Thought for the day

One of the toughest things in life is to make things simple:

31 May 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ. ಸಮಯ,ಸ್ಥಳದಲ್ಲಿ ಈ ಪ್ರಕರಣದಲ್ಲಿಯ ಗಾಯಾಳು ಗೋಪಾಲಪ್ಪ ಈತನು ತನ್ನ TVS XL M/C Chessis No.MD621BD1281N04911 ನೇದ್ದರ ಹಿಂದೂಗಡೆ ಮೃತ ಖಾಜಮ್ಮ@ ಖಾಜಭೀಯನ್ನು ಕೂಡಿಸಿಕೊಂಡು ರವುಡುಕುಂದ ಗ್ರಾಮದಿಂದ ಕನ್ನಾರಿ ಗ್ರಾಮಕ್ಕೆ ಬಿಟ್ಟುಬರಲು ರವುಡುಕುಂದ ಗ್ರಾಮದಿಂದ ಕನ್ನಾರಿ ಗ್ರಾಮಕ್ಕೆ ಸಿಂಧನೂರು-ಸಿರುಗುಪ್ಪಾ ಮುಖ್ಯ ರಸ್ತೆಯಲ್ಲಿ ಬೂದಿವಾಳ ಕ್ಯಾಂಪ್ ದಾಟಿ ಬೂದಿವಾಳ  ಕ್ರಾಸ್ ಬಸ್ ನಿಲ್ದಾಣದ ಹತ್ತಿರ ರಸ್ತೆಯ ಮೇಲೆ ಎಡಬಾಜು ಹೋಗುತ್ತಿರುವಾಗ ಹಿಂದಿನಿಂದ ಅಂದರೆ ಸಿಂಧನೂರು ಕಡೆಯಿಂದ ಸಿರುಗುಪ್ಪಾ ಕಡೆಗೆ ಬರುತ್ತಿದ್ದ ಮಾರುತಿ ಸುಜುಕಿ ರಿಟ್ಜ ಕಾರ್ ನಂ.KA-41-Z-4683 ನೇದ್ದರ ಚಾಲಕನು ಕಾರನ್ನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಟಕ್ಕರ ಕೊಟ್ಟಿದ್ದರಿಂದ ಪಿರ್ಯಾದಿದಾರನು ಮೋಟಾರ್ ಸೈಕಲ್ ಸಮೇತ ರಸ್ತೆಯ ಬಲಭಾಗದಲ್ಲಿ ಬಿದ್ದಿದ್ದು. ಪಿರ್ಯಾದಿಯ ಮೋಟಾರ್ ಸೈಕಲ್ ಹಿಂದೂಗಡೆ ಕುಳಿತುಕೊಂಡಿದ್ದ ಖಾಜಮ್ಮ@ ಖಾಜಭೀಯು ಮೋಟಾರ್ ಸೈಕಲ್ ಮೇಲಿಂದ ಪುಟಿದು ರಸ್ತೆಯ ಬಲಭಾಗದ ರಸ್ತೆಯ ಇಳಿಜಾರಿನಲ್ಲಿ ಬಿದ್ದಿದ್ದು ಪಿರ್ಯಾದಿಗೆ ಹಣೆಗೆ, ಕೈಕಾಲುಗಳಿಗೆ ರಕ್ತಗಾಯಗಳಾಗಿದ್ದು. ಖಾಜಮ್ಮ@ ಖಾಜಭೀಗೆ ಹೊಟ್ಟೆಗೆ, ಬಾಯಿಗೆ ಗದ್ದಕ್ಕೆ ಭಾರೀ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆ ಪಿರ್ಯಾದಿ ಮೇಲಿಂದ ಸಿಂದನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 87/2019. ಕಲಂ. 279, 338, 304(ಎ)ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ದಿನಾಂಕ: 31/05/2019 ರಂದು ಬೆಳಗಿನ ಜಾವ 5-30 ಗಂಟೆ ಸುಮಾರಿಗೆ ಸಿಂಧನೂರ-ಸಿರುಗುಪ್ಪಾ ರಸ್ತೆಯ ಸಾಸಲಮರಿ ಕ್ಯಾಂಪಿನ ಅಪ್ಪಾರಾವ್ ಇವರು ಮನೆಯ ಮುಂದಿನ ರಸ್ತೆಯಲ್ಲಿ  ಫಿರ್ಯಾದಿದಾರನ ಸಂಬಂದಿಕನಾದ ಗಾಯಾಳು ಎನ್.ಅಮ್ಮನ್ ರಾಜು ಇತನು ತನ್ನ ಮೋಟರ್ ಸೈಕಲ್ ನಂ KA-37-EG-4777 ನೇದ್ದರ ಹಿಂದೆ ಗಾಯಾಳು ಬಾಷನನ್ನು ಕೂಡಿಸಿಕೊಂಡು ಹೊಲದಲ್ಲಿ ಇರುವ ದನಗಳಿಗೆ ಮೇವು ಹಾಕಿ,ಹಾಲನ್ನು ಹಿಂಡಿಕೊಂಡು ಬರಲು ಅಂತಾ ಹೋಗುತ್ತಿರುವಾಗ ಸಿರುಗುಪ್ಪಾ ಕಡೆಯಿಂದ ಒಬ್ಬ ಅಪರಿಚಿದ ವಾಹನದ ಚಾಲಕನ್ನು ತನ್ನ ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷತನ ದಿಂದ ನಡೆಸಿಕೊಂಡು ಬಂದು ಫಿರ್ಯಾದಿದಾರನ ಸಂಬಂದಿ ಗಾಯಾಳು ಎನ್.ಅಮ್ಮನ್ ರಾಜು ನಡೆಸುತ್ತಿದ್ದ ಮೋಟರ್ ಸೈಕಲಿಗೆ ಹಿಂದಿನಿಂದ ಟಕ್ಕರ ಕೊಟ್ಟ ಪರಿಣಾಮವಾಗಿ ಗಾಯಾಳು ಎನ್.ಅಮ್ಮನ್ ರಾಜುನಿಗೆ ತಲೆಯ ಮೇಲೆ ಭಾರಿ ರಕ್ತಗಾಯ, ಹಣೆಯ ಬಲಗಡೆ,ಬಲಗಣ್ಣಿನ ಹತ್ತಿರ, ಎರಡು ಪಾದಗಳಿಗೆ, ಮತ್ತು ಹಿಮ್ಮಡಿ ಹತ್ತಿರ ತೆರಚಿದ ರಕ್ತಗಾಯಗಳಾಗಿದ್ದು. ಮೋಟರ್ ಸೈಕಲ್ ಹಿಂದೆ ಕುಳಿತಿದ್ದ ಗಾಯಾಳು ಬಾಷನಿಗೆ ಹಣೆಯ ಮೇಲೆ ರಕ್ತಗಾಯ, ಎಡತೊಡೆಯ ಹತ್ತಿರ ತೆರಚಿದ ಗಾಯ, ನಡುವಿಗೆ ಒಳಪೆಟ್ಟು, ಬಲಗಾಲು ಮೊಣಕಾಲಿಗೆ ತೆರಚಿದ ಗಾಯಗಳಾಗಿರುತ್ತವೆ. ಅಂತಾ ಹೇಳಿಕೆ ಫಿರ್ಯಾದಿ ನೀಡಿದ್ದರ ಸಾರಾಂಶದ ಮೇಲಿಂದ ಸಿಂಧನೂರು ನಗರ ಸಂಚಾರ ಪೊಲೀಸ್ ಠಾಣಾ ಗುನ್ನೆ ನಂ 39/2019 ಕಲಂ 279.337.338  ಐಪಿಸಿ ರೆ/ವಿ 187 .ಎಮ್.ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳುವಿನ ಪ್ರಕರಣದ ಮಾಹಿತಿ.
ದಿ.30-05-2019 ರಂದು ರಾತ್ರಿ 11-00ಗಂಟೆಯಿಂದ ದಿ.31-05-2019 ರಂದು ಬೆಳಗಿನ ಜಾವ 05-00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಸಿರವಾರ ಪಟ್ಟಣದ ಬಸವಲಿಂಗಪ್ಪ ಕಾಲೋನಿಯಲ್ಲಿರುವ  ಪಿರ್ಯಾದಿ ಶ್ರೀ ಪಾಲಾಕ್ಷಾ ತಂದೆ ಬೀಮನಗೌಡ ಮಾಲೀಪಾಟೀಲ್ ವಯ-49ವರ್ಷ,ಜಾತಿ-ಲಿಂಗಾಯತ,  ಉ-ಬಟ್ಟೆ ವ್ಯಾಪಾರ ಸಾ:ಮುನ್ನಮುಟುಗಿ ,ತಾ:ಶಹಾಪೂರ, ಹಾಲಿವಸ್ತಿ: ಸಿರವಾರ ಬಸವಲಿಂಗಪ್ಪ ಕಾಲೋನಿ ದಾರರ ಮನೆಯ ಬಾಗಿಲಿಗೆ ಹಾಕಿದ ಬೀಗ ಮುರಿದು ಮನೆಯೊಳಗೆ ಬಂದು ಮನೆಯ ಅಲ್ಮರದಲ್ಲಿಟ್ಟಿದ್ದು ಒಂದು ತೊಲೆ ಬಂಗಾರ ಅ.ಕಿ.ರೂ.14,000/- ಮತ್ತು ನಗದು ಹಣ 10,000/- ರೂಪಾಯಿಗಳು ಎಲ್ಲಾ ಸೇರಿ ಅ.ಕಿ.ರೂ.24,000/-ಬೆಲೆ ಬಾಳುವ ಬಂಗಾರದ ಆಭರಣ ಮತ್ತು ನಗದು ಹಣವನ್ನು ಕಳುವು ಮಾಡಿಕೊಂಡು ಹೋಗಿದ್ದಾರೆಂದು ಪಿರ್ಯಾದಿದಾರರು  ಠಾಣೆಗೆ ಬಂದು ನೀಡಿದ ದೂರಿನ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂ: 76/2019 ಕಲಂ 457,380 ಐ.ಪಿ.ಸಿ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.