Thought for the day

One of the toughest things in life is to make things simple:

8 Aug 2020

Reported Crimes

 

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 ಮಟಕಾ ಜೂಜಾಟ ಪ್ರಕರಣದ ಮಾಹಿತಿ:

  ದಿನಾಂಕ: 07-08-2020 ರಂದು18-40 ಗಂಟೆಗೆ ಪಿ.ಎಸ್.[ಕಾಸು] ರವರು ಠಾಣೆಗೆ ಬಂದು ಮೂಲ ದಾಳಿಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿತನನ್ನು ಹಾಜರು ಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು ದೂರು ನೀಡಿದ್ದು ಸಾರಾಂಶವೇನೆಂದರೆ ದಿನಾಂಕ: 07-08-2020 ರಂದು 17-00 ಗಂಟೆಗೆ ತಾವು ಠಾಣೆಯಲ್ಲಿರುವಾಗ ಮಾರ್ಕೆಟ್ ಯಾರ್ಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯ .ಪಿ.ಎಮ್.ಸಿ. ಕಛೇರಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಮಟ್ಕಾ ಜೂಜಾಟದಲ್ಲಿತೊಡಗಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಂಚರಾದ 1] ನಾಗಪ್ಪ ಮತ್ತು 2] ಶ್ರೀನಿವಾಸ ಸಿಬ್ಬಂದಿಯವರಾದ ಹೆಚ್.ಸಿ-125, ಹೆಚ್.ಸಿ-318, ಪಿ.ಸಿ-480, ಪಿ.ಸಿ -479 ರವರೊಂದಿಗೆ 17-10 ಗಂಟೆಗೆ ಸರ್ಕಾರಿ ಜೀಪ್ ನಂ. ಕೆ..36 ಜಿ-151 ನೇದ್ದರಲ್ಲಿ ಹೋಗಿ  17-20 ಗಂಟೆಗೆ .ಪಿ.ಎಮ್.ಸಿ. ಕಛೇರಿ ಹತ್ತಿರ  ತಲುಪಿ ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಆಂಜನೇಯ ತಂದೆ ತಾಯಪ್ಪ, ಈತನ ಮೇಲೆ  ಎಲ್ಲಾರು ಸೇರಿ 17-30 ಗಂಟೆಗೆ ದಾಳಿ ಮಾಡಿ ಸದರಿಯನ ಅಂಗ ಜಡ್ತಿ ಮಾಡಿ ಅವನ ಹತ್ತಿರ 1) ನಗದು ಹಣ 2100/-ರೂ,  2) ಒಂದು ಮಟ್ಕಾ ಚೀಟಿ 3) ಒಂದು ಬಾಲಪೆನ ದೊರೆತಿದ್ದು ಸದರಿ ಮಟಕಾ ಚೀಟಿಯನ್ನು ತನ್ನ ಬಳಿ ಇಟ್ಟುಕೊಳ್ಳುವುದಾಗಿ  ತಿಳಿಸಿದ್ದು ನಂತರ ನಗದು ಹಣ 2100/- ರೂ ಗಳನ್ನು ಒಂದು ಕವರಿನಲ್ಲಿ ಹಾಕಿ ಸೀಲ್ ಮಾಡಿ ಪಂಚರ ಸಹಿ ಚೀಟಿಯನ್ನು ಅಂಟಿಸಿ, ಉಳಿದ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಮುಂದಿನ ಕಾನೂನು ಕ್ರಮ ಕುರಿತು ಆರೋಪಿತನನ್ನು ವಶಕ್ಕೆ ತೆಗೆದುಕೊಂಡು 17-30 ಗಂಟೆಯಿಂದ 18-30 ಗಂಟೆಯವರೆಗೆ ಪಂಚನಾಮೆಯನ್ನು ಪೂರೈಸಿಕೊಂಡು 18-40 ಗಂಟೆಗೆ ವಾಪಸ್ ಠಾಣೆಗೆ ಬಂದು  ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿತನನ್ನು ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು ಹಾಜರುಪಡಿಸಿದ್ದು ಇರುತ್ತದೆ ಅಂತಾ ಮುಂತಾಗಿ ಇರುವ ದೂರಿನ ಮೇಲಿಂದ ಠಾಣಾ ಎನ್.ಸಿ.ನಂ.28/2020 ಪ್ರಕಾರ ದಾಖಲಿಸಿಕೊಂಡು ಸದರಿ ಪ್ರಕರಣವು ಅಸಂಜ್ಞಯ ಅಪರಾಧವಾಗಿದ್ದರಿಂದ 19-55 ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಮಾರ್ಕೆಟಯಾರ್ಡ ಠಾಣಾ ಗುನ್ನೆನಂ.90/2020 ಕಲಂ.78(3) ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.