ಹಣ ಕೊಡುತ್ತಾ ಬಂದಿದ್ದು  ಇನ್ನೂ ಹೆಚ್ಚು ಹೆಚ್ಚು ಹಣ ಕೊಡುವಂತೆ ಪೀಡಿಸುತಿದ್ದರಿಂದ ರಮೇಶ ಈತನು ಆರೋಪಿತನಿಗೆ ಹಣ ಕೊಡುವುದನ್ನು ನಿಲ್ಲಿಸಿದ್ದನು. ಇದರಿಂದ ಆರೋಪಿ ಮೌನೇಶನು ಫಿರ್ಯಾದಿ ಮತ್ತು ಆತನ ಸಂಬಂದಿ ಮಹೇಶನು ನನಗೆ ಹಣ ಕೊಡಬೇಡ ಅಂತಾ ಇವರೇ ರಮೇಶನಿಗೆ ಹೇಳಿರುತ್ತಾರೆ ಅಂತಾ ಅವರ ಮೇಲೆ ದ್ವೇಷ ಇಟ್ಟುಕೊಂಡಿದ್ದು ನಿನ್ನೆ ದಿನಾಂಕ 07-01-2019 ರಂದು ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಗಾಯಾಳು ಮಹೇಶ ಇವರಬ್ಬರು ತಮ್ಮೂರಿನ ಬಸ್ ಸ್ಟಾಂಡ್ ಮುಂದಿನ ರಸ್ತೆಯಲ್ಲಿ ನಿಂತುಕೊಂಡಿರುವಾಗ ಆರೋಪಿತರಿಬ್ಬರು ಕೂಡಿಕೊಂಡು ಬಂದು '' ಲೇ ಲಂಗಾ ಸೂಳೇ ಮಕ್ಕಳೇ ಅಂತಾ ಅವಾಚ್ಯ ಬೈದು ರಮೇಶನಿಗೆ ನಿವೇ ಹಣ ಕೊಡಬೇಡಿ ಅಂತಾ ಹೇಳಿದ್ದರಿ ಅಂತಾ ಕೊಲೆ ಮಾಡುವ ಉದ್ದೇಶದಿಂದ ಆರೋಪಿತರಿಬ್ಬರು ಕೈಗಳಿಂದ. ಕಟ್ಟಿಗೆ. ಹಾಗೂ ಕಲ್ಲಿನಿಂದ ಫಿರ್ಯಾದಿ ಮತ್ತು ಗಾಯಾಳು ಮಹೇಶನಿಗೆ ಹೊಡೆದು ರಕ್ತಗಾಯ ಮಾಡಿದ್ದು ಅಲ್ಲದೇ ರಮೇಶ ಈತನಿಗೆ ನೀವು ನಮಗೆ ದಿನಾಲು ಕುಡಿಯಲಿಕ್ಕೆ ದುಡ್ಡು ಕೊಡಲು ಹೇಳಬೇಕು ಒಂದು ವೇಳೆ ದುಡ್ಡು ಕೊಡಲು ಹೇಳದಿದ್ದರೇ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿದ್ದು ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ  ಅಂತಾ ಮುಂತಾಗಿ ಇದ್ದ  ದೂರಿನ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 07/2019 ಕಲಂ 307.323.324.504.506 ಸಹಿತ 34 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.




ಯು.ಡಿ.ಆರ್. ಪ್ರಕರಣದ ಮಾಹಿತಿ.
ದಿನಾಂಕ: 07-01-2019 ರಂದು ಮದ್ಯಾಹ್ನ 03-00 ಪಿ.ಎಂ ಕ್ಕೆ ಪಿರ್ಯಾದಿ PÁAvÉ¥Àà vÀAzÉ PÁ±É¥Àà ªÉÄÃtzÁ¼À ªÀAiÀiÁ:40 ªÀµÀð eÁ:°AUÁ¬ÄvÀ UÁtÂUÀ,G:PÀÆ°,¸Á:PÉ.§¸Á¥ÀÆgÀÄ,vÁ:¹AzsÀ£ÀÆgÀÄ ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ದೂರಿನ ಸಾರಾಂಶವೇನೆಂದರೆ, ಮೃತಳಾದ ದೇವಮ್ಮ ಈಕೆಯು ಪಿರ್ಯಾಧಿಯ ತಾಯಿಯಾಗಿದ್ದು, ಮೃತಳು ಈಗ್ಗೆ 10 ವರ್ಷಗಳಿಂದ ಮಾನಸಿಕ ಅಸ್ವಸ್ಥಳಾಗಿದ್ದು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡರು ಗುಣಮುಖಳಾಗಿರಲಿಲ್ಲ. ಪ್ರತಿನಿತ್ಯ ಆಕೆಗೆ ಮನೆಯಲ್ಲಿ ಉಪಚಾರ ಮಾಡಿದರೂ ಮನೆಯನ್ನು ಬಿಟ್ಟು ಹೊರಗಡೆ ಹೋಗುತ್ತಿದ್ದಳು.  ದಿನಾಂಕ:-07-01-2019 ರಂದು ಮದ್ಯಾಹ್ನ 02-00 ಗಂಟೆ ಸುಮಾರು ಹೊರಗಡೆ ತಿರುಗುತ್ತ ಗಾಂಧಿನಗರದ ಮೂಲಂಗಿ ವೆಂಕಟರಾವ್ ಇವರ ಹೊಲದಲ್ಲಿರುವ ಕೆರೆಯಲ್ಲಿ ನೀರು ಕುಡಿಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಈಜುಬಾರದೇ ನೀರನ್ನು ಕುಡಿದು ಮೃತಪಟ್ಟ ಕಾರಣ ತನ್ನ ತಾಯಿಯ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯವಿರುವುದಿಲ್ಲಾ  ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ  ತುರುವಿಹಾಳ ಠಾಣೆ ಯುಡಿಆರ್ ಸಂ 01/2019 ಕಲಂ. 174 ಸಿಆರ್ ಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದೊಂಬಿ ಪ್ರಕರಣದ ಮಾಹಿತಿ.
ದಿನಾಂಕ:07.01.2019 ರಂದು ಮದ್ಯಾಹ್ನ 2-00 ಗಂಟೆಗೆ ಫಿರ್ಯಾದಿ ಅಬ್ದುಲ್ ಮಜೀದ ತಂದೆ ತಾಜುದ್ದಿನ 42 ವರ್ಷ ಜಾತಿ ಮುಸ್ಲಿಂ ಉದ್ಯೋಗ ವ್ಯಾಪರ ಸಾ.ಖಿಲ್ಲಾ ಮುದಗಲ್ ರವರು ಠಾಣೆಗೆ ಹಾಜರಾಗಿ ಗಣಕ ಯಂತ್ರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು, ಅದರ ಸಾರಾಂಶವೇನೆಂದರೆ, ದಿನಾಂಕ 01-01-2019 ರಂದು ಬೆಳಿಗ್ಗೆ 7-00 ಗಂಟೆ ಸುಮಾರಿಗೆ ಅಬ್ದುಲ್ ರೆಹಮಾನ ತಂದೆ ಮಹಿಬೂಬ @ ಚುನ್ನುಮಿಯಾ ಹಾಗೂ ಇತರೆ ನಾಲ್ಕು ಜನ ಆರೋಪಿತರು ಕೂಡಿಕೊಂಡು ತಮ್ಮ ಮನೆಯ ಬಚ್ಚಲು ನೀರನ್ನು ಹರಿ ಬಿಡಲು ನಮ್ಮ ಮನೆಯ ಮುಂದೆ ಹಾಕಿದ್ದ ಮರಮವನ್ನು ತೆಗೆದು ತೆಗ್ಗನ್ನು ತೆಗೆದು ಕಾಲುವೆಯನ್ನು ಮಾಡುತ್ತಿರುವಾಗ ನಾನು ಮತ್ತು ನನ್ನ ಸಂಬಂದಿಕರು ಕೂಡಿಕೊಂಡು ನಮ್ಮ ಮನೆಯ ಮುಂದೆ ತೆಗ್ಗನ್ನು ತೋಡಬೇಡಿರಿ ಎಂದಾಗ ಲೇ ಸೂಳೆ ಮಕ್ಕಳೆ ನಾವು ಎಲ್ಲಿ ಬೇಕಾದರು ತೆಗ್ಗನ್ನು ತೋಡುತ್ತೇವೆ, ಎಲ್ಲಿ ಬೇಕಾದರು ಬಚ್ಚಲು ನೀರು ಬಿಡುತ್ತೆವೆ ಅದನ್ನು ಕೇಳಲು ನೀವು ಯಾರು ಲೇ ಸೂಳೆ ಮಕ್ಕಳೆ ಎಂದು ಬಾಯಿಗೆ ಬಂದಂತೆ ಬೈಯ್ಯುತ್ತಾ ಎಲ್ಲರು ಸೇರಿ ನನ್ನ ಅಣ್ಣ ಮೊಹ್ಮದ ಇಸ್ಮಾಯಿಲ್, ತಮ್ಮ ಮೊಹ್ಮದ ಹುಸೇನ್ ರವರಿಗೆ ಕೈಯಿಂದ ಹೊಟ್ಟೆಗೆ ಬೆನ್ನಿಗೆ ಕೈಯಿಂದ ಹೊಡೆದು ದುಖಪಾತಗೊಳಿಸಿದರು. ನಂತರ ನನ್ನ ಅಕ್ಕ ಮರಿಯಂ ರವರಿಗೆ -2 ರವರು ಕೈಯಿಂದ ಹೊಡೆದಳು. ನಂತರ ಬೆಳಿಗ್ಗೆ 9-00 ಗಂಟೆ ಸುಮಾರಿಗೆ ನನ್ನ ಮನೆಯ ಹತ್ತಿರ ಎಲ್ಲರು ಬಂದು ಲೇ ನೀವು ಅಂಗವಿಕಲರಿದ್ದು ಸೂಳೆ ಮಕ್ಕಳೆ ನೀವು ಚೋಟುದ್ದ ಇದ್ದು ನಮ್ಮ ಮುಂದೆ ದಿಮಾಕು ತೋರಿಸಲು ಬರುತ್ತಿರೇನು ನಾಳೆ ಬೆಳಗಾಗುವುದರಲ್ಲಿ ನಿಮ್ಮನ್ನು ಮುಗಿಸಿ ಬಿಡುತ್ತೇವೆ ಎಂದು ಬಾಯಿಗೆ ಬಂದಂತೆ ಬೈಯ್ಯುತ್ತಾ ನಮಗೆ ಮಾನಸಿಕ ಹಾಗು ದೈಹಿಕ  ಕಿರುಕುಳ ನೀಡಿದ್ದು,  ಆಗ ನಾವು ಪೊಲೀಸ್ ಠಾಣೆಗೆ ಹೋಗಿ ದೂರನ್ನು ಕೊಡುವುದಾಗಿ ಹೇಳಿದಾಗ ಆರೋಪಿತರು ನಮಗೆ ಜೀವದ ಬೆದರಿಕೆ ಹಾಕಿದರು. ನಂತರ ಬಂದು ರಾತ್ರಿ 9-00 ಗಂಟೆ ಸುಮಾರಿಗೆ ಪಿರ್ಯಾದಿ ಮತ್ತು ಆತನ ಅಣ್ಣ ಮಹ್ಮದ ಇಸ್ಮಾಯಿಲ್ ರವರು ಮುದಗಲ್ ಪಟ್ಟಣದ ಎಸ್.ಬಿ.. ಬ್ಯಾಂಕ ಮುಂದೆ ನಿಂತಿರುವಾಗ -5 ರವರು ಗದಗದಿಂದ ನಾಲ್ಕು ಜನ ಗುಂಡಾಗಳನ್ನು ಕರೆದುಕೊಂಡು ಬಂದು ನನ್ನ ಅಣ್ಣನ ಮೇಲೆ ಹಲ್ಲೆ ಮಾಡಿ ಸಲಿಂನು ಕಲ್ಲಿನಿಂದ ನನ್ನ ಅಣ್ಣನ ತಲೆಗೆ ಹೊಡೆದು ರಕ್ತಗಾಯ ಮಾಡಿ ದವಡೆಗೆ ಕೈಯಿಂದ ಗುದ್ದಿ ಒಳಪೆಟ್ಟು ಮಾಡಿದರು. ಕೂಡಲೆ ನಾನು ನನ್ನ ಅಣ್ಣನನ್ನು ಚಿಕಿತ್ಸೆ ಕುರಿತು ಮುದಗಲ್ ಆಸ್ಪತ್ರೆಗೆ ಸೇರಿಕೆ ಮಾಡಿ ಆತನಿಗೆ ಚಿಕತ್ಸೆ ಕೊಡಿಸಿ ನಂತರ ನಮ್ಮ ಮನಯವರೊಂದಿಗೆ ವಿಚಾರ ಮಾಡಿಕೊಂಡು ಬಂದು ದೂರು ನೀಡಲು ತಡವಾಗಿದ್ದು ಇರುತ್ತದೆ. ಸದರಿ ಆರೋಪಿತರಿಂದ ನಮಗೆ ಜೀವದ ಭಯವಿದ್ದು, ಮುಂದಿನ ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣಾ ಗುನ್ನೆ ನಂಬರ 05/2019 PÀ®A 143, 147, 504, 323, 324, 506,  ¸À»vÀ 149 L¦¹. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಜೀವ ಬೆದರಿಕೆ ಪ್ರಕರಣದ ಮಾಹಿತಿ.

ಕಳೆದ ವರ್ಷ ಎಪ್ರೀಲ್ ತಿಂಗಳಿನಲ್ಲಿ ಫಿರ್ಯಾದಿ ಭೀಮರೆಡ್ಡಿ ತಂದೆ ಬೀಸಗಲ್ಲ ಆಂಜನೇಯ, 29ವರ್ಷ, ಮುನ್ನೂರು ಕಾಪು, ಒಕ್ಕಲುತನ, ಸಾ:ಬಾಯಿದೊಡ್ಡಿ ತಾ:ಜಿ: ರಾಯಚೂರು ಈತನ ಸಂಗಡ ಆರೋಪಿ ಭೀಮೇಶ ತಂದೆ ಜಂಬಣ್ಣ, ದೂತಿ, 25ವರ್ಷ, ನಾಯಕ್, ಪಂಕ್ಚರ್ ಅಂಗಡಿ, ಸಾ:ಬಾಯಿದೊಡ್ಡಿ ತಾ:ಜಿ: ರಾಯಚೂರು ಈತನು ಮೊಬೈಲ್ ಚಿಪ್ ವಿಷಯದಲ್ಲಿ ಫಿರ್ಯಾದಿದಾರರ ಸಂಗಡ ಜಗಳ ಮಾಡಿ ಯರಗೇರಾ ಪೊಲೀಸ್ ಠಾಣೆಯಲ್ಲಿ ಕೇಸ್ ಆಗಿದ್ದು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇರುತ್ತದೆ. ನಂತರ ದಿನಾಂಕ:04-01-2019 ರಂದು ಬಾಯಿದೊಡ್ಡಿ ಸೀಮಾ ಗದ್ವಾಲ್ ರಸ್ತೆಯಲ್ಲಿದ್ದ ರೆಡ್ಡಿ ಧಾಭಾಕ್ಕೆ ಫಿರ್ಯಾದಿದಾರನು ತನ್ನ ತಮ್ಮ ಗೋವಿಂದ ರೆಡ್ಡಿಯೊಂದಿಗೆ ಊಟ ಮಾಡಿ ಧಾಭಾ ಮುಂದೆ ರಾತ್ರಿ 10-00 ಗಂಟೆಗೆ ಸುಮಾರಿಗೆ ನಿಂತಿದ್ದಾಗ ಆರೋಪಿತನು ಫಿರ್ಯಾದಿಯನ್ನು ನೋಡಿ ಸೂಳೆ ಮಕ್ಕಳಿಗೆ ಕೇಸ್ ಮಾಡಿಸಿ ಒಳಗೆ ಹಾಕಿಸಿದರೂ ಇನ್ನೂ ಸೊಕ್ಕು ಮುರಿದಿಲ್ಲ ಅಂತಾ ಅವಾಚ್ಯವಾಗಿ ಬೈದಾಡುತ್ತಿದ್ದಾಗ ಫಿರ್ಯಾದಿಯ ತಮ್ಮ ಗೋವಿಂದ ರೆಡ್ಡಿ ನಮಗೇಕೆ ಬೈಯ್ಯುತ್ತೀ ಕೇಳಿದ್ದಕ್ಕೆ ಆರೋಪಿತನು ಕೈಮುಷ್ಟಿ ಮಾಡಿ ಹೊಟ್ಟೆಗೆ ಗುದ್ದಿದ್ದು ಬಿಡಿಸಲು ಹೋದ ಫಿರ್ಯಾದಿಗೆ ಸಹ ಕೈಯಿಂದ ಹೊಡೆಬಡೆ ಮಾಡಿದ್ದು ಇರುತ್ತದೆ. ನಂತರ ರಾತ್ರಿ 10-30 ಗಂಟೆಗೆ ಆರೋಪಿತನು ತನ್ನ ಕೈಯಲ್ಲಿ ಕುಡುಗೋಲನ್ನು ಹಿಡಿದುಕೊಂಡು ಫಿರ್ಯಾದಿಯ ಮನೆಗೆ ಏಕಾಏಕಿ ನುಗ್ಗಿ ಸೂಳೆ ಮಕ್ಕಳೆ ನಿಮ್ಮನ್ನು ಕುಡುಗೋಲಿನಿಂದ ಕಡಿದು ಮುಗಿಸುತ್ತೇನೆ ಅಂತಾ ಹೊಡೆಯಲು ಹೋಗಿದ್ದು ಫಿರ್ಯಾದಿ ತಪ್ಪಿಸಿಕೊಂಡಿದ್ದು ಆರೋಪಿತನು ಫಿರ್ಯಾದಿಗೆ  ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ದೂರಿನ ಮೇಲಿಂದ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ. 04/2019 ಕಲಂ 448.452.504.323.506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

.