Thought for the day

One of the toughest things in life is to make things simple:

8 Jun 2020

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮದ್ಯ ಜಪ್ತಿ ಪ್ರಕರಣದ ಮಾಹಿತಿ
            ದಿನಾಂಕಃ07.06.2020 ರಂದು 17-30 ಗಂಟೆಗೆ ಶ್ರೀ ಮಂಜುನಾಥ ಟಿ.ಡಿ ಪಿ.ಎಸ್.ಐ(ಕಾಸು) ರವರು ಆರೋಪಿ  ®Qëöäà UÀAqÀ gÀAUÀAiÀÄå ªÀAiÀÄ: 40 ªÀµÀð eÁ: F¼ÀUÉÃgï G: ªÀÄ£ÉUÉ®¸À 2) ¥Àæ¨sÀÄ vÀAzÉ gÀAUÀAiÀÄå ªÀAiÀÄ: 22 ªÀµÀð eÁ: F¼ÀUÉÃgï G: SÁ¸ÀV PÉ®¸À E§âgÀÄ ¸Á: ªÀÄAUÀ¼ÀªÁgÀ ¥ÉÃmÉ gÁAiÀÄZÀÆgÀÄ ಇವರನ್ನು ಮತ್ತು ಜಪ್ತಿಪಡಿಸಿದ ಮುದ್ದೆಮಾಲು, ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ. ತಾವು ಇಂದು ದಿನಾಂಕ: 07.06.2020 ರಂದು ಮದ್ಯಾಹ್ನ 3-30 ಗಂಟೆಗೆ ಠಾಣೆಯಲ್ಲಿರುವಾಗ, ಮಂಗಳವಾರಪೇಟೆ ಏರಿಯಾದಲ್ಲಿ ಅನಧಿಕೃತವಾಗಿ ಕಲಬೆರಕೆ ಸೇಂದಿ ಮತ್ತು ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದ ಮೇರೆಗೆ ಅದನ್ನು ಮಾನ್ಯ ಸಿಪಿಐ ಪೂರ್ವ ವೃತ್ತ ರಾಯಚೂರು ರವರ ನೇತೃತ್ವದಲ್ಲಿ ದಾಳಿ ಮಾಡುವ ಕುರಿತು ಠಾಣೆಗೆ ಇಬ್ಬರು ಪಂಚರಾದ 1) ನಾಗಪ್ಪ ತಂದೆ ಹುಲಿಗೆಪ್ಪ  2) ಎಂ.ಡಿ. ಶಾಲಂ ತಂದೆ ಇಬ್ರಾಹಿಂ ಇಬ್ಬರು ಸಾ: ರಾಯಚೂರು ರವರನ್ನು ಹಾಜರ್ ಪಡಿಸಿಕೊಂಡು ಅವರನ್ನು ಮತ್ತು ಮತ್ತು ನರಸಮ್ಮ ಪಿ.ಎಸ್.ಐ (ಅವಿ) ಹಾಗು ಸಿಬ್ಬಂದಿಯವರಾದ ಹೆಚ್.ಸಿ.271, ಮತ್ತು ಪಿ.ಸಿ. 511, 205, ,ಮಪಿಸಿ.1009, 1023 ರವರನ್ನು ಕರೆದುಕೊಂಡು ಇಲಾಖಾ ಜೀಪ್ ನಂ ಕೆ.ಎ.36/ಜಿ-212 ನೇದ್ದರಲ್ಲಿ ಠಾಣೆಯಿಂದ ಮದ್ಯಾಹ್ನ 3-45 ಗಂಟೆಗೆ ಹೊರಟು ಸಂಜೆ 4-00 ಗಂಟೆಗೆ ಮಂಗಳವಾರಪೇಟೆ ಏರಿಯಾದಲ್ಲಿ ತಲುಪಿ ಅಲ್ಲಿ ಜೀಪ್ ನಿಲ್ಲಿಸಿ ಎಲ್ಲಾರು ಕೂಡಿ ಓಣಿ ರಸ್ತೆಯಲ್ಲಿ ನಡೆದುಕೊಂಡು ಹೋಗಿ ನೋಡಲಾಗಿ 1) ಲಕ್ಷ್ಮೀ ಗಂಡ ರಂಗಯ್ಯ  ವಯ: 40 ವರ್ಷ ಜಾ: ಈಳಿಗೇರ್ : ಮನೆ ಕೆಲಸ ಸಾ: ಮಂಗಳವಾರಪೇಟೆ ರಾಯಚೂರು. 2) ಪ್ರಭು ತಂದೆ ರಂಗಯ್ಯ ವಯಃ 22 ವರ್ಷ ಜಾಃ ಈಳಿಗೇರ್ ಉಃ ಖಾಸಗಿ ಕೆಲಸ ಸಾಃ ಮಂಗಳವಾರಪೇಟೆ ರಾಯಚೂರು ಇವರು ತಮ್ಮ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಎರಡು ಪ್ಲಾಸ್ಟೀಕ್ ಕೊಡಗಳಲ್ಲಿ ಅಂದಾಜು 22 ಲೀಟರಿನಷ್ಟು ಕಲಬೆರಕೆ ಸೇಂದಿ, 250 ಗ್ರಾಂ ಸಿ.ಹೆಚ್ ಪೌಡರ್ ಮತ್ತು 90 ML ನ McDowells NO.1 Celebration  170 ಪ್ವೌಚ್ ಗಳು, ಒಂದು ಪ್ವೌಚ್ ನ ಬೆಲೆ 45.10 ರೂಪಾಯಿ ಬೆಲೆಬಾಳುವುದು ಹೀಗ್ಗೆ 170 ಪ್ವೌಚ್ ನ ಬೆಲೆ 7,667 ರೂಪಾಯಿ ಬೆಲೆ ಬಾಳುವದನ್ನು ಇಟ್ಟುಕೊಂಡು ಮಾರಾಟದಲ್ಲಿ ತೊಡಗಿದ್ದಾಗ ಸಂಜೆ 4-10 ಗಂಟೆಗೆ ದಾಳಿ ಮಾಡಲಾಗಿ ಲಕ್ಷ್ಮೀ ಗಂಡ ರಂಗಯ್ಯ ಈಕೆಯು ಸಿಕ್ಕಿ ಬಿದ್ದಿದ್ದು  ಪ್ರಭು ತಂದೆ ರಂಗಯ್ಯ ಈತನು ಓಡಿ ಹೋಗಿದ್ದು ಲಕ್ಷ್ಮೀ ಈಕೆಗೆ ಇದನ್ನು ಎಲ್ಲಿಂದ ತಂದಿದ್ದೀ ಅಂತ ವಿಚಾರಿಸಿದ್ದಕ್ಕೆ ಆಕೆಯು ಇದನ್ನು ತನ್ನಲ್ಲಿದ್ದ ಸಿ.ಹೆಚ್. ಪೌಡರಿನಿಂದ ಕಲಬೆರಕೆ ಸೇಂದಿಯನ್ನು ತಯಾರಿಸಿ ಒಂದು ತಂಬಿಗೆಗೆ 10/- ರೂ,.ಗಳಂತೆ ಮಾರಾಟ ಮಾಡುವದಾಗಿ ಮತ್ತು ನಗರದ ವಿವಿಧ ಅಂಗಡಿಗಳಿಂದ ಮದ್ಯದ ಪ್ವೌಚ್ ಗಳನ್ನು ತಂದು ಮಾರಾಟ ಮಾಡುತ್ತಿದ್ದುದ್ದಾಗಿ  ಒಪ್ಪಿಕೊಂಡಿದ್ದು, ಇದನ್ನು ಮಾರಾಟ ಮಾಡಲು ಯಾವುದಾದರು ಲೈಸನ್ಸ್ ಇದಯೇ ಅಂತ ವಿಚಾರಿಸಿದ್ದಕ್ಕೆ ತಮ್ಮಲ್ಲಿ ಯಾವುದೇ ಲೈಸನ್ಸ್ ಇರುವದಿಲ್ಲ ಅಂತ ತಿಳಿಸಿದಳು. ಆಕೆಯನ್ನು ಮಹಿಳಾ ಸಿಬ್ಬಂದಿವರಿಂದ ಅಂಗಜಡ್ತಿ ಮಾಡಿಲಾಗಿ ಸೇಂದಿ ಮತ್ತು ಅಕ್ರಮ ಮದ್ಯಮಾರಾಟದಿಂದ ಸಂಗ್ರಹಿಸಿದ 170/-ರೂ,.ಳು ದೊರೆತಿದ್ದು, ಅವುಗಳಿಂದ ಪ್ರತ್ಯೇಕವಾಗಿ ಶ್ಯಾಂಪಲ್ ಗಳನ್ನು  ತೆಗೆದು ಸೀಲ್ ಮಾಡಿದ್ದು ಅವುಗಳನ್ನು ಮತ್ತು ಜಪ್ತಿ ಪಡಿಸಿದ ಎಲ್ಲಾ ವಸ್ತುಗಳನ್ನು ಜಪ್ತಿಪಡಿಸಿಕೊಂಡಿದ್ದು, ಸದರಿ ಲಕ್ಷ್ಮೀ ಮತ್ತು ಪ್ರಭು ರವರು ಕಲಬೆರಕೆಯಿಂದ ತಯಾರಿಸಿದ ಸೇಂದಿಯನ್ನು ಮತ್ತು ಮದ್ಯದ ಪ್ವೌಚ್ ಗಳನ್ನು ಅನಧಿಕೃತವಾಗಿ ಯಾವುದೇ ಲೈಸನ್ಸ್ ಇಲ್ಲದೇ ಮಾರಾಟ ಮಾಡುತ್ತಿದ್ದು ಕಂಡು ಬಂದಿದ್ದರಿಂದ ಲಕ್ಷ್ಮೀ ಈಕೆಯನ್ನು ಮತ್ತು ಜಪ್ತಿಪಡಿಸಿದ ಎಲ್ಲಾ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡು ಈ ಬಗ್ಗೆ ಸಂಜೆ 4-10 ಗಂಟೆಯಿಂದ 5-10 ಗಂಟೆಯವರಿಗೆ ಸ್ಥಳದಲ್ಲಿಯೇ ಪಂಚನಾಮೆಯನ್ನು ಪೂರೈಸಿ, ಆರೋಪಿ ಲಕ್ಷ್ಮೀ ಮತ್ತು ಜಪ್ತಿ ಪಡಿಸಿದ ಮುದ್ದೆಮಾಲು ಹಾಗು ಪಂಚನಾಮೆಯನ್ನು ಸಂಜೆ 5-30 ಗಂಟೆಗೆ ಠಾಣೆಗೆ ತಂದು ಪಿರ್ಯಾಧಿಯೊಂದಿಗೆ ಒಪ್ಪಿಸಿದ್ದು ಈ ಬಗ್ಗೆ  ಲಕ್ಷ್ಮೀ ಮತ್ತು ಪ್ರಭು ರವರ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜುರುಗಿಸಿಲು ಸೂಚಿಸಲಾಗಿದೆ. ಅಂತ ಮುಂತಾಗಿದ್ದ ದೂರಿನ ಸಾರಾಂಶದ ಮೇಲಿಂದ ಸದರಬಜಾರ ಪೊಲೀಸ್ ಠಾಣಾ ಗುನ್ನೆ ನಂ 31/2020 ಕಲಂ 273, 284 ಐ.ಪಿ.ಸಿ. ಮತ್ತು 32, 34 ಕೆ.ಇ. ಯ್ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.


ಇಸ್ಪೇಟ್ ದಾಳಿ ಪ್ರಕರಣ ಮಾಹಿತಿ.
                ದಿನಾಂಕ: 07/06/2020 ರಂದು 16-30 ರಿಂದ 17-30 ಗಂಟೆಯ ಮಲ್ಲದಗುಡ್ಡ ಸೀಮಾಂತರದ ದಿನ್ನಿ ಹಳ್ಳದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ  ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪಿರ್ಯಾದಿ ಶ್ರೀ.ಶಂಭುಲಿಂಗ ಸಿ ಹಿರೇಮಠ  ರವರು ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ರಾಘವೆಂದ್ರ ತಂದೆ ಮುದುಕಪ್ಪ ಕೊಪ್ಪಳ 28 ವರ್ಷ ಜಾ: ಹರಿಜನ : ಕೂಲಿಕೆಲಸ ಸಾ: ಮಲ್ಲದಗುಡ್ಡ , ಮತ್ತು 08  ಜನ ಆರೋಪತರನ್ನು ವಶಕ್ಕೆ ಪಡೆದುಕೊಂಡು ಇಸ್ಪೆಟ್ ಜೂಜಾಟದ ಧಾಳಿ ಪಂಚನಾಮೆಯನ್ನು ಮತ್ತು ಧಾಳಿಯ ಕಾಲಕ್ಕೆ ಜಪ್ತಿ ಪಡಿಸಿಕೊಂಡ  ಇಸ್ಪೇಟ್  ಜೂಜಾಟದ ನಗದು ಹಣ ಒಟ್ಟು 3420 ರೂ/-ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿ ತಂದು ಹಾಜರು ಪಡಿಸಿದ್ದು ನಂತರ ಇಸ್ಪೇಟ್ ದಾಳಿ ಪಂಚನಾಮೆಯ ಮತ್ತು ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಪ್ರಕರಣವನ್ನು ದಾಖಲಿಸಿಕೊಳ್ಳಲು ಪಿರ್ಯಾದಿದಾರರು ಮಾನ್ಯ ಜೆ ಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರು ಪರವಾನಿಗೆಯನ್ನು 20-00 ಗಂಟೆಗೆ ಪಡೆದುಕೊಂಡು ವಾಪಾಸು ಠಾಣೆಗೆ 21-30 ಗಂಟೆಗೆ ಬಂದು ಪರವಾನಿಗೆ ಪತ್ರವನ್ನು ಹಾಜರು ಪಡಿಸಿದ್ದರಿಂದ  ಇಸ್ಪೇಟ್ ದಾಳಿ ಪಂಚನಾಮೆಯ ಮತ್ತು ವರದಿಯ ಅಧಾರದ ಮೇಲಿಂದ ಕವಿತಾಳ ಠಾಣೆಯ ಅಪರಾಧ ಸಂಖ್ಯೆ 54/2020 ಕಲಂ-87 ಕೆಪಿ ಕಾಯಿದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿರುತ್ತಾರೆ.

            ದಿನಾಂಕ:- 06/06/2020 ರಂದು ಸಾಯಂಕಾಲ 18-00 ಗಂಟೆಗೆ ಪಿ.ಎಸ್.ಐ ಬಳನೂರು ರವರು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ ಮತ್ತು ವಶಕ್ಕೆ ಪಡೆದುಕೊಂಡ ಆರೋಪಿ ಮೌನೇಶ ತಂದೆ ಬಾಳಪ್ಪ ಬಂಗಾರಿ 30 ವರ್ಷ ಜಾ-ನಾಯಕ ಸಾ-ರಾಗಲಪರ್ವಿ, ಹಾಗು  ರೆ 13 ಜನರು ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ. ದಿ-06/06/2020 ರಂದು ಮಧ್ಯಾಹ್ನ 14-30 ಗಂಟೆ ಸುಮಾರಿಗೆ ಪಿ.ಎಸ್.ಐ ರವರು ಠಾಣೆಯಲ್ಲಿರುವಾಗ ರಾಗಲಪರ್ವಿ ಗ್ರಾಮದ ಹನುಮಂತ ಕುಂಬಾರ ಇವರ ಹೊಲದ ಹತ್ತಿರ ಇರುವ ಕಾಲೂವೆ ದಂಡೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆದಿರುವ ಬಗ್ಗೆ ಪಿ.ಸಿ-550 ರವರು ಮಾಹಿತಿ ತಿಳಿಸಿದ್ದು. ದಾಳಿ ಮಾಡುವ ಕುರಿತು  ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಮಹಾದೇವಯ್ಯ ಎ.ಎಸ್.ಐ, ಪಿ.ಸಿ-550, ಪಿ.ಸಿ-34, ಪಿ.ಸಿ-35, ಪಿ.ಸಿ-80, ಪಿ.ಸಿ-126, ಪಿ.ಸಿ-174, ಪಿ.ಸಿ-177, ಪಿ.ಸಿ-697, ಪಿ.ಸಿ-635 ರವರೊಂದಿಗೆ ಸರಕಾರಿ ಜೀಪ್ ನಂಬರ್ ಕೆಎ-36 ಜಿ-211 ರಲ್ಲಿ ಕುಳಿತುಕೊಂಡು ರಾಗಲಪರ್ವಿ ಗ್ರಾಮದ ಹನುಮಂತ ಕುಂಬಾರ ಇವರ ಹೊಲದ ಹತ್ತಿರ ಸ್ವಲ್ಪದೂರದಲ್ಲಿ ಮರೆಯಾಗಿ ನಿಂತು ನೋಡಲಾಗಿ ಹನುಮಂತ ಕುಂಬಾರ ಇವರ ಹೊಲದ ಹತ್ತಿರ ಇರುವ ಕಾಲೂವೆ ದಂಡೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಂಡವರು ಅಂದರ್-ಬಹಾರ್ ಎನ್ನುವ ನಸೀಬದ ಇಸ್ಪೆಟ್ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ಪಂಚರ ಸಮಕ್ಷಮಲ್ಲಿ ದುಂಡಾಗಿ ದಾಳಿ ಮಾಡಲಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ 14 ಜನರು  ಸಿಕ್ಕಿಬಿದ್ದಿದ್ದು ಇರುತ್ತದೆ. ಕಣದಲ್ಲಿ 52 ಇಸ್ಪೇಟ್ ಎಲೆಗಳು ಮತ್ತು ನಗದು ಹಣ  5250/- ರೂಪಾಯಿ ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಠಾಣಾ ಎಸ್.ಹೆಚ್.ಓ. ಕರ್ತವ್ಯದಲ್ಲಿದ್ದ ನಾನು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ದಿನಾಂಕ:-07/06/2020 ರಂದು  ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಮೇಲಿಂದ  ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ- 51/2020 ಕಲಂ-87 ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.