Thought for the day

One of the toughest things in life is to make things simple:

29 Jul 2021

Press Note

 ::ಪತ್ರಿಕಾ ಪ್ರಕಟಣೆ ::

ತುರುವಿಹಾಳ ಠಾಣಾ ವ್ಯಾಪ್ತಿಯ ಕೊಲೆ ಪ್ರಕರಣ : ಆರೋಪಿತನ ಬಂಧನ.

       ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ತುರವಿಹಾಳ ಠಾಣಾ ವ್ಯಾಫ್ತಿಯಲ್ಲಿ ದಿನಾಂಕ: 27.07.2021 ರಂದು ಸಾಯಂಕಾಲ ತುರವಿಹಾಳ ಪಟ್ಟಣದ ವಾಲ್ಮೀಕಿ ವೃತ್ತದ ಹತ್ತಿರ ತುಂಗಭದ್ರ ಎಡದಂಡೆ ಕಾಲುವೆಯ 40ನೇ ವಿತರಣಾ ಕಾಲುವೆ ನೀರಿನಲ್ಲಿ ಅಪರಿಚಿತ ಶವ ದೊರೆತಿದ್ದು, ಮೃತನ ಗುರುತು ಪತ್ತೆ ಹಚ್ಚಲಾಗಿ ಶವವು ಸಿಂಧನೂರು ತಾಲೂಕಿನ ಮಲ್ಲದಗುಡ್ಡ ಗ್ರಾಮದ ಹನುಮಂತ ಭೋವಿ ಈತನ ಮಗನೆಂದು ಪತ್ತೆಯಾದ ನಂತರ ದಿನಾಂಕ: 28.07.2021 ರಂದು ರಾತ್ರಿ 10.00 ಗಂಟೆಗೆ ಶ್ರೀಮತಿ ರೇಣುಕಮ್ಮ ಗಂಡ ಮೌಲಪ್ಪ, 32 ವರ್ಷ, ಸಾ|| ಕುರಕುಂದ, ತಾ|| ಸಿಂಧನೂರು. ಹಾ.: ಬೆಂಗಳೂರು ಇವರು ನೀಡಿದ ದೂರಿನ ಮೇಲಿಂದ ತುರ್ವಿಹಾಳ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ.

      ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿ ಆರೋಪಿ ಪತ್ತೆ ಕುರಿತು ಶ್ರೀ ನಿಕಮ್ ಪ್ರಕಾಶ್ ಅಮ್ರಿತ್, .ಪಿ.ಎಸ್. ಎಸ್.ಪಿ ಸಾಹೇಬರು ರಾಯಚೂರು ರವರ ಆದೇಶದಂತೆ ಶ್ರೀ ಹರಿಬಾಬು ಹೆಚ್ಚುವರಿ ಎಸ್.ಪಿ ಸಾಹೇಬರು ರಾಯಚೂರು ಹಾಗೂ ಶ್ರೀ ವೆಂಕಟಪ್ಪ ನಾಯಕ ಡಿ.ಎಸ್.ಪಿ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಶ್ರೀ ಉಮೇಶ್ ಎನ್. ಕಾಂಬಳೆ ಸಿ.ಪಿ. ಸಿಂಧನೂರು ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದು ಇರುತ್ತದೆ.

     ಸದರಿ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರು ಮಿಂಚಿನ ಕಾರ್ಯಾಚರಣೆಯನ್ನು ನಡೆಯಿಸಿ ದಿನಾಂಕ-29-07-2021 ರಂದು ಸಂಶಯಾಸ್ಪದನಾದ ಮೃತನ ತಂದೆ ಹನುಮಂತ ತಂದೆ ಯಲ್ಲಪ್ಪ, ಸಾ: ಮಲ್ಲದಗುಡ್ಡ, ತಾ|| ಸಿಂಧನೂರು ಈತನನ್ನು ವಶಕ್ಕೆ ಪಡೆದುಕೊಂಡು, ವಿಚಾರಣೆ ಮಾಡಲಾಗಿ ಆರೋಪಿತನು ತನ್ನ ದುಶ್ಚಟಗಳಿಗಾಗಿ ಊರಲ್ಲಿ ಸಾಲ ಮಾಡಿಕೊಂಡಿದ್ದು, ಮಾಡಿದ ಸಾಲವನ್ನು ತೀರಿಸಲಾಗದೇ ತನ್ನ ಹೆಸರಿನಲ್ಲಿದ್ದ 3 ಮನೆಗಳಲ್ಲಿ ಒಂದು ಮನೆಯನ್ನು ಮಾರಾಟ ಮಾಡಲು ಮೃತ ಮಗ ಭೀಮಣ್ಣನು ವಿರೋಧಿಸಿದ್ದು, ಆರೋಪಿ ಇದೇ ದ್ವೇಷ ಸಾಧಿಸಿ ದಿನಾಂಕ: 27-07-2021 ರಂದು ಕೊಲೆ ಮಾಡುವ ಉದ್ದೇಶದಿಂದ ತನ್ನ ಮೋಟಾರ್ ಸೈಕಲ್ ಮೇಲೆ ಮೃತನನ್ನು ಕರೆದುಕೊಂಡು ತುರುವಿಹಾಳ ಕಡೆಗೆ ಬಂದು ಮದ್ಯಾಹ್ನ 12-00 ರಿಂದ 2-00 ಗಂಟೆಯ ಅವಧಿಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯ ನೀರಿಗೆ ತಳ್ಳಿ ಕೊಲೆ ಮಾಡಿರುವ ಬಗ್ಗೆ ತನಿಖೆ ಕಾಲಕ್ಕೆ ತಿಳಿದು ಬಂದಿದ್ದು, ಸದ್ಯ ಆರೋಪಿತನನ್ನು ನ್ಯಾಯಾಂಗ ಬಂದನಕ್ಕೆ ಕಳುಹಿಸಿದ್ದು ಇರುತ್ತದೆ.

      ಪ್ರಕಣದ ಆರೋಪಿತನ ಪತ್ತೆ ಕುರಿತು ಶ್ರಮಿಸಿದ ಶ್ರೀ ಉಮೇಶ್ ಎನ್.ಕಾಂಬಳೆ ಸಿಪಿಐ ಸಿಂಧನೂರು ಶ್ರೀ ಚಂದ್ರಪ್ಪ ಹೆಚ್. ಪಿಎಸ್. ತುರ್ವಿಹಾಳ ಶ್ರೀ ಹನುಮಂತಪ್ಪ .ಎಸ್. ಹಾಗೂ ಸಿಬ್ಬಂದಿಯವರಾದ ಶಿವಲಿಂಗಪ್ಪ ದೇಸಾಯಿ, ಶಿವರಾಜ, ಅಮರೇಶ, ಚೌಡಯ್ಯ, ತಿಪ್ಪಣ್ಣ, ದ್ಯಾಮಣ್ಣ ಮತ್ತು ಅಜೀಮ್ ಪಾಷ ಸಿ.ಡಿ.ಆರ್ ಸೆಲ್ ರಾಯಚೂರು, ರವರ ಪತ್ತೆ ಕಾರ್ಯವನ್ನು ಶ್ರೀ ನಿಕಮ್ ಪ್ರಕಾಶ್ ಅಮ್ರಿತ್ .ಪಿ.ಎಸ್., ಎಸ್.ಪಿ ಸಾಹೇಬರು ರಾಯಚೂರು ರವರು ಮತ್ತು ಹೆಚ್ಚುವರಿ ಎಸ್.ಪಿ ರಾಯಚೂರು ರವರು ಶ್ಲಾಘನೆ ಮಾಡಿರುತ್ತಾರೆ.