Thought for the day

One of the toughest things in life is to make things simple:

27 Jul 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಅಕ್ರಮ ಮರಳು ಜಪ್ತಿ ಪ್ರಕರಣದ ಮಾಹಿತಿ.
ದಿನಾಂಕ 26/07/18 ರಂದು ಬೆಳಗಿನ ಜಾವ 4-30 ಗಂಟೆಗೆ ಮಂಜುನಾಥ ಪಿ.ಎಸ್.. (ಕಾ.ಸು) ಮಾನವಿ ಪೊಲೀಸ್ ಠಾಣೆ ರವರು ಅಕ್ರಮ ಮರಳು ಸಾಗಾಣಿಕೆ ಟ್ರ್ಯಾಕ್ಟರ /ಟ್ರಾಲಿ ದಾಳಿಯಿಂದ ವಾಪಾಸ್ ಠಾಣೆಗೆ ಬಂದು ತಮ್ಮ ದೂರನ್ನು ತಯಾರಿಸಿ ಬೆಳಿಗ್ಗೆ 4-45 ಗಂಟೆಗೆ ಮರಳು ತುಂಬಿದ ಒಂದು ಟ್ರ್ಯಾಕ್ಟರ /ಟ್ರಾಲಿಯನ್ನು, ಇಬ್ಬರು ಆರೋಪಿತರನ್ನು  ಮತ್ತು  ದಾಳಿ ಪಂಚನಾಮೆ ಹಾಗೂ ತಮ್ಮ ದೂರನ್ನು ನೀಡಿ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ಪಂಚನಾಮೆಯ ಸಾರಾಂಶವೇನೆಂದರೆ,   ಇಂದು ದಿನಾಂಕ 26/07/18 ರಂದು ರಾಜಬಂಡ ಗ್ರಾಮದ ತುಂಗಭದ್ರ ನದಿಯಿಂದ  ಟ್ರಾಕ್ಟರಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಮಾರಾಟ ಮಾಡುವ ಕುರಿತು ರಾಯಚೂರು ಕಡೆಗೆ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್. ಸಾಹೇಬರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಹೋಗಿ ಕಪಗಲ್ ಕ್ರಾಸ್ ಹತ್ತಿರ ಜೀಪನ್ನು ನಿಲ್ಲಿಸಿ ಅಲ್ಲಿ ಕಾಯುತ್ತಾ ನಿಂತಿರುವಾಗ ಬೆಳಗಿನ ಜಾವ 3-00 ಗಂಟೆಯ ಸುಮಾರಿಗೆ  ರಾಜಲಬಂಡ ಗ್ರಾಮದ ಕಡೆಯಿಂದ  ಒಂದು ಟ್ರ್ಯಾಕ್ಟರ ಬಂದಿದ್ದು ಅದನ್ನು ನಿಲ್ಲಿಸಲು ಸೂಚಿಸಿದಾಗ ಚಾಲಕನು ತನ್ನ ಟ್ರ್ಯಾಕ್ಟರನ್ನು ನಿಲ್ಲಿಸಿದವನೇ ಓಡಿ ಹೋಗಿದ್ದು  ಸದರಿ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಕುಳಿತ1) ನರಸಿಂಹ ತಂದೆ ಯಂಕೋಬ 2) ವಿಜಯ ಕುಮಾರ್ ತಂದೆ ಹಂಪಯ್ಯ ಗೌಡ  ರವರನ್ನು ಹಿಡಿದುಕೊಂಡು  ಓಡಿ ಹೊದ ಚಾಲಕನ ಬಗ್ಗೆ ವಿಚಾರಿಸಲು ಮಲ್ಲೇಶ ತಂದೆ ನಾರಾಯಣ ನಾಯಕ ಸಾಃ ಸಾದಾಪುರ ಅಂತಾ ತಿಳಿಸಿದ್ದು ತಮ್ಮ ಟ್ರ್ಯಾಕ್ಟರ ಮತ್ತು ಟ್ರಾಲಿ  ಮಾಲಿಕರು ತಮ್ಮ ಸ್ವಂತ ಲಾಭಕ್ಕೋಸ್ಕರ ರಾಜಲಬಂಡ ಗ್ರಾಮದ ತುಂಗಭದ್ರ ನದಿಯಿಂದ  ಅಕ್ರಮವಾಗಿ ಮರಳನ್ನು ತುಂಬಿಕೊಂಡು ಮಾರಾಟ ಮಾಡುವ ಸಲುವಾಗಿ ರಾಯಚೂರಿಗೆ ತರುವಂತೆ ಹೇಳಿದ್ದರಿಂದ  ನಾವು  ಮತ್ತು ಚಾಲಕ ಮಲ್ಲೇಶ ಕೂಡಿಕೊಂಡು ರಾಜಲಬಂಡ ಗ್ರಾಮದ ತುಂಗಭದ್ರ ನದಿಯಿಂದ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬಂದಿರುವದಾಗಿ ತಿಳಿಸಿದ್ದು  ಕಾರಣ ಸದರಿ ಹಸಿರು ಬಣ್ಣದ ಜಾನ್ ಡಿಯಾರ್ ಕಂಪನಿಯ  ನಂಬರಿಲ್ಲದ ಟ್ರ್ಯಾಕ್ಟರ್ CHASIS SERIAL NO  1PY5036DVHA002821 ಹಾಗೂ ENGINE NO PY3029D417532 ಮತ್ತು ಇದಕ್ಕೆ ಜೋಡನೆ  ನಂಬರ್ ಇಲ್ಲದ ಟ್ರಾಲಿ CHASIS NO YKEW-804/2017 ಹಾಗೂ ಅದರಲ್ಲಿದ್ದ  ಅಂದಾಜು 2 ಘನ ಮೀಟರ್ ಮರಳು ಅಂ. ಕಿ. ರೂ 1400/- ರೂ ಬೆಲೆ ಬಾಳುವದನ್ನು ಜಪ್ತು ಮಾಡಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಮೇರೆಗೆ ಮಾನವಿ ಠಾಣೆ ಗುನ್ನೆ ನಂ 243/2018 ಕಲಂ 3,42,43,ಕೆ.ಎಮ್.ಎಮ್.ಸಿ. ರೂಲ್ಸ 1994 ಮತ್ತು 4, 4(1) ಎಮ್.ಎಮ್.ಡಿ.ಆರ್. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
ಮರಳು ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ: 25/07/2018 ರಂದು ರಾತ್ರಿ 18-00 ಗಂಟೆಗೆ ಶ್ರೀ ಲಿಂಗನಗೌಡ . ಎಸ್. ಕವಿತಾಳ  ಠಾಣೆ ರವರು ಠಾಣೆಯಲ್ಲಿದ್ದಾಗ ಮಲ್ಲದಗುಡ್ಡ ರಸ್ತೆಯ ಕಡೆಯಿಂದ ಕವಿತಾಳ ಕಡೆಗೆ ಅಕ್ರಮ ಮರಳು ಸಾಗಾಟ ಮಾಡುವ ಬಗ್ಗೆ ಖಚಿತವಾದ ಬಾತ್ಮಿ ಬಂದಿದ್ದು, ಕೂಡಲೆ ಪಿ.ಸಿ 473 ಮಲ್ಲಿಕಾರ್ಜುನ ರವರ ಮುಖಾಂತರ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಗಳಾದ 1) ಹುಸೇನಪ್ಪ ಸಿ.ಪಿ.ಸಿ 503, 2] ಸುರೇಶ ಸಿಪಿಸಿ 484, 4) ದೇವರಾಜ ಸಿಪಿಸಿ 48, ರವರೊಂದಿಗೆ ಮತ್ತು ಪಂಚರೊಂದಿಗೆ ನಮ್ಮ ಮೋಟರ್ ಸೈಕಲ್ ಮತ್ತು ಪಂಚರ ಮೋಟರ್ ಸೈಕಲ್ ಗಳ ಮೇಲೆ ಹೋಗಿ ಸಂಜೆ 18:30 ಗಂಟೆಯ ಸುಮಾರಿಗೆ ಊರ ಹೊರಗೆ ಮಲ್ಲದಗುಡ್ಡ ರಸ್ತೆ ಕಡೆಗೆ ಇರುವ ಚೆನ್ನಪ್ಪಗೌಡ ಇವರ ಹೋಟೆಲ್ ಹತ್ತಿರ ಕಾಯುತ್ತಿರುವಾಗ ಸುಮಾರು 6:40 ಗಂಟೆಗೆ ಮಲ್ಲದಗುಡ್ಡ ಗ್ರಾಮದ ರಸ್ತೆ ಕಡೆಯಿಂದ ಒಂದು ಟ್ರಾಕ್ಟರ್ ಬಂದಿದ್ದು, ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಟ್ರಾಕ್ಟರ್ ನ್ನು ತಡೆದು ನಿಲ್ಲಿಸಲು ಹೋದಾಗ ಟ್ರಾಕ್ಟರ್ ಚಾಲಕನು ಸ್ವಲ್ಪ ಮುಂದೆ ಬಂದು ಒಮ್ಮೇಲೆ ಬ್ರೇಕ್ ಹಾಕಿ ಟ್ರಾಕ್ಟರ್ ನ್ನು ನಿಲ್ಲಿಸಿ ಚಾಲಕನು ಇಳಿದು ಓಡಿ ಹೋಗುತ್ತಿದ್ದಾಗ ಸಿಬ್ಬಂದಿಯವರಾದ ಸುರೇಶ ಪಿ.ಸಿ 484, ದೇವರಾಜ ಪಿ.ಸಿ 48 ಇವರುಗಳು ಚಾಲಕನನ್ನು ಬೆನ್ನಟ್ಟಿ ಹಿಡಿಯಲು ಹೋದಾಗ, ಸದರಿ ಚಾಲಕನು ನಿಲ್ಲಿಸಿದ ಟ್ರಾಕ್ಟರ್ ನ್ನು ಪರಿಶೀಲಸಿಲಾಗಿ ನೋಡಲಾಗಿ MAHINDRA 275 DI ಕೆಎ-36 ಟಿ.ಸಿ 1839, ಮತ್ತು ಟ್ರಾಲಿ ನಂ ಕೆಎ-36, ಟಿ.ಸಿ 5112 ಅಂತಾ ಇದ್ದು, ಅಂದಾಜು ಕಿಮ್ಮತ್ತು 4 ಲಕ್ಷ ರೂಪಾಯಿ ಬೆಲೆಬಾಳವುದು ಇರತ್ತದೆ. ಅಷ್ಟರಲ್ಲೆ ಓಡಿ ಹೋದ ಟ್ರಾಕ್ಟರ್ ಡ್ರೈವರ್ ನನ್ನು ಹಿಡಿಯಲು ಹೋಗಿದ್ದ ಸಿಬ್ಬಂದಿಯವರು ವಾಪಸ್ ಬಂದು ಸದರಿ ಟ್ರಾಕ್ಟರ್ ಡ್ರೈವರ್ ನು ಸಿಕ್ಕಿರುವುದಿಲ್ಲಾ ಅಂತಾ ತಿಳಿಸಿದರು. ಸದರಿ ಟ್ರಾಕ್ಟರಲ್ಲಿಯ ಮರಳು ಟ್ರಾಕ್ಟರ್ ಚಾಲಕನು ಯಾವುದೇ ಪರವಾನಿಗೆ ಯನ್ನು ಪಡೆಯದೆ ಮತ್ತು ಸರ್ಕಾರಕ್ಕೆ ರಾಜ ಧನವನ್ನು ತುಂಬದೆ ಅಕ್ರಮವಾಗಿ ಮರಳು ಸಾಗಾಟ ಮಾಡಿ ಹೆಚ್ಚಿನ ಲಾಭ ಪಡೆಯುವ ಉದ್ದೇಶಕ್ಕಾಗಿ ಯಾವುದೋ ಹಳ್ಳದಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮರಾಟ ಮಾಡುತ್ತಿರುವುದಾಗಿ ಕಂಡು ಬಂದಿರುತ್ತದೆ. ಸದರಿ ಟ್ರಾಕ್ಟರ್ ನಲ್ಲಿ ಮರಳು ಅಂದಾಜು 2.5 ಕ್ಯೂಬಿಕ್ ಮೀಟರ್ ಮರಳು ಕಂಡು ಬಂದಿದ್ದು ಅದರ ಅಂದಾಜು ಕಿಮ್ಮತ್ತು 1750/- ರೂ ಬೆಲೆಬಾಳುವುದನ್ನು ಪಂಚರ ಸಮಕ್ಷಮ ಸದರಿ ಮರಳು ತುಂಬಿದ ಟ್ರಾಕ್ಟರ್ ನ್ನು ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ.
                    ಕಾರಣ ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೇ ಅಕ್ರಮವಾಗಿ ಮರಳನ್ನು ಮಾರಾಟ ಮಾಡುವ ಉದ್ದೇಶದಿಂದ ಟ್ರಾಕ್ಟರ್ ಚಾಲಕನು ತನ್ನ ಟ್ರಾಕ್ಟರನ ಟ್ರಾಲಿಯಲ್ಲಿ ತುಂಬಿದ ಮರಳು ಒಟ್ಟು .ಕಿ.ರೂ. 1750/- ಬೆಲೆಬಾಳುವುದನ್ನು ಪಂಚರ ಸಮಕ್ಷಮ ನಮ್ಮ ವಶಕ್ಕೆ ತೆಗೆದುಕೊಂಡು ನಂತರ ಬೇರೆ ಚಾಲಕರ ಸಹಾಯದಿಂದ ಟ್ರಾಕ್ಟರ್ ನ್ನು ತೆಗೆದುಕೊಂಡು ಠಾಣೆಗೆ ಬಂದು ಮುಂದಿನ ಕಾನೂನು ಕ್ರಮ ಜರುಗಿಸಲು ಆದೇಶಿಸಿದ್ದು ಇದರೊಂದಿಗೆ ಅಕ್ರಮ ಮರಳನ್ನು ಕಳ್ಳತನದಿಂದ ಸಾಗಾಟ ಮಾಡುತ್ತಿದ್ದ ಓಡಿ ಹೋದ ಚಾಲಕ ಮತ್ತು ಸದರಿ ಟ್ರಾಕ್ಟರ್ ಮಾಲಕ ವಿರುಧ್ಧ ಕ್ರಮ ಕೈಗೊಳ್ಳುವಂತೆ, ಅಕ್ರಮ ಮರಳು ಸಾಗಾಣಿಕೆಯ ಜಪ್ತಿ ಪಂಚನಾಮೆ ಮತ್ತು ವರದಿಯ ಆಧಾರದ ಮೇಲಿಂದ ಕವಿತಾಳ ಠಾಣೆ ಗುನ್ನೆ ನಂ 126/2018 ಕಲಂ 379 ಐಪಿಸಿ ಮತ್ತು 187  .ಎಂ.ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಯು.ಡಿ.ಆರ್. ಪ್ರಕಣದ ಮಾಹಿತಿ.
ದಿನಾಂಕ 25/07/2018 ರಂದು 22-10 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿ ಶ್ರೀ ದೊಡ್ಡ ಸಿದ್ದಪ್ಪ ತಂದೆ ಕರಿಯಪ್ಪ ದಡ್ಯಾಳ್ಳಿ ವಯಸ್ಸು 62 ವರ್ಷ ಜಾ:ಕುರುಬರು :ಒಕ್ಕಲತನ ಸಾ:02 ವಾರ್ಡ ಕವಿತಾಳ ರವರು ತಂದು ಹಾಜರು ಪಡಿಸಿದ ಲಿಖಿತ ಪಿರ್ಯಾದಿಯ ಸಾರಾಂಶವೆನಂದರೆ ಪಿರ್ಯಾದಿದಾರನ ಎರಡನೇಯ ಹೆಂಡತಿಯ ಮಗಳಾದ ದುರಗಮ್ಮಳು ತನ್ನಗಿದ್ದ ಹೊಟ್ಟೆ ನೋವನ್ನು ತಾಳಲಾರದೇ ದಿನಾಂಕ 23/07/2018 ರಂದು ಮದ್ಯಾಹ್ನ 03-30 ಗಂಟೆಯ ಅವಧಿಯಲ್ಲಿ ಕವಿತಾಳದಲ್ಲಿರುವ ತಾವಿರುವ ಹಳೆಯ ಮನೆಯಲ್ಲಿ ಯಾವುದೋ ಬೆಳೆಗಳಿಗೆ ಹೊಡೆಯುವ ಕ್ರಿಮಿನಾಶಕ ಔಷಧಿಯನ್ನು ಕುಡಿದಿದ್ದರಿಂದ ದುರಗಮ್ಮಳಿಗೆ ದಿನಾಂಕ 23/07/2018  ರಿಂದ ದಿನಾಂಕ 25/07/2018 ರಂದು ರಾತ್ರಿ ಸುಮಾರು 07 ರಿಂದ 7-30 ಗಂಟೆಯ ಅವಧಿಯಲ್ಲಿ ರಾಯಚೂರಿನ ಬಸವ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುವಾಗ ಇಲಾಜು ಫಲಕಾರಿಯಾಗದೇ ಮೃತ ಪಟ್ಟಿರುತ್ತಾಳೆದುರಗಮ್ಮಳ ಮರಣದ ಬಗ್ಗೆ ಯಾರ ಮೇಲೆ ಯಾವುದೇ ತರಹದ ಸಂಶಯ ಇರುವುದಿಲ್ಲ.ಅಂತಾ ಮುಂತ್ತಾಗಿದ್ದ ಪಿರ್ಯಾದಿಯ ಮೇಲಿಂದ. ವಿರುಪಾಕ್ಷಪ್ಪ  ಸಿ ಹೆಚ್ ಸಿ 57  ಕವಿತಾಳ ಪೊಲೀಸ್ ಠಾಣೆ ರವರು ಕವಿತಾಳ ಠಾಣೆಯ ಯುಡಿಅರ್ ನಂಬರು 10/2018 ಕಲಂ 174 ಸಿಅರ್ ಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಮಹಿಳೆ ಕಾಣೆ ಪ್ರಕರಣದ ಮಾಹಿತಿ.
ಈ ಪ್ರಕರಣದಲ್ಲಿ ಕಾಣೆಯಾದ ಮಹಿಳೆ ತಂದೆ ಶ್ರೀ ಮಹ್ಮದ್ ಅಲಿ ತಂದೆ ಮಹ್ಮದ ಗೌಸ್ ಜಾತಿ-ಮುಸ್ಲಿಂ,ವಯ-32 ವರ್ಷ,  -ಸೈಕಲ ರಿಪೇರಿ ಕೆಲಸ ಸಾ:ಸಿರವಾರ ರವರಿ ಠಾಣೆಗೆ ಹಾಜರಾಗಿ. ತನ್ನ ಮಗಳು ಕುಮಾರಿ ಫರೀದಾಬೇಗಂ ತಂದೆ ಮಹ್ಮದಗೌಸ್ ವಯ-25 ವರ್ಷ, ಜಾತಿ: ಮುಸ್ಲಿಂ,-ಮನೆಕೆಲಸ, ಸಾ:ಸಿರವಾರ ಇಕೆಯು ದಿನಾಂಕ.24-07-2018 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರು ನಮ್ಮ ಮನೆಯಿಂದ ಬುರುಕಾ ಹಾಕಿಕೊಂಡು ಸಿರವಾರ ಪಟ್ಟಣಕ್ಕೆ ಹೋಗಿ ಹೊಲಿಗೆ ಮಿಶನ್ ಸಾಮಾನು ತರುವುದಾಗಿ ಮನೆಯಲ್ಲಿ ತನ್ನ ತಂದೆ ತಾಯಿಗೆ ಹೇಳಿ ಹೋದಾಕಿ ಸಾಯಂಕಾಲವಾದರೂ ಮನೆಗೆ ಬಾರದೆ ಕಾಣೆಯಾಗಿದ್ದು ಸಂಭಂಧಿಕರ ಊರುಗಳಾದ ರಾಯಚೂರು ಹಾಗೂ ಇತರೆ ಕಡೆಗೆ ಹೋಗಿ ಹುಡುಕಾಡಿದ್ದು ಎಲ್ಲಿಯೂ ಸಿಗಲಿಲ್ಲ ಎತ್ತರ 5 ಅಡಿ 5 ಇಂಚು ಇದ್ದು, ಸಾದಾ ಗೆಂಪು , ಮೈ ಬಣ್ಣ ,ಉದ್ದನೆಯ ಮುಖ ವಿದ್ದು ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾಳೆ ಆಕೆಯ ಕೊರಳಲ್ಲಿ ಬಂಗಾರದ ಚೈನ್ ಹಾಕಿ ಕೊಂಡಿದ್ದು ಮನೆಯಿಂದ ಹೋಗುವಾಗ ಮನೆಯಲ್ಲಿದ್ದ ಐದು ಸಾವಿರ ರೂಪಾಯಿ ಹಣ ಮತ್ತು ಒಂದು ಮೊಬೈಲ್ ಫೋನ್ ತೆಗೆದುಕೊಂಡು ಹೋಗಿ ಇಲ್ಲಿ ಯವರೆಗೆ  ಮರಳಿ ಬಾರದೆ ಕಾಣೆಯಾಗಿರುತ್ತಾಳೆಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಹೇಮಂತ ಹೆಚ್.ಸಿ.207 ಸಿರವಾರ ಪೊಲೀಸ್ ಠಾಣೆ ರವರು ಠಾಣಾ ಗುನ್ನೆ ನಂಬರ 158/2018 ಕಲಂ ಮಹಿಳೆ ಕಾಣೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.