Thought for the day

One of the toughest things in life is to make things simple:

31 Mar 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಎಸ್.ಸಿ/ಎಸ್.ಟಿ.ಪ್ರಕಣದ ಮಾಹಿತಿ.
ದಿನಾಂಕ:30.03.2019 ರಂದು ಮದ್ಯಾಹ್ನ 3.00 ಗಂಟೆಗೆ ಫಿರ್ಯಾದಿ ¥sÀQÃgÀ¥Àà vÀAzÉ UÀÄqÀzÀ¥Àà ªÀAiÀĸÀÄì:40 ªÀµÀð eÁ: ºÀjd£À G: PÀÆ°PÉ®¸À ¸Á: eÁAvÁ¥ÀÆgÀÄ vÁ:°AUÀ¸ÀUÀÆgÀÄ ರವರು ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ ದಿನಾಂಕ:28.03.2019 ರಂದು ಜಾಂತಾಪೂರು ಗ್ರಾಮದಲ್ಲಿ ದುರಗಮ್ಮ ದೇವರ ಜಾತ್ರೆ ಇದ್ದು ಜಾತ್ರೆ ನಿಮಿತ್ಯ ಸರಕಾರಿ ಶಾಲೆಯಿಂದ ದುರಗಮ್ಮ ದೇವರ ಗುಡಿಯವರೆಗೆ ಪಲ್ಲಕ್ಕಿ ಮೆರವಣಿಗೆ ನಡೆಯುತ್ತಿದ್ದು ಸದರಿ ಪಲ್ಲಕ್ಕಿ ಮೆರವಣಿಗೆಯು ಸಂಜೆ  7.30 ಗಂಟೆ ಸುಮಾರಿಗೆ ರೇಣಮ್ಮ ಅಗಸರ ರವರ ಮನೆಯ ಮುಂದೆ ಇರುವಾಗ ಮರಳಿ ಗ್ರಾಮದ ಜನರು ಡೊಳ್ಳನ್ನು ಬಡಿಯುತ್ತಿದ್ದಾಗ  ಜಾಂತಾಪೂರು ಗ್ರಾಮದ ಕುರುಬ ಜನಾಂಗದ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ಮರಳಿ ಗ್ರಾಮದ ಡೊಳ್ಳು ಬಡಿಯುತ್ತಿದ್ದವರೊಂದಿಗೆ ವಿನಾ ಕಾರಣವಾಗಿ ಜಗಳ ತಗೆದು ಬಾಯಿಗೆ ಬಂದಂತೆ ಬೈಯ್ಯುತ್ತಿರುವಾಗಿ ಇದನ್ನು ನೋಡಿದ ಫಿರ್ಯಾದಿ, ಫಿರ್ಯಾದಿ ಅಣ್ಣ, ಕರಿಯಪ್ಪ, ತಮ್ಮ ಹುಸೇನಪ್ಪ & ಅಮರಪ್ಪ ಕೂಡಿಕೊಂಡು ಊರಿನಲ್ಲಿ ದುರಗಮ್ಮ ದೇವರ ಜಾತ್ರೆ ನಡೆದಿದೆ ಈ ರೀತಿ ಬೇರೆ ಊರಿನವರೊಂದಿಗೆ  ಜಗಳ ತಗೆಯುವುದು ಸರಿ ಕಾಣುವುದಿಲ್ಲವೆಂದು ಬುದ್ದಿ ಮಾತು ಹೇಳಿ ಜಗಳ ಬಿಡಿಸಲು ಹೋದಾಗ ಆರೋಪಿತರೆಲ್ಲರೂ ಸೇರಿ ಲೇ ಮಾದಿಗ ಜಾತಿ ಸೂಳೆ ಮಕ್ಕಳೆ ನಿವ್ಯಾಕೆ ಅಡ್ಡ ಬಂದಿದ್ದಿರಾ ಎಂದು ಎಲ್ಲರೂ ಸೇರಿ ಕೈಗಳಿದ ಹೊಡೆದರು. ಅಷ್ಟಕ್ಕೆ ಸುಮ್ಮನಾಗದೆ ಫಿರ್ಯಾದಿ ಅಣ್ಣ ಕರಿಯಪ್ಪ ತಂದೆ ಗುಡದಪ್ಪ ಈತನಿಗೆ, ಅಯ್ಯಪ್ಪ ತಂದೆ ಹನುಮಂತ ಬಡಿಗೇರ ಈತನು ಕಲ್ಲಿನಿಂದ ಎದೆಗೆ ಹೊಡೆದನು. ಫಿರ್ಯಾದಿ ತಮ್ಮ ಹುಸೇನಪ್ಪ ತಂದೆ ಗುಡದಪ್ಪ ಈತನಿಗೆ ಸಂಗಪ್ಪ ತಂದೆ ಸಂಗನಬಸ್ಸಪ್ಪ ಈತನು ಎದೆಗೆ ಕೈಯಿಂದ ಗುದ್ದಿದನು, ಬೀರಪ್ಪ ತಂದೆ ಸಂಗಪ್ಪ ಈತನು ಕಾಲಿನಿಂದ ಹೊಟ್ಟೆಯ ಕೆಳಗೆ ಕಾಲಿನಿಂದ ಒದ್ದನು. ಅಮರಪ್ಪ ತಂದೆ ಬೋಜಪ್ಪ ಈತನಿಗೆ ಹನುಮಂತ ತಂದೆ ಸಂಗಪ್ಪ ಈತನು ರಾಡಿನಿಂದ ಬಲಗೈ ಕಿರುಬೆರಳಿಗೆ ಹೊಡೆದು ಒಳಪೆಟ್ಟು ಮಾಡಿದನು. ಶರಣಪ್ಪ ತಂದೆ ಸಂಗನಬಸ್ಸಪ್ಪ ಈತನು ಈ ಸೂಳೆ ಮಕ್ಕಳನ್ನು ಇವತ್ತೆ ಸಾಯಿಸಿಬಿಡಿ ಎಂದು ಜೀವದ ಬೆದರಿಕೆ ಹಾಕಿದನು. ನಂತರ ಫಿರ್ಯಾದಿದಾರನು  ತನ್ನ ಅಣ್ಣ ಕರಿಯಪ್ಪ, ತಮ್ಮ ಹುಸೇನಪ್ಪ & ಅಮರಪ್ಪ ಇವರಿಗೆ ಚಿಕಿತ್ಸೆ ಕುರಿತು ಮುದಗಲ್ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಲಿಂಗಸಗೂರು ಸರಕಾರಿ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿ ಮತ್ತು ಊರಿನ ಹಿರಿಯರೊಂದಿಗೆ ವಿಚಾರ ಮಾಡಿಕೊಂಡು ಇಂದು ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ. ಕಾರಣ ತಮ್ಮ ಹಲ್ಲೆ ಮಾಡಿದವರ ಮೇಲೆ ಕಾನೂನು ಕ್ರಮ ಜರಗಿಸಬೇಕು ಅಂತಾ ಮುಂತಾಗಿ  ಇದ್ದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣಾ ಗುನ್ನೆ ನಂಬರ 37/2019 PÀ®A 143, 147, 323, 324, 504, 506 gÉ/« 149 L¦¹ & 3(1),  (R), (S), 3(2) Va J¸ï.¹/J¸ïn wzÀÄÝ¥Àr PÁAiÉÄÝ 2015 ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕಣದ ಮಾಹಿತಿ.
ದಿನಾಂಕ:30.03.2019 ರಂದು ಸಂಜೆ 5-00 ಗಂಟೆ ಸುಮಾರಿಗೆ ಪಿರ್ಯದಿ ºÀÄ°UɪÀÄä UÀAqÀ ²ªÀUÁå£À¥Àà vÀ¼ÀªÁgÀ 35 ªÀµÀð eÁw £ÁAiÀÄPÀ GzÀAiÉÆÃUÀ ºÉÆÃmɯï PÉ®¸À ¸Á.»gÉAiÀÄgÀ¢ºÁ¼À vÁ.°AUÀ¸ÀÆÎgÀÄ. ಇವರು ಠಾಣೆಗೆ ಖುದ್ದಾಗಿ ಬಂದು ಒಂದು ಲಿಖಿತ ದೂರನ್ನು ತಂದು ಹಾಜರು ಪಡಿಸಿದ್ದು ಸಾರಂಶವೆನೆಂದರೆ ನಿನ್ನೆ ದಿನಾಂಕ 29-03-2019 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ನಾನು ನನ್ನಹೋಟೆಲ್ ಮುಂದೆ ನಿಂತಿರುವಾಗ ಮೇಲ್ಕಂಡ ನಾಲ್ಕು ಜನ ಆರೋಪಿತರು ಕೂಡಿಕೊಂಡು ಬಂದು ನನ್ನನ್ನು ತಡೆದು ನಿಲ್ಲಿಸಿ ಲೇ ಬೋಸೂಡಿ ಸೂಳೆ  ನಿಮ್ಮ ಹೋಟೆಲ್ ದಲ್ಲಿ ಚಹ ಕುಡಿದ ಪ್ಲಾಸ್ಟಿಕ್ ಕಪ್ ಗಳೆಲ್ಲವನ್ನು ನಮ್ಮ ಆಕಳು ಕಾಲಿನಲ್ಲಿ ಹಾಕಿದ್ದಿರಿ ಏನಲೇ ಎಂದು ಬಾಯಿಗೆ ಬಂದಂತೆ ಬೈಯ್ಯುತ್ತಾ ಕೈ ಯಿಂದ ಹೊಡೆದರು. ನಂತರ ಎ-1 ªÀiÁ£À¸À¥Àà vÀAzÉ ºÀ£ÀĪÀÄ¥Àà vÀ¼ÀªÁgÀ ಈತನು ಕಾಲಿನಿಂದ ನನ್ನ ಹೊಟ್ಟೆಗೆ ಒದ್ದನು. ಎ-2 ±ÁªÀªÀÄä UÀAqÀ ªÀiÁ£À¸À¥  ಈತನು ಮತ್ತು ಎ-4 zÀÄgÀUÀ¥Àà vÀAzÉ ºÀ£ÀĪÀÄAvÀ vÀ¼ÀªÁ  ರವರು ನನ್ನನ್ನು ಇಡಿದಿಕೊಂಡಾಗ ಎ-3 ರವರು ನನ್ನ ಬಲಗೈ ಉಂಗುರು ಬೆರಳನ್ನು ತಿರುವಿ ನನ್ನ ಕೊರಳಲ್ಲಿರುವ ತಾಳಿಯನ್ನು ಹರಿದು ಹಾಕಿದ್ದು ಇರುತ್ತದೆ. ಇದನ್ನು ನೋಡಿದ ನಮ್ಮೂರಿನ ಜನರು ಜಗಳವನ್ನು ಬಿಡಿಸಿದಾಗ ಎಲ್ಲರು ಲೇ ಸೂಳೆ ಮಕ್ಕಳೆ ಇವತ್ತು ಇವರು ಬಂದು ಜಗಳವನ್ನು ಬಿಡಿಸಿದರು ಎಂದು ನೀವುಗಳು ಉಳಿದುಕೊಂಡಿರಿ ಇಲ್ಲದಿದ್ದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವೆಂದು ಕೊಲೆ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿದ್ದು ನಂತರ ನಾನು ನನ್ನ ಮನೆಯವರೊಂದಿಗೆ ವಿಚಾರಣೆ ಮಾಡಿಕೊಂಡು ಬಂದು ದೂರು ನೀಡಲು ತಡವಾಗಿದ್ದು ಮಾನ್ಯರವರು ಮುಂದಿನ ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ  ಇದ್ದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 38/2019 PÀ®A 341, 504, 323, 506 ¸À»vÀ 34 L¦¹.  ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಮಟಕಾ ದಾಳಿ ಪ್ರಕಣದ ಮಾಹಿತಿ.
ದಿನಾಂಕ : 29-03-2019 ರಂದು ಸಂಜೆ ಗುಂಡಾ ಗ್ರಾಮದ ತಿಪ್ಪನಗೌಡ ರವರ ಹೊಟೆಲ್ ಮುಂದಿನ  ಸಾರ್ವಜನಿಕ ರಸ್ತೆಯಲ್ಲಿ ಆರೋಪಿ ನಂ.1 ಶಂಕರಯ್ಯ ಸ್ವಾಮಿ ತಂದೆ ಸಿದ್ದರಾಮಯ್ಯ, ವಯ-62, ಜಾ: ಜಂಗಮ, :  ಒಕ್ಕಲುತನ ಹಾಗೂ ಮಟ್ಕಾ ಬರೆಯುವುದು, ಸಾ: ಗುಂಡಾ ತಾ: ಮಸ್ಕಿ ನೇದ್ದವನು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣ ತೆಗೆದುಕೊಂಡು ಚೀಟಿಗಳಲ್ಲಿ ನಂಬರಗಳನ್ನು ಬರೆದುಕೊಡುತ್ತಿದ್ದಾನೆ ಅಂತಾ ಪಿ.ಎಸ್. ರವರು  ಬೀಟ ಜಾರಿ ಸಿಬ್ಬಂದಿಯಾದ ಹೆಚ್ .ಸಿ 358 ರವರಿಂದ ಖಚಿತ ಭಾತ್ಮಿ ಪಡೆದು, ಮಾನ್ಯ ಡಿಎಸ್ ಪಿ ಮತ್ತು ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ ಹೆಚ್. ಸಿ -358, ಪಿಸಿ-324, ಪಿಸಿ-472 ರವರ ಸಹಕಾರದೊಂದಿಗೆ ಇಬ್ಬರು ಪಂಚರೊಂದಿಗೆ ಸರ್ಕಾರಿ ಜೀಪನಲ್ಲಿ ಭಾತ್ಮಿ ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮ 5-45 ಪಿ.ಎಂ ಕ್ಕೆ ದಾಳಿ ಮಾಡಿ ಆರೋಪಿ ನಂ. 01  ನೇದ್ದವನಿಗೆ ವಶಕ್ಕೆ ತೆಗೆದುಕೊಂಡು ಅವನ ವಶದಲ್ಲಿದ್ದ ನಗದು ಹಣ ರೂ. 860 ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್  ನೇದ್ದವಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಆರೋಪಿ ನಂ. 1 ಈತನು ತಾನು ಬರೆದ ಮಟ್ಕಾ ಪಟ್ಟಿ ಮತ್ತು ಸಂಗ್ರಹಿಸಿದ ಹಣವನ್ನು ಆರೋಪಿ ನಂ. 2 ಕುಂಬಾರ ಹನುಮಂತ ತುರುವಿಹಾಳ , ಮಟ್ಕಾ ಬುಕ್ಕಿ  ರವರಿಗೆ ಕೊಡುತ್ತಿದ್ದ ಬಗ್ಗೆ ತಿಳಿಸಿದ್ದು, ನಂತರ ಆರೋಪಿ ನಂ.1 ನೇದ್ದವನೊಂದಿಗೆ  7-30 ಪಿ.ಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಠಾಣಾ NCR ನಂ. 16/2019 ಪ್ರಕಾರ ಸ್ವೀಕೃತ ಮಾಡಿ, ನಂತರ ಮಾನ್ಯ ಹಿರಿಯ ಶ್ರೇಣಿ  ಸಿವಿಲ್ & ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಿಗೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ಪತ್ರ ಬರೆದುಕೊಂಡು ಇಂದು ದಿನಾಂಕ 30-03-2019 ರಂದು  ಪರವಾನಿಗೆ ಬಂದ ನಂತರ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ಸಾರಾಂಶದ ತುರ್ವಿಹಾಳ ಪೊಲೀಸ್ ಠಾಣೆ ಗುನ್ನೆ ನಂಬರ  ಮೇಲಿಂದ 2-30 ಪಿ.ಎಂ ಕ್ಕೆ ಠಾಣೆ ಗುನ್ನೆ ನಂ. 51/2019  ಕಲಂ 78  (iii)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕಣದ ಮಾಹಿತಿ.
ದಿನಾಂಕ  30/03/2019 ರಂದು 21.15 ಗಂಟೆಗೆ  ಫಿರ್ಯಾದಿ ರವೀಂದ್ರ ತಂದೆ ಪಾಗುಂಟೆಪ್ಪ, ಉಪ್ಪಾರ್, 30 ವರ್ಷ, ಒಕ್ಕಲುತನ ಸಾ: ಗಣಮೂರು ತಾ: ಜಿ: ರಾಯಚೂರು ಇವರು ಠಾಣೆಗೆ ಹಾಜರಾಗಿ ತಮ್ಮ  ಒಂದು ಹೇಳಿಕೆ ದೂರನ್ನುನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ 30/03/19 ರಂದು ಮದ್ಯಾಹ್ನ 4.00 ಗಂಟೆಯ ಸುಮಾರಿಗೆ ಮಾನವಿ ಕಡೆಯಿಂದ ಮೃತ ವೀರೇಶನು ತನ್ನ ಇಲಾಖಾ ಮೋಟಾರ್ ಸೈಕಲ್ ನಂ ಕೆ..36/ಜಿ 0486 ನೇದ್ದರ ಮೇಲೆ ಮಾನವಿ ಕಡೆಯಿಂದ ರಾಯಚೂರ ಕಡೆಗೆ ಹೊರಟಾಗ  ಬೊಮ್ಮನಾಳ ಕ್ರಾಸ್ ಹತ್ತಿರ  ಎದುರುಗಡೆಯಿಂದ ಕಾರ್ ನಂ ಕೆ..35/ಎನ್-3880 ನ್ನು ಅದರ ಚಾಲಕನಾದ ಯೋಗರಾಜ್ ನಾಯ್ಡು ಈತನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದವನೇ ಎಡಗಡೆ ಹೋಗುವದನ್ನು ಬಿಟ್ಟು ಬಲಗಡೆಗೆ ಬಂದವನೇ ವೀರೇಶನ ಮೋಟಾರ್ ಸೈಕಲ್ಲಿಗೆ ಢಿಕ್ಕಿ ಕೊಟ್ಟಿದ್ದರಿಂದ ವೀರೇಶನು ಮೋಟಾರ ಸೈಕಲ್ ಸಹಿತ ಕೆಳಗೆ ಬಿದ್ದಾಗ ವೀರೇಶನ ಮೇಲೆ ಕಾರ್ ಹತ್ತಿ ಹೋಗಿ ಕಾರ್ ಸಹ ಪಲ್ಟಿಯಾಗಿ ಬಿದ್ದಿದ್ದು ಕಾರಣ  ವೀರೇಶನಿಗೆ  ಕಾಲುಗಳು ಮುರಿದು ಗಂಭೀರ ಗಾಯಗಳಾಗಿದ್ದು ಅದರಂತೆ ಕಾರಿನಲ್ಲಿದ್ದ ಮೂರು ಜನರಿಗೆ ಸಾದಾ ಮತ್ತು ತೀವೃ ಸ್ವರೂಪದ ಗಾಯಗಳಾಗಿದ್ದು 108 ವಾಹನದಲ್ಲಿ ಚಿಕಿತ್ಸೆ  ಕುರಿತು ರಾಯಚೂರಿಗೆ ತೆಗೆದುಕೊಂಡು ಬಾಲಂಕು ಆಸ್ಪತ್ರೆಗೆ ಹೋಗಿ ನಂತರ  ಅಲ್ಲಿಂದ ವೀರೇಶನಿಗೆ  ರಿಮ್ಸ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ರಿಮ್ಸ  ಆಸ್ಪತ್ರೆಯ ಹತ್ತಿರ ಸಾಯಂಕಾಲ 5.45 ಗಂಟೆಗೆ ಮೃತನಾಗಿದ್ದು ಇರುತ್ತದೆ. ಕಾರಣ ಕಾರ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆನಂ 77/2019 ಕಲಂ 279,337,338,304 () .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.

ಚುನಾವಣೆಗೆ ಸಂಬಂದಿಸಿ ಪ್ರಕರಣದ ಮಾಹಿತಿ.
ದಿನಾಂಕ:30-03-2019 ರಂದು ರಾತ್ರಿ 11-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಬಿ.ಎಸ್.ಪಟ್ಟಣಶೆಟ್ಟಿ, ಪತ್ರಾಂಕಿತ ಸಹಾಯಕರು, ಡಿ.ಡಿ.ಪಿ.ಐ ಆಫೀಸ್ ರಾಯಚೂರು ಮತ್ತು ಎಫ್.ಎಸ್.ಟಿ–6 ಅಧಿಕಾರಿ, ರಾಯಚೂರು ಲೋಕಸಭಾ ಕ್ಷೇತ್ರ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬೆರಳಚ್ಚು ಮಾಡಿದ ದೂರನ್ನು ನೀಡಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ತಮಗೆ ಲೋಕಸಭಾ ಚುನಾವಣಾ ನಿಮಿತ್ಯವಾಗಿ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ರಾಯಚೂರು ಇವರು ದಿನಾಂಕ 11.03.2019 ರಿಂದ ಪ್ಲೈಯಿಂಗ್ ಸ್ಕ್ವಾಡ್-6 ರಲ್ಲಿ ರಾಯಚೂರು ನಗರದ ವಾರ್ಡ ನಂ 01 ರಿಂದ 11 ರ (3 ಹೊರತು ಪಡಿಸಿ) ಏರಿಯಾಗಳಲ್ಲಿ ಕರ್ತವ್ಯಕ್ಕೆ ನೇಮಕ ಮಾಡಿದ್ದು ಇರುತ್ತದೆ. ಮಾನ್ಯ ಸಹಾಯಕ ಚುನಾವಣಾಧಿಕಾರಿಗಳು, ದಿನಾಂಕ 29.03.2019 ರಂದು ಬೆಳಿಗ್ಗೆ 6.00 ಗಂಟೆಯಿಂದ ಮದ್ಯಾಹ್ನ 2.00 ಗಂಟೆಯವರೆಗೆ ತನ್ನನ್ನು ಬಸವೇಶ್ವರ ವೃತ್ತದ ಬಳಿ ವಿಶೇಷ ಕರ್ತವ್ಯಕ್ಕೆ ನೇಮಕ ಮಾಡಿದ್ದು, ತಮ್ಮೊಂದಿಗೆ ವಾಹನ ಚಾಲಕ ಮನೋಜಕುಮಾರ, ಪೊಲೀಸ ಇಲಾಖೆಯಿಂದ ಶಶಿಧರ ಹೆಚ್,ಸಿ 45 ಸದರ ಬಜಾರ ಪೊಲೀಸ ಠಾಣೆ ರವರು ಕರ್ತವ್ಯದಲ್ಲಿದ್ದು, ತಮಗೆ ವಿಶೇಷವಾಗಿ ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯು ನಾಮಪತ್ರ ಸಲ್ಲಿಕೆ ಕುರಿತು ಹಮ್ಮಿಕೊಂಡ ರಾಲಿ ಕುರಿತು ಪರಿವೀಕ್ಷಣೆಗಾಗಿ ನೇಮಿಸಿದ್ದು, ತಾವು ಮದ್ಯಾಹ್ನ 1.30 ಗಂಟೆ ಸುಮಾರಿಗೆ ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯು ನಾಮಪತ್ರ ಸಲ್ಲಿಕೆ ಕುರಿತು ಹಮ್ಮಿಕೊಂಡ ರಾಲಿ ಕುರಿತು ಪರಿವೀಕ್ಷಣೆಯಲ್ಲಿ ಇದ್ದಾಗ, ಮನೋಜಕುಮಾರ ತನ ಕಡೆಯಿಂದ ವಿಡಿಯೋ ರೆಕಾರ್ಡಿಂಗ್ ಮಾಡಿಸಿ, ರಾಲಿ ಮುಗಿದ ನಂತರ ಸಹಾಯಕ ಚುನಾವಣಾಧಿಕಾರಿಗಳಿಗೆ 3.00 ಗಂಟೆಗೆ ವಿಡಿಯೋ ರೆಕಾರ್ಡಿಂಗ್ ನೀಡಿದ್ದು ಇರುತ್ತದೆ.

ದಿನಾಂಕ 30.03.2019 ರಂದು ಸಂಜೆ 5.00 ಗಂಟೆ ಸುಮಾರಿಗೆ ತಾವು ನಿನ್ನೆ ದಿನಾಂಕ 29.03.2019 ರಂದು ಕಾಂಗ್ರೇಸ್ ಅಭ್ಯರ್ಥಿರಾಲಿಯಲ್ಲಿ ಮಾಡಿದ ವಿಡಿಯೋವನ್ನು ವೀಕ್ಷಿಸುತ್ತಿದ್ದಾಗ, ಅದರಲ್ಲಿ ಮದ್ಯಾಹ್ನ 1.30 ಗಂಟೆ ಸುಮಾರಿಗೆ ಬಸವೇಶ್ವರ ವೃತ್ತದ ಟಿಪಾನಿಸ್ ಹತ್ತಿರ ತಿರುವಿನಲ್ಲಿ, ಕಾಂಗ್ರೇಸ ಅಭ್ಯರ್ಥಿಯಾದ ಬಿ.ವಿ.ನಾಯಕ್ ಇವರ ನಾಮಿನೇಷನ್ ರಾಲಿಯ ಮುಂಭಾಗದಲ್ಲಿ ಮೂರು ಬೈಕಗಳಲ್ಲಿ ಕಾಂಗ್ರೇಸ್ ಪಕ್ಷದ ಭಾವುಟವನ್ನು ಹಿಡಿದುಕೊಂಡು ಹೋಗುತ್ತಿರುವದು ಕಂಡು ಬಂದಿದ್ದು, ಸದರಿ ಬೈಕಗಳನ್ನು ನೋಡಲಾಗಿ ಶೈನ ಗಾಡಿ ನಂ ಕೆ.ಎ 36/1720, ಯುನಿಕಾರ್ನ ಗಾಡಿ ನಂ ಕೆ.ಎ05/7191 ಹಾಗೂ ಹಿರೋ ಸ್ಪೇಂಡರ್ ಗಾಡಿ ನಂ ಕೆಎ36 ಈ.ಹೆಚ್.0651 ನೇದ್ದವುಗಳು ಇರುತ್ತವೆ. ಕಾಂಗ್ರೇಸ ಪಕ್ಷದ ಅಭ್ಯರ್ಥಿ ಪರ ಪ್ರಚಾರದ ಸಲುವಾಗಿ ಅನುಮತಿ ಇಲ್ಲದೆ ಮೋಟಾರ ಸೈಕಲ್ಗಳನ್ನು ಪ್ರಚಾರಕ್ಕಾಗಿ ಉಪಯೋಗಿದ ದೃಷ್ಯ ವಿಡಿಯೋದಲ್ಲಿ ಕಂಡು ಬಂದಿದ್ದು ಇರುತ್ತದೆ. ಆದ್ದರಿಂದ ಶ್ರೀ ರಾಮಣ್ಣ
ಇರಬಗೇರಾ ಅಧ್ಯಕ್ಷರು, ಜಿಲ್ಲಾ ಕಾಂಗ್ರೇಸ್ ಸಮಿತಿ, ರಾಯಚೂರು ಇವರು ಯಾವುದೇ ಅನುಮತಿ ಪಡೆಯದೆ ಮೇಲ್ಕಂಡ ಮೋಟಾರ ಬೈಕಗಳನ್ನು ಪ್ರಚಾರಕ್ಕೆ ಬಳಸಿಕೊಂಡಿದ್ದು ಕಂಡು ಬಂದಿದ್ದು ಇರುತ್ತದೆ.  ಕಾರಣ ಸದರಿಯವರ ಮೇಲೆ ಕಲಂ 171(ಹೆಚ್) ಐಪಿಸಿ ರೀತ್ಯ ಕ್ರಮ ಜರುಗಿಸಲು ಕೋರಿದೆ ಅಂತಾ ಇದ್ದ ದೂರಿನ ಸಾರಂಶದ ಮೇಲಿಂದ ಠಾಣಾ ಅಸಂಜ್ಞೆಯ ಅಪರಾಧ ಸಂಖ್ಯೆ:07/2019 ಕಲಂ:171 (ಹೆಚ್) ಐ.ಪಿ.ಸಿ ಅಡಿಯಲ್ಲಿ ನೋಂದಾಯಿಸಿಕೊಂಡು, ಮಾನ್ಯ ನ್ಯಾಯಾಲಯದಿಂದ ಸಂಜ್ಞೆಯ ಅಪರಾಧ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಅನುಮತಿ ಕೋರಿದ್ದು, ಮಾನ್ಯ ನ್ಯಾಯಾಲಯವು ನೀಡಿದ ಅನುಮತಿ ಪತ್ರವನ್ನು ಈ ದಿವಸ ದಿನಾಂಕ:31-03-2019 ರಂದು 00.05 ಗಂಟೆಗೆ ಯಲ್ಲಪ್ಪ ಹೆಚ್.ಸಿ 343 ರವರು ತಂದು ಹಾಜರುಪಡಿಸಿದ್ದು, ಅದರ ಆಧಾರದ ಮೇಲಿಂದ ಸದರ ಬಜಾರ ಪೊಲೀಸ್ ಠಾಣಾ ಅಪರಾಧ ಸಂಖ್ಯೆ:24/2019 ಕಲಂ:171 (ಹೆಚ್) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ: 30-03-2019 ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿದಾರರಾದ ಅಂಬಣ್ಣ ಎ.ಇ.ಇ ಕರ್ನಾಟಟಕ ನೀರಾವರಿ ನಿಗಮ ನಂಬರ 1 ಕಾಲುವೆ ಉಪ ವಿಭಾಗ ಕಲ್ಲೂರು [ಪ್ಲೈಯಿಂಗ್ ಸ್ಕ್ವಾಡ್-1] ಇವರು ಠಾಣೆಗೆ ಹಾಜರಾಗಿ ಗಣಕೀಕೃತ ದೂರು ಸಲ್ಲಿಸಿದ್ದು ಸಾರಾಂಶವೇನೆಂದರೆ, ಫಿರ್ಯಾದಿದಾರರು ದಿನಾಂಕ 30.03.2019 ರಂದು ಸಂಜೆ 5.00 ಗಂಟೆ ಸುಮಾರಿಗೆ ತಾವು ನಿನ್ನೆ ದಿನಾಂಕ 29.03.2019 ರಂದು ಕಾಂಗ್ರೇಸ್ ಅಭ್ಯರ್ಥಿ ರಾಲಿಯಲ್ಲಿ ಮಾಡಿದ ವಿಡಿಯೋವನ್ನು ವೀಕ್ಷಿಸುತ್ತಿದ್ದಾಗ ಅದರಲ್ಲಿ ಗಂಜ ವೃತ್ತದಲ್ಲಿರುವ ಕಾಂಗ್ರೇಸ್ ಪಕ್ಷದ ಕಛೇರಿಯ ಮುಂದೆ ಮದ್ಯಾಹ್ನ 01.00 ಗಂಟೆ ಸುಮಾರಿಗೆ ಕಾಂಗ್ರೇಸ ಅಭ್ಯರ್ಥಿಯಾದ ಬಿ.ವಿ.ನಾಯಕ್ ಇವರ ಭಾವಚಿತ್ರ ಮತ್ತು ಅದರ ಕೆಳಗೆ ಬಿ.ವಿ.ನಾಯಕ ಹೆಸರುಳ್ಳ ಹಾಗೂ ಪಕ್ಕದಲ್ಲಿ ಕಾಂಗ್ರೇಸ್ ಪಕ್ಷದ ಚಿನ್ನೆ (ಹಸ್ತದ ಗುರುತು) ಇರುವ ಟೀ ಶರ್ಟಗಳನ್ನು ಪಕ್ಷದ ಅಭ್ಯರ್ಥಿಯ ಪರ ಪ್ರಚಾರದ ಸಲುವಾಗಿ 3 ಜನರು ಧರಿಸಿದ್ದು, ಇನ್ನೊಬ್ಬರಿಗೆ ಕೊಡುತ್ತಿರುವ ದೃಷ್ಯ ವಿಡಿಯೋದಲ್ಲಿ ಕಂಡು ಬಂದಿದ್ದು ಇರುತ್ತದೆ. ಆದ್ದರಿಂದ ಶ್ರೀ ರಾಮಣ್ಣ ಇರಬಗೇರಾ ಅಧ್ಯಕ್ಷರು ಜಿಲ್ಲಾ ಕಾಂಗ್ರೇಸ್ ಸಮಿತಿ ರಾಯಚೂರು ಇವರು ಯಾವುದೇ ಅನುಮತಿ ಪಡೆಯದೆ ಸದರಿ ಟೀ-ಶರ್ಟಗಳನ್ನು ಅಕ್ರಮ ಸಂದಾಯ ಮಾಡಿ ತಯಾರಿಸಿ ಪ್ರಚಾರಕ್ಕೆ ಬಳಸಿಕೊಂಡಿದ್ದು ಕಂಡು ಬಂದಿದ್ದು ಇರುತ್ತದೆ.
ಕಾರಣ ಸದರಿಯವರ ಮೇಲೆ ಕಲಂ 171(ಹೆಚ್) ಐಪಿಸಿ ರೀತ್ಯ ಕ್ರಮ ಜರುಗಿಸಲು ಕೋರಿದೆ. ಅಂತಾ ಮುಂತಾಗಿ ಇರುವ ಸಾರಾಂಸದ ಮೇಲಿಂದ ಮಾರ್ಕೇಟಯಾರ್ಡ್ ಠಾಣಾ ಎನ್.ಸಿ.ನಂ.06/2019 ಪ್ರಕಾರ ದಾಖಲಿಸಿಕೊಂಡಿದ್ದು ಸದರಿ ಪ್ರಕರಣವು ಅಸಂಜ್ಞಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿಪಡೆದು 2230 ಗಂಟೆಗೆ  ಮಾರ್ಕೇಟಯಾರ್ಡ್ ಪೊಲಿಸ್  ಠಾಣಾ ಗುನ್ನೆ ನಂ.20/2019 ಕಲಂ 171[ಹೆಚ್] ಐಪಿಸಿ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.