Thought for the day

One of the toughest things in life is to make things simple:

2 Dec 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

E¸ÉàÃmï zÁ½ ¥ÀæPÀgÀtzÀ ªÀiÁ»w.

ದಿನಾಂಕ : 30-11-2019 ರಂದು  ಸಾಯಂಕಾಲ 4-30 ಗಂಟೆಯ ಸುಮಾರು  ಕಲಮುಂಗಿನವಲಿ ರಸ್ತೆಯ ಬಸವಣ್ಣ ಗುಡಿ  ಮುಂದಿನ  ಸಾರ್ವಜನಿಕ  ರಸ್ತೆಯ ಮೇಲೆ  ಜನರು ದುಂಡಾಗಿ ಕುಳಿತುಕೊಂಡು ಕಣದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ ಬಗ್ಗೆ  ಪಿ.ಎಸ್.ಐ ರವರು ಖಚಿತ ಭಾತ್ಮಿ ಪಡೆದು, ಡಿ ಎಸ್ ಪಿ ಹಾಗೂ ಸಿಪಿಐ  ಸಿಂಧನೂರು ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಹಾಗೂ ಸಿಬ್ಬಂದಿಯವರಾದ  ಹೆಚ್ ಸಿ 346 ಪಿಸಿ-679, ಪಿಸಿ 679. ಪಿಸಿ 165. & ಜೀಪ್ ಚಾಲಕ ಪಿ ಸಿ 472  ರವರ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ ಸಾಯಂಕಾಲ 5-20 ಕ್ಕೆ  ದಾಳಿ ಮಾಡಿ ಮೇಲ್ಕಂಡ 10  ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದು, ಆರೋಪಿ ನಂಭರ 11 ನೇದ್ದವನು ಸ್ಥಳದಿಂದ ಓಡಿ ಹೋಗಿದ್ದು ಓಡಿಹೋದವನ ಹೆಸರು ದಸ್ತಗಿರಿ ಮಾಡಿದವರಿಂಧ ತಿಳಿದುಕೊಂಡಿದ್ದು ನಂತರ ಆರೋಪಿತರ  ವಶದಲ್ಲಿದ್ದ ಮತ್ತು ಕಣದಲ್ಲಿದ್ದ ಒಟ್ಟು ನಗದು ಹಣ ರೂ 5450 ಹಾಗೂ 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು 7-00 ಪಿ ಎಂ ಕ್ಕೆ ಆರೋಪಿತರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಸ್ವೀಕೃತ ಮಾಡಿಕೊಂಡು ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ. 53/2019 ರ ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ಕೋರಿ  ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದುಕೊಂಡಿದ್ದು, ಇಂದು ಸಾಯಂಕಾಲ 6-00 ಗಂಟೆಗೆ  ನ್ಯಾಯಾಲಯದಿಂದ ಅನುಮತಿ ಬಂದ ನಂತರ ಸದರಿ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 202/2019 ಕಲಂ 87 ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೇನು.

ಮಟಕಾ ಜೂಜಾಟದ ಪ್ರಕರಣದ ಮಾಹಿತಿ.
ದಿನಾಂಕ 30-11-2019 ರಂದು ಮದ್ಯಾಹ್ನ 3.00  ಗಂಟೆಗೆ ಆರೋಪಿತನು ಮುದಗಲ್ ಪಟ್ಟಣದ ಮಹಾಂತೇಶ ಮಠದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/- ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಜನರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದಾಗ ಪಿ.ಎಸ್.ಐ ಮತ್ತು ಸಿಬ್ಬಂದಿಯವರಾದ ಶ್ರೀ ಅವಿನಾಶ ಕಾಂಬಳೆ ಪಿ.ಎಸ್.ಐ( ಪ್ರೋ), ಪಿ.ಸಿ- 419, 283  ರವರ ಸಹಾಯದಿಂದ ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಆರೋಪಿತನನ್ನು ಹಿಡಿದು ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ 1250/-, ಒಂದು ಮಟಕಾ ಚೀಟಿ & ಒಂದು ಬಾಲ ಪೆನ್ನ ಜಪ್ತಿ ಮಾಡಿಕೊಂಡು ಮಟಕಾ ಜೂಜಾಟದ ದಾಳಿ ಪಂಚನಾಮೆ ಮಾಡಿಕೊಂಡಿದ್ದು ಇರುತ್ತದೆ. ಹಾಗೂ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀ ಅಂತಾ ಕೇಳಿದಾಗ ತನ್ನಲ್ಲಿಯೇ ಇಟ್ಟುಕೊಳ್ಳುವುದಾಗಿ ಹೇಳಿದನು. ಸದರಿ ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸುವ ಕುರಿತು  ಸಂಜೆ 4.20  ಗಂಟೆಗೆ ಠಾಣೆಗೆ ಬಂದು ವರದಿ, ದಾಳಿ ಪಂಚನಾಮೆ ಮತ್ತು ಮುದ್ದೆಮಾಲನ್ನು ಮತ್ತು ಆರೋಪಿತನನ್ನು ಕೊಟ್ಟು ಮುಂದಿನ ಕ್ರಮ ಜರುಗಿಸಲ ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶದ ಮೇಲಿಂದ  ಆರೋಪಿತನ  ಮೇಲೆ ಠಾಣಾ ಎನ್.ಸಿ ನಂ. 22/2019 ಕಲಂ 78 (3) ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.  ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣ ವಾಗುತ್ತಿದ್ದರಿಂದ ಆರೋಪಿತನ ಮೇಲೆ ಪ್ರಥಮ ವರ್ತಮಾನ ವರದಿ ದಾಖಲಿಸಲು ಮಾನ್ಯ ನ್ಯಾಯಾಲಯಕ್ಕೆ ಯಾದಿ ಬರೆದುಕೊಂಡಿದ್ದು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಲು ಅನುಮತಿ ನೀಡಿದ್ದು ಅದನ್ನು ಇಂದು ದಿನಾಂಕ:01.12.2019 ರಂದು ಸಂಜೆ 6-00 ಗಂಟೆಗೆ ನ್ಯಾಯಾಲಯ ಸಿಬ್ಬಂದಿ ಪಿ.ಸಿ-640 ರವರು ತಂದು ಕೊಟ್ಟಿದ್ದರಿಂದ ಪಂಚನಾಮೆ ಸಾರಾಂಶದ ಮೇಲಿಂದ ಆರೋಪಿತನ ಮೇಲೆ ಮುದಗಲ್ ಠಾಣಾ ಅ.ಸಂಖ್ಯೆ 147/2019 ಕಲಂ.78 (3) ಕೆ.ಪಿ ಕಾಯ್ದೆ ಪ್ರಕಾರ ಕ್ರಮ ಜರುಗಿಸಿ ತನಿಕೆ ಕೈಗೊಂಡಿರುತ್ತಾರೆ.