Thought for the day

One of the toughest things in life is to make things simple:

3 Sept 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ಅಕ್ರಮ ಮರಳು ಸಾಗಾಣಿಕ ಪ್ರಕರಣದ ಮಾಹಿತಿ:

     ದಿನಾಂಕ 02-09-2020 ರಂದು ಬೆಳಿಗ್ಗೆ 11-15 ಗಂಟೆಗೆ ಚಿಕಲಪರ್ವಿ ಗ್ರಾಮದ ತುಂಗಭದ್ರ ನದಿಯಿಂದ ಟ್ರ್ಯಾಕ್ಟರಗಳಲ್ಲಿ ಅಕ್ರಮವಾಗಿ, ಕಳ್ಳತನದಿಂದ ಮರಳನ್ನು ತುಂಬಿಕೊಂಡು ಮಾರಾಟ ಮಾಡುವ ಕುರಿತು ಕೋನಾಪುರ ಪೇಟೆ, .ಬಿ ಸರ್ಕಲ್ ಮುಖಾಂತರ ಮಾನವಿ ಕಡೆಗೆ ತರುತ್ತಾರೆ ಅಂತಾ ಖಚಿತವಾದ ಮಾಹಿತಿ ಬಂದ ಕಾರಣ  ಕೂಡಲೇ ಸಿಬ್ಬಂದಿಯವರಿಗೆ  ಹಾಗೂ ಪಂಚರು ಕರೆದುಕೊಂಡು  ಠಾಣೆಯ ಸರಕಾರಿ ಜೀಪ ನಂಕೆ..36/ ಜಿ-0281 ರಲ್ಲಿ  ಮಾನವಿ ಪಟ್ಟಣದ ಕೋನಾಪುರ ಪೇಟೆ ಚರ್ಚ  ಹತ್ತಿರ ಮಧ್ಯಾಹ್ನ 12-00 ಗಂಟೆಗೆ ಹೋದಾಗ ಕೋನಾಪುರಪೇಟೆ ಸರ್ಕಲ್ ಕಡೆಯಿಂದ ಮಾನವಿ ಕಡೆಗೆ ಒಂದು ಟ್ರ್ಯಾಕ್ಟರ್ ಬಂದಿದ್ದು ಆಗ  ಪಂಚರ ಸಮಕ್ಷಮದಲ್ಲಿ ಸದರಿ ಟ್ರ್ಯಾಕ್ಟರ್ ಕೈ ಮಾಡಿ  ನಿಲ್ಲಿಸಲು ಸೂಚಿಸಿದಾಗ ಅದರ ಚಾಲಕನು ತನ್ನ ಟ್ರ್ಯಾಕ್ಟರ್ ನ್ನು  ನಿಲ್ಲಿಸಿ ಓಡಿ ಹೋಗಿದ್ದು  ನಂತರ ಪಂಚರ ಸಮಕ್ಷಮದಲ್ಲಿ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ನೋಡಲಾಗಿ ಮರಳು ತುಂಬಿರುವದು ಕಂಡು ಬಂದಿದ್ದು ಸದರಿ ಟ್ರ್ಯಾಕ್ಟರ್ ಚಾಲಕನು ಓಡಿ ಹೋಗಿದ್ದು ನೋಡಿದರೆ ಸದರಿ ಟ್ರ್ಯಾಕ್ಟರ್ ಚಾಲಕ/ಮಾಲಕರು ತಮ್ಮ ಸ್ವಂತ ಲಾಭಕ್ಕಾಗಿ ಸರಕಾರಕ್ಕೆ ರಾಜಧನ ತುಂಬದೇ ಕಳ್ಳತನದಿಂದ ಮರಳನ್ನು ಸಾಗಾಣಿಕೆ ಮಾಡುತ್ತಿರುವದು ಕಂಡು ಬಂದ ಕಾರಣ ಸದರಿ ನಂಬರಿಲ್ಲ ಮಹೇಂದ್ರ ಕಂಪನಿಯ ಟ್ರ್ಯಾಕ್ಟರ  ಇಂಜೀನ್ ನಂಬರ ZFBS01320 ಅಂ.ಕಿ. 2,50,000/ ರೂ.ಗಳು ಮತ್ತು ಅದಕ್ಕೆ ಜೋಡನೇ ಮಾಡಿದ ನಂಬರಿಲ್ಲದ ಟ್ರಾಲಿ ಅಂ.ಕಿ.50000/ ರೂ.ಗಳು ಬೆಲೆಬಾಳುವುದು ಹಾಗೂ ಅದರಲ್ಲಿದ್ದ ಅಂದಾಜು  2 ಘನ ಮೀಟರ್ ಮರಳು ಇದ್ದು  ಅಂ.ಕಿ- 1400/- ರೂ. ಬೆಲೆ ಬಾಳುವದನ್ನು ಸದರಿ ಟ್ರ್ಯಾಕ್ಟರ್ ಚಾಲಕ ಹಾಗೂ ಮಾಲೀಕರ ಮೇಲೆ ಕಾನೂನು ಕ್ರಮ  ಜರುಗಿಸುವ ಸಲುವಾಗಿ  ಪಂಚರ ಸಮಕ್ಷಮದಲ್ಲಿ ಜಪ್ತು ಮಾಡಿಕೊಂಡು ದಿನಾಂಕ 02-09-2020 ರಂದು ಮಧ್ಯಾಹ್ನ 12-00 ಗಂಟೆಯಿಂದ 1-00 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಜಪ್ತಿ ಮಾಡಿದ ಮುದ್ದೆಮಾಲು ಸಹಿತ ವಾಪಸ್ ಠಾಣೆಗೆ ಮಧ್ಯಾಹ್ನ 1-30 ಗಂಟೆಗೆ ಬಂದು ಮಾನ್ಯ ನ್ಯಾಯಾಲದಲ್ಲಿ ಖುದ್ದಾಗಿ ಹಾಜರಾಗಿ ಮಾನವಿ ಪೊಲೀಸ ಠಾಣಾ ಖಾಸಗಿ ದೂರು ಸಂಖ್ಯೆ 11/2020 ಕಲಂ 4, 4 (1-)  ಮತ್ತು 21  M.M.D.R ACT-1957 ಹಾಗೂ 3,42,43 ಕೆ.ಎಮ್.ಎಮ್.ಸಿ. ರೂಲ್ಸ 1994 ಪ್ರಕಾರ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.