Thought for the day

One of the toughest things in life is to make things simple:

3 May 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ºÀ¯Éè ¥ÀæPÀgÀtzÀ ªÀiÁ»w.
ದಿನಾಂಕ: ಇಂದು 02-05-2019 ರಂದು ಸಂಜೆ 6-30 ಗಂಟೆಗೆ  ಫಿರ್ಯಾದಿದಾರರಾದ ನರಸಿಂಗಪ್ಪ ತಂದೆ ಚಂದ್ರಪ್ಪ ವಯ:53 ಜಾತಿ: ಅಂಬಿಗರು ಉ: ಕೆ.ಎಸ್.ಆರ್.ಟಿ.ಸಿ. ಮ್ಯಾಕೇನಿಕ್ ಸಾ: ಮನೆ ನಂ.6-2-139/23 ಮಾಣಿಕನಗರ ರಾಯಚೂರು ಇವರು ಠಾಣೆಗೆ ಬಂದು ಲಿಖಿತ ಫಿರ್ಯಾದಿ ನೀಡಿದ್ದೇನೆಂದರೆ ಫಿರ್ಯಾದಿದಾರರು ಸನ್ 1995 ರಲ್ಲಿ ಗುಲ್ಬರ್ಗಾ ಬಿಲ್ಡರ್ಸ  ಲೇಔಟ್ ನವೋದಯ ಆಸ್ಪತ್ರೆಯ ಎದುರಿಗೆ ಅನುಷಾ ನಗರದ ಪಕ್ಕದಲ್ಲಿ, ಪ್ಲಾಟ ನಂ.4-4-401/53 ನೇದ್ದನ್ನು  ಖರೀದಿ ಮಾಡಿ ನನ್ನ ಹೆಸರಿನಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದು ಈಗ್ಗೆ ನಾನು ಮಾರ್ಚ ತಿಂಗಳಿಂದ ನನ್ನ ಪ್ಲಾಟನಲ್ಲಿ ಮನೆ ಕಟ್ಟವುದಕ್ಕೆ ಪ್ರಾರಂಭ ಮಾಡಿದ್ದು  ನಮ್ಮ ಪಕ್ಕದ ಲೇಔಟನವರರಾದ ಸಿದ್ದರಾಮಯ್ಯ ಸ್ವಾಮಿ ಹಾಗೂ ಇತನ ಸಂಗಡಿಗರಾದ ವಾಸು, ಮತ್ತು ತೌಫಿಕ್ ರವರು ದಿನಾಂಕ 27-04-2019 ರಂದು ಮದ್ಯಾಹ್ನ 12-30 ಗಂಟೆಗೆ ಬಂದು ಅಕ್ರಮವಾಗಿ ತಡೆದು ನಿಲ್ಲಿಸಿ ಈ ಪ್ಲಾಟ ನಮ್ಮದು ನೀನು ಇಲ್ಲಿ ಯಾಕೆ ಮನೆ ಕಟ್ಟುತಿದ್ದು ಸೂಳೆ ಮಗನೆ ಅಂತಾ ಅವಾಚ್ಯವಾಗಿ ಬೈದು ನಮ್ಮ ಪ್ಲಾಟನಲ್ಲಿರು ಬೋರವೆಲ್ ಕೇಸಿಂಗ್  ಪೈಪನ್ನು ಮುರಿದು ಜಖಂ ಮಾಡಿದ್ದು ಮತ್ತು ನೀನು ಮನೆ ಕಟ್ಟುವುದನ್ನು ನಿಲ್ಲಿಸದಿದ್ದರಿ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಲಿಖತ ದೂರು ನೀಡಿದ್ದರ ಸಾರಾಂಶ ಮೇಲಿಂದ ನೇತಾಜಿ ನಗರ ಪೊಲೀಸ್ ಠಾಣಾ ಅಪರಾದ ಸಂಖ್ಯೆ 29/2019 ಕಲಂ:  341,427 504, 506 ಸಹಿತ  34 ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ತಾರೀಕು 03/05/2019 ರಂದು ಬೆಳಿಗ್ಗೆ 8-00 ಗಂಟೆಗೆ ಫಿರ್ಯಾದಿ ದಾರನು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ಕೊಟ್ಟಿದ್ದು ಅದರ ಸಾರಾಂಶವೆನೆಂದರೆ ಈ ದಿನ ಬೆಳಿಗ್ಗೆ 03/05/2019 ರಂದು 6-45 ಗಂಟೆಗೆ ಬಸ್ ನಂ ಕೆಎ 32 ಎಫ್ 2379 ನೇದ್ದರ ಚಾಲಕ ಬಸನ್ನು ಲಿಂಗಸುಗೂರದಿಂದ ಕಲಬುರಗಿ ಮುಖ್ಯ ರಸ್ತೆಯ ಕಡೆಗೆ ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊರಟ್ಟಿದ್ದು ಅದೆ ವೇಳೆಗೆ ಕಲಬುರಗಿ ಕಡೆಯಿಂದ ಟ್ಯಾಂಕರ ನಂ ಕೆಎ 32 ಡಿ 3481 ನೇದ್ದರ ಚಾಲಕ ತನ್ನ ಟ್ಯಾಂಕರನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಸೈಡ ತೆಗೆದುಕೊಳ್ಳದೆ ಪರಸ್ಪರ ಮುಖಾಮುಖಿಯಾಗಿ ಟಕ್ಕರ ಕೊಟ್ಟಿದ್ದು ಇದರಿಂದ ಟ್ಯಾಂಕರ ಚಾಲಕನಿಗೆ ತೀವ್ರ ಸ್ವರೂಪದ ಗಾಯವಾಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 110/2019 PÀ®A. 279,338 L.¦.¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.