Thought for the day

One of the toughest things in life is to make things simple:

5 Aug 2018

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಮಟಕಾ ಜೂಜಾಟ ದಾಳಿ ಪ್ರಕರಣ ದಾಖಲು.
ದಿನಾಂಕ  03/08/2018 ರಾತ್ರಿ 8-50 ಗಂಟೆಗೆ ಫಿರ್ಯಾದಿದಾರರಾದ ²æà ªÀĺÀäzï ¥sÀ¹AiÀÄÄ¢ÝÃ£ï ¦.L. r.¹.L.©. WÀlPÀ gÁAiÀÄZÀÆgÀÄ, ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ನೀಡಿದ ಮೇರೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಂಗಡ ಹೋಗಿ ಮೇಲ್ಕಂಡ ಸ್ಥಳದಲ್ಲಿ ಮೇಲೆ ನಮೂದಿಸಿದ ಆರೋಪಿತನು ಮಟಕಾ ಜೂಜಾಟದಲ್ಲಿ ತೊಡಗಿ, ಮಟಕಾ ಚೀಟಿ ಬರೆದು ಕೊಡುತ್ತಾ ದುಡ್ಡು ತೆಗೆದುಕೊಳ್ಳುತ್ತಿರುವದನ್ನು ನೋಡಿ ದಾಳಿಮಾಡಿ ಹಿಡಿದು ಆರೋಪಿತನಿಂದ ನಗದು ಹಣ 56,610/- ರೂ. ಎರಡು ಮಟಕಾ ನಂಬರ ಬರೆದ ಪಟ್ಟಿ, ಒಂದು ಬಾಲ್ ಪೆನ್ ವಶಪಡಿಸಿಕೊಂಡು ಇದ್ದು, ಪ್ರಕರಣವು ಅಸಂಜ್ಞೆಯ ಇದ್ದುದ್ದರಿಂದ ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದು ರಾತ್ರಿ 11-30 ಗಂಟೆಗೆ ಸದರಿ ದಾಳಿ ಪಂಚನಾಮೆ ವರದಿ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 316/2018 ಕಲಂ 78(3) ಕೆ.ಪಿ. ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಅಕ್ರಮವಾಗಿ ಮರಳು ಕಳುವು ಪ್ರಕರಣ ದಾಖಲು.
ದಿನಾಂಕ- 03/08/2018 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ²æà ªÀĺÀäzï ¥sÀ¹AiÀÄÄ¢ÝÃ£ï ¦.L. r.¹.L.©. WÀlPÀ gÁAiÀÄZÀÆgÀÄ ರವರು ಮರಳು ತುಂಬಿ ಟಿಪ್ಪರನೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ಪಂಚನಾಮೆ & ವರದಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಸವೆನೆಂದರೆ ದಿನಾಂಕ 03/08/2018 ರಂದು ಸಂಜೆ 6-30 ಗಂಟೆ ಸುಮಾರು ಲಿಂಗಸ್ಗೂರು- ಕಲಬುರ್ಗಿ ರಸ್ತೆಯಲ್ಲಿ ಬರುವ ಲಿಂಗಸುಗೂರ ಪಟ್ಟಣದ ಬಸವ ಸಾಗರ ಕ್ರಾಸ ಕಡೆಗೆ ಬಸ್ ನಿಲ್ದಾಣದ ಕಡೆಯಿಂದ ಒಂದು ಟಿಪ್ಪರ ಬಂದಿದ್ದು, ಫಿರ್ಯಾದಿದಾರರು ತಮ್ಮ ಸಿಬ್ಬಂದಿಯೊಂದಿಗೆ ವಾಹನಗಳನ್ನು ತಪಾಸಣೆ ಮಾಡುತ್ತಿದ್ದನ್ನು ಗಮನಿಸಿದ ಟಿಪ್ಪರ ಚಾಲಕನು ಟಿಪ್ಪರನ್ನು ಬಸವ ಸಾಗರ ಕ್ರಾಸ ಹತ್ತಿರ ನಿಲ್ಲಿಸಿ ಓಡಿ ಹೋಗಿದ್ದು ಟಿಪ್ಪರನ್ನು ಪರಿಶೀಲಿಸಲಾಗಿ ಅದರ ನಂಬರ ಕೆಎ 35 ಬಿ 5629 ಅಂತಾ ಇದ್ದು, ಅದರಲ್ಲಿ ಬಾಡಿಯ ವರೆಗೆ ಮರಳು ತುಂಬಿದ್ದು ಸದರಿ ಟಿಪ್ಪರ ಚಾಲಕನು ಮೇಲ್ಕಂಡ ಟಿಪ್ಪರನಲ್ಲಿ ಸುಮಾರು 15,000/- ರೂ ಬೆಲೆಭಾಳುವ ಮರಳನ್ನು ಯಾವುದೊ ನದಿಯಿಂದ ಕಳ್ಳತನ ಮಾಡಿಕೊಂಡು ಬಂದಿದ್ದು ಇರುತ್ತದೆ. ಟಿಪ್ಪರ ಚಾಲಕನನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸುವ ಕುರಿತು ತಮ್ಮ ವರದಿ ನೀಡಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 315/2018 ಕಲಂ 379 .ಪಿ.ಸಿ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಮನುಷ್ಯ ಕಾಣೆ ಪ್ರಕರಣದ ಮಾಹಿತಿ.
ದಿನಾಂಕ: 04-08-2018 ರಂದು ಸಂಜೆ 05.00 ಹನುಮಂತಪ್ಪ ತಂದೆ ಮಾರೆಪ್ಪ, 75 ವರ್ಷ, ಎಸ್.ಸಿ(ಮಾದಿಗ), ಕೆ..ಬಿ ನಿವೃತ್ತ ಲೈನ್ ಮೆನ್, ಸಾ:.ನಂ.12-8-263/467, ಸಿಯಾತಲಾಬ್ ರಾಯಚೂರು ರವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಹಾಜರು ಪಡಿಸಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ತನ್ನ ಮಗನಾದ ಎನ್.ನಾಗರಾಜ್, 35 ವರ್ಷ, ಎಲೆಕ್ಟ್ರೀಷನ್ ಕೆಲಸ ಮಾಡಿಕೊಂಡಿದ್ದು, ಈತನ ಹೆಂಡತಿ ಕುಟುಂಬ ನ್ಯಾಯಾಲಯದಲ್ಲಿ ಈತನ ವಿರುದ್ಧ ಕೇಸ್ ಹಾಕಿರುತ್ತಾಳೆ. ಈತನು ದಿನಾಂಕ: 31-07-2018 ರಂದು ಬೆಳಿಗ್ಗೆ 10.00 ಗಂಟೆಯ ಸುಮಾರು ಕುಟುಂಬ ನ್ಯಾಯಾಯಲಯದಲ್ಲಿನ ಮುದ್ದತ್ತಿಗೆ ಹಾಜರಾಗಲು ಹೋಗುತ್ತೇನೆಂದು ಮನೆಯಿಂದ ಹೋದವನು ವಾಪಸ್ ಬರದೇ ಇದ್ದುದ್ದರಿಂದ ಇಲ್ಲಿವರೆಗೆ ಹುಡುಕಾಡಲಾಗಿ ಆತನು ಸಿಕ್ಕಿರುವುದಿಲ್ಲ. ಕಾರಣ ಕಾಣೆಯಾದ ತನ್ನ ಮಗನನ್ನು ಹುಡುಕಿಕೊಬೇಕೆಂದು ಮುಂತಾಗಿ ಇದ್ದ ದೂರಿನ ಸಾರಾಂಶದ ಸದರ್ ಬಜಾರ್ ಪೊಲೀಸ್ ಠಾಣೆ ಗುನ್ನೆ ನಂಬರ 84/2018 ಕಲಂ: ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣದ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ 05-08-2018 ರಂದು 1300 ಗಂಟೆಗೆ  ಪಿರ್ಯಾಧಿದರಾರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಹಾಜರು ಪಡಿಸಿದ್ದರ  ಸಾರಾಂಶವೆನೆಂದಾರೆ ದಿನಾಂಕ 03-08-2018 ರಂದು 2030 ಗಂಟೆಗೆ ಪಿರ್ಯಾಧಿದಾರಳು  ಮತ್ತು ಅಕ್ಕೆಯ ಸೂಸೆ ಕುಸುಮ  ಹಾಗೂ ಮೊಮ್ಮಗ ಧನರಾಜ ಮೂರು ಜನರು ಸೇರಿ  ಪಿರ್ಯಾಧಿದಾರರ ಮಗ  ನಾಗರಾಜನು ನಡೆಸುತ್ತಿದ್ದ MARUTI SWIFT D'ZIRE No KA-36/M 5472 ಕಾರುನಲ್ಲಿ ಕಲ್ಲೂರು ಮುಖಾಂತರ ತಮ್ಮ ಊರಿಗೆ  ಹೋಗುವಾಗ ರಾಯಚೂರು- ಲಿಂಗಸ್ಗೂರು ರಸ್ತೆಯ ಬಸವೇಶ್ವರ ವೃತ್ತದ ಹತ್ತಿ ಇರುವ ರೈಲ್ವೇ ಓವರ್ ಬ್ರೀಜ್  ಮೇಲೆ  ಹೋಗುವಾಗ ಆರೋಪಿತನು MARUTI SWIFT D'ZIRE No KA-36/M 6763 ನೇದ್ದನ್ನು ಅತೀ ವೇಗವಾಗಿ ಮತ್ತು ಆಲಕ್ಷತನದಿಂದ  ಮಾನವ ಜೀವಕ್ಕೆ ಆಪಾಯಕರವಾದ ರೀತಿಯಲ್ಲಿ ಚಲಾಯಿಸಿ ಹಿಂದಿನಿಂದ ಪಿರ್ಯಾಧಿದಾರರು ಕುಳಿತುಕೊಂಡಿದ ಕಾರಿಗೆ ಟಕ್ಕರ್ ಕೊಟ್ಟಿದ್ದರಿಂದ ನಾಗರಾಜನು ಚಲಾಯಿಸುತ್ತಿದ್ದ ಕಾರ್ ರಸ್ತೆ ಎಡಗಡೆ ಇರುವ ತಡೆ ಗೋಡೆಗೆ ಟಕ್ಕರ್ ಮಾಡಿಕೊಂಡಿದ್ದರಿಂದ  ಅದರಲ್ಲಿದ್ದ ಪಿರ್ಯಾಧಿಗೆ  ಎಡಭುಜಕ್ಕೆ ಮತ್ತು ಎದೆಗೆ, ಎರಡು ಕಣ್ಣುಗಳ ಉಬ್ಬಿನ ಮೇಲೆ ಸಾದಾ ಗಾಯಗಳಾಗಿದ್ದು ಧನರಾಜ ಈತನಿಗೆ ಹಣೆಯ ಮದ್ಯದಲ್ಲಿ ಗಾಯವಾಗಿದ್ದು ಇರುತ್ತದೆ ಪಿರ್ಯಾಧಿದಾರರು  ಮನೆಯಲ್ಲಿ ವಿಚಾರಿಸಿಕೊಂಡು ಬಂದು  ತಡವಾಗಿ  ದೂರು  ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ  ದೂರಿನ ಸಾರಾಂಶದ ಮೇಲಿಂದ ನಗರ ಸಂಚಾರ ಠಾಣೆ ನಗರ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 64/2018 ಕಲಂ: 279,337, IPC  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.