Thought for the day

One of the toughest things in life is to make things simple:

13 Jul 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಮಟಕಾ ಜೂಜಾಟ ಪ್ರಕರಣದ ಮಾಹಿತಿ.
ದಿನಾಂಕ:12-07-2019 ರಂದು 5-30 ಪಿ.ಎಮ್ ಸಮಯದಲ್ಲಿ ಹಟ್ಟಿ ಗ್ರಾಮದಲ್ಲಿ ಮಸೀದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ 01 ರಾಘವೇಂದ್ರ ತಂ.ರಾಮಪ್ಪ ಚಳ್ಳೂರು, 32ವ, ಜಾ:ವಡ್ಡರು, ಸಾ: ಮಲ್ಲದಗುಡ್ಡ, ತಾ:ಸಿಂಧನೂರು ನೇದ್ದವನು ಜನರನ್ನು 01 ರೂ. ಗೆ 80 ರೂ ಕೊಡುತ್ತೇವೆ ಮಟಕಾ ನಂಬರ್ ಬರೆಸಿರಿ ಅಂತಾ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ್ ಬರೆದುಕೊಂಡು ಚೀಟಿ ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ರವರು ಮತ್ತು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿ 01 ನೇದ್ದವನನ್ನು ಹಿಡಿದು ಅವನಿಂದ 1) ನಗದು ಹಣ ರೂ. 880/-, 2) ಮಟಕಾ ಪಟ್ಟಿ 3) ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು, ಆರೋಪಿ 01 ನೇದ್ದವನು ತಾನು ಬರೆದ ಪಟ್ಟಿ ಆರೋಪಿ 02 ಮೌನೇಶ ಹೊಸ ಜೂರಟಗಿ, ಸಾ:ಕಾರಟಗಿ, ಜಿ:ಕೊಪ್ಪಳ ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಎಂದು ಇದ್ದ ಪಂಚನಾಮೆಯ ಸಂಗಡ ಜಪ್ತಿ ಮಾಡಿದ ಮುದ್ದೇಮಾಲು, ಆರೋಪಿ 01 ನೇದ್ದವನನ್ನು ಠಾಣೆಗೆ ತಂದು ಒಪ್ಪಿಸಿದ್ದು, ಸದರಿ ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಗುನ್ನೆ ದಾಖಲಿಸಿಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 108/2019 ಕಲಂ 78 (3) ಕ.ಪೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ:12-07-2019 ರಂದು ಸಂಜೆ 6.00 ಗಂಟೆಗೆ ಪಿ.ಎಸ್.ಐ.(ಕಾ.ಸು) ಸದರ ಬಜಾರ ಪೊಲೀಸ್ ಠಾಣೆ  ರವರು ಮತ್ತು ಸಿಬ್ಬಂದಿ ಯವರ ಸಹಾಯದಿಂದ ಮಟಕಾ ದಾಳಿಮಾಡಿ ಗಣಕೀಕೃತ ದೂರನ್ನು, ಮಟಕಾ ಜೂಜಾಟಾದ ಮೂಲ ದಾಳಿ ಪಂಚನಾಮೆಯನ್ನು ಹಾಗೂ ಜಪ್ತಿ ಮಾಡಿದ ಮುದ್ದೆಮಾಲಿನ ಸಹೀತ ಮೇಲೆ ನಮೂದಿಸಿದ ಆರೋಪಿತನನ್ನು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ಆರೋಪಿ ಶೇಖ್ ಜಾಕೀರ್ ತಂದೆ ಶೇಖ್ ಯೂಸೂಫ್, 24 ವರ್ಷ, ಆಟೋಚಾಲಕ, ಸಾ:ಉರುಕುಂದಿ ಈರಣ್ಣ ನಗರ, ರಾಯಚೂರು ಈತನು ಸಂಜೆ 4-45 ಗಂಟೆಗೆ ರಾಯಚೂರುನ ನಗರದ ಮಂಗಳವಾರಪೇಟೆಯ ಕಮೇಲಿ ಹತ್ತರದಲ್ಲಿನ ಮನೆಯ ಗೋಡೆಯ ಪಕ್ಕದಲ್ಲಿರುವ ಸಾರ್ವಜನಿಕ ಓಣಿ ರಸ್ತೆಯಲ್ಲಿ, ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ, ಖಚಿತ ಮಾಹಿತಿ ಮೇರೆಗೆ ಸಿ.ಪಿ.ಐ ಪೂರ್ವವೃತ್ತರ ರವರ ನೇತೃತ್ವದಲ್ಲಿ ಪಿರ್ಯಾದಿದಾರರು ಮತ್ತು ಸಿಬ್ಬಂದಿಯವರು ಸೇರಿ, ಪಂಚರೊಂದಿಗೆ ದಾಳಿ ಮಾಡಿ, ಆರೋಪಿತನನ್ನು ಹಿಡಿದುಕೊಂಡು, ಆರೋಪಿತನಿಂದ ಮಟಕಾ ಜೂಜಾಟದ ಸಾಮಗ್ರಿಗಳನ್ನು ಜಪ್ತಿ ಪಡಿಸಿಕೊಂಡಿರುವುದಾಗಿ ಪಿರ್ಯಾದಿ ಇದ್ದುದ್ದರ ಮೇಲಿಂದ ಠಾಣಾ ಎನ್.ಸಿ.ನಂಬರ್ 14/19 ಕಲಂ; 78 (3) ಕೆ.ಪಿ.ಆಕ್ಟ್ ಪ್ರಕಾರ ಪ್ರಕರಣ ನೋಂದಾಯಿಸಿಕೊಂಡಿದ್ದು ಇರುತ್ತದೆ. ಈ ಪ್ರಕರಣವು ಅಸಂಜ್ಞೇಯ ಪ್ರಕರಣವಾಗುತ್ತಿದ್ದರಿಂದ ಆರೋಪಿತನ ವಿರುದ್ಧ ಸಂಜ್ಞೇಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲು ಅನುಮತಿ ನೀಡುವಂತೆ ಮಾನ್ಯ ನ್ಯಾಯಾಲಯಕ್ಕೆ ಮನವಿ ಪತ್ರವನ್ನು ಸಲ್ಲಿಸಿ, ಅನುಮತಿ  ಪಡೆದುಕೊಂಡು, ರಾತ್ರಿ 7-15 ಗಂಟೆಗೆ ಸದರ ಬಜಾರ ಪೊಲೀಸ್ ಠಾಣಾ ಅಪರಾಧ ಸಂಖ್ಯೆ: 38/2019 ಕಲಂ: 78 (3) ಕೆ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಇಸ್ಪೇಟ್ ದಾಳಿ ಪ್ರಕಣದ ಮಾಹಿತಿ.
ದಿನಾಂಕ  12-07-2019  ರಂದು ಮಾನವಿ ಠಾಣಾ ವ್ಯಾಪ್ತಿಯ ಕಪಗಲ್ ಗ್ರಾಮದ ಆಂಜಿನೇಯಾ ದೇವಸ್ಥಾನದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟ್ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ  ಪಿ.ಎಸ್. (ಕಾ.ಸು) ಮಾನವಿ ಠಾಣೆ  ರವರು ಪಂಚರು ಹಾಗೂ ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಇಸ್ಪಿಟ್ ಜೂಜಾಟದಲ್ಲಿ ತೊಡಗಿದ್ದ  ಜನರ ಮೇಲೆ  ಮಧ್ಯಾಹ್ನ 4-20  ಗಂಟೆಗೆ ದಾಳಿ ಮಾಡಿ 10 ಜನರನ್ನು ಹಿಡಿದಿದ್ದು ಸೆರೆಸಿಕ್ಕವರಿಂದ ಇಸ್ಪಿಟ್ ಜೂಜಾಟಕ್ಕೆ ಸಂಭಂಧಿಸಿದ ನಗದು ಹಣ 5530/-- ರೂ ಗಳನ್ನು ಹಾಗೂ 52 ಇಸ್ಪಿಟ್ ಎಲೆಗಳನ್ನು ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಸೆರೆಸಿಕ್ಕ  ಆರೋಪಿ ಬಂದೇನವಾಜ್ ತಂದೆ ಮದರಸಾಬ್ ವಯಾಃ 60 ವರ್ಷ ಜಾತಿಃ ಮುಸ್ಲಿಂ ಉಃ ಒಕ್ಕಲುತನ ಸಾಃ ಕಪಗಲ್ ಹಾಗೂ ಇತರೆ 9 ಜನ ಅರೋಪಿತರೊಂದಿಗೆ ಸಂಜೆ  6-00 ಗಂಟೆಗೆ  ವಾಪಾಸ ಠಾಣೆಗೆ ಬಂದು  ಮೂಲ ಪಂಚನಾಮೆ, ಜಪ್ತು ಮಾಡಿದ ಮುದ್ದೆಮಾಲು ಹಾಗೂ ಸೆರೆ ಸಿಕ್ಕ ಆರೋಪಿತರನ್ನು  ಸಂಜೆ 6-30 ಗಂಟೆಗೆ ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಇರುತ್ತದೆ. ಸದರಿ ದಾಳಿ ಪಂಚನಾಮೆ ಆಧಾರದ ಮೇಲಿಂದ  ಪ್ರಕರಣವು ಅಸಂಜ್ಞೇಯ ಪ್ರಕರಣವಾಗುತ್ತಿದ್ದು ಕಾರಣ  ಸದರಿ ಆರೋಪಿತರ  ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಳ್ಳಲು ಪರವಾನಿಗೆಯನ್ನು ನೀಡಲು ಮಾನ್ಯ ನ್ಯಾಯಾಲಯಕ್ಕೆ ಯಾದಿ ಮೂಲಕ ವಿನಂತಿಸಿಕೊಂಡು ಇಂದು ದಿನಾಂಕ: 12/07/2019 ರಂದು ಪರವಾನಿಗೆ ಪಡೆದುಕೊಂಡು ಮಾನವಿ ಠಾಣೆ ಗುನ್ನೆ ನಂ 145/2019 ಕಲಂ 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ: 12-07-2019 ರಂದು  2030 ಗಂಟೆಗೆ ಫಿರ್ಯಾದಿ ಶಿವರಾಜ್ ತಂದೆ ಹನುಮಂತ, ವಯ 43 ವರ್ಷ, ಗೊಲ್ಲರು, ವ್ಯಾಪಾರ, ಸಾ|| ಹೋಸರು ತಾ|| ಜಿ|| ರಾಯಚೂರು ರವರು ಠಾಣೆಗೆ ಹಾಜರಾಗಿ,  ಲಿಖಿತ ದೂರನ್ನು ಹಾಜರಪಡಿಸಿದ್ದರ ಸಾರಾಂಶವೆನೇಂದರೆ, ದಿನಾಂಕ;-03-07-2019 ರಂದು 1430  ಗಂಟೆಗೆ ರಾಯಚೂರು ನಗರದ ಮಾಣಿಕ ನಗರ ಕ್ರಾಸ್ ನ ಅಂಜಿನೇಯ್ಯ ಗುಡಿ ಮುಂದಿನ ರಸ್ತೆಯಲ್ಲಿ ವೆಂಕಟೇಶ್ ಇವರು ತಮ್ಮ ನಂಬರ್ ಇಲ್ಲದ ಟಿವಿಎಸ್ ಎಕ್ಸ ಎಲ್ ಸೂಪರ್ ಗಾಡಿಯನ್ನು ಬಿ.ಆರ್.ಬಿ. ವೃತ್ತದ ಕಡೆಯಿಂದ ಮಾಣಿಕ ನಗರದಲ್ಲಿರುವ ತಮ್ಮ ಮನೆಯ ಕಡೆಗೆ ಹೋಗುವಾಗ ಆರೋಪಿತನು ಟ್ರ್ಯಾಕ್ಟರ್ & ಟ್ರ್ಯಾಲಿಯನ್ನು ಐ.ಟಿ.ಐ ಕಾಲೇಜು ಕಡೆಯಿಂದ ಆರ್.ಟಿ.ಓ ವೃತ್ತದ ಕಡೆಗೆ ಹೋಗುವಾಗ ಟ್ರ್ಯಾಕ್ಟರ್ ನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ಯಾವುದೇ ಸೂಚನೆ ಇಲ್ಲದೇ ಟ್ರ್ಯಾಕ್ಟರನ್ನು ಏಕಾ ಏಕೀಯಾಗಿ ಆರ್.ಟಿ.ಓ ವೃತ್ತದ ಕಡೆಗೆ ತಿರುಸಿದ್ದರಿಂದ ಟ್ರ್ಯಾಲಿಯ ಬಲಗಡೆಯ ಹಿಂದಿನ ಗಾಲಿ ವೆಂಕಟೇಶನಿಗೆ ಟಕ್ಕರ್ ಕೊಟ್ಟಿದ್ದರಿಂದ ವೆಂಕಟೇಶನು ಕೆಳಗಡೆ ಬಿದ್ದು, ತಲೆಗೆ ಭಾರೀ ರಕ್ತಗಾಯಗಳಾಗಿ ಇಲಾಜು ಕುರಿತು ನವೋದಯ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ನಂತರ ಹೆಚ್ಚಿನ ಇಲಾಜು ಕುರಿತು ಹೈದರಾಬಾದನ ಗಾಂಧಿ ಆಸ್ಪತ್ರಗೆ ಸೇರಿಕೆ ಮಾಡಿದಾಗ ವೆಂಕಟೇಶನಿಗೆ ವಾಹನಅಪಘಾತದಲ್ಲಿ ಆದ ಗಾಯಗಳ ಭಾದೆಯಿಂದ ಗುಣಮುಖನಾಗದೇ ದಿನಾಂಕ;-12-07-2019 ರಂದು ಬೆಳಗಿನ ಜಾವ 0530 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. ಫಿರ್ಯಾದಿದಾರರು ತಮ್ಮಅಣ್ಣನಿಗೆ ಬದುಕಿಸಿಕೊಳ್ಳುವ ಉದ್ದೇಶದಿಂದ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರಿಂದ ಈ ದೂರನ್ನು ಕೊಡಲು ತಡವಾಗಿರುತ್ತದೆ. ಕಾರಣ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ನಗರ ಸಂಚಾರ ಠಾಣೆ ಗುನ್ನೆ ನಂ. 42/2019  ಕಲಂ. 279, 304(A) IPC 187 IMV ACT  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
  
 ದಿನಾಂಕ: 11-07-2019 ರಂದು ರಾತ್ರಿ 8.00 ಗಂಟೆಗೆ ಶ್ರೀ ದಾದಾವಲಿ, ಕೆ.ಹೆಚ್, ಪಿ.ಎಸ್.ಐ, ಪಶ್ಚಿಮ ಪೊಲೀಸ್ ಠಾಣೆ, ರಾಯಚೂರು ಇವರು ಠಾಣೆಗೆ ಹಾಜರಾಗಿ ಗಣಕ ಯಂತ್ರದಲ್ಲಿ ಟೈಪ್ ಮಾಡಿಸಿದ ದೂರನ್ನು ಹಾಜರಪಡಿಸಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ದಿನಾಂಕ:05.07.2019 ರಂದು ರಾತ್ರಿ 8.45 ಗಂಟೆಗೆ ಗೇಟ್ ಲಕ್ಷ್ಮಣ ತಂದೆ  ಕಾಶಿನಾಥ 53 ವರ್ಷ, ನಾಯಕ, ಇಂಡಸ್ ಇಂಡ್ ಬ್ಯಾಂಕಿನಲ್ಲಿ ರಿಕಾವರಿ ಏಜೆಂಟ್, ಸಾ; ಆಜಾದ ನಗರ ಸ್ಟೇಷನ್ ರೋಡ್, ರಾಯಚೂರು ಈತನ ಕೊಲೆ ಯಾಗಿದ್ದರಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ. 66/2019 ಕಲಂ 143, 147, 148, 341, 504, 506, 302 ಸಹಿತ 149 ಐಪಿಸಿ ಮತ್ತು ಕಲಂ 3 (1), (r), (s), 3 (2), (v), ಎಸ್.ಸಿ/ಎಸ್.ಟಿ ಕಾಯ್ದೆ 1989 ತಿದ್ದುಪಡಿ -2016 ನೇದ್ದರ ಅಡಿಯಲ್ಲಿ ಪ್ರಕರಣ ವರದಿಯಾಗಿದ್ದು ಇರುತ್ತದೆ. ಸದರಿ ಪ್ರಕರಣದಲ್ಲಿ ಮಾನ್ಯ ಪೊಲೀಸ್ ಉಪಾಧೀಕ್ಷಕರು, ರಾಯಚೂರು ರವರು ಜ್ಞಾಪನ ನೀಡಿ, ಆದೇಶ ನೀಡಿದ್ದರಿಂದ ಸದರಿ ಪ್ರಕರಣದ ಆರೋಪಿತರ ಪತ್ತೆ ಮಾಡಲು ತಾವು ಮತ್ತು ಸಿಬ್ಬಂದಿಯವರಾದ ಶ್ರೀ ಬಷೀರ್ ಅಹ್ಮದ್ ,ಎಸ್., ಶ್ರೀ ಬಸವರಾಜ ಹೆಚ್,ಸಿ 337, ಮತ್ತು ಮಲ್ಲೇಶ ಪಿಸಿ 105 ಇವರೊಂದಿಗೆ ಇಂದು ದಿನಾಂಕಃ 11-07-2019 ರಂದು ಬೆಳಿಗ್ಗೆ 9.30 ಗಂಟೆಗೆ ಠಾಣೆಯಿಂದ ಸರ್ಕಾರಿ ಜೀಪ್ ನಂ ಕೆಎ-36 ಜಿ/460 ನೇದ್ದರಲ್ಲಿ ಆರೋಪಿ ಪತ್ತೆಮಾಡಲು ಹೊರಟಿದ್ದು, ಆರೋಪಿತರು ಟಿಪ್ಪುಸುಲ್ತಾನ್ ರೋಡಿನ ರಜೀಯಾ ಮುಸ್ತಫಾ ಮಸೀದಿಯ ಹಿಂದುಗಡೆ ತಮ್ಮ ತಂದೆಯ ವಾಸದ ಮನೆಯಲ್ಲಿ ಇದ್ದಾರೆಂದು ಮಾಹಿತಿ ಬಂದ ಮೇರೆಗೆ, ಕೂಡಲೇ ಸಿಬ್ಬಂದಿಯೊಂದಿಗೆ ಅಲ್ಲಿಗೆ ಹೋಗಿ, ಮನೆಯ ಮುಂದೆ ಕುಳಿತುಕೊಂಡಿದ್ದ ಆರೋಪಿತರ ಅಜ್ಜನಾದ 1) ಸೈಯದ್ ಮೋದೀನ್ ಸಾಬ್, 70 ವರ್ಷ ಮತ್ತು ಆರೋಪಿತ ತಂದೆಯಾದ 2) ಸೈಯದ್ ಹಬೀಬ್, 50 ವರ್ಷ ರವರುಗಳನ್ನು ತಾವೆಲ್ಲರೂ ಕೊಲೆ ಪ್ರಕರಣದ ಆರೋಪಿತರಾದ ಮಹೆಬೂಬ್ ಮತ್ತು ಬಾಬರ್ ಬಗ್ಗೆ ವಿಚಾರಿಸಿದ್ದು, ಆಗ ಸೈಯದ್ ಮೋದೀನ ಸಾಬ್ ಮತ್ತು ಸೈಯದ್ ಹಬೀಬ್ ರವರುಗಳು “ ನಮ್ಮ ಮಕ್ಕಳು  ನಮ್ಮ ಮನೆಯಲ್ಲಿರುವುದಿಲ್ಲ, ಎಲ್ಲಿ ಇರುತ್ತಾರೋ ಗೋತ್ತಿಲ್ಲ, ಮನೆಯ ಹತ್ತಿರ ಯಾಕೇ ಬಂದೀರಿ ಅಂತಾ ಹಾರಿಕೆ ಉತ್ತರವನ್ನು ನೀಡಿ, ಆರೋಪಿತರ ಬಗ್ಗೆ ಯಾವುದೇ ಸುಳಿವು ನೀಡದೇ ದ್ದುದ್ದರಿಂದ ಪಿರ್ಯಾದಿದಾರರು ಅಲ್ಲಿಂದ ಸ್ವಲ್ಪ ಮುಂದಕ್ಕೆ ಬಂದಿದ್ದು,  ಆಗ ಕೊಲೆ ಪ್ರಕರಣದ ಆರೋಪಿತನ ಪೈಕಿ ಮಹೆಬೂಬ್ ಈತನು ಮನೆಯಿಂದ ಹೊರಗೆ ಓಡಲು ಯತ್ನಿಸಿರುತ್ತಾನೆ. ಆಗ ಕೂಡಲೇ ಪಿರ್ಯಾದಿದಾರರು ಮತ್ತು ಸಿಬ್ಬಂದಿಯವರು ಅವನ ಬೆನ್ನು ಹತ್ತಿ ಬೆಳಿಗ್ಗೆ 10.10 ಗಂಟೆಗೆ ಹಿಡಿದು ವಿಚಾರಿಸಿದ್ದು, ತನ್ನ ಹೆಸರು ಮಹೆಬೂಬ್ ತಂದೆ ಹಬೀಬ್ ಸಾಬ್, 20 ವರ್ಷ ಜಾತಿಃ ಮುಸ್ಲಿಂ ಸಾಃ ಕುಲಸುಂಬಿ ಕಾಲೋನಿ ಅಂತಾ ತಿಳಿಸಿ, ದಿನಾಂಕಃ 05-07-2019 ರಂದು ರಾತ್ರಿ 8.45 ಗಂಟೆಗೆ ಗೇಟ್ ಲಕ್ಷ್ಮಣನನ್ನು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರಿಂದ ಆರೋಪಿತನನ್ನು ಬೆಳಿಗ್ಗೆ 10.20 ಗಂಟೆಗೆ ವಶಕ್ಕೆ ತೆಗೆದುಕೊಂಡು, ಮಾನ್ಯ ಪೊಲೀಸ್ ಉಪಾಧೀಕ್ಷಕರು ರಾಯಚೂರು ರವರ ಮುಂದೆ ಹಾಜರುಪಡಿಸಿದ್ದು ಇರುತ್ತದೆ, ಕೊಲೆ ಆರೋಪಿ ಮಹಿಬೂಬ್ ಈತನನ್ನು ಆರೋಪಿತರಿಬ್ಬರು ತಮ್ಮ ವಾಸದ ಮನೆಯಲ್ಲಿಟ್ಟುಕೊಂಡು, ಆಶ್ರಯ ನೀಡಿ, ಪ್ರಕರಣದಿಂದ ತಪ್ಪಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದು ಇರುತ್ತದೆ. ಕಾರಣ ಸದರಿ ಆರೋಪಿತರಿಬ್ಬರ ಮೇಲೆ ಕಾನೂನು ರಿತ್ಯ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ.ನಂ.37/2019 ಕಲಂ:212 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

     ದಿನಾಂಕ  11-07-2019 ರಂದು ರಾತ್ರಿ 9-00 ಗಂಟೆಗೆ ಶ್ರೀ ನರಸಿಂಹ. ಹೆಚ್,ಸಿ 213 ಮಾನವಿ ಠಾಣೆ ರವರು ರಾಯಚೂರು ಸುರಕ್ಷಾ ಆಸ್ಪತ್ರೆಯಿಂದ ಠಾಣೆಗೆ ಬಂದು ಆಸ್ಪತ್ರೆಯಲ್ಲಿ ರಸ್ತೆ ಅಪಘಾತದಲ್ಲಿ ಇಲಾಜು ಪಡೆಯುತ್ತಿದ್ದ. ಜಿ ಮಲ್ಲಿಕಾರ್ಜುನ ತಂದೆ ಜಿ. ಚನ್ನಪ್ಪ ಸಾಃ ರಾಯಚೂರು ಇವರನ್ನು ವಿಚಾರಿಸಿ ಹಾಜರಿದ್ದ ಆತನ ಹೆಂಡತಿ ಗಾಯಾಳು ಸಾವಿತ್ರಿ ಈಕೆಯು ನೀಡಿ ಹೇಳಿಕೆಯ ಫಿರ್ಯಾದಿಯನ್ನು ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ ಇಂದು ದಿನಾಂಕ 11-07-2019 ರಂದು ಸಾವಿತ್ರಿ ಗಂಡ ಮಲ್ಲಿಕಾರ್ಜುನ ವಯಾಃ 45 ವರ್ಷ ಜಾತಿಃಲಿಂಗಾಯತ ಸಾಃ ಡ್ಯಾಡಿ ಕಾಲೋನಿ ರಾಯಚೂರು
ಫಿರ್ಯಾದಿ ಮತ್ತು ಆಕೆಯ ಗಂಡ ಇಬ್ಬರು ಮಾನವಿಯಲ್ಲಿ ತಮಗೆ ಪರಿಚಯದ ಪಾರ್ವತಯ್ಯ ಸ್ವಾಮಿ ಸಾಃ ಮಾನವಿ ಇವರ ಮಗನ ಮದುವೆಗೆ  ಬರಲು ಅಂತಾ ರಾಯಚೂರದಿಂದ  ತಮ್ಮ  ಟಯೊಟಾ ಇನ್ನೊವಾ ಕಾರ್ ನಂ ಕೆ.ಎ 01ಎಮ್.ಪಿ 7254 ನೇದ್ದರಲ್ಲಿ ಕುಳಿತುಕೊಂಡು  ರಾಯಚೂರು- ಮಾನವಿ ಮುಖ್ಯ ರಸ್ತೆ ಮೇಲೆ ಫಿರ್ಯಾದಿಯ ಗಂಡನು ನಿಧಾನವಾಗಿ ರಸ್ತೆಯ ತನ್ನ ಎಡಭಾಜು ನಡೆಸಿಕೊಂಡು ಬರುತ್ತಿರುವಾಗ ಇಂದು ಮಧ್ಯಾಹ್ನ 12-15 ಗಂಟೆಯ ಸುಮಾರಿಗೆ  ಎದುರುಗಡೆಯಿಂದ ಅಂದರೆ ಮಾನವಿ ಕಡೆಯಿಂದ- ರಾಯಚೂರು ಕಡೆಗೆ  ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆ.ಎ 35/ಎಫ್-303 ನೇದ್ದರ ಚಾಲಕ ಶಿವರಾಜ ತಂದೆ ತಿಮ್ಮಪ್ಪ ಈತನು ತನ್ನ ಬಸ್ಸನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ರಸ್ತೆ ತನ್ನ ಎಡಗಡೆ ಹೊಗದೇ ಬಲಗಡೆ ಬಂದು ಕಪಗಲ್ ಕ್ರಾಸ್ ಹತ್ತಿರ ಫಿರ್ಯಾದಿದಾರರ ಕಾರಿಗೆ ಟಕ್ಕರ್ ಮಾಡಿದ್ದು  ಟಕ್ಕರ್ ಮಾಡಿದ ಪರಿಣಾಮ ಫಿರ್ಯಾದಿದಾರರ ಕಾರು ಜಖಂಗೊಡ್ಡಿದ್ದು ಅಲ್ಲದೇ  ಕೆ.ಎಸ್.ಆರ್.ಟಿ.ಸಿ ಬಸ್ಸು  ರಸ್ತೆಯ ಬದಿಯಲ್ಲಿ ಎಡಮೊಗ್ಗಲಾಗಿ ಬಿದ್ದಿದ್ದು ಬಸ್ಸಿನಲ್ಲಿ ಕುಳಿತಿಕೊಂಡಿದ್ದ ಮೇಲ್ಕಂಡವರಿಗೆ  ಹಾಗೂ  ಕಾರಿನಲ್ಲಿ ಕುಳಿತ್ತಿದ್ದ ಫಿರ್ಯಾದಿಗೆ ಮತ್ತು ಆಕೆಯ ಗಂಡ ಮಲ್ಲಿಕಾರ್ಜುನ ಇವರಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಕಾರಣ ಈ ಅಪಘಾತಕ್ಕೆ ಕಾರಣವಾದ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆ.ಎ 35/ಎಫ್-303 ನೇದ್ದರ ಚಾಲಕ ಶಿವರಾಜ ತಂದೆ ತಿಮ್ಮಪ್ಪ  ಈತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ  ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 144/2019 ಕಲಂ 279.337.338 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು,

±ÀgÀtªÀÄä UÀAqÀ bÀvÀæ¥Àà UÀÆlÆgÀÄ, 60 ªÀµÀð, £ÁAiÀÄPÀ, PÀÆ° PÉ®¸À ¸Á:«ÄmÉÖPÀ®ÆègÀÄ ¦gÁå¢ ªÀÄUÀ  ºÁUÀÆ 1)²ªÀªÀÄä UÀAqÀ §¸ÀªÀgÁd UÀÆlÆgÀÄ, 24 ªÀµÀð 2)AiÀÄ®èªÀÄä UÀAqÀ ªÀiÁ£À¥Àà §Ä¢Ý¤ß 48 ªÀµÀð, (¸ÉƸÉAiÀÄ vÁ¬Ä) 3)ªÀiÁ£À¥Àà vÀAzÉ §¸À¥Àà §Ä¢Ý¤ß 50 ªÀµÀð J®ègÀÄ ¸Á:PÀÄuÉPÀ®ÆègÀÄ DgÉÆævÀgÀ £ÀqÀÄªÉ ¸ÀA¸ÁjPÀ «µÀAiÀÄzÀ°è ªÉʪÀÄ£À¸ÀÄì GAmÁV, DgÉÆæ £ÀA 01 £ÉÃzÀݪÀgÀÄ vÀ£Àß fêÀ£ÉÆÃ¥ÁAiÀÄPÁÌV ºÀt ¨ÉÃPÉAzÀÄ PÉÆlð£À°è PÉøÀÄ ºÁQzÀÄÝ, ¢£ÁAPÀ 10-07-2019 gÀAzÀÄ ¸ÀAeÉ 4.00 UÀAmÉ ¸ÀĪÀiÁgÀÄ ªÀÄ£ÉAiÀÄ ºÀwÛgÀ §AzÀ £ÀªÀÄÆ¢vÀ DgÉÆævÀgÀÄ  K£À¯Éà ¸ÀÆ¼É ªÀÄ£ÉAiÀÄ°è PÀĽwgÀĪÉAiÀiÁ, FUÀ ºÉÃVzÉ £ÉÆÃqÀÄ ¤ªÀÄä ªÀÄUÀ£À PÉÆlðUÉ J½¢«, M¼ÀUÉ ºÁQ¹« E£ÀÄß ºÁPÀ¹Û« ¤ªÀÄä£Àß MAzÀÄ UÀw PÁt¹Û« CAvÁ ¨ÉÃzÀjPÉ ºÁPÀÄvÁÛ, »rzÀÄPÉÆAqÀÄ PÁ°¤AzÀ ¨É¤ßUÉ M¢zÀÄÝ, PÀÆzÀ®Ä »rzÀÄPÉÆAqÀÄ dUÁÎr ºÉÆmÉÖUÉ M¢ÝzÀÄÝ, ¸ÀƼÉAiÀÄ£ÀÄß K£ÀÄ PÉüÉÆÃzÀÄ ºÉÆqÉzÁQ ©r CAvÁ ºÉüÀÄvÁÛ ¨ÉÃzÀjPÉ ºÁQ, PÀnÖUɬÄAzÀ ¨É¤ßUÉ ºÉÆqÉzÀÄ ¸ÀÆ¼É FªÁUÀ §zÀÄPÉÆAr ªÀÄÄAzÉ EzÉ ¤£ÀUÉ JAzÀÄ ¨ÉÃzÀjPÉ ºÁPÀÄvÁÛ ºÉÆÃVzÀÄÝ PÁgÀt F PÀÄjvÀÄ PÁ£ÀÆ£ÀÄ PÀæªÀÄ PÉÊUÉƼÀî®Ä «£ÀAw CAvÁ ¤ÃrzÀ ºÉýPÉ zÀÆj£À ªÉÄÃ¯É   ªÀĹ̠ ¥Éưøï oÁuÉ  C¥ÀgÁzsÀ ¸ÀASÉå 78/19 PÀ®A 504, 323, 324, 506 ¸À»vÀ 34 L.¦.¹. ¥ÀæPÀgÀt zÁR®Ä ªÀiÁr vÀ¤SÉ PÉÊUÉƼÀî¯ÁVzÉ.